Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಕೆಡುವುದು ಸುಲಭ ಕಟ್ಟುವುದು ಅಷ್ಟೇ ಕಷ್ಟ, ಏನಂತೀರಿ?
ಕೆಡುವುದು ಸುಲಭ ಕಟ್ಟುವುದು ಕಷ್ಟ- ಎಂಬ ಮಾತನ್ನು ನೀವು ಕೇಳಿರಬಹುದು. ಸಂಬಂಧವು ಅಷ್ಟೇ, ಅದು ಒಂದು ಸಂಬಂಧವಾಗಿ ನಿಲ್ಲಲು, ತುಂಬಾ ಸಮಯ ತೆಗೆದುಕೊಂಡಿರುತ್ತದೆ. ಆದರೆ ಅದು ಬೇರ್ಪಡಲು ಒಂದು ನಿಮಿಷದ ಆವೇಶ, ಕೋಪ ಸಾಕು. ಒಮ್ಮೆ ಸಂಬಂಧದಲ್ಲಿರುವವರು ಬೇರ್ಪಟ್ಟರೆ ಅವರು ಮತ್ತೆ ಒಂದಾಗುವುದು ಕಷ್ಟ. ಆದ್ದರಿಂದ ಬೇರ್ಪಡುವ ಮುನ್ನ ಸಾಕಷ್ಟು ಯೋಚಿಸಿ ಮುಂದುವರಿಯುವುದು ಉತ್ತಮ.
ನಾವೆಲ್ಲರೂ ಮಾನಸಿಕವಾಗಿ ಬೇರೆ ಬೇರೆ ಮನೋಧರ್ಮವನ್ನು ಹೊಂದಿರುವವರಾಗಿರುತ್ತೇವೆ. ನಮ್ಮ ಭಾವನೆಗಳಲ್ಲಿ ಏಕರೂಪತೆ ಇರುವುದಿಲ್ಲ. ನಾವು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ರೀತಿಯು ಸಹ ಭಿನ್ನವಾಗಿರುತ್ತದೆ. ಪ್ರೀತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಯೋ, ಹಾಗೆಯೇ ಬೇರ್ಪಡಲು ಸಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತೇವೆ. ಕೆಲವೊಮ್ಮೆ ಸಂಬಂಧದಲ್ಲಿರುವವರ ನಡೆ ನುಡಿಯಿಂದ ಬೇಸತ್ತು ಬೇರ್ಪಡುವವರು ಕೆಲವರು, ಇತರರೊಂದಿಗೆ ರಹಸ್ಯವಾಗಿ ಸಂಬಂಧವನ್ನು ಬೆಳೆಸಿಕೊಂಡು, ಆ ಮೂಲಕ ಸಹ ಬೇರ್ಪಡಲು ಮನಸ್ಸು ಮಾಡುವವರು ಸಹ ಹಲವರು.

ಇಂತಹ ಮೋಸದ ಕಾರ್ಯಕ್ಕಾಗಿ ಸಹ ಬೇರ್ಪಡುವವರು ಹಲವರು ಇರುತ್ತಾರೆ. ಹೀಗೆ ಮೋಸ ಮಾಡುವವರು ಮೋಸ ಮಾಡುವ ಬದಲಿಗೆ ನಿಮ್ಮ ಅಭಿಪ್ರಾಯವನ್ನು ಇತರರಿಗೆ ತಿಳಿಸಿ, ಸಂಬಂಧದಿಂದ ಹೊರಬರುವ ಪ್ರಯತ್ನ ಮಾಡಿ. ಏಕೆಂದರೆ ನಿಮ್ಮ ನಡೆಯಿಂದ ಅಂದರೆ ಮೋಸದಿಂದ ಮತ್ತೊಬ್ಬರಿಗೆ ಜೀವನದಲ್ಲಿ ಮತ್ತೊಮ್ಮೆ ಯಾರನ್ನು ಸಹ ನಂಬದಂತಹ ಜಿಗುಪ್ಸೆ ಮೂಡಬಹುದು. ಜೊತೆಗೆ ಆ ನೋವು ಅವರ ಜೀವವನ್ನು ಸಹ ತೆಗೆದುಕೊಳ್ಳಬಹುದು.
