Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೆಣ್ಣಿನ ಮನಸ್ಸನ್ನು ಗೆಲ್ಲಲು, ಪ್ರೀತಿ-ವಿಶ್ವಾಸವೇ ಸಾಕು
ಒಂದು ಕಟ್ಟಡ ಸ್ಥಿರವಾಗಿ ನಿಲ್ಲಲು ಹೇಗೆ ಗಟ್ಟಿ ಮುಟ್ಟಾದ ಅಡಿಪಾಯ ಅಗತ್ಯವಿದೆಯೇ, ಅಂತೆಯೇ ಗಂಡ- ಹೆಂಡಂತಿಯ ನಡುವಿನ ಸಂಬಂಧ ಗಟ್ಟಿಗೊಳ್ಳಲು ಪರಸ್ಪರ ವಿಶ್ವಾಸ, ಪ್ರೀತಿ, ಒಲುಮೆ ಮುಖ್ಯ. ಇದರಲ್ಲಿ ಪ್ರೀತಿ, ವಿಶ್ವಾಸವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಚಂಚಲವಾಗಿರುವ ಹೆಣ್ಣಿನ ಮನಸ್ಸನ್ನು ಅರಿಯುವುದೇ ಇಲ್ಲಿ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತದೆ. ಹೌದು ಕೆಲವೊಂದು ವಿಷಯದಲ್ಲಿ ಮಹಿಳೆಯರನ್ನು ಸಮಾಧಾನ ಪಡಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
ಹಾಗಾಗಿ, ಮೊದಲು ನಿಮ್ಮ ಮನದ ನಲ್ಲೆಯನ್ನು ಅರ್ಥಮಾಡಿಕೊಳ್ಳುವ ಮೊದಲು ಆಕೆಯೊಂದಿಗೆ ನೀವು ಹೆಚ್ಚು ಹೆಚ್ಚು ಸಂವಹನ ನಡೆಸಬೇಕು. ಹೆಣ್ಣಿನ ಜೊತೆಗೆ ಯಾವಾಗಲು ಕೊಡು ಮತ್ತು ಕೊಳ್ಳುವಿಕೆಯ ಭಾವವನ್ನು ಇಟ್ಟುಕೊಳ್ಳಬೇಕು. ಆಕೆಯನ್ನು ಅರ್ಥ ಮಾಡಿಕೊಳ್ಳಲು ಮೊದಲು ನೀವು ಆಕೆಯೊಂದಿಗೆ ನೇರವಂತಿಕೆಯಿಂದ ನಡೆದುಕೊಳ್ಳಿ. ಆಗಲೇ ಆಕೆಯು ನಿಮಗೆ ಅರ್ಥವಾಗಬಹುದು. ನೀವು ಆಕೆಯ ಕುರಿತಾದ ನಿಮ್ಮ ಪ್ರೀತಿ ಮತ್ತು ಬದ್ಧತೆಯನು ಆಕೆಯ ಮುಂದೆ ಪ್ರದರ್ಶಿಸಿದರೆ ಆಗ ಆಕೆಯು ನಿಮ್ಮನ್ನು ನಂಬಿ ತನ್ನ ನಿಜ ಸ್ವರೂಪವನ್ನು ತೋರ್ಪಡಿಸಬಹುದು.
ಆದರೆ ಒಂದು ಮಾತು, ಆಕೆಯ ಮನಸ್ಸನ್ನು ಗೆಲ್ಲಲು ಮತ್ತು ಆಕೆಯನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಬಾರಿ ಪ್ರಯತ್ನಿಸಿದಿರಿ ಮತ್ತು ಎಷ್ಟು ಬಾರಿ ಸೋತಿರಿ ಎಂಬುದು ಮುಖ್ಯವಲ್ಲ, ನಿಮಗೆ ಎಷ್ಟು ತಾಳ್ಮೆ ಇದೆಯೆಂಬುದೆ ಮುಖ್ಯ. ಹೆಣ್ಣನ್ನು ರಾತ್ರೋ ರಾತ್ರಿ ಅಥವಾ ಒಂದೇ ವರ್ಷದಲ್ಲಿ ಅರ್ಥಮಾಡಿಕೊಳ್ಳಲು ಅಸಾಧ್ಯ ಎಂಬುದನ್ನು ಅರಿಯಿರಿ. ಆದರೂ ಕೆಲವೊಂದು ಮಾರ್ಗಗಳನ್ನು ಅನುಸರಿಸುವುದರ ಮೂಲಕ, ನಿಮ್ಮಾಕೆಯ ಮನಸ್ಸನ್ನು ಗೆಲ್ಲಬಹುದು, ಮುಂದೆ ಓದಿ...

ಪ್ರೀತಿ
ನಿಮ್ಮಾಕೆಯನ್ನು ಅರ್ಥ ಮಾಡಿಕೊಳ್ಳಲು ಆಕೆಯನ್ನು ಹೆಚ್ಚು ಪ್ರೀತಿಸಿ. ಯಾರೇ ಆಗಲಿ ತಮ್ಮನ್ನು ಹೆಚ್ಚು ಪ್ರೀತಿಸಿದವರೊಂದಿಗೆ ತಮ್ಮ ಭಾವನೆಗಳನ್ನು ಹೆಚ್ಚು ಹಂಚಿಕೊಳ್ಳುತ್ತಾರೆ. ನೀವು ಆಕೆಯನ್ನು ತುಂಬು ಹೃದಯದಿಂದ ಪ್ರೀತಿಸಿದಾಗ ಆಕೆ ಸಹಜವಾಗಿ ನಿಮ್ಮೊಂದಿಗೆ ಮುಕ್ತವಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾಳೆ.

