Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನೀವು ಪ್ರೇಮವಿವಾಹವಾಗಲು ಬಯಸಿದರೆ ಈ ಸಿಂಪಲ್ ವಾಸ್ತು ಟಿಪ್ಸ್ ಪ್ರಯತ್ನಿಸಿ!
ಇತ್ತೀಚೆಗೆ ಪ್ರೇಮ ವಿವಾಹ ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಪ್ರೇಮ ವಿವಾಹ ಎಂದರೆ ಮನೆಯವರ ವಿರೋಧ ಹೆಚ್ಚಿರುತ್ತಿತ್ತು, ಆದರೆ ಈಗಿನ ಪೋಷಕರು ಪ್ರೇಮ ವಿವಾಹಕ್ಕೆ ಸಂಪೂರ್ಣ ಸಮ್ಮತಿಸಿ ಕುಟುಂಬಸ್ಥರ ಸಮ್ಮುಖದಲ್ಲೇ ಅರೇಂಜ್ಡ್ ಲವ್ ಮ್ಯಾರೇಜ್ ಆಗುತ್ತಿದೆ. ಆದರೂ ಇಂದಿಗೂ ಬಹುತೇಕ ಪ್ರೇಮಿಗಳು ತಮ್ಮ ಪ್ರೇಮವನ್ನು ಮನೆಯಲ್ಲಿ ಹೇಳಿಕೊಂಡು ಯಶಸ್ವಿಯಾಗಿ ವಿವಾಹವಾಗುವಲ್ಲಿ ವಿಫಲವಾಗುತ್ತಾರೆ.
ನಿಮಗೆ ಗೊತ್ತೆ ನಿಮ್ಮ ಪ್ರೇಮ ಯಶಸ್ವಿಯಾಗಲು ಸಹ ವಾಸ್ತು ಪರಿಹಾರವಿದೆ. ಹೌದು ವಾಸ್ತುಶಾಸ್ತ್ರಜ್ಞರ ಪ್ರಕಾರ ನೀವು ಸಹ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಪ್ರೇಮ ವಿವಾಹವಾಗುವ ಮೂಲಕ ಕನಸು ನನಸಾಗುತ್ತದೆ. ಏನಿದು ವಾಸ್ತು ಸಲಹೆ ನೋಡೋಣ:

ಲಕ್ಷ್ಮಿ ದೇವತೆ ಮತ್ತು ವಿಷ್ಣು ದೇವರ ಚಿತ್ರ
ಲಕ್ಷ್ಮಿ ದೇವಿ ಮತ್ತು ವಿಷ್ಣು ದೇವರ ಸ್ವಯಂವರ ಚಿತ್ರವನ್ನು ನಿತ್ಯ ನೋಡಿ ಮತ್ತು ದೇವರ ಈ ಚಿತ್ರವನ್ನು ನಿಮ್ಮ ಮನೆಯ ಪೂರ್ವ ಭಾಗದಲ್ಲಿ ಇರಿಸಿ. ಪ್ರೇಮ ವಿವಾಹಕ್ಕಾಗಿ ಹುಡುಗ ಹಾಗೂ ಹುಡುಗಿ ಇಬ್ಬರೂ ಈ ವಾಸ್ತು ಸಲಹೆಯನ್ನು ಪಾಲಿಸಬೇಕು.

ಲಕ್ಷ್ಮಿ ಮತ್ತು ವಿಷ್ಣು ದೇವರ ವಿಗ್ರಹಗಳು
ಪ್ರೇಮ ವಿವಾಹದ ಯಶಸ್ಸನ್ನು ಆಕರ್ಷಿಸಲು, ನಿಮ್ಮ ಮನೆಯಲ್ಲಿ ಲಕ್ಷ್ಮಿ ಮತ್ತು ವಿಷ್ಣು ದೇವರ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಶುಕ್ಲ ಪಕ್ಷದ ಗುರುವಾರದಂದು ಪ್ರಾರಂಭಿಸಿ ಪೂಜೆಯನ್ನು ಪ್ರಾರಂಭಿಸಿ. ನಿತ್ಯ ‘ಶ್ರೀ ಲಕ್ಷ್ಮೀ ನಾರಾಯಣ ನಮಃ' ಎಂಬ ಮಂತ್ರವನ್ನು ಪಠಿಸಿ. ನೀವು ಬಿಳಿ ಹರಳುಗಳ ಜಪ ಮಣಿಯನ್ನು ಬಳಸಿ 3 ತಿಂಗಳ ಕಾಲ ನಿಯಮಿತವಾಗಿ ಧ್ಯಾನ ಮಾಡಿ.

ದೇವಸ್ಥಾನದಲ್ಲಿ ಕಾಣಿಕೆ
ಪ್ರತಿ ಗುರುವಾರ ದೇವಸ್ಥಾನಕ್ಕೆ ಭೇಟಿ ದೇವತೆಗಳಿಗೆ ಸಿಹಿತಿಂಡಿ ಅರ್ಪಿಸಿ. ಪ್ರೇಮ ವಿವಾಹಕ್ಕಾಗಿ ಗುರುವಾರದಂದು ದೇವಸ್ಥಾನಕ್ಕೆ ಹೋಗುವುದನ್ನು ತಪ್ಪಿಸಬೇಡಿ. ನಿಮ್ಮ ಸಕಾರಾತ್ಮಕ ಮನೋಭಾವವನ್ನು ಹೆಚ್ಚಿಸಿ ಮತ್ತು ಯಾವಾಗಲೂ ನಿಮ್ಮನ್ನು ನಂಬಿರಿ.



Click it and Unblock the Notifications
