Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಹೆಂಗಸರಿಗೆ ಪೆದ್ದು ಗಂಡಸರು ಏಕೆ ಇಷ್ಟವಾಗುತ್ತಾರೆ?
ಪೆದ್ದುಗಳು ಅದರಲ್ಲೂ ವಿಶೇಷವಾಗಿ ಪೆದ್ದು ಗಂಡಸರು ಎಂದರೆ ಯಾರು? ಸ್ಪೈಡರ್‌ಮ್ಯಾನ್ ಸಿನಿಮಾ ನೋಡಿದ್ದೀರಲ್ಲವೆ, ಅದರಲ್ಲಿ ನಮ್ಮ ನಾಯಕನು ಸ್ಪೈಡರ್‌ಮ್ಯಾನ್ ಆಗುವ ಮೊದಲು ಹೇಗಿರುತ್ತಾನೋ, ಅದೇ ಪೆದ್ದುತನ. ಅದೇ ಪೆದ್ದುತನ, ಮಂಕುದಿಣ್ಣೆಗಳು ನಮಗೆ ಬೇಸರ ತರಿಸಬಹುದಾದರು ಹೆಂಗಸರಿಗೆ ಅಂತಹವರನ್ನು ಕಂಡರೆ ಭಾರಿ ಇಷ್ಟ. ಅದು ಸರಿ ಹೆಂಗಸರು ಏಕೆ ಈ ಪೆದ್ದುಗಳನ್ನು ಇಷ್ಟಪಡುತ್ತಾರೆ? ಅದನ್ನು ಅರ್ಥ ಮಾಡಿಕೊಳ್ಳಲು ಯಾವ ಬ್ರಹ್ಮ ವಿದ್ಯೆಯು ಬೇಕಾಗಿಲ್ಲ.
ಹೆಂಗಸರು ಯಾವಾಗಲು ಸರಿಯಾದ ಸಮಯಕ್ಕೆ ಯೋಚಿಸಿ, ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರು ತಮ್ಮ ಗೆಳೆಯನನ್ನು ಮತ್ತು ಸಂಗಾತಿಯನ್ನು ಆರಿಸಿಕೊಳ್ಳುವ ಸಂದರ್ಭದಲ್ಲಿ ತುಂಬಾ ಅಪರೂಪವಾಗಿ ಉದ್ವೇಗಕ್ಕೆ ಒಳಗಾಗುತ್ತಾರೆ.
ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವಾಗ ಇವರು SWOT (Strengths, Weaknesses, Opportunities and Threats) ವಿಶ್ಲೇಷಣೆ ಅಂದರೆ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಭಯಗಳನ್ನು ತಾಳೆ ನೋಡುವ ಒಂದು ಮ್ಯಾನೇಜ್‍ಮೆಂಟ್ ತಂತ್ರವನ್ನು ತಮ್ಮ ಹುಡುಗನ ಕುರಿತಾಗಿ ಅನುಸರಿಸಿ, ಒಬ್ಬ ಪೆದ್ದುವನ್ನು ಆರಿಸಿಕೊಂಡು ನಿರಾಳವಾಗುತ್ತಾರೆ. ಅವರನ್ನೆ ಏಕೆ ಆರಿಸಿಕೊಳ್ಳುತ್ತಾರೆ ಎಂದರೆ ಉತ್ತರ ತುಂಬಾ ಸುಲಭ, ಏಕೆಂದರೆ ಅವರು ಪೆದ್ದುಗಳೊಂದಿಗೆ ಸುರಕ್ಷತೆಯ ಭಾವನೆಯನ್ನು ಹೊಂದುತ್ತಾರೆ.
ಇಂತಹ ಪೆದ್ದುಗಳೊಂದಿಗಿನ ಸಂಬಂಧವು ಧೀರ್ಘಾವಧಿ ನಡೆಯುತ್ತದೆ. ಜೀವನದಲ್ಲಿ ಯಶಸ್ಸನ್ನು ಪಡೆಯಲು ಇವರು ಉತ್ತಮ ಅವಕಾಶಗಳನ್ನು ಹೊಂದಿರುತ್ತಾರೆ. ಇವರನ್ನು ಸುಲಭವಾಗಿ ಒಪ್ಪಿಸಬಹುದು ಮತ್ತು ಇವರು ತಾವು ಹೊರಗೆ ಕಾಣಿಸುವಂತೆ ಒಂದೇ ರೀತಿಯಿರುವುದಿಲ್ಲ, ಸುಲಭವಾಗಿ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಾರೆ. ಹೀಗೆ ಪೆದ್ದುಗಳನ್ನು ಮಹಿಳೆಯರು ಆರಿಸಿಕೊಳ್ಳಲು ಹಲವಾರು ಕಾರಣಗಳು ಇವೆ. ಅವುಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿಕೊಳ್ಳಿ.
ಈ ಏಳು ರೀತಿಯ ಹುಡುಗರನ್ನು ಹುಡುಗಿಯರು ತೆಗೆದುಹಾಕುವುದಿಲ್ಲ !

