Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಯುವತಿಯರು ಪರ್ಯಾಯ ಪ್ರಿಯಕರನನ್ನು ಬಯಸುತ್ತಾರೆಯೇ?
ಇಂದಿನ ದಿನಗಳಲ್ಲಿ ಯುವಜನತೆ ತಮ್ಮ ಬಾಳಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಒಲವು ತೋರುತ್ತಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಪ್ರೇಮವಿವಾಹಗಳು ಇಂದು ಸಾಮಾನ್ಯವಾಗಿವೆ. ಹೆತ್ತವರೂ ಹಿಂದಿನಂತೆ ರಂಪ ರಾಮಾಯಣ ಮಾಡುವುದು ಕಡಿಮೆಯಾಗಿದೆ. ಆದರೆ ವಿವಾಹಕ್ಕೂ ಮೊದಲು ತಮ್ಮ ಬಾಳಸಂಗಾತಿಯಾಗುವವರು ತಮಗೆ ಹೊಂದುಕೊಳ್ಳುವಂತಿದ್ದಾರೆಯೇ ಎಂದು ಪ್ರಮಾಣಿಸಿಕೊಳ್ಳಲು ಎಲ್ಲರೂ ಸಮಯದ ಮೊರೆ ಹೋಗುತ್ತಾರೆ.
ಇಬ್ಬರ ಅಭಿರುಚಿ, ಸಮಸ್ಯೆಗಳು, ಮನೆತನ, ಭವಿಷ್ಯದ ಕನಸುಗಳು ಮೊದಲಾದವುಗಳನ್ನು ಪರಾಮರ್ಶಿಸಿ ಬಳಿಕವೇ ವಿವಾಹದ ಬಗ್ಗೆ ನಿರ್ಧಾರಕ್ಕೆ ಬರುವುದು ಅಗತ್ಯವಾಗಿದೆ. ಅಂತೆಯೇ ಯುವಜನತೆ ಹಿಂದಿಗಿಂತಲೂ ಹೆಚ್ಚಾಗಿ ಗುಂಪಿನಲ್ಲಿ ಬೆರೆತು ಸ್ನೇಹವೃದ್ಧಿಮಾಡಿಕೊಳ್ಳುತ್ತಿದ್ದಾರೆ. ಇಂದು ಲಭ್ಯವಿರುವ ಆಧುನಿಕ ಸಂವಹನ ಸಾಧನಗಳೂ ಇದಕ್ಕೆ ಪ್ರೇರಣೆ ನೀಡುತ್ತಿವೆ. ಸಂಗಾತಿಗಳಾಗ ಬಯಸುವ ಜೋಡಿ ಕೊಂಚ ಹೆಚ್ಚಾಗಿಯೇ ನಿಕಟರಾಗಿರುವುದು ಸ್ನೇಹಿತರ ವಲಯದಲ್ಲಿ ಗುಸುಗುಸು ಎಬ್ಬಿಸುತ್ತದೆ.
ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಸಂಬಂಧದ ಬಗ್ಗೆ ಯುವಕರು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದರೂ ಯುವತಿಯರು ಸಂಪೂರ್ಣವಾಗಿ ಪರಿಗಣಿಸದಿರುವುದು ಗಮನಕ್ಕೆ ಬರುತ್ತದೆ. ಇನ್ನೂ ಕೊಂಚ ಹೆಚ್ಚು ಅವಲೋಕಿಸಿದಾಗ ಆ ಯುವತಿ ಒಬ್ಬರಿಗಿಂತ ಹೆಚ್ಚು ಯುವಕರ ಬಗ್ಗೆ ತನ್ನ ಆಯ್ಕೆಯನ್ನು ತೆರೆದಿಟ್ಟಿರುವುದು ಗಮನಕ್ಕೆ ಬರುತ್ತದೆ.

