Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿಯರ ವಿಷಯದಲ್ಲಿ, ಸಮೀಕ್ಷೆ ಏನು ಹೇಳುತ್ತದೆ ನೋಡಿ...
ಹೆಣ್ಣಿನ ಮನಸ್ಸಿನಲ್ಲೇನಿದೆ ಎಂಬುದನ್ನು ಸೃಷ್ಟಿಕರ್ತ ಬ್ರಹ್ಮನಿಗೂ ತಿಳಿಯದಂತೆ. ಅಂತಿರುವಾಗ ಹುಲುಮಾನವರಿಗೆ ಅರಿವಾಗುವುದು ದೂರದ ಮಾತು. ಆದರೂ ಮಹಿಳೆಯರನ್ನು ಆಕರ್ಷಿಸುವ ವಸ್ತುಗಳು ಅಥವಾ ವಿಷಯಗಳು ಯಾವುವು ಎಂಬುದನ್ನು ಕೆಲವು ಸಮೀಕ್ಷೆಗಳ ಮೂಲಕ ಪ್ರಯತ್ನ ನಡೆಯುತ್ತಾ ಬಂದಿದೆ. ಇಂದಿನ ವಾಣಿಜ್ಯ ಯುಗದಲ್ಲಿ ಒಂದು ಉತ್ಪನ್ನವನ್ನು ಮಾರಾಟ ಮಾಡಬೇಕಾದರೆ ಇದು ಅಗತ್ಯ ಕೂಡಾ. ಚಳ್ಳೇ ಹಣ್ಣು ತಿನಿಸುವುದರಲ್ಲಿ, ಹುಡುಗಿಯರೇ ನಂ 1...!
ಒಂದು ಸಮೀಕ್ಷೆಯಲ್ಲಿ ಪುರುಷರ ಯಾವ ವಿಷಯ ಅಥವಾ ಕಣ್ಣಿಗೆ ಬೀಳುವ ಪರಿ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತದೆ ಎಂಬುದನ್ನು ಅರಿಯಲು ಯತ್ನಿಸಲಾಯಿತು. ಇದಕ್ಕೆ ಒಂದಿಬ್ಬರನ್ನಲ್ಲ, ಭರ್ತಿ ಮೂರು ಸಾವಿರ ಮಹಿಳೆಯರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಪುರುಷರ ಯಾವ ವಿಷಯ ಅಥವಾ ಪರಿ ನಿಮ್ಮ ಗಮನವನ್ನೆ ಸೆಳೆಯುತ್ತದೆ ಎಂಬುದನ್ನು ಕೇಳಲಾಯಿತು. ಇವರೆಲ್ಲಾ ಒಂದೇ ಉತ್ತರವನ್ನು ನೀಡಿದ್ದರೆ ಸಮೀಕ್ಷೆಯ ಅಂಕಿ ಅಂಶಗಳನ್ನು ಕಲೆಹಾಕುವ ವಿಶ್ಲೇಷಕರಿಗೆ ಹೆಚ್ಚಿನ ತ್ರಾಸು ಇರುತ್ತಿದ್ದಿಲ್ಲ. ಆದರೆ ಎಲ್ಲರೂ ವಿವಿಧ ಉತ್ತರಗಳನ್ನೇ ನೀಡಿ ಅಂಕಿ ಅಂಶಗಳೆಲ್ಲಾ ಗೋಜಲು ಗೋಜಲಾದವು. ಹಳೆಯ ಜಮಾನದ ಟ್ರಿಕ್ಸ್‌ಗೆ, ಹುಡುಗಿಯರು ಬಗ್ಗುವುದಿಲ್ಲ ಕಣ್ರೀ!
ಓರ್ವ ಮಹಿಳೆಯ ಆಕರ್ಷಣೆ ಪಡೆದ ವಿಷಯ ಇನ್ನೊರ್ವಳ ದೃಷ್ಟಿಯಲ್ಲಿ ಮಹತ್ವವೇ ಇರುತ್ತಿರಲಿಲ್ಲ. ಆದರೂ ಈ ಅಂಕಿ ಅಂಶಗಳಲ್ಲಿ ಹೆಚ್ಚಿನ ಸಮಾನ ಉತ್ತರ ಪಡೆದ ಕೆಲವು ವಿಷಯಗಳನ್ನು ಸಂಗ್ರಹಿಸಿ 'ಹೆಚ್ಚಿನ ಮಹಿಳೆಯರು ಮೆಚ್ಚುವ' ಎಂಬ ಹಣೆಪಟ್ಟಿ ನೀಡಿ ಪ್ರಕಟಿಸಲಾಯಿತು. ಈ ಅಂಕಿಅಂಶಗಳ ಸ್ವಾರಸ್ಯವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ...