ಅವರು ತುಂಬಾ ಜಾಣರು
ಡೇಟಿಂಗ್ ಮಾಡಬೇಕೆಂದರೆ ಪೆದ್ದು ಪೆದ್ದಾಗಿ ಆಡುವ ಜಾಣನ ಜೊತೆಯಲ್ಲಿ ಮಾಡಬೇಕೆ ಹೊರತು, ಆರಾಮವಾಗಿರುವ ಬಿಂದಾಸ್ ಹುಡುಗರ ಜೊತೆಯಲ್ಲಿ ಅಲ್ಲ. ಏಕೆಂದರೆ ಇಂತಹ ಹುಡುಗರ ತಲೆಯಲ್ಲಿ ಅಂತಹ ವಿಶೇಷತೆಗಳು ಇರುವುದಿಲ್ಲ, ವಿಷಯಗಳು ಇರುವುದಿಲ್ಲ.

ಇವರನ್ನು ತಪ್ಪಾಗಿ ಗ್ರಹಿಸಲಾಗಿದೆ
ಪೆದ್ದುಗಳು ಎಂದಿಗು ಬದಲಾಗುವುದಿಲ್ಲ ಎಂಬಂತೆ ಸಿನಿಮಾಗಳಲ್ಲಿ ಅವರನ್ನು ತೋರಿಸಲಾಗಿದೆ. ಅವರ ಬಗ್ಗೆ ವಿನೋದವಾಗಿ ದೃಶ್ಯಗಳನ್ನು ಹೆಣೆಯಲಾಗುತ್ತದೆ. ಆದರೆ ನಿಜ ಜೀವನದಲ್ಲಿ ಅವರು ಹಾಗೆ ಇರುವುದಿಲ್ಲ, ನಿಜವಾಗಿ ಹೇಳಬೇಕೆಂದರೆ ಶಾಣ್ಯನ ರೀತಿ ಫೋಸ್ ಕೊಡುವ ಹುಡುಗನಿಗಿಂತ ಇವರೇ ತುಂಬಾ ಕುತೂಹಲಕಾರಿ ವಿಚಾರಗಳನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತಾರೆ. ಆಟದಿಂದ ಹಿಡಿದು ಆಟೋಮೊಬೈಲ್‍ವರೆಗು ಇವರ ಬಳಿ ಅನೇಕ ವಿಚಾರಗಳು ನಿಮಗೆ ತಿಳಿಯುತ್ತವೆ.

ಇವರು ಅರ್ಪಣಾ ಮನೋಭಾವದವರು
ಪೆದ್ದು ಹುಡುಗರು ಹಚ್ ನಾಯಿಯಷ್ಟೇ ಅರ್ಪಣಾ ಮನೋಭಾವವನ್ನು ತಮ್ಮಲ್ಲಿ ಅಡಗಿಸಿಕೊಂಡಿರುತ್ತಾರೆ. ಹೀಗಾಗಿಯೇ ಇವರು ತಮ್ಮ ಹುಡುಗಿಯರ ಹಿಂದೆ ಜಡೆಗಿಂತ ಹೆಚ್ಚಾಗಿ ತಿರುಗುತ್ತಾರೆ. ಆದರೆ ಅವರ ಪ್ರಯತ್ನಗಳಿಗೆ ಮತ್ತು ವಿಶ್ವಾಸಕ್ಕೆ ನೀವು ಬೆಲೆ ನೀಡಿದರೆ ಮಾತ್ರ ಇದನ್ನು ನೀವು ಅವರಿಂದ ನಿರೀಕ್ಷಿಸಬಹುದು.

