ಹಿರಿಯರು ನಿಶ್ಚಯಿಸಿದ ಮದುವೆಗಳು ಏಕೆ ವಿಫಲವಾಗುತ್ತವೆ?

By Super

ಹಿರಿಯರು ನಿಶ್ಚಯಿಸಿದ ಮದುವೆಗಳು ಅಂದರೆ ಅರೇಂಜ್ ಮ್ಯಾರೇಜ್‍ಗಳು ಭಾರತದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಮತ್ತು ಸಮಾಜದ ಮನ್ನಣೆಗೆ ಪಾತ್ರವಾಗಿರುವ ಮದುವೆ ಪದ್ಧತಿಯಾಗಿದೆ. ಭಾರತ ಆಧುನಿಕತೆಯತ್ತ ಹೊರಳುತ್ತಿದ್ದರು, ಈ ಪದ್ಧತಿಯ ಮೇಲೆ ಯಾವುದೇ ಬೇಸರಗಳಿಲ್ಲದೆ ಜನ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಈಗಲೂ ಕೇವಲ ಹಳ್ಳಿ ಮತ್ತು ಸಾಂಪ್ರದಾಯಿಕ ಮನೋಭಾವದವರಲ್ಲಷ್ಟೇ ಅಲ್ಲದೆ ಆಧುನಿಕ ತಂತ್ರದ ಹಿಂದೆ ಬಿದ್ದಿರುವವರು ಸಹ ಈ ನಿಶ್ಚಯಿಸಿದ ವಿವಾಹಗಳತ್ತ ತಮ್ಮ ಆಸಕ್ತಿ ತೋರುತ್ತಾರೆ. ಅದಕ್ಕೆ ಇಂಟರ್‌ನೆಟ್‍ನಲ್ಲಿ ಸಹ ನಿಮಗೆ ಅನುರೂಪವಾಗಿರುವ ಜೋಡಿಯನ್ನು ಆರಿಸಿಕೊಳ್ಳುವ ಅವಕಾಶವನ್ನು ನೀಡುವ ಪೋರ್ಟಲ್‍ಗಳು, ಡೊಮೈನ್‍ಗಳು ಲಭ್ಯವಿವೆ.

ಬಹುತೇಕ ಸಂದರ್ಭಗಳಲ್ಲಿ ನಿಶ್ಚಯಿಸಿದ ಮದುವೆಗಳು ಕಣ್ಣೀರಿಗೆ ಕಾರಣವಾಗುತ್ತವೆ. ಇದಕ್ಕೆ ಕಾರಣಗಳು ಹಲವಾರು. ಕೆಲವೊಮ್ಮೆ ಇದಕ್ಕೆ ಪ್ರಜ್ಞಾಪೂರ್ವಕವಾದ ತಪ್ಪುಗಳು ಕಾರಣವಾದರೆ, ಇನ್ನೂ ಕೆಲವೊಮ್ಮೆ ಸಹಜವಾಗಿ ಗೊತ್ತೇ ಇಲ್ಲದೆ ತಪ್ಪುಗಳಾಗಿ ಬಿಡುತ್ತವೆ. ಮಹಿಳೆಯರು ಪುರುಷರಿಂದ ಬಚ್ಚಿಟ್ಟುಕೊಳ್ಳುವ 5 ವಿಷಯಗಳು

