ತಾಳಿಕಟ್ಟಲು ಇರುವ 10 ಅತ್ಯುತ್ತಮ ಕಾರಣಗಳು

By Super

ಹಲವಾರು ನಕಾರಾತ್ಮಕವಾದಿಗಳು ಯಾವಾಗಲು ಮದುವೆಯ ವಿಚಾರವಾಗಿ ಮೂಗು ಮುರಿಯುತ್ತಿರುತ್ತಾರೆ. ಅದಕ್ಕಾಗಿ ಅವರು ಹೆಚ್ಚುತ್ತಿರುವ ವಿವಾಹ ವಿಚ್ಛೇಧನಗಳ ಪ್ರಮಾಣವನ್ನು ಮತ್ತು ತಾವು ನೋಡಿದ ಅಸಂತೃಪ್ತ ದಂಪತಿಗಳ ಜೀವನವನ್ನು ಉದಾಹರಣೆಯನ್ನಾಗಿ ನೀಡುತ್ತಿರುತ್ತಾರೆ.

ಬಹುತೇಕ ವಯಸ್ಕರು ಮದುವೆ ಮಾಡಿಕೊಳ್ಳಲು ನಿಧಾನ ಮಾಡುತ್ತಾರೆ ಇಲ್ಲವೇ, ಮದುವೆಯ ಮಾತುಕತೆಯನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತಾರೆ. ಕಾರಣ ಅವರಿಗೆ ಮದುವೆಯು ದುಃಖದಲ್ಲಿ ಅಂತ್ಯವಾಗುತ್ತದೆ ಎಂಬ ದುಗುಡವಿರುತ್ತದೆ. ನಿಜಕ್ಕು ಮದುವೆಯೆಂಬುದು ಇಂದಿನ ಕಾಲಕ್ಕೆ ಯೋಗ್ಯವಾಗಿಲ್ಲವೆ, ಕೆಲಸಕ್ಕೆ ಬರುವುದಿಲ್ಲವೇ ಅಥವಾ ಬಂಧನವೇ? ಇಲ್ಲ! ತಾಳಿ ಕಟ್ಟಲು ಹಲವಾರು ಅದ್ಭುತ ಕಾರಣಗಳು ಇವೆ. ಅವುಗಳು ಯಾವುವು ಎಂಬುದನ್ನು ಮುಂದೆ ನೀಡಿದ್ದೇವೆ ಓದಿ.

ಸಂಗಾತಿಗೆ ಥ್ಯಾಂಕ್ಸ್ ಹೇಳುವ ಅವಶ್ಯಕತೆ ಏಕೆ?

10 great reasons to tie the knot

ಮತ್ತಷ್ಟು ಸಹಾನುಭೂತಿ, ತಾಳ್ಮೆ ಇರುವ ವ್ಯಕ್ತಿಯಾಗಬಹುದು.
ನಾವೆಲ್ಲರು ನಮ್ಮದೆ ಆದ ಕೆಲವೊಂದು ವಿಲಕ್ಷಣವಾದ ಪ್ರವೃತ್ತಿಗಳನ್ನು ಹೊಂದಿರುತ್ತೇವೆ. ನಮ್ಮ ಭಾವಿ ಸಂಗಾತಿಗೆ ತಿಳಿಯದಂತೆ ಅವುಗಳನ್ನು ತುಂಬಾ ದಿನ ಮರೆಮಾಚಲಾಗುವುದಿಲ್ಲ. ಆಕೆ ಅವುಗಳಲ್ಲಿ ಕೆಲವನ್ನು ಹದ್ದುಬಸ್ತಿಗೆ ತರುವ ಪ್ರಯತ್ನ ಮಾಡಬಹುದು ಮತ್ತು ಅದರಲ್ಲಿ ಯಶಸ್ವಿಯು ಆಗಬಹುದು. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಮದುವೆಯನ್ನು ಯಶಸ್ವಿಯಾಗಿಸಿಕೊಳ್ಳಲು ಇರುವ ಮಾರ್ಗಗಳನ್ನು ಅನುಸರಿಸಿ, ಈ ಮಾರ್ಗವು ನಿಮ್ಮನ್ನು ಮತ್ತಷ್ಟು ಸಹಾನುಭೂತಿಯುಳ್ಳವರಾಗಿ ಮತ್ತು ತಾಳ್ಮೆಯುಳ್ಳವರಾಗಿ ಬೆಳೆಯಲು ಸಹಕರಿಸುತ್ತದೆ. ಇದಕ್ಕೆ ನೀವು ಸಹಕರಿಸಿದರೆ ಮದುವೆಯು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿಸುತ್ತದೆ.

