Latest Updates
-
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
ಸಂಬಂಧಗಳನ್ನು ಮಧುರವಾಗಿಸಿಕೊಳ್ಳುವಲ್ಲಿ ಜನರು ಏಕೆ ವಿಫಲವಾಗುತ್ತಿದ್ದಾರೆ?
ಮನುಷ್ಯನ ಜೀವನದಲ್ಲಿ ಸಂಬಂಧಗಳು ಹೆಚ್ಚು ಪರಿಣಾಮವನ್ನು ಬೀರುತ್ತವೆ. ಹೆತ್ತವರ ಮಕ್ಕಳ ಸಂಬಂಧ, ಒಡನಾಡಿಗಳ ಸ್ನೇಹವೆಂಬ ಪವಿತ್ರ ಸಂಬಂಧ, ಪ್ರೇಮಿಗಳ ಪ್ರೀತಿಯ ಸಂಬಂಧ, ಗಂಡ ಹೆಂಡತಿಯರ ನಡುವಿನ ಅನುಬಂಧ ಹೀಗೆ ನಮ್ಮ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಸಂಬಂಧವನ್ನು ಬೆಳೆಸುವುದಕ್ಕಿಂತ ಅದನ್ನು ಉಳಿಸುವಲ್ಲಿ ನಮ್ಮ ಲಕ್ಷ್ಯ ಇರಬೇಕು.
ಹಲವಾರು ವರುಷ ಪ್ರೀತಿ ಮಾಡಿ ಮೆಚ್ಚಿ ವಿವಾಹವಾಗಿ ಕೊನೆಗೆ ವಿಚ್ಛೇದನವೆಂಬ ಅಂತಿಮ ಗೆರೆಯನ್ನು ದಾಟುವ ಸಂಬಂಧಗಳ ಬಗ್ಗೆ ನೀವು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ. ಹಾಗಿದ್ದರೆ ಒಳ್ಳೆಯ ಸಂಬಂಧಗಳು ಹಾಳಾಗುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಿದ್ದೀರಾ? ಇಂತಹ ಸಂಕಷ್ಟಗಳು ಪ್ರತಿಯೊಂದು ಆತ್ಮೀಯತೆಯಲ್ಲೂ ಈಗ ಸಾಮಾನ್ಯವಾಗಿದೆ.
ಮದುವೆಯೆಂಬ ಬಾಂಧವ್ಯದಲ್ಲಿ ಈ ಬಗೆಯ ತೊಡಕುಗಳು ಹೆಚ್ಚಾಗುತ್ತಿವೆ. ಬೇರ್ಪಟ್ಟವರೂ ಸುಖವಾಗಿರುವುದಿಲ್ಲ. ಆದರೂ ಸಂಬಂಧಗಳನ್ನು ಮಧುರವಾಗಿಸಿಕೊಳ್ಳುವಲ್ಲಿ ಜನರು ಏಕೆ ವಿಫಲವಾಗುತ್ತಿದ್ದಾರೆ ಎಂಬುದು ಮಾತ್ರ ರಹಸ್ಯವಾಗಿದೆ.
ನಿಮ್ಮ ಕಾಲೇಜು ದಿನದ ಸ್ನೇಹ ಸಂಬಂಧ ನಿಮ್ಮ ಓದಿಗೆ ಭವಿಷ್ಯಕ್ಕೆ ತೊಡಕಾಗದಂತೆ ನಿರ್ವಹಿಸುತ್ತೀರಿ ಆದರೆ ವೈವಾಹಿಕ ಸಂಬಂಧವನ್ನು ಇಷ್ಟು ಸುಲಭವಾಗಿ ಕೊಂಡೊಯ್ಯಲು ಸಾಧ್ಯವಿಲ್ಲ. ಉತ್ತಮ ಬಾಂಧವ್ಯವೇ ಒಮ್ಮೊಮ್ಮೆ ಕಹಿಯಾದರೆ ಅದಕ್ಕಿಂತ ಹೆಚ್ಚಿನ ದುಃಖ ಬೇರೊಂದಿಲ್ಲ ಎಂದೇ ಹೇಳಬಹುದು. ಇಂದಿನ ಲೇಖನದಲ್ಲಿ ಉತ್ತಮ ಬಾಂಧವ್ಯ ಏಕೆ ಮುರಿದುಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪುರುಷರು ಯಾಕೆ ಹೀಗೆ ಮಾಡುತ್ತಾರೋ ದೇವರೇ ಬಲ್ಲ!