ಇದೇಕೆ ಹೀಗೆ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಯುವತಿಯರ ಪಾಲಿಗೆ ಪ್ರಥಮ ಪ್ರೇಮವೇ ಜೀವನದ ಐಶ್ವರ್ಯ. ಈ ಪ್ರಥಮ ಪ್ರೇಮವನ್ನು ಆಕೆ ತನ್ನ ಕನಸಿನ ರಾಜಕುಮಾರನೊಂದಿಗೇ ಹಂಚಿಕೊಳ್ಳಲು ಬಯಸುತ್ತಾಳೆ. ಒಂದು ವೇಳೆ ತಾನಂದುಕೊಂಡಿದ್ದ ವ್ಯಕ್ತಿ ಕೈ ಕೊಟ್ಟರೆ ಕುಸಿದು ನಿರಾಶಳಾಗುವುದಕ್ಕಿಂತ ಇನ್ನೋರ್ವ ಯುವಕನಾದರೂ ಇದ್ದರೆ ಒಳ್ಳೆಯದು ಎಂಬುದು ಅವರ ತರ್ಕ.
ಇನ್ನೊಂದು ತರ್ಕದ ಪ್ರಕಾರ ಒಬ್ಬರಿಗಿಂತ ಹೆಚ್ಚು ಪ್ರಿಯಕರರಿದ್ದರೆ ಅವರ ಪ್ರಾಧಾನ್ಯತೆಯೂ ಹೆಚ್ಚುತ್ತದೆ ಎಂದು ಅವರು ಭಾವಿಸಿರುತ್ತಾರೆ. ದೇವರ ಸೃಷ್ಟಿಯಲ್ಲಿ ಎಲ್ಲಾ ಯುವಕರು ಸುರೂಪಿ, ಬುದ್ದಿಶಾಲಿ, ಸುದೃಢ ಹಾಗೂ ಐಶ್ವರ್ಯವಂತರಾಗಿರುವುದಿಲ್ಲ. ಹಾಗಾಗಿ ಇವರು ಯುವತಿಯರ ಆಯ್ಕೆಯ ಪಟ್ಟಿಯಲ್ಲಿರುವುದಿಲ್ಲ. ಆದರೆ ಇವರಲ್ಲಿ ಐಶ್ವರ್ಯವಂತ ಹಾಗೂ ಉತ್ತಮ ಕುಟುಂಬ ಹಿನ್ನೆಲೆಯಿಂದ ಬಂದವರು ಎರಡನೇ ಆಯ್ಕೆಯಾಗಿ ಪರಿಗಣಿಸಲ್ಪಡುತ್ತಾರೆ.
ಪರಿಣಾಮವಾಗಿ ಪರ್ಯಾಯ ವ್ಯಕ್ತಿ ಯುವತಿಯರ ಪ್ರಥಮ ಆಯ್ಕೆ ಆಗಿರುವುದಿಲ್ಲ, ಆದರೆ ಒಂದು ವೇಳೆ ಅವರ ಪ್ರಥಮ ಆಯ್ಕೆ ಕೈಕೊಟ್ಟರೆ ಆಶ್ರಯ ನೀಡಲು ಪರ್ಯಾಯ ವ್ಯಕ್ತಿಯ ಅಗತ್ಯ ಬೀಳುತ್ತದೆ. ಯುವತಿಯರೇಕೆ ಪರ್ಯಾಯ ವ್ಯಕ್ತಿಯನ್ನು ಏರ್ಪಡಿಸಿಕೊಂಡಿರುತ್ತಾರೆ ಎಂಬ ಪ್ರಶ್ನೆಗೆ ಕೆಲವು ಉತ್ತರಗಳನ್ನು ಪಡೆಯಲು ಇಲ್ಲಿ ಪ್ರಯತ್ನಿಸಲಾಗಿದೆ.