ಈ ಅಂಕಣದಲ್ಲಿ ನಾವು ಭಾರತದಲ್ಲಿ ಏಕೆ ನಿಶ್ಚಯಿಸಿದ ಮದುವೆಗಳು ವಿಫಲವಾಗುತ್ತವೆ ಎಂಬುದರ ಕುರಿತು ವಿವರಿಸಿದ್ದೇವೆ. ಈ ನಿಶ್ಚಯಿಸಿದ ಮದುವೆಗಳಲ್ಲಿ ಇರುವ ಸಮಸ್ಯೆಗಳ ಆಳಕ್ಕೆ ಇಳಿದು ಅವುಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ನಾವಿಲ್ಲ ಮಾಡಿದ್ದೇವೆ. ಯಾರು ನಿಶ್ಚಯಿಸಿದ ಮದುವೆಯನ್ನು ಮಾಡಿಕೊಳ್ಳಬೇಕೆಂಬ ಹಂಬಲ ಹೊಂದಿರುವಿರೋ? ಅವರು ಈ ಅಂಶಗಳನ್ನು ನಿಸ್ಸಂಶಯವಾಗಿ ಒಮ್ಮೆ ಆಲೋಚಿಸಿ ಮುಂದಿನ ನಡೆಯನ್ನು ತೆಗೆದುಕೊಳ್ಳಿ. ಬನ್ನಿ ಭಾರತದಲ್ಲಿ ಹಿರಿಯರು ನಿಶ್ಚಯಿಸಿದ ಮದುವೆಗಳು ಏಕೆ ವಿಫಲವಾಗುತ್ತವೆ ಎಂಬುದಕ್ಕೆ 10 ಕಾರಣಗಳು ಯಾವ ಯಾವುವು ಎಂಬುದನ್ನು ಒಮ್ಮೆ ತಡ ಮಾಡದೆ ನೋಡಿಕೊಂಡು ಬರೋಣ.

ನೀವಿಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆದಿರುವುದಿಲ್ಲ

ನೀವಿಬ್ಬರು ಒಟ್ಟಿಗೆ ಹೆಚ್ಚು ಸಮಯ ಕಳೆದಿರುವುದಿಲ್ಲ

ಒಂದು ಸಂಬಂಧ ಹೆಚ್ಚು ಆನಂದ ಮತ್ತು ಜೀವಂತಿಕೆಯಿಂದ ಕೂಡಿರಬೇಕು ಎಂದಾದಲ್ಲಿ, ಅವರಿಬ್ಬರು ಸ್ವಲ್ಪ ಸಮಯ ಒಟ್ಟಿಗೆ ಕಾಲ ಕಳೆದಿರಬೇಕು. ನಿಶ್ಚಯಿಸಿದ ಮದುವೆಗಳಲ್ಲಿ ಇವರಿಗೆ ಈ ಅವಕಾಶ ತುಂಬಾ ಕಡಿಮೆ ಇರುತ್ತದೆ. ವಧು ವರರು ತಮ್ಮ ಮದುವೆಯ ಸಿದ್ಧತೆಯಲ್ಲಿಯೇ ದಿನಗಳನ್ನು ಕಳೆದುಬಿಡುತ್ತಾರೆ. ಅವರಿಗೆ ಪರಸ್ಪರ ಬೆರೆತು, ತಮ್ಮ ಅನಿಸಿಕೆಗಳನ್ನು ಮತ್ತು ನಡುವಳಿಕೆಗಳನ್ನು ತೋರ್ಪಡಿಸಿಕೊಳ್ಳಲು ಅವಕಾಶ ಕಡಿಮೆಯಿರುತ್ತದೆ. ಒಂದು ವೇಳೆ ಅವಕಾಶ ಸಿಕ್ಕರು ಅವರ ಪೋಷಕರು ಜೊತೆಯಲ್ಲಿರುವುದರಿಂದ ಅವರನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣವು ನಿಶ್ಚಯಿಸಿದ ಮದುವೆಗಳು ವಿಫಲವಾಗಲು ಪ್ರಮುಖ ಕಾರಣವಾಗಿದೆ. ಏಕೆಂದರೆ, ಈ ಪೋಷಕರ ಸಮ್ಮುಖದಲ್ಲಿ, ಮತ್ತು ಒಂದು ಸಂಬಂಧದ ಆರಂಭದಲ್ಲಿ ವಧು-ವರ ಇಬ್ಬರೂ ಆದರ್ಶ ವ್ಯಕ್ತಿಗಳಂತೆ ತಮ್ಮ ನಡವಳಿಕೆಗಳನ್ನು ತಾತ್ಕಾಲಿಕವಾಗಿ ಬದಲಾಯಿಸಿಕೊಂಡಿರುತ್ತಾರೆ.

