Latest Updates
-
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು!
ಆಕೆ ಈ ವಿಷಯಗಳನ್ನು ಮಾತ್ರ ತಾನಾಗಿಯೇ ಎಂದೂ ಹೇಳಲ್ಲ!
ಇಂಗ್ಲಿಷ್ ನಲ್ಲಿ "well" ಎಂಬ ಒಂದೇ ಪದಕ್ಕೆ ಕೆಲವಾರು ಅರ್ಥಗಳಿವೆ. ಆದರೆ ಮಹಿಳೆಯರು ಈ ಪದವನ್ನು ಬಳಸಿದಾಗ ಈ ಅರ್ಥಗಳಿಗೆ ಇನ್ನೂ ನೂರು ಅರ್ಥಗಳು ಸೇರುತ್ತವೆ..!!
ಕೆಲವು ವಿಷಯಗಳಲ್ಲಿ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹೇಳುವಲ್ಲಿ ಮಹಿಳೆಯರು ಕೊಂಚ ಹಿಂದೇಟು ಹಾಕುತ್ತಾರೆ. ಅದರಲ್ಲೂ ತಮ್ಮ ಜೀವನಸಂಗಾತಿಯ ಮನ ನೋಯಬಹುದು ಎಂಬ ಅಳುಕು ಇರುವ ವಿಷಯಗಳನ್ನಂತೂ ಆಕೆ ಹೇಳದೇ ತನ್ನ ಮನಸ್ಸಿನಲ್ಲಿಯೇ ಹುದುಗಿಸಿಕೊಳ್ಳಬಹುದು. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!
ಈ ತರಹದ ನೂರಾರು ಯೋಚನೆಗಳು ಆಕೆಯ ತಲೆಯಲ್ಲಿದ್ದು ಇದನ್ನು ಅವಶ್ಯಕವೆಂದರೆ ಮಾತ್ರ, ಸೂಚ್ಯವಾಗಿ ಕೆಲವೇ ಪದಗಳಲ್ಲಿ ಹೇಳುತ್ತಾಳೆ. ಇಂಗ್ಲಿಷ್ ನಲ್ಲಿ "well" ಎಂಬ ಒಂದೇ ಪದಕ್ಕೆ ಕೆಲವಾರು ಅರ್ಥಗಳಿವೆ. ಆದರೆ ಮಹಿಳೆಯರು ಈ ಪದವನ್ನು ಬಳಸಿದಾಗ ಈ ಅರ್ಥಗಳಿಗೆ ಇನ್ನೂ ನೂರು ಅರ್ಥಗಳು ಸೇರುತ್ತವೆ. ಹೆಣ್ಣಿನ ಮನಸ್ಸನ್ನು ಗೆಲ್ಲಲು, ಪ್ರೀತಿ-ವಿಶ್ವಾಸವೇ ಸಾಕು
ಆಗ ಆಕೆಯ ಮನದಲ್ಲೇನಿದೆ ಎಂಬುದನ್ನು ಆಕೆಯ ಸಂಗಾತಿ ಅರಿತುಕೊಳ್ಳುವಷ್ಟು ಸೂಕ್ಷ್ಮಮತಿಯಾಗಿರಬೇಕಾಗುತ್ತದೆ. ಏಕೆಂದರೆ ಇದಕ್ಕೂ ಮುಂದಿನ ವಿಷಯವನ್ನು ಆಕೆ ನಿಮ್ಮಲ್ಲಿ ಹೇಳುವುದೇ ಇಲ್ಲ! ಕೊಂಚ ಗೊಂದಲವಾಯಿತೇ? ಕೆಳಗಿನ ಉದಾಹರಣೆಗಳು ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಲು ನೆರವಾಗಬಹುದು....