ಒಂಟಿತನದ ಭಯ
ಪುರುಷ ಒಂಟಿಯಾಗಿ ಬಾಳಬಲ್ಲ, ಆದರೆ ಮಹಿಳೆ ಒಂಟಿಯಾಗಿ ಬಾಳಲು ಸಾಧ್ಯವಿಲ್ಲ ಎಂಬ ಸುಭಾಷಿತವೊಂದಿದೆ. ಆಕೆ ತನ್ನ ಪೋಷಕರು ಮತ್ತು ಮಕ್ಕಳಿಗಿಂತ ತನ್ನ ಪತಿಯನ್ನೇ ಅವಲಂಬಿಸಿರುತ್ತಾಳೆ. ಪತಿಯ ಸ್ಥಾನಕ್ಕೆ ಆಯ್ಕೆಯಾಗಿದ್ದ ವ್ಯಕ್ತಿ ಒಂದು ವೇಳೆ ಬಾಳಸಂಗಾತಿಯಾಗದೇ ಹೋದರೆ ತನ್ನನ್ನು ವರಿಸುವವರೇ ಇಲ್ಲದೇ ಒಂಟಿತನ ಎದುರಾಗಬಹುದು ಎಂಬ ಭಯದಿಂದ ಯುವತಿಯರು ಪರ್ಯಾಯ ವ್ಯಕ್ತಿಯನ್ನು ಅವಲಂಬಿಸುತ್ತಾರೆ.
ಯುವಕರು ವಿವಾಹಿತ ಮಹಿಳೆಯರ ಹಿ೦ದೆ ಬೀಳಲು ಕಾರಣಗಳೇನು?
ಪ್ರತಿ ಹುಡುಗಿಯೂ ತನ್ನ ಹತ್ತನೆಯ ವರ್ಷದಿಂದಲೇ ತನ್ನ ಮದುವೆಯ ಕನಸನ್ನು ಕಾಣತೊಡಗುತ್ತಾಳೆ
ಕನಸಿನ ರಾಜಕುಮಾರ ಯಾರೆಂದು ನಿಶ್ಚಯವಾಗದಿದ್ದರೂ ಅಲ್ಲೊಂದು ಕಾಲ್ಪನಿಕ ವ್ಯಕ್ತಿಯನ್ನು ಕೂರಿಸಿ ತನ್ನ ಮದುವೆಯ ಬಗ್ಗೆ ಕನಸುಗಳನ್ನು ದಿನಗಳೆದಂತೆ ಗಟ್ಟಿಗೊಳಿಸುತ್ತಾ ಹೋಗುತ್ತಾಳೆ. ಪ್ರಾಪ್ತವಯಸ್ಕಳಾದಾದ ಬಾಳಸಂಗಾತಿಯಾಗುವವ ಒಂದು ವೇಳೆ ಬಾರದೇ ಹೋದರೆ ಮದುವೆಯ ಕನಸನ್ನು ಛಿದ್ರಗೊಳಿಸಲು ಆಕೆ ಸಿದ್ಧಳಿಲ್ಲ. ಪರ್ಯಾಯ ವ್ಯಕ್ತಿಯ ಮೂಲಕ ಆ ಮದುವೆಯ ಸುಂದರ ಕನಸನ್ನು ನನಸು ಮಾಡಿಕೊಳ್ಳಲು ಆಕೆ ಚಿಂತಿಸುತ್ತಾಳೆ.
ಸಾಮಾಜಿಕ ವಲಯದಲ್ಲಿ ಸ್ಥಾನಮಾನ ಕಳೆದುಕೊಳ್ಳುವ ಭಯ
ತನ್ನ ಪ್ರಿಯಕರ ಸಮಾಜದಲ್ಲಿ ಇಂತಹ ಗಣ್ಯ ವ್ಯಕ್ತಿ ಎಂದು ಹೇಳಿಕೊಳ್ಳುವ ಮೂಲಕ ಯುವತಿಯರು ತಮ್ಮ ಪ್ರಾಧಾನ್ಯತೆಯನ್ನು ಮೆರೆದಿರುತ್ತಾರೆ. ಒಂದು ವೇಳೆ ಆ ಸಂಬಂಧ ಮುರಿದುಬಿದ್ದರೆ ಅದರೊಂದಿಗೇ ಆ ಎಲ್ಲಾ ಸ್ಥಾನಮಾನ ಹಾಗೂ ಗಣ್ಯತೆಗಳನ್ನೂ ಕಳೆದುಕೊಳ್ಳುವ ಭಯವಿರುವುದರಿಂದ ಈ ಸ್ಥಾನಮಾನವನ್ನು ಉಳಿಸಿಕೊಳ್ಳಲು ಪರ್ಯಾಯ ವ್ಯಕ್ತಿಯನ್ನು ಅವರು ಅವಲಂಬಿಸುತ್ತಾರೆ.