ಇವರನ್ನು ಸುಲಭವಾಗಿ ತೃಪ್ತಿಪಡಿಸಬಹುದು
ನಿಮ್ಮ ರಾಕ್‍ಸ್ಟಾರ್ ಬಾಯ್‍ಫ್ರೆಂಡ್‍ನಂತೆ ಇವರು ಸೈಜ್ ಝೀರೊ ಮಾಡಿಕೊಳ್ಳುವ ಬಗ್ಗೆ ಮತ್ತು ತನ್ನ ಕೂದಲನ್ನು ಯಾವ ರೀತಿ ಅಲಂಕರಿಸಿಕೊಳ್ಳಬೇಕು ಎಂಬುದರ ಕುರಿತಾಗಿ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ಆರಾಮವಾಗಿ ತಮಗೆ ಒಗ್ಗುವುದನ್ನು ಮಾಡಿಕೊಳ್ಳುತ್ತಾರೆ. ತಮ್ಮ ಬಗ್ಗೆ ವಿಪರೀತ ಅಭಿಮಾನ ಇಲ್ಲದ ಇವರು ನಿಜಕ್ಕು ತೃಪ್ತರು.

ಇವರು ನಿಜವಾದ ಜೆಂಟಲ್‍ಮ್ಯಾನ್‍ಗಳು
ಪೆದ್ದುಗಳು ಜೇಮ್ಸ್ ಬಾಂಡ್‍ನಂತೆ ಪರಿಸ್ಥಿತಿಯ ಲಾಭವನ್ನು ಪಡೆಯುವುದಿಲ್ಲ. ಅದರ ಬದಲಿಗೆ ಅವರು ನಿಮ್ಮ ನಿಷ್ಟಾವಂತ ಕಾವಲುಗಾರರ ರೀತಿ ಇರುತ್ತಾರೆ. ಎಂತಹ ಸಂದರ್ಭದಲ್ಲಿಯೂ ಅವರು ನಿಮ್ಮ ಸುರಕ್ಷತೆಯನ್ನು ಕಾಪಾಡುತ್ತಾರೆ. ಇವರನ್ನು ನಂಬಿ ನೀವು ನಿಶ್ಚಿಂತೆಯಾಗಿರಬಹುದು.

ನೀವು ಅವರಿಂದ ಕಲಿಯಬಹುದು
ನೀವು ಮದುವೆಯಾಗುವ ಮುನ್ನ ಒಬ್ಬ ಮುದ್ದು ಬರಿಸುವಂತಹ ಹುಡುಗನ ಜೊತೆಗೆ ಕಾಲ ಕಳೆಯಬೇಕು ಎಂಬ ಇಚ್ಛೆ ನಿಮಗಿದೆಯೇ? ನಿಮ್ಮ ಸ್ನೇಹಿತರಿಗೆ ನಿಮ್ಮ ಹುಡುಗನನ್ನು ಪರಿಚಯಿಸುವ ಇಚ್ಛೆ ನಿಮಗಿದ್ದಲ್ಲಿ, ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ನಿಮ್ಮ ಪೆದ್ದು ಬಾಯ್‍ಫ್ರೆಂಡ್‍ನ ಬಳಿ ಹೋಗಿ ನೋಡಿ. ಮುಂದೆ ನಿಮ್ಮ ಜೀವನದಲ್ಲಿ ಉಪಯೋಗಕ್ಕೆ ಬರುವ ಹಲವಾರು ವಿಷಯಗಳನ್ನು ಅವನು ನಿಮಗೆ ಕಲಿಸುತ್ತಾನೆ.

ಇವರು ತುಂಬಾ ಹಣವನ್ನು ಸಂಪಾದಿಸುತ್ತಾರೆ
ಜೀವನವೇ ಹಾಗೆ, ನಿಮ್ಮ ಕಾಲೇಜಿನ ಟಾಪರ್ ಒಬ್ಬ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಮತ್ತು ನೀವೆಲ್ಲರು ಚೇಷ್ಟೇ ಮಾಡುತ್ತಿದ್ದ ಪೆದ್ದುವೊಬ್ಬ ಎಂಎನ್‍ಸಿಯಲ್ಲಿ ಸಿಇಓ ಆಗಿ ನೇಮಕ ಆಗಿರುತ್ತಾನೆ. ಆದ್ದರಿಂದ ನಿಮ್ಮ ಜೀವನವನ್ನು ಮುಂದೆ ಉತ್ತಮವಾಗಿ ಮಾಡಿಕೊಳ್ಳಲು ಇಂತಹ ಹುಡುಗನನ್ನು ಹುಡುಕಿಕೊಳ್ಳುವುದು ತಪ್ಪಲ್ಲ.

