Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಹೆಣ್ಣಿನಲ್ಲಿರುವ ಈ ಗುಣಗಳಿಗೇ ಹುಡುಗರು ಫಿದಾ ಆಗೋದು!
ಮಹಿಳೆಯರು ತಮಗಿಷ್ಟವಾದ ವ್ಯಕ್ತಿಯ ಗಮನವನ್ನು ಸೆಳೆಯಲು ಸದಾ ಪ್ರಯತ್ನ ಮಾಡುತ್ತಿರುತ್ತಾರೆ. ಈ ಪ್ರಯತ್ನದಲ್ಲಿ ಗೆಲುವು ಸಾಧಿಸಿದರೆ ಅವರು ಗೆದ್ದಂತೆ. ಆದರೆ ಕೆಲವೊಮ್ಮೆ ತಾವು ಮಾಡಿದ ಪ್ರಯತ್ನ ವಿಫಲವಾಗಿ, ಆತ ಇವರನ್ನು ಗಮನಿಸದೇ ಹೋಗಬಹುದು. ಆಗ ನಿರಾಶೆ ಉಂಟಾಗುವುದು ಸಾಮಾನ್ಯ.
ಆದ್ದರಿಂದ ನಾವಿಲ್ಲಿ ನಿಮಗಿಷ್ಟವಾದ ವ್ಯಕ್ತಿಯ ಗಮನ ಸೆಳೆಯುವುದು ಹೇಗೆ ಎಂಬುದನ್ನು ವಿವರಿಸಿದ್ದೇವೆ. ಈ ಟ್ರಿಕ್‌ಗಳನ್ನು ನೀವು ಅನುಸರಿಸಿ, ಏಕೆಂದರೆ ಈ ಗುಣಗಳಿರುವ ಹೆಣ್ಣಿಗೆ ಪುರುಷ ಬೇಗ ಆಕರ್ಷಿತನಾಗುತ್ತಾನೆ.
ನಿಮಗಿಷ್ಟವಾದ ವ್ಯಕ್ತಿಯ ಗಮನ ಸೆಳೆಯುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಆತ್ಮವಿಶ್ವಾಸ:
ಹೌದು, ನೋಟಕ್ಕಿಂತಲೂ ಮುಖ್ಯ ಆತ್ಮವಿಶ್ವಾಸ. ಬಾಹ್ಯ ಸೌಂದರ್ಯಕ್ಕಿಂತ ಮುಖ್ಯ ಆಂತರಿಕ ಶಕ್ತಿ, ಆತ್ಮವಿಶ್ವಾಸ, ಜೀವನದಲ್ಲಿ ಏನೇ ಬಂದರೂ ಎದುರಿಸುವ ಛಲವಿರುವ ಹೆಣ್ಣಗೆ ಪುರುಷರು ಬೇಗನೇ ಮನಸೋತು ಬಿಡುತ್ತಾರೆ. ಬದುಕಿನಲ್ಲಿ ಆತ್ಮವಿಶ್ವಾ ಒಂದಿದ್ದರೆ, ಮುಂಬರುವ ಎಂತಹ ಸವಾಲನ್ನಾದರೂ ಧೈರ್ಯವಾಗಿ ಎದುರಿಸಬಹುದು. ಆದ್ದರಿಂದ ನೀವು ಇಷ್ಟ ಪಡುವ ವ್ಯಕ್ತಿಯ ಮುಂದೆ ನೀವು ಅತ್ಯಂತ ಆತ್ಮವಿಶ್ವಾಸದಿಂದ ಇರಬೇಕು. ಏಕೆಂದರೆ ಆತ್ಮವಿಶ್ವಾಸವೇ ಎಲ್ಲ ಆಗಿದೆ.

2. ಹಾಸ್ಯ ಪ್ರವೃತ್ತಿ:
ಪ್ರತಿಯೊಬ್ಬರಿಗೂ ನಗುವುದೆಂದರೆ ಇಷ್ಟ, ಯಾರಿಗೂ ಸೈಲೆಂಟಾಗಿರಲು ಮನಸ್ಸಾಗುವುದಿಲ್ಲ. ಹೆಚ್ಚಿನವರು ತಮಾಷೆಯ ವ್ಯಕ್ತಿಯೊಂದಿಗೆ ಇರಲು ಇಷ್ಟಪಡುತ್ತಾರೆ. ಆದ್ದರಿಂದ, ನೀವು ಸರಿಯಾದ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರೆ, ಆತನ ಗಮನವನ್ನು ಸುಲಭವಾಗಿ ಸೆಳೆಯಬಹುದು. ಆತನೂ ಹಾಸ್ಯಮನೋಭಾವವಿರುವ ವ್ಯಕ್ತಿಯೊಂದಿಗೆ ಬೇಗನೇ ಬೆರೆಯುತ್ತಾನೆ. ಆದರೆ ಆತನ ಮನೋಭಾವ ಎಂತಹುದು ಎಂಬುದು ಇಲ್ಲಿ ಮುಖ್ಯವಾಗುತ್ತದೆ.