ಖಿನ್ನತೆಯಲ್ಲಿ ಬೀಳದಿರಲು ಒಂದು ಆಧಾರ
ಒಂದು ವೇಳೆ ಯುವತಿಯರ ಪ್ರಥಮ ಆಯ್ಕೆ ಅವರನ್ನು ನಿರಾಕರಿಸಿದರೆ ಹೆಚ್ಚಿನ ಯುವತಿಯರು ಮಾನಸಿಕವಾಗಿ ಕುಗ್ಗಿ ಖಿನ್ನತೆಯ ಸುಳಿಯಲ್ಲಿ ಇಳಿದುಬಿಡುತ್ತಾರೆ. ನಂತರ ಅವಳ ಬಾಳು ದುಃಖದಲ್ಲಿ ಮುಳುಗುತ್ತದೆ. ಈ ವಿಚಾರಗಳನ್ನು ಮುಂದಾಲೋಚಿಸಿದ ಯುವತಿಯರು ಒಂದು ವೇಳೆ ಪ್ರಥಮ ಆಯ್ಕೆಯ ವ್ಯಕ್ತಿ ಕೈಕೊಟ್ಟರೆ ಹೆಚ್ಚಿನ ತಲೆಬಿಸಿ ಮಾಡಿಕೊಳ್ಳದೇ ಪರ್ಯಾಯ ವ್ಯಕ್ತಿಗೆ ಶರಣಾಗುತ್ತಾರೆ ಹಾಗೂ ಈ ಖಿನ್ನತೆಯಿಂದ ಹೊರಬರುತ್ತಾರೆ. ಇನ್ನೊಂದರ್ಥದಲ್ಲಿ ಅವರು ಕೈಕೊಟ್ಟರೂ ತಾನು ಧೈರ್ಯವಾಗಿ ಬಾಳಬಲ್ಲೆ ಎಂಬುದನ್ನು ಅವರು ಸಾಧಿಸಿ ತೋರಿಸುತ್ತಾರೆ.
ಸಮಾಗಮಕ್ಕೆ ಮಹಿಳೆಯರಿಂದ ದೊರಕುವ ಗುಪ್ತ ಸಂಜ್ಞೆಗಳು
ತಮ್ಮ ಕೆಲಸಗಳಿಗೊಬ್ಬರು ಬೇಕಾಗುತ್ತದೆ
ಸಾಧಾರಣವಾಗಿ ಯುವತಿಯರು ತಮ್ಮ ವೈಯಾರದಿಂದ ಯುವಕರನ್ನು ಬಲೆಬೀಸಿ ತಮ್ಮೆಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಇದುವರೆಗೆ ಅವರ ಪ್ರಥಮ ವ್ಯಕ್ತಿ ಅವರ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಬಂದಿರುತ್ತಾನೆ. ತನ್ನ ಬೈಕಿನಲ್ಲಿ ತಿರುಗಾಡಲು ಕರೆದೊಯ್ಯುವುದು, ಅಗತ್ಯವಸ್ತುಗಳನ್ನು ತಂದುಕೊಡುವುದು, ಹಣ ಸಾಲ ನೀಡುವುದು ಮೊದಲಾದವು. ಒಂದು ವೇಳೆ ಈ ವ್ಯಕ್ತಿಯಿಂದ ದೂರಾದರೆ ಆತನಿಂದ ಸಿಗುತ್ತಿದ್ದ ಈ ಎಲ್ಲಾ ಸಹಾಯಗಳಿಗೆ ತಿಲಾಂಜಲಿ ನೀಡಬೇಕಾಗಿ ಬರಬೇಕಾಗುತ್ತದೆ. ಇದುವರೆಗೆ ಪುಕ್ಕಟೆಯಾಗಿ ಸಿಗುತ್ತಿದ್ದ ಈ ಸೇವೆಗಳು ಇಲ್ಲದಂತಾಗದೇ ಇರಲು ಈ ಪರ್ಯಾಯ ವ್ಯಕ್ತಿ ಕೆಲಸಕ್ಕೆ ಬರುತ್ತಾನೆ.



Click it and Unblock the Notifications