ಬುದ್ಧಿವಂತನಾಗಿರುವ ಲಕ್ಷಣ
ಹೆಚ್ಚಿನ ಮಹಿಳೆಯರು ಒಪ್ಪಿಕೊಂಡಂತೆ ಸಾಮಾನ್ಯವಾಗಿ ಬುದ್ಧಿವಂತರಂತೆ ತೋರುವ ಪುರುಷರು ಮೊದಲ ನೋಟಕ್ಕೆ ಆಕರ್ಷಕರಾಗಿ ಕಾಣುತ್ತಾರೆ. ಇವರು ಕೊಂಚ ತೆಳ್ಳಗಿನ ಮೈಕಟ್ಟು ಹೊಂದಿದ್ದು ಕನ್ನಡಕ ಧರಿಸಿ ಕೊಂಚ ಬಕ್ಕತಲೆಯವರೂ ಆಗಿರುತ್ತಾರೆ. ಒಟ್ಟಾರೆ ಬುದ್ಧಿವಂತರಂತೆ ಗೋಚರಿಸುವ ನೋಟ ಪ್ರಥಮ ಆಕರ್ಷಣೆ ಪಡೆಯುತ್ತದೆ.

ಹಣ
ಕೆಲವು ಮಹಿಳೆಯರು ನೇರವಾದ ಮತ್ತು ದಿಟ್ಟ ಉತ್ತರ ನೀಡುವವರಾಗಿದ್ದು ತಮಗೆ ಹಣವಂತರೇ ಇಷ್ಟ ಎಂದು ಒಪ್ಪಿಕೊಂಡಿದ್ದಾರೆ. ಸ್ವಾರಸ್ಯವೆಂದರೆ ಹೆಚ್ಚಿನ ಮಹಿಳೆಯರ ಅಭಿಪ್ರಾಯದಲ್ಲಿ ವ್ಯಕ್ತಿಯಲ್ಲಿ ಹಣವಿದ್ದರೆ ಉಳಿದ ಗುಣಗಳು ಕೊಂಚ ಗೌಣವಾಗುತ್ತವೆ. ಅದಕ್ಕೇ ಅಲ್ಲವೇ ಗಾಲಿಬ್ ಹೇಳಿದ್ದು, ರಯೀಸೋಂ ಕೀ ಶಾನ್ ಮೇ ಖಾಮೀ ಭೀ ಖೂಬೀ ಬನ್ ಜಾತೀ ಹೈ (ಹಣದ ಪ್ರಖರತೆಯ ಕೆಳಗೆ ಕುಂದುಗಳೂ ಒಳ್ಳೆಯ ಗುಣಗಳಂತೆಯೇ ತೋರುತ್ತವೆ)

