ಭಾರತೀಯರ ವಿವಾಹಗಳು ಯಶಸ್ವಿಯಾಗಲು 12 ಕಾರಣಗಳು

By Super

ಭಾರತೀಯರಲ್ಲಿ ವಿವಾಹಗಳು ಏಕೆ ಯಶಸ್ವಿಯಾಗಿವೆ ಎಂದು ನಿಮಗೆ ಗೊತ್ತೇ? ವಿದೇಶಕ್ಕೆ ಹೋಲಿಸಿದಾಗ ಭಾರತದಲ್ಲಿ ವಿವಾಹ ವಿಚ್ಛೇದನಗಳು ಅಷ್ಟೇನೂ ಹೆಚ್ಚಲ್ಲ. ಭಾರತೀಯರು ವಿವಾಹದ ಪಾವಿತ್ರ್ಯತೆಯಲ್ಲಿ, ದಂಪತಿಗಳು ಅಗ್ನಿಯ ಸುತ್ತ ಏಳು ಬಾರಿ ಹಾಕುವ ಪ್ರದಕ್ಷಣೆ ಮತ್ತು ಇಡೀ ಜೀವಮಾನದಲ್ಲಿ ಒಟ್ಟಿಗೆ ಜೀವನ ನಡೆಸುವುದರಲ್ಲಿ ನಂಬಿಕೆಯಿಟ್ಟವರು.

ಭಾರತೀಯರಿಗೆ ನಿಯೋಜಿತ ವಿವಾಹಗಳ ಕಲ್ಪನೆಯಿರುವುದರಿಂದ, ತಾವೇ ಪ್ರೀತಿಮಾಡಿ ಇಷ್ಟಪಡುವ ಸಂಗಾತಿಗಿಂತ ತಮ್ಮ ತಂದೆ ತಾಯಂದಿರು ಜೀವನ ಸಂಗಾತಿಯನ್ನು ಆಯ್ಕೆಮಾಡಿದರೆ ಜೀವನವು ಸುಖ ಮಯವಾಗಿರುತ್ತದೆಂದು ನಂಬುತ್ತಾರೆ. ಭಾರತದಲ್ಲಿ ನಿಯೋಜಿತ ವಿವಾಹಗಳ ಯೋಜನೆ ಮತ್ತು ಕಾರ್ಯಗತ ಬಹಳ ನಿಖರವಾಗಿರುತ್ತದೆ. ವಿವಾಹವಾದ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಇರುವರೆಂಬುದನ್ನು ಖಚಿತಪಡಿಸಿಕೊಳ್ಳಲು ತಂದೆ ತಾಯಂದಿರು ಮದುವೆಮಾಡುವ ಮುನ್ನ ಅನೇಕಾನೇಕ ವಿಷಯಗಳಿಗೆ ಗಮನಕೊಟ್ಟಿರುತ್ತಾರೆ.

ನಿಮ್ಮ ಗಂಡನಿಗಾಗಿ ಕೆಲವು ಮುದ್ದು ಹೆಸರುಗಳು

ಭಾರತೀಯ ದಂಪತಿಗಳಿಗೆ ತಮ್ಮ ವಿವಾಹವು ಭಾರತೀಯ ಸಂಪ್ರದಾಯದ ಸಿದ್ಧಾಂತಗಳಿಂದ ಯಶಸ್ವಿಯಾಗುವುದೆಂಬುದು ಎರಡನೇ ಸಂಗತಿ. "ಸಾವಿನತನಕ ನಾವು ಭಾಗವಾಗುವುದಿಲ್ಲ," ಎಂಬ ನಂಬಿಕೆಯು ಪ್ರತಿ ಭಾರತೀಯ ವ್ಯಕ್ತಿಯು ಹೆಚ್ಚಾಗಿ ಅನುಸರಿಸುವ ವಿಷಯ. ಭಾರತೀಯರಲ್ಲಿ ಒಮ್ಮೆ ಒಬ್ಬರನ್ನು ವಿವಾಹವಾದರೆ ಮುಂದಿನ ಏಳು ಜನ್ಮಗಳಲ್ಲೂ (Next Seven Births) ಸಂಗಾತಿ ಬದ್ಧರಾಗಿರುತ್ತಾರೆ ಎಂಬ ಮತ್ತೊಂದು ನಂಬಿಕೆ. ಇದೇ ರೀತಿ ಭಾರತೀಯ ವಿವಾಹಗಳು ಏಕೆ ತುಂಬಾ ಯಶಸ್ವಿಯಾಗಿರುವುದು ಎಂಬುವುದಕ್ಕೆ ಕೆಲವು ಮಾನ್ಯವಾದ ಕಾರಣಗಳಿವೆ - ಅವುಗಳನ್ನು ಪರಿಶೀಲಿಸೋಣ ಬನ್ನಿ:

ಹೆಂಗಸರಿಗೆ ಏಕೆ ಪೆದ್ದು ಗಂಡಸರು ಇಷ್ಟವಾಗುತ್ತಾರೆ?