ತನ್ನಂತೆ-ಅವನೂ ಕೂಡ ಸುಂದರನಾಗಿರಬೇಕು!
ಮಹಿಳೆಯರು ಸ್ವಾಭಾವಿಕವಾಗಿಯೇ ಸೌಂದರ್ಯಪ್ರಿಯರು. ಪುರುಷರೂ ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬ ವಿಷಯದ ಬಗ್ಗೆ ಜಾಗರೂಕರಾಗಿದ್ದರೂ ಈ ವಿಷಯದಲ್ಲಿ ಮಹಿಳೆಯರು ಹೆಚ್ಚು ಸೂಕ್ಷ್ಮಮತಿಗಳಾಗಿರುತ್ತಾರೆ. ವಿಶೇಷವಾಗಿ ಪುರುಷರ ಉಡುಗೆಯ ವಿಷಯ ಬಂದಾಗ ಪುರುಷರು ಸಾಮಾನ್ಯವಾಗಿ ತಮಗೆ ಆರಾಮ ಎನಿಸಿದ ಬಟ್ಟೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎರಡನೆಯ ಆದ್ಯತೆ ಬಣ್ಣ ಇತ್ಯಾದಿಗಳಿಗೆ.

ಸಾದಾ ಶರ್ಟ್ ಪ್ಯಾಂಟ್ ಆಕೆಗೆ ಇಷ್ಟವಾಗಲ್ಲ!
ಆದರೆ ಮಹಿಳೆಯರಿಗೆ ತಮ್ಮ ಸಂಗಾತಿ ಇಂದಿನ ದಿನಕ್ಕೆ ಹಾಗೂ ಸಂದರ್ಭಕ್ಕೆ ಒಪ್ಪುವಂತಹ ಉಡುಗೆಗಳನ್ನೇ ತೊಡಬೇಕು ಎಂಬ ಬಯಕೆ ಇರುತ್ತದೆ. ಆಗ ಅವರು ನೇರವಾಗಿ ಈ ವಿಷಯವನ್ನು ಹೇಳದೇ 'ಎಲ್ಲರೂ ಸೂಟ್ ಧರಿಸುತ್ತಾರೆ' ಎಂದು ಸೂಚ್ಯವಾಗಿ ಹೇಳಬಹುದು. ಅಂದರೆ ಇದರ ಅರ್ಥ ಯಾವುದೋ ಸಂದರ್ಭದಲ್ಲಿ ಎಲ್ಲರೂ ಸೂಟ್ ಧರಿಸಿಕೊಂಡು ಬಂದಿದ್ದು ನೀವು ಮಾತ್ರ ಸಾದಾ ಶರ್ಟ್ ಪ್ಯಾಂಟ್ ಧರಿಸಿಕೊಂಡು ಬಂದರೆ ಇರಿಸು ಮುರುಸಾಗುವುದು ಆಕೆಗೆ ಇಷ್ಟವಿಲ್ಲ.

ಆಕೆಯೂ ಸುತ್ತಮುತ್ತಲ ವ್ಯಕ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ
ಸಾಮಾನ್ಯವಾಗಿ ಪುರುಷರು ತಮ್ಮ ಸುತ್ತಮುತ್ತಲ ವ್ಯಕ್ತಿಗಳ ಬಗ್ಗೆ, ವಿಶೇಷವಾಗಿ ಸುಂದರ ಯುವತಿಯರ ಬಗ್ಗೆ ಆಸಕ್ತ ನೋಟವನ್ನು ಹರಿಸುತ್ತಾರೆ. ಇದರರ್ಥ ಅವರು ತಮ್ಮ ಸಂಗಾತಿಯ ಬಗ್ಗೆ ಅನಾಸಕ್ತರೆಂದೇನೂ ಅಲ್ಲ. ಇದು ಪ್ರತಿ ಪುರುಷರಲ್ಲಿಯೂ ಇರುವ ಒಂದು ಗುಣವಾಗಿದೆ. ಇದೇ ರೀತಿ ಮಹಿಳೆಯರೂ ತಮ್ಮ ಸುತ್ತ ಮುತ್ತಲ ವ್ಯಕ್ತಿಗಳಲ್ಲಿ ಆಕರ್ಷಕರಾಗಿ ಕಾಣಬರುವ ವ್ಯಕ್ತಿಗಳತ್ತ ಮೆಚ್ಚುಗೆಯ ನೋಟವನ್ನು ಬೀರಬಹುದು. ಆದರೆ ಪುರುಷರಿಗೆ ಮಾತ್ರ ಈ ನೋಟ ಆಕೆ ತಮಗೆ ಮೋಸ ಮಾಡುತ್ತಿದ್ದಾಳೆ ಎಂದೇ ಅನ್ನಿಸಬಹುದು. ಆದರೆ ಈ ಬಗ್ಗೆ ಆಕೆ ಎಂದಿಗೂ ನಿಮಗೆ ಏನನ್ನೂ ಹೇಳಲಾರಳು.