ಇವರಲ್ಲಿ ಜೀವನೋತ್ಸಾಹ ತುಂಬಿ ತುಳುಕುತ್ತಿರುತ್ತದೆ
ಬಿಂದಾಸ್ ಹುಡುಗರಿಗಿಂತ ಪೆದ್ದು ಹುಡುಗರಲ್ಲಿ ಜೀವನದ ಕುರಿತು ಉದ್ದೇಶಗಳು ಹೆಚ್ಚಿಗೆ ಇರುತ್ತವೆ. ಇವರ ಜೀವನೋತ್ಸಾಹವನ್ನು ನೋಡಿದಾಗ ಮಾತ್ರ ನಿಮಗೆ ಅರ್ಥವಾಗುತ್ತದೆ. ಇವರು ತಮಗೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳಲ್ಲಿ ಅಪಾರವಾದ ಮೋಹವನ್ನು ಹೊಂದಿರುತ್ತಾರೆ. ನೀವು ಸಹ ಆತನ ಅಧ್ಯತೆಗಳ ಪಟ್ಟಿಯಲ್ಲಿದ್ದಲ್ಲಿ, ನಿಮಗೂ ಸಹ ಕೆಲವೊಂದು ಸರ್‌ಪ್ರೈಸ್‍ಗಳು ಆತನಿಂದ ದೊರೆಯುತ್ತವೆ.

ಇವರ ನಡತೆಯು ಉತ್ತಮವಾಗಿರುತ್ತದೆ
ಪೆದ್ದು ಹುಡುಗರ ಕುರಿತಾಗಿ ಯಾವ ಗೆಜೆಟೆಡ್ ಅಧಿಕಾರಿಯು ನಡತೆ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ. ಏಕೆಂದರೆ ಇವರು ಬಾರ್‌ನಲ್ಲಿ ಗಲಾಟೆ ಮಾಡಲ್ಲ, ರಸ್ತೆಯಲ್ಲಿ ಹುಡುಗಿಯರನ್ನು ಚುಡಾಯಿಸುವುದಿಲ್ಲ. ಯಾವುದೇ ಕಾರಣಕ್ಕು ಇವರು ತಮ್ಮ ಸಭ್ಯತೆಯ ಎಲ್ಲೆಯನ್ನು ಮೀರುವುದಿಲ್ಲ.

ಇವರು ಸಂಬಂಧವನ್ನು ಕಾಪಾಡುತ್ತಾರೆ
ಪೆದ್ದು ಹುಡುಗರ ಜೊತೆಗಿನ ನಿಮ್ಮ ಸಂಬಂಧವು ಎಂದಿಗು ಕಡಿದು ಹೋಗುವುದಿಲ್ಲ. ಅವರು ಸಹ ನಿಮ್ಮನ್ನು ಬೇಡವೆಂದು ಕೊಂಡು ಇನ್ನೊಬ್ಬ ಹುಡುಗಿಯ ಬೆನ್ನು ಹತ್ತುವುದಿಲ್ಲ. ಅದೆಲ್ಲದ್ದಕ್ಕಿಂತ ಮೇಲಾಗಿ ಇವರು ನಿಮ್ಮ ಆಸಕ್ತಿಯನ್ನು ಸಹ ಬೌದ್ಧಿಕ ಮಟ್ಟದಲ್ಲಿ ಕಾಪಾಡಿಕೊಂಡಿರುತ್ತಾರೆ.

ಅವರು ತಮ್ಮ ಎಲ್ಲಾ ಸಮಯವನ್ನು ನಿಮಗಾಗಿ ನೀಡುತ್ತಾರೆ
ಪೆದ್ದುಗಳು ತುಂಬಾ ಜನರ ಜೊತೆ ಬೆರೆಯುವುದಿಲ್ಲ ಅಥವಾ ಅವರು ಅಷ್ಟಾಗಿ ಜನಪ್ರಿಯರಾಗಿರುವುದಿಲ್ಲ. ಕಾರಣ ಅವರಿಗೆ ಕಡಿಮೆ ಜನ ಸ್ನೇಹಿತರು ಇರುತ್ತಾರೆ. ಇವರು ತುಂಬಾ ಅಪರೂಪವಾಗಿ ಎಲ್ಲಾ ಹುಡುಗರ ಜೊತೆ ಪ್ರವಾಸಕ್ಕೆ ಹೋಗುತ್ತಾರೆ ಅಥವಾ ಮನೆಯನ್ನು ಬಿಟ್ಟು ರಾತ್ರಿ ಕಳೆಯಲು ಹೋಗುತ್ತಾರೆ.



Click it and Unblock the Notifications