ಜೀವಮಾನದಲ್ಲಿ ಒಮ್ಮೆ ಮಾತ್ರ ವಿವಾಹವಾಗುವುದು

ಜೀವಮಾನದಲ್ಲಿ ಒಮ್ಮೆ ಮಾತ್ರ ವಿವಾಹವಾಗುವುದು

ಒಬ್ಬರ ಜೀವಮಾನದಲ್ಲಿ ಒಮ್ಮೆ ಮಾತ್ರ ವಿವಾಹ ಸಂಭವಿಸುತ್ತದೆ. ಅದು ಎರಡೂ ಕುಟುಂಬಗಳೂ ಸೇರಿ ವಿವಾಹವು ಯಶಸ್ವಿಯಾಗಲೀ ಎಂಬ ಬಯಕೆಯಿಂದ ಮಾಡುವ ಒಂದು ಭವ್ಯವಾದ ದೊಡ್ಡ ಕಾರ್ಯಕ್ರಮದ ಅವಶ್ಯಕತೆಯಾಗಿರುತ್ತದೆ.

ವಿವಾಹ ವಿಚ್ಛೇದನದ ಪ್ರಕ್ರಿಯೆ ಬಹಳ ದೀರ್ಘ ಪ್ರಕ್ರಿಯೆ

ವಿವಾಹ ವಿಚ್ಛೇದನದ ಪ್ರಕ್ರಿಯೆ ಬಹಳ ದೀರ್ಘ ಪ್ರಕ್ರಿಯೆ

ವಿದೇಶದಲ್ಲಿ ಜರಗುವ ವಿವಾಹ ವಿಚ್ಛೇದನದ ಪ್ರಕ್ರಿಯೆಗೆ ಹೋಲಿಸಿದರೆ, ಭಾರತದಲ್ಲಿ ಈ ಪ್ರಕ್ರಿಯೆಯು ಅಲ್ಲಿಗಿಂತ ಮತ್ತೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಷ್ಟೆಲ್ಲಾ ಸಮಯವಾದ ಮೇಲೆ ವಿಚ್ಛೇದನದ ವಿಷಯವೇ ಬಹುಮಟ್ಟಿಗೆ ಮರೆತುಹೋಗಿರುತ್ತದೆ.

ಎರಡೂ ಕುಟುಂಬಗಳ ಒಟ್ಟು ಜವಾಬ್ದಾರಿ

ಎರಡೂ ಕುಟುಂಬಗಳ ಒಟ್ಟು ಜವಾಬ್ದಾರಿ

ಎರಡೂ ಕುಟುಂಬಗಳು ವಿವಾಹವಾದ ದಂಪತಿಗಳ ಸಣ್ಣ ವಿಷಯಗಳಿಗೆ ಕೂಡ ತೊಡಗುವುದರಿಂದ ಭಾರತೀಯ ವಿವಾಹಗಳು ಯಶಸ್ವಿಯಾಗಿರುತ್ತವೆ.

ಭಾರತೀಯ ಮಹಿಳೆಯ ಹೊಂದಾಣಿಕೆ

ಭಾರತೀಯ ಮಹಿಳೆಯ ಹೊಂದಾಣಿಕೆ

ಭಾರತೀಯ ವಿವಾಹದ ನಂತರ ಪುರುಷನಿಗಿಂತ ಮಹಿಳೆಯು ಪ್ರತಿ ಸಮಸ್ಯೆಯಲ್ಲಿ ಹೊಂದಾಣಿಕೆ ಮಾಡುವವಳಿದ್ದಾಳೆ. ತನ್ನ ಪುರುಷನನ್ನು ತೃಪ್ತಿ ಮತ್ತು ಸಂತೋಷಪಡಿಸಲು ತನ್ನ ವೈವಾಹಿಕ ಜೀವನವನ್ನು ಕಾಪಾಡಲು ಮುಂದೆ ಬರುತ್ತಾಳೆ.