ನೀವು ಪರಸ್ಪರರ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಅರಿತಿರುವುದಿಲ್ಲ

ನೀವು ಪರಸ್ಪರರ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಅರಿತಿರುವುದಿಲ್ಲ

ಪರಸ್ಪರರ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಸಂಬಂಧದಲ್ಲಿ ಅತ್ಯಂತ ಮುಖ್ಯವಾದ ವಿಚಾರವಾಗಿರುತ್ತದೆ. ಇದರಿಂದ ಆನಂದ ಎನ್ನುವುದು ಸಂಬಂಧದಲ್ಲಿ ಮನೆ ಮಾಡುತ್ತದೆ. ಉದಾಹರಣೆಗೆ ಹುಡುಗಿಗೆ ಸ್ವತಂತ್ರವಾಗಿ ತನ್ನ ಗಂಡನ ಜೊತೆ ಬದುಕುವ ಆಸೆಯಿದ್ದರೆ, ಹುಡುಗನು ತನ್ನ ತಂದೆ ತಾಯಿಯ ಜೊತೆ ಬದುಕುವ ಆಸೆ ಇಟ್ಟುಕೊಂಡಿರುತ್ತಾನೆ. ಇಂತಹ ನಿರೀಕ್ಷೆಗಳು ನಿರಾಸೆ ತಂದಾಗ ಮದುವೆಗಳು ವಿಫಲವಾಗುತ್ತವೆ. ಆದರೂ ಕೆಲವೊಂದು ನಿರೀಕ್ಷೆಗಳು ಸಫಲವಾಗುತ್ತವೆ ಎಂಬುದೇ ಸಮಾಧಾನ.

ನೀವು ಪರಸ್ಪರರ ಆಸಕ್ತಿಗಳನ್ನು ಅರಿತಿರುವುದಿಲ್ಲ

ನೀವು ಪರಸ್ಪರರ ಆಸಕ್ತಿಗಳನ್ನು ಅರಿತಿರುವುದಿಲ್ಲ

ನೀವು ಇದ್ದಕ್ಕಿದ್ದಂತೆ ಮದುವೆಯಾದರೆ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಅರೆ! ಇದು ಸಮಸ್ಯೆಯೇ ಎಂದು ನಿಮ್ಮ ಅನಿಸಿಕೆಯೇ? ಖಂಡಿತ ಹೌದು ಎಂಬುದು ನಮ್ಮ ಉತ್ತರ. ವಧುವಿಗೆ ಧಾರಾವಾಹಿಗಳ ಹುಚ್ಚು, ವರನಿಗೆ ಕ್ರಿಕೆಟ್, ಫುಟ್‍ಬಾಲ್ ಕ್ರೀಡೆಯ ಹುಚ್ಚು, ಇರುವುದೊಂದೆ ಟಿವಿ ಸಾಕು ಸಮಸ್ಯೆ ಬರಲು. ವರ ಮಾಂಸಾಹಾರ ಪ್ರಿಯ, ವಧು ಡಯಟ್ ತಜ್ಞೆ! ಅವನು ತಿಂಡಿಪೋತ, ಈಕೆ ತಿಂಡಿ ಎಂದರೆ ಮೂರು ಮೈಲಿ ದೂರ ಸಾಕು ಅವರ ಮಧ್ಯೆ ಆಸಕ್ತಿ ಕಳೆದುಕೊಳ್ಳಲು ಮತ್ತು ದೂರಲು ವಿಷಯಗಳು ಇವೇ ನೀಡುತ್ತವೆ. ಹೀಗೆ ಪ್ರತಿಯೊಬ್ಬರು ಸಂದರ್ಭಗಳಿಗೆ ಹೇಗೆ ಆಸಕ್ತಿಯಿಂದ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಶ್ಚಯಿಸಿದ ಮದುವೆಗಳಲ್ಲಿ ತಿಳಿದುಕೊಳ್ಳಲು ಸಮಯಾವಕಾಶವಿರುವುದಿಲ್ಲ. ಇದು ಸಣ್ಣ ವಿಚಾರಗಳಾದರು, ಅದು ಗಂಡ-ಹೆಂಡತಿಯ ನಡುವೆ ದೊಡ್ಡದಾಗಿ ಕಾಣುತ್ತದೆ.

