Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಕೈ ಹಿಡಿಯುವ 'ನಲ್ಲನ' ಬಗ್ಗೆ ಆಕೆಯಲ್ಲಿರುವ ತಳಮಳ...
ಮಹಿಳೆಯರಿಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಕಂಡುಕೊಳ್ಳುವುದು ಅಸಾಧ್ಯವಾದ ಕೆಲಸ. ಇದರ ಪ್ರಾತ್ಯಕ್ಷಿಕೆ ನೋಡಬೇಕಿದ್ದರೆ ಸೀರೆ ಅಂಗಡಿಯಲ್ಲಿ ಮಹಿಳೆಯರು ಆಯ್ಕೆ ಮಾಡುವ ವಿಧಾನವನ್ನು ಕೊಂಚ ಗಮನಿಸಿದರೆ ಸಾಕು. ಸೀರೆಯ ಆಯ್ಕೆಯಲ್ಲಿಯೇ ಇಷ್ಟೊಂದು ದ್ವಂದ್ವವಿರುವಾಗ ತನ್ನ ಜೀವನಸಂಗಾತಿಯ ಆಯ್ಕೆಯಲ್ಲಿ ಆಕೆಯಲ್ಲಿ ಎಷ್ಟೊಂದು ದ್ವಂದ್ವವಿರಬೇಡ? ವಾಸ್ತವವಾಗಿ ಮಹಿಳೆಯರ ಮನಸ್ಸಿನಲ್ಲಿ ಆಯ್ಕೆಗಳ ವಿಷಯ ಬಂದಾಗ ಇದರ ವ್ಯಾಪ್ತಿ ಅಪಾರವಾಗಿ ಅತ್ತಿತ್ತ ಹೊರಳುವುದೇ ಇದಕ್ಕೆ ಕಾರಣ. ಆಕೆ ನಗೆ ಬೀರಿದರೆ, ಅದನ್ನೇ ಪ್ರೀತಿ ಅಂದುಕೊಳ್ಳುವುದೇ?
ಇದಕ್ಕೆ ವ್ಯತಿರಿಕ್ತವಾಗಿ ಪುರುಷರು ತಮ್ಮ ಆಯ್ಕೆಯನ್ನು ಒಂದು ಖಚಿತವಾದ ನಿಟ್ಟಿನಲ್ಲಿ ಹರಿಯಬಿಡುತ್ತಾರೆ. ಅಲ್ಲದೇ ಕೊಂಚ ಹೆಚ್ಚೂ ಕಡಿಮೆಯಾದರೆ ಪುರುಷರ ಆಯ್ಕೆಗೆ ಹೆಚ್ಚಿನ ಅಡ್ಡಿಯಾಗುವುದಿಲ್ಲ. ಆದರೆ ಜೀವನಸಂಗಾತಿಯನ್ನು ಆಯ್ದುಕೊಳ್ಳುವ ವಿಷಯ ಬಂದಾಗ ಮಾತ್ರ ಮಹಿಳೆಯರು ತಮ್ಮ ಆಯ್ಕೆಗಾಗಿ ಇರುವ ವಿಷಯಗಳನ್ನು ಅತಿ ಹೆಚ್ಚಿನ ವ್ಯಾಪ್ತಿಗೆ ವಿಸ್ತರಿಸುವುದು ಮಾತ್ರ ನಿಜ. ಶ್! ಇದು ಮಹಿಳೆಯರ ಸೀಕ್ರೆಟ್, ಕೊಂಚ ಡಿಫರೆಂಟ್!
ಸಾಮಾನ್ಯವಾಗಿ ಈ ವಿಷಯಗಳನ್ನು ಯಾವುದೇ ಮಹಿಳೆ ಸ್ಪಷ್ಟವಾಗಿ ತಿಳಿಸುವುದಿಲ್ಲ. ಆದರೂ ತನ್ನ ಪುರುಷ ಹೀಗಿರಬೇಕು ಎಂದೇ ಬಯಸುತ್ತಾಳೆ. ಇದೇ ಕಾರಣಕ್ಕೆ ನಮ್ಮ ಜನಪದ ಕಥೆಗಳಲ್ಲಿ ಕನಸಿನ ರಾಜಕುಮಾರ ಇದ್ದಾನೆಯೇ ಹೊರತು ಕನಸಿನ ರಾಜಕುಮಾರಿ ಇಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ: ಲೈಫ್‌ನಲ್ಲಿ ಸುಂದರ ಹುಡುಗಿಯನ್ನು ಪಡೆಯುವ ಗುಂಗಿನಲ್ಲಿ....

ನನ್ನ ಪುರುಷ ತನ್ನ ಮಾತುಗಳನ್ನು ಕೇಳುವವನಾಗಿರಬೇಕು!
ಹಾಸ್ಯ ಮಾತುಗಾರ ಪ್ರಾಣೇಶ್ ತನ್ನ ಎಲ್ಲಾ ಭಾಷಣದಲ್ಲಿ ಮಹಿಳೆಯರನ್ನು ಮಾತೆಯರೇ ಎಂದೇ ಸಂಬೋಧಿಸುತ್ತಾರೆ. ಏಕೆಂದರೆ ಮಹಿಳೆಯರು ಅಂದರೆ ಬರೇ ಮಾತೇ ಎಂದು ಹಾಸ್ಯಚಟಾಕಿ ಹಾರಿಸುತ್ತಾರೆ. ವಾಸ್ತವವಾಗಿ ಮಹಿಳೆಯರಿಗೆ ಮಾತಾಡುವುದು ಒಂದು ಗೀಳೇ ಆಗಿದ್ದು ತಮ್ಮ ಮಾತುಗಳನ್ನು ಇತರರು ಕೇಳದಿದ್ದರೂ ಸರಿ, ತಮ್ಮ ಪುರುಷ ಮಾತ್ರ ಪೂರ್ಣವಾಗಿ ಗಮನವಿಟ್ಟು ಕೇಳಬೇಕೆಂದು ಬಯಸುತ್ತಾಳೆ.

