Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅರೆ, ಕೆಲವೊಮ್ಮೆ ಈ ಸಂಗತಿ ಗಂಡಸರಿಗೆ ತಿಳಿದೇ ಇರುವುದಿಲ್ಲ!
ಕೇವಲ ಹಣ ಹಾಗೂ ಕಟ್ಟುಮಸ್ತಾದ ದೇಹದಿಂದ ಮಾತ್ರ ಮಹಿಳೆಯೊಬ್ಬಳನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹಾಗಾದರೆ ಮಹಿಳೆಯರು ಏನು ಬಯಸುತ್ತಾರೆ ಎಂದು ತಿಳಿದು ಕೊಳ್ಳಬೇಕೇ? ಮುಂದೆ ಓದಿ...
ಮಹಿಳೆಯರನ್ನು ಆಕರ್ಷಿಸಲು ಏನು ಬೇಕಿರುತ್ತದೆ ಎಂದು ಹೆಚ್ಚಿನ ಪುರುಷರಿಗೆ ತಿಳಿದೇ ಇರುವುದಿಲ್ಲ. ಯಾಕೆಂದರೆ ಕೆಲವರು ಕಟ್ಟುಮಸ್ತಾದ ದೇಹ ಹೊಂದಿದ್ದರೆ ಹುಡುಗಿಯರು ತನ್ನ ಹಿಂದೆ ಬರಬಹುದು ಎಂದು ಭಾವಿಸುತ್ತಾರೆ. ಇನ್ನು ಕೆಲವರು ಹಣ ಇದ್ದರೆ ಎಲ್ಲವೂ ಬಳಿ ಬರುತ್ತದೆ ಎಂದು ತಿಳಿದಿರುತ್ತಾರೆ. ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?
ಆದರೆ ಹಣ ಹಾಗೂ ಕಟ್ಟುಮಸ್ತಾದ ದೇಹದಿಂದ ಪ್ರೌಢ ಮಹಿಳೆಯೊಬ್ಬಳನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹಾಗಾದರೆ ಮಹಿಳೆಯರು ಏನು ಬಯಸುತ್ತಾರೆ ಎಂದು ತಿಳಿದುಕೊಳ್ಳಬೇಕೇ? ಮುಂದಕ್ಕೆ ಓದಿಕೊಂಡು ಹೋದರೆ ನಿಮಗೆ ಎಲ್ಲವೂ ತಿಳಿಯುತ್ತದೆ. ಹುಡುಗಿಯರ ವಿಷಯದಲ್ಲಿ, ಸಮೀಕ್ಷೆ ಏನು ಹೇಳುತ್ತದೆ ನೋಡಿ...

ವಾಸ್ತವ #1
ಸುಮಾರು 10,000 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ ಬಳಿಕ ಕಂಡುಬಂದ ಅಂಶವೆಂದರೆ ಆತ್ಮವಿಶ್ವಾಸದಿಂದ ಇರುವ ವ್ಯಕ್ತಿಯೊಂದಿಗೆ ಮಹಿಳೆಯರು ಇರಲು ಬಯಸುತ್ತಾರೆ. ಸುಂದರವಾಗಿರದಿದ್ದರೂ ಆತ್ಮವಿಶ್ವಾಸವನ್ನು ಹೊಂದಿರುವಂತಹ ಪುರುಷರ ಕಡೆ ಮಹಿಳೆಯರು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ವಾಸ್ತವ #2
ಪರಹಿತಚಿಂತನೆಯನ್ನು ಹೊಂದಿರುವಂತಹ ಪುರುಷರು ಶೇ.75ರಷ್ಟು ಮಹಿಳೆಯರಿಗೆ ಇಷ್ಟವಾಗುತ್ತಾರೆ ಎಂದು ಇನ್ನೊಂದು ಅಧ್ಯಯನವು ಹೇಳಿವೆ. ಇತರರಿಗೆ ನೆರವಾಗುವಂತಹ ಪುರುಷರು ಒಳ್ಳೆಯ ತಂದೆಯಾಗಬಹುದು ಮತ್ತು ದೀರ್ಘ ಕಾಲದ ಸಂಬಂಧಕ್ಕೆ ಒಳ್ಳೆಯ ಆಯ್ಕೆ ಎಂದು ಮಹಿಳೆಯರು ಹೇಳುತ್ತಾರೆ.

