Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಮದುವೆಯೆಂದರೆ ಸಂಭ್ರಮ-ಮಧುಚಂದ್ರವೆಂದರೆ ಸಾಮೀಪ್ಯ!
ಪ್ರಾಪ್ತಕಾಲದಲ್ಲಿ ಜೀವನಸಂಗಾತಿಯೊಡನ ದಾಂಪತ್ಯ ಜೀವನ ನಿಸರ್ಗ ನಿಯಮದ ಒಂದು ಭಾಗ. ಜೀವನಪರ್ಯಂತ ಒಟ್ಟಿಗೇ ಕಳೆಯಬೇಕಾದ ದಂಪತಿಗಳ ನಡುವೆ ಪ್ರೀತಿ ಬೆಸೆಯಲು ಆತ್ಮೀಯ ಕ್ಷಣಗಳು ಅಗತ್ಯ. ಮದುವೆಗೆ ಮುನ್ನವೇ ಒಬ್ಬರನ್ನೊಬ್ಬರು ಕಂಡು ಮೆಚ್ಚಿ ಪ್ರೇಮಿಸಿದ್ದರೂ, ವಿವಾಹದ ಬಳಿಕದ ಈ ಆತ್ಮೀಯ ಕ್ಷಣಗಳ ಅಗತ್ಯವೇ ಭಿನ್ನವಾಗಿದೆ. ಅಂತೆಯೇ ಮದುವೆಯ ಬಳಿಕ ಮಧುಚಂದ್ರಕ್ಕಾಗಿ ಒಂದು ಪ್ರವಾಸ ಹೋಗಿ ಬರುವುದು ವೈವಾಹಿಕ ಜೀವನಕ್ಕೆ ಅತಿ ಅಗತ್ಯವಾಗಿದೆ.
ವಿವಾಹದ ಸಂಪ್ರದಾಯಗಳು ನಿಜವಾಗಿ ನೋಡಿದರೆ ಸಾಮಾಜಿಕ ಕಟ್ಟಳೆಯ ಒಂದು ಅಂಗವಾಗಿದೆ. ಅಂದರೆ ಈ ದಿನದಿಂದ ಈ ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ಸಂಗಾತಿಗಳಾಗಿ ವೈವಾಹಿಕ ಬಂಧನಕ್ಕೆ ಒಳಪಟ್ಟಿದ್ದಾರೆ, ಇಂದಿನಿಂದ ಜೀವನದ ಕಡೆಯ ಉಸಿರಿನವರೆಗೆ ಇಬ್ಬರೂ ಒಬ್ಬರಿಗೊಬ್ಬರು ಬದ್ಧರಾಗಿರುತ್ತಾರೆ ಎಂದು ದೇವರ ಮುಂದೆ ಸಾಕ್ಷಿಯಾಗಿ ಸಮಾಜಕ್ಕೆ ತಿಳಿಸುವ ಪ್ರಕ್ರಿಯೆಯಾಗಿದೆ.

ವಿವಾಹದ ಸಂಪ್ರದಾಯಗಳು, ಸಂಗೀತ, ಮಂಗಳವಾದ್ಯದ ಅಬ್ಬರ, ಊಟ, ಹೂವು, ಅಕ್ಷತೆ, ಬ್ಯಾಂಡು.... ಇನ್ನೂ ಪಟ್ಟಿಮಾಡಬಹುದಾದ ನೂರಾರು ಪದಗಳು ವಿವಾಹಕ್ಕೆ ಪೂರಕವೇ ಹೊರತು ಸತಿಪತಿಯರ ನಡುವಣ ಆಪ್ತತೆಗಲ್ಲ. ಮಧುಚಂದ್ರಕ್ಕೆ ಮತ್ತೊಮ್ಮೆ ಹೋಗಿಬನ್ನಿ!
ನವವಿವಾಹಿತರು ಮದುವೆಯ ವೇಳೆಯಲ್ಲಿ ಅಗ್ನಿಸಾಕ್ಷಿಯಾಗಿ ಹೇಳಿದ್ದ ಆಣೆಗಳನ್ನು ಸಾಕ್ಷಾತ್ ರೂಪಕ್ಕಿಳಿಸಲು ಆಪ್ತಕ್ಷಣಗಳ, ಒಬ್ಬರನ್ನೊಬ್ಬರು ಅರಿತುಕೊಳ್ಳುವ, ಪರಸ್ಪರರ ಕೊರತೆಗಳನ್ನೂ, ಗುಣಗಳನ್ನೂ ಕಂಡುಕೊಳ್ಳುವ, ತನ್ಮೂಲಕ ಅದಕ್ಕೆ ಹೊಂದಿಕೊಳ್ಳಲು ಇಬ್ಬರಿಗೆ ಏಕಾಂತದ ಅಗತ್ಯವಿದೆ. ಮಧುಚಂದ್ರ ಇದನ್ನು ಪೂರೈಸಲು ಅಗತ್ಯವೂ ಆಗಿದ್ದು ಸಕ್ಷಮವೂ ಆಗಿದೆ. ಮಧುಚಂದ್ರದ ಅಗತ್ಯತೆಯ ಮಹತ್ವದ ಬಗ್ಗೆ ಇನ್ನೂ ಹೆಚ್ಚಾಗಿ ಅರಿಯಲು ಮುಂದೆ ಓದಿ...