"ಸಾವಿನತನಕ ನಾವು ಬೇರೆಯಾಗುವುದಿಲ್ಲ” ಎಂಬ ಮನಸ್ಥಿತಿ

"ಸಾವಿನತನಕ ನಾವು ಬೇರೆಯಾಗುವುದಿಲ್ಲ" ಎಂಬ ಸಿದ್ಧಾಂತದಿಂದ ಭಾರತೀಯ ವೈವಾಹಿಕ ಜೀವನ ಯಶಸ್ವಿಯಾಗಿರುತ್ತದೆ. ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಎಷ್ಟು ಭಿನ್ನತೆಯಿದ್ದರೂ, ತಾವು ಒಟ್ಟಿಗೆ ಜೀವಿಸಬೇಕೆಂಬ ಭಾವನೆ ಅಥವ ನಂಬಿಕೆಯಿಂದ ಭಾರತೀಯರ ವೈವಾಹಿಕ ಜೀವನ ಯಶಸ್ವಿಯಾಗಿರುತ್ತದೆ.

ವಿವಾಹ ಒಂದು ಶಾಶ್ವತ ಸಂಬಂಧ

ವಿವಾಹ ಒಂದು ಶಾಶ್ವತ ಸಂಬಂಧ

ವಿವಾಹವೆನ್ನುವುದು ದಂಪತಿಗಳ ಮಧ್ಯೆ ಇರುವ ಒಂದು ಒಪ್ಪಂದ - ಸಹಿ ಮಾಡಿದ ಒಪ್ಪಂದ! ಒಟ್ಟಿಗೆ ಇದ್ದು ಜೀವನ ನಡಿಸುವುದು ಎಂಬ ಶಾಶ್ವತ ನುಡಿಗಟ್ಟಿನ ಮುಖ್ಯ ಕಾರಣಗಳೊಂದಾಗಿ ಭಾರತೀಯ ವೈವಾಹಿಕ ಸಂಬಂಧ ಯಶಸ್ವಿಯಾಗಿರುವುದು.

ಸಾಮಾಜಿಕ ಭದ್ರತೆ

ಸಾಮಾಜಿಕ ಭದ್ರತೆ

ಭಾರತೀಯ ಮಹಿಳೆಗೆ ವೈವಾಹಿಕ ಜೀವನದಿಂದ ಸಾಮಾಜಿಕ ಭದ್ರತೆಯಿರುವುದು ಮತ್ತೊಂದು ಕಾರಣ. ಮಹಿಳೆಯು ಸ್ವತಂತ್ರವಾಗಿ ದುಡಿಯುವಾಗ ತನ್ನ ಪತಿಗಿಂತ ಹೆಚ್ಚು ಗಳಿಸಿದರೂ ಸಹ ಸಾಮಾಜಿಕ ಕಳಂಕ ಬರದಿರಬಾರದೆಂದು ಅವರು ವೈವಾಹಿಕ ಜೀವನವನ್ನು ಉಳಿಸಿಕೊಳ್ಳುತ್ತಾರೆ.

ಸಂಸಾರದಲ್ಲಿ ಮಕ್ಕಳು ಮುಖ್ಯ ಪಾತ್ರವಹಿಸುತ್ತಾರೆ

ಸಂಸಾರದಲ್ಲಿ ಮಕ್ಕಳು ಮುಖ್ಯ ಪಾತ್ರವಹಿಸುತ್ತಾರೆ

ಬಹುತೇಕ ಭಾರತೀಯ ವೈವಾಹಿಕ ಜೀವನದಲ್ಲಿ ಮಕ್ಕಳಿರುವುದರಿಂದ ವಿಚ್ಛೇದನದಲ್ಲಿ ಕೊನೆಗೊಳ್ಳುವುದಿಲ್ಲ. ವಿಚ್ಛೇದನವಾದರೆ ಮಕ್ಕಳ ಭವಿಷ್ಯದ ಬಗ್ಗೆ ಗಮನಕೊಡುವುದರಿಂದ ದಂಪತಿಗಳು ತಮ್ಮ ವೈವಾಹಿಕ ಜೀವನವನ್ನು ಮುಂದುವರಿಸಿ ಯಶಸ್ವಿಯಾಗಿರುವುದಕ್ಕೆ ಕಾರಣವಾಗಿದೆ.