ಉತ್ತಮ ಮೈಕಟ್ಟು
ಅಚ್ಚರಿ ಪಡುವ ವಿಷಯವೆಂದರೆ ಕೆಲವು ಮಹಿಳೆಯರು ಬೆವರು ಸುರಿಸುತ್ತಿರುವ ಪುರುಷರು ತಮ್ಮ ಗಮನಕ್ಕೆ ಥಟ್ಟನೇ ಬರುತ್ತಾರೆ ಎಂದಿದ್ದಾರೆ. ಹೆಚ್ಚಿನ ಮಹಿಳೆಯರು ಕಟ್ಟುಮಸ್ತಾದ ಶರೀರ ಹೊಂದಿರುವ, ಅದರಲ್ಲೂ ಚಿಕ್ಕ ತೋಳಿನ ಕೈಗಳಿಂದ ಹೊರಗಿಣಿಕುತ್ತಿರುವ ಮೇಲ್ತೋಳಿನ ಸ್ನಾಯು ಹೆಚ್ಚಿನ ಆಕರ್ಷಣೆ ಹೊಂದಿದೆ ಎನ್ನುತ್ತಾರೆ. ಜಿಮ್ ನಲ್ಲಿ ಡಂಬೆಲ್ಸ್ ಗೇ ಏಕೆ ಹೆಚ್ಚು ಬೇಡಿಕೆ ಎಂದು ಈಗ ತಿಳಿಯಿತೇ?

ಅಗಲವಾದ ಭುಜ
ಮಹಿಳೆಯರಿಗೆ ಸಿಂಹಕಟಿ ಮತ್ತು ಅಗಲವಾದ ಭುಜಗಳುಳ್ಳ ಪುರುಷರು ಹೆಚ್ಚು ಆಕರ್ಷಕರಾಗಿರುತ್ತಾರೆ. ಸಾಮಾನ್ಯವಾಗಿ ಈ ಮೈಕಟ್ಟು ಹೊಂದಿದವರು ಸಮರ್ಥ ಪುರುಷರು ಎಂಬ ನಂಬಿಕೆಗೆ ಈ ಬಲ ಬಂದಿರಬಹುದು.

ಎದೆಯ ಕೂದಲು
ಈ ಸಮೀಕ್ಷೆಯಲ್ಲಿ ಉತ್ತರಿಸಿದ ಭಾರತೀಯ ಮಹಿಳೆಯರು ಮಾತ್ರ ಎದೆಯ ಮೇಲಿನ ಕೂದಲು ಪ್ರಥಮ ಆಕರ್ಷಣೆ ಪಡೆಯುತ್ತದೆ ಎಂದಿದ್ದಾರೆ. ಇದೇ ಕಾರಣಕ್ಕೆ ಕೆಲವು ಭಾರತೀಯ ಪುರುಷರು ತಮ್ಮ ಶರ್ಟ್ ನ ಮೊದಲ ಗುಂಡಿಯನ್ನು ಹಾಕುವುದೇ ಇಲ್ಲ. ಅದೇ ಪಾಶ್ಚಾತ್ಯ ಮಹಿಳೆಯರಿಗೆ ಪುರುಷರ ಎದೆಯ ಕೂದಲು ಇಷ್ಟವಿಲ್ಲ. ಇದನ್ನು ಶೇವ್ ಮಾಡಿಕೊಳ್ಳುವಂತೆ ಅವರು ಬಯಸುತ್ತಾರೆ.

ಕ್ರೀಡಾಪುರುಷರು
ಯಾವುದಾದರೊಂದು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪುರುಷರು ಮಹಿಳೆಯರ ಗಮನವನ್ನು ಥಟ್ಟನೇ ಸೆಳೆಯುತ್ತಾರೆ. ಮಹಿಳೆಯರ ಗಮನ ಸೆಳೆಯಲೆಂದೇ ಕೆಲವರು ತಮ್ಮ ಮೈಕಟ್ಟು ಹೇಗೇ ಇರಲಿ, ಒಟ್ಟಾರೆ ತಾವೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಆ ಕ್ರೀಡೆಯ ಉಡುಪು ತೊಟ್ಟು ವಿಜೃಂಭಿಸುವ ಕಾರಣವೇ ಇದು.



Click it and Unblock the Notifications