ಒಟ್ಟಿನಲ್ಲಿ ಸಂಬಂಧ ಬೇರ್ಪಡುವಿಕೆ ಎಂಬುದು ಜೀವನದಲ್ಲಿ ಭರಿಸಲಾಗದ ನೋವಾಗಿ ಒಬ್ಬರನ್ನು ಕಾಡಬಹುದು. ಇನ್ನೂ ಕೆಲವೊಮ್ಮೆ ಈ ಬೇರ್ಪಡುವಿಕೆ ಇಬ್ಬರ ಜೀವನವನ್ನು ಮುನ್ನಡೆಯತ್ತ ಸಹ ಕೊಂಡೊಯ್ಯಬಹುದು. ಆದರೆ ಅದು ಸರಿಯಾದ ನಿರ್ಧಾರವಾಗಿದ್ದಲ್ಲಿ ಮಾತ್ರ. ಹಾಗಾಗಿ ಸಂಬಂಧವನ್ನು ಕಡಿದುಕೊಳ್ಳುವ ಮುನ್ನ ಸರಿಯಾಗಿ ಆಲೋಚಿಸಿ, ಪರಸ್ಪರ ಕುಳಿತು ಚರ್ಚಿಸಿ, ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿ. ಬನ್ನಿ ಬೇರ್ಪಡುವ ಮುನ್ನ ಯಾವ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಬೇರ್ಪಡುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಆಕೆ/ ಆತ ನಿಮ್ಮನ್ನು ಮೋಸ ಮಾಡುತ್ತಿದ್ದಾರೆಯೇ? ಮೋಸ ಮಾಡುವಿಕೆಯು ಬೇರ್ಪಡುವಿಕೆಗೆ ಪ್ರಮುಖ ಕಾರಣವಾಗಿರುತ್ತದೆ. ಮೋಸ ಅತ್ಯಂತ ಕ್ರೂರವಾದ ನಡೆ, ಅದು ಸಂಭವಿಸಿದಾಗ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗಿರುತ್ತದೆ. ಜೊತೆಗೆ ಅದನ್ನು ಸಹಿಸಿಕೊಳ್ಳುವುದು ಸಹ ಕಷ್ಟ. ಆಗ ನೀವು ಬೇರ್ಪಡಲು ನಿರ್ಧರಿಸುವುದರಲ್ಲಿ ಅರ್ಥವಿದೆ. ಆಗಾಗಿ ಇದು ಅತ್ಯಂತ ಅನಿವಾರ್ಯ ಪ್ರಶ್ನೆಯಾಗಿದ್ದು, ಬೇರ್ಪಡುವ ಮುನ್ನ ಮೊದಲು ಇದನ್ನು ಕೇಳಿಕೊಳ್ಳಿ.
ಅವರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡರೆ
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆಯೇ? ಒಂದು ವೇಳೆ ನಿಮ್ಮನ್ನು ಅವರು ಉದಾಸೀನ ಮಾಡುತ್ತಿದ್ದಲ್ಲಿ ಅಥವಾ ನಿಮ್ಮನ್ನು ಅವರು ಅವಮಾನಿಸುತ್ತಿದ್ದಲ್ಲಿ, ಆಗ ಅವರಿಂದ ಬೇರ್ಪಡಲು ನಿಮಗೆ ಸರಿಯಾದ ಕಾರಣ ಸಿಕ್ಕುತ್ತದೆ. ಏಕೆಂದರೆ ಇಂತಹ ಪರಿಸ್ಥಿತಿಯಲ್ಲಿ ಸಂಬಂಧದಲ್ಲಿ ಮುಂದುವರಿಯುವುದರಲ್ಲಿ ಅರ್ಥವೇ ಇರುವುದಿಲ್ಲ.
ನೀವು ಇನ್ನು ಏನನ್ನೋ ಬಯಸುತ್ತಿದ್ದೀರಾ?
ಕೆಲವೊಮ್ಮೆ ಸಂಬಂಧದಲ್ಲಿ ಏನೋ, ಕೊರತೆ ಕಾಣುತ್ತಾ ಇರುತ್ತದೆ. ನಿಮ್ಮ ಹೃದಯದಲ್ಲಿ ತೀರದ ಬಯಕೆಗಳು ಕಾಡುತ್ತಾ ಇರುತ್ತವೆ. ನಿಮ್ಮ ಸಂಗಾತಿಯಿಂದ ನೀವು ತೃಪ್ತಿಯನ್ನು ಹೊಂದಿರುವುದಿಲ್ಲ. ಜೊತೆಗೆ ನಿಮ್ಮ ಭಾವನೆಗಳಿಗೆ ಅವರ ಬೆಂಬಲ ಸರಿಯಾಗಿ ಬರದೆ ಇರಬಹುದು. ಆಗ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮನದಟ್ಟು ಮಾಡಿಸಿ, ಅವರಿಗೆ ಹೇಳಿ, ಇದರಿಂದ ಅವರಿಗು ಸಹ ನಿಮ್ಮ ಆಸೆಗಳೇನು ಎಂದು ತಿಳಿಯಲಿ. ಆಗಲೂ ಅವರು ಬದಲಾಗದಿದ್ದಲ್ಲಿ, ಬೇರ್ಪಡುವಿಕೆ ಒಂದೇ ದಾರಿಯಾಗಿರುತ್ತದೆ.



Click it and Unblock the Notifications