ನನ್ನ ಪುರುಷ ತನ್ನ ಮಾತುಗಳನ್ನು ಕೇಳುವವನಾಗಿರಬೇಕು!
ಅಂದರೆ ಪುರುಷನಿಗೆ ಆಕೆ ಮಾತನಾಡುವ ವಿಷಯಗಳ ಬಗ್ಗೆ ಇಷ್ಟವಿದ್ದರೂ, ಇಲ್ಲದಿದ್ದರೂ, ಆಸಕ್ತಿ ಇದ್ದರೂ ಇಲ್ಲದಿದ್ದರೂ ಆತ ಸುಮ್ಮನೇ ಕೇಳುತ್ತಿರಬೇಕು ಅಷ್ಟೇ.

ಆತನ ಸಾನಿಧ್ಯದಲ್ಲಿ ಆಕೆ ಸುರಕ್ಷತೆ ಅನುಭವಿಸಬೇಕು
ಯಾವುದೇ ಮಹಿಳೆ ತನ್ನ ಪುರುಷನ ತೆಕ್ಕೆಯಲ್ಲಿ ಸುರಕ್ಷತೆಯನ್ನು ಅನುಭವಿಸಲು ಇಚ್ಛಿಸುತ್ತಾಳೆ. ಅಂದರೆ ತನ್ನ ಪುರುಷ ಸದಾ ತನ್ನ ರಕ್ಷಣೆ ಮಾಡುತ್ತಾನೆ, ತನ್ನ ಬೆಂಬಲಕ್ಕೆ ಸದಾ ಇರುತ್ತಾನೆ ಎಂಬ ಭಾವನೆ ಆಕೆಗೆ ನೂರ್ಮಡಿ ಬಲ ನೀಡುತ್ತದೆ.

ಕನಸಿನ ರಾಜಕುಮಾರನೇ ಆಗಿರಬೇಕು..!
ವಾಸ್ತವವಾಗಿ ಕನಸಿನ ರಾಜಕುಮಾರನ ಗುಣಗಳನ್ನು ಹೊಂದಿರುವ ವ್ಯಕ್ತಿ ಈ ಜಗತ್ತಿನಲ್ಲಿ ಸಿಗಲಾರ. ಎಲ್ಲಾ ಗುಣಗಳು ಇರಲೇಬೇಕು ಎಂದು ಘೋರ ತಪಸ್ಸು ಮಾಡಿದ ದ್ರೌಪದಿಗೆ ಎಲ್ಲಾ ಗುಣಗಳನ್ನು ಒಂದೇ ವ್ಯಕ್ತಿಯಲ್ಲಿ ನೀಡಲಾರದೇ ಸೋತ ಭಗವಂತ ಕಡೆಗೆ ಐದು ಪತಿಯರ ಮೂಲಕ ಆ ಎಲ್ಲಾ ಗುಣಗಳನ್ನು ದ್ರೌಪದಿಗೆ ನೀಡಬೇಕಾಗಿ ಬಂದಿರುವಾಗ ಹುಲುಮನುಷ್ಯರಾದ ನಮ್ಮಲ್ಲಿ ಆ ಎಲ್ಲಾ ಗುಣಗಳು ಸಿಗುವುದು ಅಸಾಧ್ಯ. ಆದರೂ, ಪ್ರತಿ ಯುವತಿಯ ಮನದಲ್ಲಿಯೂ ಓರ್ವ ಕನಸಿನ ರಾಜಕುಮಾರನಿರುತ್ತಾನೆ. ಈತ ಸಕಲ ಸದ್ಗುಣ ಸಂಪನ್ನನಾಗಿದ್ದು ಕೇವಲ ಈಕೆಯನ್ನು ಮಾತ್ರ ಮೋಹಿಸಬೇಕು.

ತನ್ನ ಪುರುಷ ರಸಿಕನಾಗಿರಬೇಕು
ತನ್ನ ಪುರುಷ ರಸಿಕನಾಗಿರಬೇಕು ಎಂದು ಪ್ರತಿ ಯುವತಿಯೂ ಬಯಸುತ್ತಾಳೆ. ವಾಸ್ತವವಾಗಿ ರಸಿಕತೆಯನ್ನು ಪುರುಷರು ಹೆಚ್ಚು ಪ್ರಕಟಿಸಿದರೂ ಏಕಾಂತದಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚು ರಸಿಕರಾಗಿರುವುದು ಕಂಡುಬಂದಿದೆ.

ತನ್ನ ಪುರುಷ ರಸಿಕನಾಗಿರಬೇಕು
ಆದರೆ ಈ ರಸಿಕತೆ ತನಗೆ ಮಾತ್ರವೇ ಮೀಸಲಾಗಿರಬೇಕೇ ಹೊರತು ತನ್ನ ದೃಷ್ಟಿಯನ್ನು ಇತರ ಮಹಿಳೆಯರ ಕಡೆಗೆ ಆತ ಹೊರಳಿಸಿದರೆ ಮಾತ್ರ ಯಾವುದೇ ಮಹಿಳೆ ಸಹಿಸಲಾರಳು.



Click it and Unblock the Notifications