ಮದುವೆಯೆಂದರೆ ಸಂಭ್ರಮ, ಮಧುಚಂದ್ರವೆಂದರೆ ಸಾಮೀಪ್ಯ
ಸಾಮಾನ್ಯವಾಗಿ ಮದುವೆಯ ಸಂದರ್ಭದಲ್ಲಿ ವಧೂವರರು ಮಾಡಬೇಕಾದ ಕೆಲಸವೆಂದರೆ ಹಿರಿಯರು, ಪಂಡಿತರು ನೀಡಿದ ಮಾರ್ಗದರ್ಶನವನ್ನು ಪಾಲಿಸುತ್ತಾ ಹೋಗುವುದು. ಇಬ್ಬರೂ ಈ ನಡುವೆ ಪರಸ್ಪರ ಮಾತನಾಡುವುದೂ ನೋಡುವುದೂ ಕಡಿಮೆಯೇ. ಆದರೆ ಪತಿಪತ್ನಿಯರಿಗೆ ಒಬ್ಬರಿಗೊಬ್ಬರ ಪರಸ್ಪರ ಸಾಮೀಪ್ಯ ಅಗತ್ಯವಿದ್ದು ಮಧುಚಂದ್ರ ಈ ಸಾಮೀಪ್ಯಕ್ಕೆ ಸೂಕ್ತವಾದ ವೇಳೆಯನ್ನು ಕಲ್ಪಿಸಿಕೊಡುತ್ತದೆ. ಈ ಸಾಮೀಪ್ಯ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಅತಿ ಅಗತ್ಯವೂ, ಸುಂದರವೂ, ಜೀವನವಿಡೀ ನೆನಪಿಡುವಂತಹದ್ದೂ ಆಗಿದೆ.
ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಧ್ಯವಾಗುತ್ತದೆ
ಓರ್ವ ವ್ಯಕ್ತಿಯನ್ನು ಆತನ ರೂಪದಿಂದ ಅಳೆಯುವುದು ತಪ್ಪಾಗುತ್ತದೆ. ಆದ್ದರಿಂದಲೇ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂಬ ಗಾದೆಯನ್ನು ಅನುಸರಿಸುವುದು. ನಿಮ್ಮ ಜೀವನಸಂಗಾತಿಯಲ್ಲಿ ಯಾವ ಗುಣ ನೋಡಿ ನಿಮ್ಮ ಹಿರಿಯರು ನಿಮಗೆ ಹೆಣ್ಣು / ಗಂಡು ಕೊಟ್ಟರು ಎಂಬುದನ್ನು ಅಳೆಯಲು ಮಧುಚಂದ್ರದ ಈ ಅವಧಿ ಸೂಕ್ತವಾಗಿದೆ. ವ್ಯಕ್ತಿಯಲ್ಲಿರುವ ಉತ್ತಮ ಗುಣಗಳಿಗಿಂತಲೂ ಕೆಟ್ಟ ಗುಣಗಳೇ ನಂತರದ ಬಿರುಕುಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಸಂಗಾತಿಯ ಕೊರತೆ ಮತ್ತು ಋಣಾತ್ಮಕ ಅಂಶಗಳನ್ನೂ ಅರಿತುಕೊಳ್ಳಲು ಮಧುಚಂದ್ರದ ವೇಳೆ ಸೂಕ್ತವಾಗಿದೆ.
ಸ್ಮರಣೀಯ ಕ್ಷಣಗಳು
ಖಿನ್ನತೆಯಿಂದ ಬಳಲುತ್ತಿರುವವರಿಗೆ, ಜೀವನದಲ್ಲಿ ನಿರಾಶರಾದವರಿಗೆ ಚಿಕಿತ್ಸೆಯಾಗಿ ಮನಃಶಾಸ್ತ್ರಜ್ಞರು ಕೆಲವು ಸಂಗತಿಗಳನ್ನು ನೆನಪಿಸಿಕೊಳ್ಳಲು ಹೇಳುತ್ತಾರೆ. ಇವುಗಳಲ್ಲಿ ಪ್ರಮುಖವಾದವು ನಿಮ್ಮ ಬಾಲ್ಯದ ದಿನಗಳು, ತಾಯಿಯ ಮಮತೆ ಮತ್ತು ಮಧುಚಂದ್ರದ ದಿನಗಳಾಗಿವೆ. ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳುವ ವಿಷಯಗಳಲ್ಲಿ ಮಧುಚಂದ್ರದ ದಿನಗಳು ಪ್ರಮುಖವಾಗಿವೆ. ಈ ದಿನಗಳಲ್ಲಿ ತೆಗೆದ ಚಿತ್ರಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಡನೆ ಹಂಚಿಕೊಳ್ಳುವ ಮೂಲಕ ನಿಮ್ಮ ವೈವಾಹಿಕ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಹುಡುಗಿಯರ 10 ಮನದಾಸೆಗಳೂ ನಿಮಗೂ ತಿಳಿಯಲಿ!
ಮದುವೆಯ ಕಾರ್ಯಕ್ರಮದ ಸುಸ್ತಿಗೆ ವಿಶ್ರಾಂತಿ ಸಿಗುತ್ತದೆ



Click it and Unblock the Notifications