ಸುಳ್ಳಿನ ಸರಮಾಲೆ
ಕೆಲವೊಂದು ಸಂದರ್ಭದಲ್ಲಿ ಸುಳ್ಳು ನಮಗೆ ಆಸರೆಯನ್ನು ನೀಡುವುದು ನಿಜ. ಸುಳ್ಳುಗಳು ಕೆಲವೊಂದು ಬಾಂಧವ್ಯವನ್ನು ಉಳಿಸಲು ಸಹಕಾರಿಯಾಗುವುದೂ ನಿಜ. ಆದರೆ ಈ ಸುಳ್ಳಿನ ಸರಮಾಲೆಯೇ ನಿಮ್ಮ ಸುಂದರ ಸಂಬಂಧಕ್ಕೆ ಎಳ್ಳು ನೀರನ್ನು ಬಿಡುವುದೂ ಕೂಡ ಇದೆ. ನಿಮ್ಮ ಸುಳ್ಳು ಒಮ್ಮೊಮ್ಮೆ ನಿಮಗೆ ಅಪಮಾನವನ್ನು ತಂದೊಡ್ಡುತ್ತದೆ ನಿಮ್ಮನ್ನು ಒಬ್ಬ ಸುಳ್ಳುಗಾತಿಯಾಗಿ ನಿಮ್ಮ ಸಂಗಾತಿಯ ಎದುರು ಈ ಸುಳ್ಳು ಮಾಡುತ್ತದೆ. ಇದರಿಂದ ಸಂಬಂಧದಲ್ಲಿ ಸಂಶಯ ಅಸಮಾಧಾನ ಸಹಜವಾಗಿಯೇ ಮೂಡುತ್ತದೆ.

ಸಂವಹನ ಅಂತರ
ನಿಮ್ಮಲ್ಲಿ ಸಂವಹನದ ಕೊರೆತ ಇದ್ದಾಗ ಕೂಡ ಸಮಸ್ಯೆಗಳ ಅರ್ಥಮಾಡಿಸಿಕೊಳ್ಳುವಿಕೆ ಒಮ್ಮೊಮ್ಮೆ ಮನದಲ್ಲಿ ಹುದುಗಿರುವ ದುಃಖವಾಗುತ್ತದೆ. ಇಬ್ಬರು ಸಂಗಾತಿಯರಲ್ಲಿ ಸಂವಹನದ ಕೊರತೆ ಇದೆ ಎಂದಾದಲ್ಲಿ ಆ ಸಂಬಂಧ ಗಟ್ಟಿಯಾಗಿ ಇರುವುದಿಲ್ಲ. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುವ ಸಂದರ್ಭವೇ ಇಲ್ಲಿ ಮಾಯವಾಗಿಬಿಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಚೆನ್ನಾಗಿ ಮಾತನಾಡದಿದ್ದಲ್ಲಿ ನಿಮ್ಮ ಸಂಬಂಧ ಹಳಸುತ್ತದೆ.

ಅಂತರ
ಅಂತರವು ಹೃದಯಗಳನ್ನು ದೂರಮಾಡುತ್ತದೆ. ಆರೋಗ್ಯಕರ ಸಂಬಂಧದಲ್ಲಿ ಈ ಅಂತರವು ಸಂಬಂಧಗಳನ್ನು ದೂರಮಾಡುತ್ತದೆ ಮತ್ತು ಸಂಶಯವನ್ನು ಏರ್ಪಡಿಸುತ್ತದೆ. ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ ಮತ್ತು ಪ್ರೀತಿ ಅಲ್ಲಿ ಮೂಡುವುದಿಲ್ಲ.

ಸಂಶಯ
ಸಂಶಯ ಎನ್ನುವುದು ಸಂಬಂಧದಲ್ಲಿ ಹುಳಿ ಹಿಂಡಿದಂತೆ. ನಿಮ್ಮ ಸಂಗಾತಿಯನ್ನು ನೀವು ಹೆಚ್ಚು ಸಂಶಯಿಸುತ್ತಿದ್ದೀರಿ ಎಂದಾದಲ್ಲಿ ಇದು ಸಂಬಂಧವನ್ನು ಹಾಳುಮಾಡುತ್ತದೆ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳುಗೆಡವುತ್ತದೆ. ಆದ್ದರಿಂದ ಸಂಶಯ ಆದಷ್ಟು ನಿಮ್ಮ ಸಂಬಂಧದಲ್ಲಿ ಬರದಂತೆ ನೋಡಿಕೊಳ್ಳಿ.

ಮನಸ್ಸನ್ನು ಅರ್ಥಮಾಡಿಕೊಳ್ಳದಿರುವುದು
ನಿಮ್ಮ ಸಂಗಾತಿಯ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಅವರ ಮಾತಿಗೆ ಕಿವಿಗೊಡದಿರುವುದು ನಿಮ್ಮಲ್ಲಿನ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಿಮ್ಮ ನಡುವಿನ ಅಂತರವನ್ನು ವಿಸ್ತರಿಸುತ್ತಿದೆ. ನಿಮ್ಮ ಸಂಗಾತಿಯ ಮನಸ್ಸನ್ನು ಅರ್ಥಮಾಡಿಕೊಂಡು ಅವರ ಮೇಲೆ ಪ್ರೀತಿ ಇರುವಂತೆ ನೋಡಿಕೊಳ್ಳಿ.