ಸಂವಹನದ ಕೊರತೆ

ಸಂವಹನದ ಕೊರತೆ

ಸಂವಹನದ ಕೊರತೆಯು ಸಂಬಂಧದ ಹಂತಕ. ಆಕೆಗೆ ಮನಸ್ಸಿನಲ್ಲಿ ಏನೋ ತಳಮಳ ಆದರೆ ಅದನ್ನು ಆತನ ಮುಂದೆ ಹೇಳಲು ಸಾಧ್ಯವಾಗುವುದಿಲ್ಲ. ಆತನಿಗೆ ಆಕೆಯ ಕೆಲವೊಂದು ನಡವಳಿಕೆ ಇಷ್ಟವಾಗುವುದಿಲ್ಲ. ಅದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಾನೆ. ಇದರಿಂದ ಆಕೆಯ ಕಣ್ಣಿನಲ್ಲಿ ಗಂಗಾ-ಕಾವೇರಿ ಉಕ್ಕುತ್ತದೆ. ಸಂವಹನ ಸಂಬಂಧದ ಜೀವನಾಡಿ. ಇದೇ ಕಡಿದು ಕೊಂಡರೆ ಸಂಬಂಧ ಉಳಿಯುವುದೆಲ್ಲಿ? ಆದಷ್ಟು ಒಳ್ಳೆಯದು ಮತ್ತು ಕೆಟ್ಟದ್ದನ್ನು ಸಭ್ಯತೆಯ ಎಲ್ಲೆಯಲ್ಲಿ ಮಾತನಾಡಿ. ಯಾವುದೇ ಕಾರಣಕ್ಕು ವಿವಾದಗಳನ್ನು ನಿಮ್ಮ ಬೆಡ್‍ರೂಮಿನಲ್ಲಿ, ಇತರರ ಮುಂದೆ ಚರ್ಚಿಸಲು ಹೋಗಲೇ ಬೇಡಿ. ಆದರೆ ಈ ಸಂವಹನ ಹೇಳಿದಷ್ಟು ಸುಲಭವಾಗಿ ಆಗುವುದಿಲ್ಲ ಅದೇ ಸಮಸ್ಯೆ.

ನೀವು ಪರಸ್ಪರರ ಹಿನ್ನಲೆಗಳನ್ನು ಅರಿತಿರುವುದಿಲ್ಲ

ನೀವು ಪರಸ್ಪರರ ಹಿನ್ನಲೆಗಳನ್ನು ಅರಿತಿರುವುದಿಲ್ಲ

ಆತ ಹಿಂದೆ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದನಂತೆ, ಈಕೆಯು ಯಾವುದೋ ಒಬ್ಬ ಹುಡುಗನನ್ನು ಪ್ರೀತಿಸಿದ್ದಳಂತೆ ಹೀಗೆ ಶುರುವಾಗುವ ಅಂತೆ ಕಂತೆಗಳು ನಿಶ್ಚಯಿಸಿದ ಮದುವೆಗಳನ್ನು ಕೊಂದು ಹಾಕುತ್ತವೆ. ಹಿನ್ನಲೆಗಳನ್ನು ತಿಳಿಸಲು ಮೊದಲು ಸಂಕೋಚ ಅಥವಾ ಭಯ ಕಾಡುತ್ತದೆ. ಮದುವೆಯಾದ ಮೇಲೆ ಮುಜುಗರ ಕಾಡುತ್ತದೆ. ಕೆಲವರಿಗೆ ಪಾಪ ಪ್ರಜ್ಞೆಯು ಕಾಡಬಹುದು. ಒಟ್ಟಿನಲ್ಲಿ ಈ ಪರಸ್ಪರ ಹಿನ್ನಲೆ ಸರಿಯಾಗಿ ತಿಳಿದುಕೊಳ್ಳದಿದ್ದಾಗ, ಅವರು ಪರಸ್ಪರರ ಕುರಿತು ತಪ್ಪು ನಿರ್ಣಯಗಳಿಗೆ ಬರುವ ಸಂಭವ ಇರುತ್ತದೆ. ಆದರೇನು ಮಾಡುವುದು ನಿಶ್ಚಯಿಸಿದ ಮದುವೆಗಳನ್ನು " ಸಾವಿರ ಸುಳ್ಳು ಹೇಳಿ" ಮಾಡಿರುತ್ತಾರೆ.