ಮಮತೆ ಮತ್ತು ಅನುಬಂಧ
ನಿಮ್ಮಾಕೆಯ ಕುರಿತಾಗಿ ನಿಮಗೆ ಇರುವ ಪ್ರೀತಿ ಮತ್ತು ಕಾಳಜಿಯು ಆಕೆಯ ಮನದಲ್ಲಿ ನಿಮ್ಮ ಬಗ್ಗೆ ಒಂದು ರೀತಿಯ ಅನುಬಂಧವನ್ನುಂಟು ಮಾಡುತ್ತದೆ. ಆಗ ಆಕೆಯು ನಿರಾಯಾಸವಾಗಿ ನಿಮಗೆ ಅರ್ಥವಾಗುತ್ತಾಳೆ.

ಮೊದಲ ನಡೆ ನಿಮ್ಮದಾಗಿರಲಿ
ಹೆಣ್ಣು ಸಂಕೋಚ ಜೀವಿ. ಆಕೆಯನ್ನು ಅರ್ಥ ಮಾಡಿಕೊಳ್ಳಲು ಎಲ್ಲಾ ವಿಚಾರದಲ್ಲಿ ಮೊದಲ ನಡೆ ನಿಮ್ಮದೇ ಆಗಿರಲಿ. ಪ್ರೀತಿಯನ್ನು ವ್ಯಕ್ತಪಡಿಸಲು, ಜಗಳವಾಡಿದಾಗ ಕ್ಷಮೆ ಕೋರಲು ಎಲ್ಲದಕ್ಕು ಮೊದಲು ನೀವೇ ಸಿದ್ಧರಾಗಿರಬೇಕು ತಿಳಿಯಿತೇ? ಆಗಲೇ ಆಕೆ ನಿಮಗೆ ಆರ್ಥವಾಗುವುದು.

ಮಾತಿನ ಮಲ್ಲರಾಗಿ
ಹೆಂಗಸರು ಮಾತನಾಡಲು ಹೆಚ್ಚು ಇಷ್ಟಪಡುತ್ತಾರೆ. ಆಕೆಯೊಂದಿಗೆ ಮಾತನಾಡಲು ಒಂದು ಪ್ರಶ್ನೆ ಕೇಳಿ ಸಾಕು, ಮಾತು ಅದಷ್ಟಕ್ಕೆ ಅದೇ ಮುಂದುವರಿಯುತ್ತದೆ. ಸಮಂಜಸತೆಯಿಂದ ಕೂಡಿದ ಪ್ರಶ್ನೆಗಳ ಮೂಲಕ ಆಕೆಯನ್ನು ಮಾತಿಗೆಳೆಯುವ ಪ್ರಯತ್ನ ಮಾಡಿ.

ಒಟ್ಟಿಗೆ ಕಾಲ ಕಳೆಯಿರಿ
ಆಕೆಯೊಂದಿಗೆ ಕಾಲ ಕಳೆಯಲು ಸಮಯ ಹೊಂದಿಸಿಕೊಳ್ಳಿ. ಆಗ ಆಕೆಯು ನಿಮಗೆ ಸುಲಭವಾಗಿ ಹೆಚ್ಚು ಅರ್ಥವಾಗುತ್ತಾಳೆ. ಕಾಲ ಕಳೆಯುವಾಗ ಆಕೆಯ ಆಸೆ, ಅಭಿರುಚಿ, ಇಷ್ಟ ಮತ್ತು ಕಷ್ಟಗಳು ನಿಮಗೆ ಸುಮ್ಮನೆ ಮನದಟ್ಟಾಗುತ್ತವೆ.

ಬದ್ಧತೆ
ನಿಮ್ಮಾಕೆಯ ಬಗ್ಗೆ ನಿಮ್ಮ ಬದ್ಧತೆಯು ಪರಿಪೂರ್ಣವಾಗಿರಲಿ. ಹೆಂಗಸರು ಹೆಚ್ಚು ಭಾವನಾಜೀವಿಗಳು ಆಕೆಗೆ ಎಲ್ಲವನ್ನು ಹಂಚಿಕೊಳ್ಳುವುದು ಎಂದರೆ ಸಂತಸ. ಅದರಲ್ಲೂ ಸಂಬಂಧದ ವಿಚಾರದಲ್ಲಿ ತಮ್ಮ ಭಾವನೆಗಳನ್ನು ಮತ್ತು ಕಲ್ಪನೆಗಳನ್ನು ಸದಾ ಹಂಚಿಕೊಳ್ಳಲು ಹಾತೊರೆಯುತ್ತಾರೆ.ಆಗಾಗಿ ನೀವು ಆಕೆಯನ್ನು ಅರ್ಥಮಾಡಿಕೊಳ್ಳಲು ಮೊದಲು ಆಕೆಯ ಕುರಿತಾಗಿ ನಿಮ್ಮ ಬದ್ಧತೆಯನ್ನು ನಿರೂಪಿಸಿ.



Click it and Unblock the Notifications