ಹೆಚ್ಚಿನ ಬಯಕೆಗಳು
ಕೆಲವರು ತಮ್ಮ ಸಂಬಂಧಗಳಲ್ಲಿ ಚಲನ ಚಿತ್ರದ ಅನುಭವವನ್ನು ನೋಡುತ್ತಾರೆ. ನಿಜ ಜೀವನದಲ್ಲಿ ಈ ಗಿಮಿಕ್ಕುಗಳು ನಡೆಯುವುದಿಲ್ಲ ಎಂಬ ವಾಸ್ತವಾಂಶವನ್ನು ಅರಿತುಕೊಳ್ಳದಿರುವುದು ಕಲ್ಪನೆಯಲ್ಲಿ ಬಾಳುವಂತಹ ಹೆಚ್ಚಿನ ಬಯಕೆಗಳು ಸಂಬಂಧದಲ್ಲಿ ಕಂದಕವನ್ನು ಉಂಟುಮಾಡುತ್ತದೆ. ತ್ಯಾಗ, ನೋವು ದುಃಖ ಇವು ಸಂಬಂಧದಲ್ಲಿ ಸರ್ವೇ ಸಾಮಾನ್ಯ.

ನಿಮ್ಮ ದಾಸರಲ್ಲ
ನಿಮ್ಮ ಸಂಗಾತಿಯೊಂದಿಗೆ ಕೀಳಾಗಿ ಎಂದಿಗೂ ನಡೆದುಕೊಳ್ಳಬೇಡಿ ನಿಮ್ಮ ಒಲವನ್ನು ಬಯಸಿ ಬರುವವವರು ಅವರಾಗಿರುವುದರಿಂದ ಅವರಲ್ಲಿ ಪ್ರೀತಿಯಿಂದ ವ್ಯವಹರಿಸಿ. ನೀವು ಹೇಳದೆಯೇ ಅವರು ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು ಈ ಮೊದಲಾದ ಭಾವನೆಗಳನ್ನು ಇರಿಸಿಕೊಳ್ಳಬೇಡಿ. ಅವರಿಗೂ ಒಂದು ಮನಸ್ಸಿದೆ ನಮ್ಮ ಜೀತದಾಳು ಅವರಲ್ಲ ಎಂಬ ಭಾವನೆ ನಿಮ್ಮಲ್ಲಿರಲಿ.

ಸಂಗಾತಿಯ ನೋವನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಸಂಗಾತಿ ಸದಾ ಅಂತರ್ಮುಖಿಯಾಗಿರುವುದು ಅವರಲ್ಲಿನ ಚಿಂತೆಯನ್ನು ತೋರ್ಪಡಿಸುತ್ತದೆ. ಈ ಸಮಯದಲ್ಲಿ ನೀವು ಅವರೊಂದಿಗೆ ಬೆರೆತುಕೊಳ್ಳಬೇಕು. ಅವರ ಮನದ ನೋವನ್ನು ಅರಿತುಕೊಂಡು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಇದು ಅತಿ ಮುಖ್ಯವಾದುದು.

ಸೋಮಾರಿತನ
ಸಂಬಂಧ ಎನ್ನುವುದು ಹೂವಿನ ಬೀಜವಿದ್ದಂತೆ ಅದನ್ನು ನೀವು ಚೆನ್ನಾಗಿ ಆರೈಕೆ ಮಾಡಿದಷ್ಟು ಅದು ನಿಮಗೆ ನೀಡುವ ಪ್ರತಿಫಲ ನಳನಳಿಸುವ ಹೂಗಿಡದಂತೆ ಸುಂದರವಾಗಿರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಸಂಬಂಧದಲ್ಲಿ ಆಲಸ್ಯತನ ಮಾಡದಿರಿ. ನೀವು ಎಲ್ಲಿ ಎಡವುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ಸಂಗಾತಿಯ ಹೃದಯವನ್ನು ಪ್ರೀತಿಯಿಂದ ಗೆಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿಯಾಗುವುದು ಖಂಡಿತ.

ವಿಭಿನ್ನ ಗುರಿಗಳು
ವಿಭಿನ್ನ ಗುರಿಗಳು ನಿಮ್ಮ ಸಂಗಾತಿಗಳ ನಡುವೆ ಬಂದಲ್ಲಿ ಅದು ವೃತ್ತಿಪರ ತೊಂದರೆಯನ್ನು ತಂದೊಡ್ಡುತ್ತವೆ ಎಂಬುದು ನಿಮಗೆ ಗೊತ್ತಿದೆಯೇ? ವೃತ್ತಿಪರ ರಂಗದಲ್ಲಿ ಭಿನ್ನತೆಗಳು ವೈವಾಹಿಕ ಜೀವನದಲ್ಲಿ ಏಳು ಬೀಳುಗಳನ್ನು ಉಂಟುಮಾಡುತ್ತವೆ ಮತ್ತು ಸಂಬಂಧವನ್ನು ಕೊನೆಗಾಣಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.



Click it and Unblock the Notifications