ವಾಸ್ತವ #3
ಮಹಿಳೆಯರನ್ನೇ ಒಳಗೊಂಡಿರುವ ಇನ್ನೊಂದು ಅಧ್ಯಯನದಲ್ಲಿ ಇಬ್ಬರು ಜೊತೆಗಾರರನ್ನು ಆಯ್ಕೆ ಮಾಡಲು ಸೂಚಿಸಲಾಯಿತು. ಒಂದು ದೀರ್ಘ ಸಮಯಕ್ಕೆ ಮತ್ತೊಂದು ಅಲ್ಪಸಮಯಕ್ಕೆ. ಇಲ್ಲಿ ಏನಾಯಿತೆಂದು ತಿಳಿಯಬೇಕೇ? ಮುಂದೆ ಓದಿ....

ವಾಸ್ತವ #4
ಹೆಚ್ಚಿನ ಮಹಿಳೆಯರು (ಸುಂದರ ಹಾಗೂ ಸರಾಸರಿಯಾಗಿರುವ ಪುರುಷ) ಒಂದು ದಿನದ ಸಂಬಂಧಕ್ಕೆ ಆಯ್ಕೆ ಮಾಡಿಕೊಂಡರು. ದೀರ್ಘ ಕಾಲದ ಸಂಬಂಧಕ್ಕಾಗಿ ಪುರುಷರು ಪರಹಿತಚಿಂತಕ, ಒಳ್ಳೆಯ ಮನಸ್ಸಿನ ಮತ್ತು ಆತ್ಮವಿಶ್ವಾಸದ ಪುರುಷನನ್ನು ಆಯ್ಕೆ ಮಾಡಿದರು.

ವಾಸ್ತವ #5
ಅಧ್ಯಯನದಲ್ಲಿ ಭಾಗಿಯಾದ 20-22 ವಯಸ್ಸಿನ ಮಹಿಳೆಯರು ಸುಂದರವಾಗಿರುವ ಪುರುಷರನ್ನು ಆಯ್ಕೆ ಮಾಡಿಕೊಂಡರು. ಇವರ ಪ್ರಮಾಣ ಕಡಿಮೆಯಿದ್ದರೂ ಕೆಟ್ಟ ಹುಡುಗರು ಸುಂದರವಾಗಿದ್ದರೂ ಇವರು ಅವರ ಬಲೆಗೆ ಬೀಳುತ್ತಾರೆಂದು ಈ ಅಧ್ಯಯನದಿಂದ ತಿಳಿದುಬಂದಿದೆ.

ವಾಸ್ತವ #6
ಕಟ್ಟುಮಸ್ತಾದ ದೇಹ ಹಾಗೂ ಮುಖವನ್ನು ಅಂದಗೊಳಿಸುವುದು ಒಳ್ಳೆಯ ವಿಚಾರವೇ. ಆದರೂ ಪುರುಷರು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಹೃದಯವಂತರಾಗಬೇಕು.

ವಾಸ್ತವ #6
ಒಳ್ಳೆಯ ಸೌಂದರ್ಯವನ್ನು ಹೊಂದಿರದಿದ್ದರೂ ಚಿಂತಿಲ್ಲ. ನಡವಳಿಕೆ ಒಳ್ಳೆಯದಾಗಿದ್ದರೆ ಆಗ ಖಂಡಿತವಾಗಿಯೂ ಮಹಿಳೆಯರಿಂದ ಆಕರ್ಷಿತರಾಗುತ್ತೀರಿ.



Click it and Unblock the Notifications