3. ಸಕಾರಾತ್ಮಕ ದೃಷ್ಟಿಕೋನ:
ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಹುಡುಗಿ ಯಾರಿಗಾದರೂ ಇಷ್ಟವಾಗುತ್ತಾಳೆ. ಆದ್ದರಿಂದ, ನಿಮ್ಮ ಗುರಿಯ ಬಗ್ಗೆ ಆ ವ್ಯಕ್ತಿಯೊಂದಿಗೆ ಅಂದರೆ ನಿಮಗಿಷ್ಟವಾದ ವ್ಯಕ್ತಿಯೊಂದಿಗೆ ಮಾತನಾಡಿ. ನಿಮ್ಮ ಗುರಿಯನ್ನು ತಲುಪಲು ಎಷ್ಟು ಉತ್ಸಾಹ ಹೊಂದಿದ್ದೀರಿ, ಅದಕ್ಕಾಗಿ ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಆತನಿಗೆ ಅರಿವು ಮೂಡಿಸಿ. ಇದು ನಿಮ್ಮ ಸಕಾರಾತ್ಮಕ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಈ ಮೂಲಕ ನೀವೊಂದು ಆಕರ್ಷಕ ವ್ಯಕ್ತಿಯಾಗುತ್ತೀರಿ.

4. ಸಹಾಯ ಕೇಳಿ:
ಒಬ್ಬ ವ್ಯಕ್ತಿಯು ನಿಮಗೆ ಸಹಾಯ ಮಾಡಿದಾಗ ಅಥವಾ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದಾಗ ಆತನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದ್ದರಿಂದ, ನೀವು ಆತನ ಸಹಾಯವನ್ನು ಬಯಸುತ್ತೀರಿ, ಆತನ ಸಹಾಯದ ಅವಶ್ಯಕತೆ ಇದೆ ಎಂಬುದನ್ನು ಅವನಿಗೆ ತಿಳಿಸಿ. ಇದು ಅವನ ಅಹಂಕಾರವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಕಡೆ ಗಮನವನ್ನು ಸೆಳೆಯುತ್ತದೆ.

5. ಉತ್ತಮ ಗುಣಮಟ್ಟದ ಜೀವನ:
ಜನರು ಉನ್ನತ ಗುಣಮಟ್ಟವನ್ನು ಹೊಂದಿರುವ ವ್ಯಕ್ತಿಗೆ ಬೇಗ ಆಕರ್ಷಿತವಾಗುತ್ತಾರೆ. ಆದ್ದರಿಂದ, ಆ ರೀತಿಯ ವ್ಯಕ್ತಿಯಾಗಿರಲು ಪ್ರಯತ್ನಿಸಿ. ನಿಮ್ಮ ಜೀವನ, ಕುಟುಂಬ, ಸ್ನೇಹಿತರು ಮತ್ತು ಕೆಲಸದಲ್ಲಿ ಸಂತೋಷವಾಗಿರಿ. ನಿಮಗೂ ಸ್ವಂತ ಜೀವನವಿದೆ ಎಂದು ಅವನಿಗೆ ತೋರಿಸಿ. ಮತ್ತು ಮುಖ್ಯವಾಗಿ, ನೀವು ನಿಮ್ಮನ್ನು ಸ್ವೀಕರಿಸಿದ್ದೀರಿ, ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತೀರಿ ಎಂಬುದನ್ನು ಅವನಿಗೆ ಮನವರಿಕೆ ಮಾಡಿಸಿ.

6. ಸ್ವಲ್ಪ ಹೊಗಳಿಕೆ:
ನಾವೆಲ್ಲರೂ ಹೊಗಳಿಕೆಯನ್ನು ಇಷ್ಟಪಡುತ್ತೇವೆ. ಆದ್ದರಿಂದ ನಿಮಗಿಷ್ಟವಾದ ವ್ಯಕ್ತಿ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಆ ವ್ಯಕ್ತಿಯನ್ನು ನೀವು ಅಭಿನಂದಿಸಬೇಕು. ಆದರೆ ನಕಲಿ ಹೊಗಳಿಕೆಗಳು ಬೇಡ. ಅದೇ ರೀತಿ ಅತಿಯಾದ ಹೊಗಳಿಕೆಯೂ ಒಳ್ಳೆಯದಲ್ಲ. ಮಧ್ಯಮವಾಗಿದ್ದರೆ ಉತ್ತಮವಾಗಿರುತ್ತದೆ.



Click it and Unblock the Notifications