ಸಾಲಗಳ ಮತ್ತು ಋಣಗಳ ಸಮಸ್ಯೆ

ಸಾಲಗಳ ಮತ್ತು ಋಣಗಳ ಸಮಸ್ಯೆ

ಮದುವೆಯೆಂಬುದು ಅತ್ಯಂತ ದೊಡ್ಡ ಹಣಕಾಸು ಮತ್ತು ಋಣಗಳನ್ನು ಬಳುವಳಿಯಾಗಿ ನೀಡುವ ಪ್ರಕ್ರಿಯೆ. ಅದರಲ್ಲೂ ದೂರದೃಷ್ಟಿಯಿಲ್ಲದ ಕೆಲವರು ಮದುವೆಯ ಬಗ್ಗೆ ಉದಾಸೀನರಾಗಿದ್ದು, ಇದ್ದಕ್ಕಿದ್ದಂತೆ ಮದುವೆಯಾಗುತ್ತಾರೆ. ಖರ್ಚಿಗೆ ಹಣವಿಲ್ಲದೆ, ಸಾಲಗಳ ಭಾದೆಗೆ ಸಿಕ್ಕಿಕೊಳ್ಳುತ್ತಾರೆ. ಇದಕ್ಕೆ ಹುಡುಗ-ಹುಡುಗಿ ಎಂಬ ಭೇದವಿಲ್ಲ. ವರನು ಸಾಲ ಮಾಡಿ ಮದುವೆ ಮಾಡಿಕೊಂಡರೆ, ಅವನಿಗೆ ಅದನ್ನು ತೀರಿಸುವವರೆಗು ಅದೇ ಚಿಂತೆ. ವಧುವಿನ ಪೋಷಕರು ಸಾಲ ಮಾಡಿಕೊಂಡರೆ ಆಕೆಗೆ ಜೀವನ ಪರ್ಯಂತ ಆ ಋಣದ ಚಿಂತೆ ಕಾಡುತ್ತದೆ. ಇದು ನಮ್ಮ ಮದುವೆಗಳ ಅತಿದೊಡ್ಡ ಸಮಸ್ಯೆ. ಆದರೆ ಇದು ಆರೋಗ್ಯಕರವಲ್ಲ.

ಕುಟುಂಬದಿಂದ ಒತ್ತಡ

ಕುಟುಂಬದಿಂದ ಒತ್ತಡ

ಕುಟುಂಬದ ಒತ್ತಡವು ಕಿರಿಕಿರಿಗಿಂತ ಅತಿ ಅಪಾಯಕಾರಿ. ಕುಟುಂಬದ ಒತ್ತಡವು ಸಂಬಂಧಗಳನ್ನು ಹಾಳು ಮಾಡಿಬಿಡುತ್ತದೆ. ದುರದೃಷ್ಟವಶಾತ್ ಬಹುತೇಕ ದಂಪತಿಗಳು ಈ ಸಮಸ್ಯೆಯನ್ನು ಗುರುತಿಸಲು ವಿಫಲರಾಗುತ್ತಾರೆ. ಆ ಕಾರಣದಿಂದ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಾರೆ.

ಅತ್ತೆ-ಮಾವಂದಿರ ಸಮಸ್ಯೆ

ಅತ್ತೆ-ಮಾವಂದಿರ ಸಮಸ್ಯೆ

ಇಲ್ಲಿ ಅಪ್ಪ-ಅಮ್ಮಂದಿರ ಸಮಸ್ಯೆ ಎಂಬ ಮಾತು ಹೇಳಿಲ್ಲ, ಅತ್ತೆ-ಮಾವಂದಿರ ಸಮಸ್ಯೆ ಎಂದು ಹೇಳಿದ್ದೇವೆ. ಮೊದಲು ಇದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಾಗಿತ್ತು. ಈಗ ಇದು ವರನಿಗು ಸಹ ಅನ್ವಯವಾಗುವ ಮಟ್ಟಕ್ಕೆ ಬೆಳೆದಿದೆ. ಆದರೂ ಹೆಚ್ಚಿನ ಸಮಸ್ಯೆ ವಧುವಿಗೆ ಇರುತ್ತದೆ ಎಂಬುದು ಸುಳ್ಳಲ್ಲ. ಇದು ಮದುವೆಯನ್ನು ವಿಫಲ ಮಾಡುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ.

X
Desktop Bottom Promotion