ಕೆಲವೊಮ್ಮೆ ಏಕಾಂತವನ್ನು ಬಯಸುತ್ತಾರೆ
ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಏಕಾಂತವನ್ನು ಬಯಸುತ್ತಾರೆ. ಅಥವಾ ತಮ್ಮ ಆತ್ಮೀಯರೊಂದಿಗೆ ಮಾತ್ರ ಕಳೆಯಲು ಬಯಸುತ್ತಾರೆ. ವಿಶೇಷವಾಗಿ ರಸದೂತಗಳ ಏರುಪೇರಿನ ಅಥವಾ ಭಾವೋದ್ವೇಗದ, ಆತಂಕ, ಖಿನ್ನತೆ ಮೊದಲಾದ ಸಂದರ್ಭಗಳಲ್ಲಿ ಆಕೆಗೆ ತನ್ನ ಸಂಗಾತಿಗಿಂತಲೂ ತನ್ನ ತಾಯಿ ಅಥವಾ ಆತ್ಮೀಯ ಗೆಳತಿಯ ಸಂಗವೇ ಹೆಚ್ಚು ಇಷ್ಟವಾಗುತ್ತದೆ. ಈ ಸಂದರ್ಭವನ್ನು ಆಕೆ ಎಂದಿಗೂ ನಿಮ್ಮಲ್ಲಿ ಹೇಳಲಾರಳು. ಆಗ ನೀವೇ ಇದನ್ನು ಅರ್ಥ ಮಾಡಿಕೊಂಡು ಆಕೆಯ ಏಕಾಂತಕ್ಕೆ ಅಡ್ಡಿ ಬರದಿದ್ದರೆ ಸರಿ.

ಆಕೆಯ ಬಗ್ಗೆ ನೀವಾಗಿ ಅರಿತುಕೊಳ್ಳಲು ಯತ್ನಿಸಬೇಕೆಂದು ಬಯಸುತ್ತಾಳೆ
ವಿಶೇಷವಾಗಿ ಸಮಾಗಮದ ಸಮಯದಲ್ಲಿ ಎಷ್ಟೋ ವಿಷಯಗಳಲ್ಲಿ ನೀವಾಗಿ ಮುಂದುವರೆಯಬೇಕೆಂದು ಮತ್ತು ಹೊಸತನವನ್ನು ಆಚರಿಸಬೇಕೆಂದು ಆಕೆ ಬಯಸುತ್ತಾಳೆ. ಆದರೆ ಬಾಯಿ ಬಿಟ್ಟು ಹೇಳುವುದಿಲ್ಲ.

ಆಕೆಯ ಬಗ್ಗೆ ನೀವಾಗಿ ಅರಿತುಕೊಳ್ಳಲು ಯತ್ನಿಸಬೇಕೆಂದು ಬಯಸುತ್ತಾಳೆ
ಯಾವ ಚಟುವಟಿಕೆ ಆಕೆಗೆ ಇಷ್ಟವಾಗುತ್ತದೆ ಎಂದು ಆಕೆ ಮೊದಲಿಗೆ ಹೇಳದೇ ಇದ್ದರೂ ಯಾವುದು ಇಷ್ಟವಾಯಿತು ಎಂದು ನಂತರ ಹೇಳಬಹುದು. ಆದ್ದರಿಂದ ಆಕೆಯ ಏನು ಇಷ್ಟವಾಗಬಹುದು ಎಂದು ಸಂಗಾತಿ ತಾನಾಗಿಯೇ ಅರಿತುಕೊಳ್ಳಬೇಕು ಎಂದು ಆಕೆ ಬಯಸುತ್ತಾಳೆ.



Click it and Unblock the Notifications