ಅತ್ತೆಯಂದಿರು ನಿಮ್ಮನ್ನು ನಿಜವಾಗಿಯೂ ಗೌರವಿಸುತ್ತಾರೆ

ಅತ್ತೆಯಂದಿರು ನಿಮ್ಮನ್ನು ನಿಜವಾಗಿಯೂ ಗೌರವಿಸುತ್ತಾರೆ

ನಿಮ್ಮ ಅತ್ತೆಯವರಿಗೆ ನೀವು ಸತ್ತುಹೋಗುವುದನ್ನು ನೋಡ ಬಯಸುತ್ತಾರೆಂದುಕೊಂಡರೂ ಅವರಿಗೆ ನಿಮ್ಮ ಮದುವೆಯಸಂಬಂಧ ಕಡಿದುಹೋಗುವುದು ಇಷ್ಟವಿರುವುದಿಲ್ಲ. ಅವರು ನಿಮ್ಮನ್ನು ನಿಜವಾಗಿಯೂ ಈ ದಿಕ್ಕಿನಲ್ಲಿ ಗೌರವಿಸುತ್ತಾರೆ.

ವೈವಾಹಿಕ ಜೀವನದಲ್ಲಿ ವ್ಯಭಿಚಾರಕ್ಕೆ ಸಾಮಜಿಕ ಬಹಿಷ್ಕಾರ

ವೈವಾಹಿಕ ಜೀವನದಲ್ಲಿ ವ್ಯಭಿಚಾರಕ್ಕೆ ಸಾಮಜಿಕ ಬಹಿಷ್ಕಾರ

ವ್ಯಭಿಚಾರವನ್ನು ಭಾರತದಲ್ಲಿ ಸಾಮಾಜಿಕವಾಗಿ ಬಹಿಷ್ಕರಿಸಿದೆ. ಆದ್ದರಿಂದ ಪತಿಯು ತನ್ನ ಪತ್ನಿಗೆ ವಂಚನೆ ಮಾಡಿದರೂ ಅಂತಹ ವಿಚಾರವನ್ನು ಬಹಿರಂಗಪಡಿಸಲು ಇಚ್ಚಿಸದೆ ತನ್ನ ಪತಿಯನ್ನು ಕ್ಷಮಿಸುತ್ತಾಳೆ.

ಭಾರತೀಯ ದಂಪತಿಗಳಿಗೆ ಸಾಕಷ್ಟು ತಾಳ್ಮೆಯಿದೆ

ಭಾರತೀಯ ದಂಪತಿಗಳಿಗೆ ಸಾಕಷ್ಟು ತಾಳ್ಮೆಯಿದೆ

ವೈವಾಹಿಕ ಜೀವನದಲ್ಲಿ ಪತಿಯ ಅಹಂ ಅಥವಾ ಅಹಂಕಾರದ ಮಿತಿಯನ್ನು ಮತ್ತು ಸಂಸಾರದಲ್ಲಿ ಬರುವ ಮಾನಸಿಕ ಅಘಾತಗಳನ್ನು ತಾಳ್ಮೆಯಿಂದ ಎದುರಿಸುವ ಭಾರತೀಯ ಮಹಿಳೆ ನಿಜಕ್ಕೂ ಎದ್ದು ನಿಂತು ಮಾಡುವ ಹರ್ಷೋದ್ಗಾರಕ್ಕೆ ಅರ್ಹಳು. ತಾಳ್ಮೆಯೇ ಭಾರತೀಯ ವೈವಾಹಿಕ ಜೀವನಗಳು ಯಶಸ್ವಿಯಾಗುವುದಕ್ಕೆ ಕಾರಣ.

ಇದು ನಿಯೋಜಿತ ಕಾರ್ಯ

ಇದು ನಿಯೋಜಿತ ಕಾರ್ಯ

ಅನೇಕರು ಇಂತಹ ಕಾರ್ಯಕ್ರಮವನ್ನು ಒಪ್ಪುವುದಿಲ್ಲ. ಆದರೆ, ಸಮಯ ಕಳೆದಂತೆ ಒಂದು ಹಂತದಲ್ಲಿ ನಿಯೋಜಿತ ವಿವಾಹವೇ ಎಲ್ಲದಕ್ಕಿಂತ ಅತೀ ಉತ್ತಮವೆಂಬ ಪರಿಕಲ್ಪನೆಯಾಗುತ್ತದೆ.

X
Desktop Bottom Promotion