ನಿಮ್ಮೊಂದಿಗೆ ಬೆಳೆಯುವ ಒಬ್ಬ ವ್ಯಕ್ತಿ ನಿಮಗೆ ದೊರೆಯುತ್ತಾರೆ
ನಾವು ದಾಂಪತ್ಯದಲ್ಲಿ ಹಲವು ಬಾರಿ ಕ್ಷಮೆಯಾಚಿಸುವ ಒಂದೇ ವಿಚಾರವೆಂದರೆ "ನಾವಿಬ್ಬರು ಬೇರೆ ಬೇರೆ ವಾತಾವರಣದಲ್ಲಿ ಬೆಳೆದಿದ್ದೇವೆ ಬಿಡು" ಎಂಬ ಮಾತು. ಆದರೆ ಆರೋಗ್ಯಕರವಾದ ದಾಂಪತ್ಯದಲ್ಲಿ ದಂಪತಿಗಳು ಇಬ್ಬರೂ ಒಟ್ಟಿಗೆ ಬೆಳೆಯುವ ಅವಕಾಶವನ್ನು ಹೊಂದಿರುತ್ತಾರೆ.ಇದರಿಂದ ದೊರೆಯುವ ಒಂದು ಒಳ್ಳೆಯ ಉಪಯೋಗವೆಂದರೆ ಇಬ್ಬರೂ ಹೊಸ ಹೊಸ ಆಸಕ್ತಿಗಳನ್ನು ಬೆಳೆಸಿಕೊಳ್ಳಬಹುದು ಮತ್ತು ಪ್ರಪಂಚವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇಬ್ಬರೂ ಪರಸ್ಪರರ ವಿಚಾರಗಳಿಗೆ ಸ್ಪಂದಿಸುವ ಸದವಕಾಶ ಇಲ್ಲಿ ದೊರೆಯುತ್ತದೆ. ಇದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಹೀಗೆ ಇಬ್ಬರೂ ಒಟ್ಟಿಗೆ ಬೆಳೆಯುತ್ತ ಪ್ರಬುದ್ಧರಾಗುತ್ತಾರೆ.

ಜೊತೆಗಾರರಿಗಾಗಿ ಹುಡುಕಾಡಬೇಕಾದ ಅಗತ್ಯವಿಲ್ಲ:
ಮದುವೆಯೆಂದರೆ ಬರೀ ಕಷ್ಟ, ನಷ್ಟ ಮತ್ತು ಕಿರಿಕಿರಿಯಂತು ಅಲ್ಲವೇ ಅಲ್ಲ. ಸಂಗಾತಿ ಇದ್ದವರು ಒಂಟಿಯಾಗಿ ರಜೆಯ ಮೋಜು ಕಳೆಯಲು ಹೋಗುವುದಿಲ್ಲ. ಸಿನಿಮಾಗೆ, ಹೋಟೆಲ್‍ಗೆ, ಸಮಾರಂಭಕ್ಕೆ, ಅಷ್ಟೇಕೆ ಪಾರ್ಕ್‌ನಲ್ಲಿ ಸುತ್ತಾಡಲು ಸಹ ನಿಮಗೆ ನಿಮ್ಮ ಸಂಗಾತಿ ಒಳ್ಳೆಯ ಜೊತೆಗಾರರಾಗಿ ಕಾಣಿಸುತ್ತಾರೆ. ನೀವಿಬ್ಬರು ನಿಮ್ಮ ಸಂತೋಷದ ಸಮಯವನ್ನು ಪರಸ್ಪರ ಹಂಚಿಕೊಳ್ಳಲು ಹಾತೊರೆಯುತ್ತೀರಿ. ಹೀಗೆ ನಿಮ್ಮ ಸವಾರಿಗಳನ್ನು ಜೊತೆಯಲ್ಲಿ ಕಳೆಯಲು ನಿಮಗೆ ದಾಂಪತ್ಯವು ಒಳ್ಳೆಯ ಅವಕಾಶ ಮಾಡಿಕೊಡುತ್ತದೆ.

ಮತ್ತೆ ಪ್ರೀತಿ, ಪ್ರೇಮ ಮತ್ತು ಪ್ರಣಯ ಎಂದು ಜಪಿಸಬೇಕಾಗುವುದಿಲ್ಲ:
ಮದುವೆಯಾದ ಮಾತ್ರಕ್ಕೆ ಪ್ರೀತಿ, ಪ್ರೇಮವನ್ನು ಮರೆಯುತ್ತೀರಿ ಎಂದು ನಾನು ಹೇಳುತ್ತಿಲ್ಲ. ಮದುವೆಯು ಒಂದು ಬಾಂಧವ್ಯ. ಅದು ಸದಾ ನಿಮ್ಮೊಂದಿಗೆ ಇರುತ್ತದೆ. ಆದರೆ ಪ್ರೀತಿ ಕಳ್ಳಿಯಂತೆ ಅದು ನಿಮ್ಮನ್ನು ಸದಾ ಕಾಡುತ್ತದೆ. ನಿಮ್ಮ ಮೊದಲ ಪ್ರೀತಿ ನಿಮಗೆ ನೋವನ್ನುಂಟು ಮಾಡಿದ್ದಲ್ಲಿ, ಅದರ ಬಗ್ಗೆ ಕೊರಗಬೇಡಿ, ಪ್ರೀತಿಯನ್ನು ಭದ್ರಪಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಬಾಂಧವ್ಯವನ್ನು ಬಲಪಡಿಸಿಕೊಳ್ಳಿ. ಪ್ರೀತಿಗೆ ತೋರುತ್ತಿದ್ದ ಕಾಳಜಿಯನ್ನು, ಅದಕ್ಕಾಗಿ ವ್ಯಯಿಸುತ್ತಿದ್ದ ಶಕ್ತಿಯನ್ನು ಇತರೆಡೆ ವಿನಿಯೋಗಿಸಿ ಆಗ ಜೀವನದಲ್ಲಿ ಯಶಸ್ಸು ನಿಮ್ಮ ಕಾಲ ಬಳಿಗೆ ಬಂದು ಬೀಳುತ್ತದೆ.

ಜೀವನದಲ್ಲಿ ಸ್ಥಿರತೆಯನ್ನೊದಗಿಸುತ್ತದೆ:
ಮದುವೆಯಾದವರು ಸುದೀರ್ಘ ಕಾಲ ಬಾಳುತ್ತಾರೆ, ಹೆಚ್ಚಿನ ಹಣವನ್ನು ಸಂಪಾದಿಸುತ್ತಾರೆ ಮತ್ತು ಇತರರಿಗಿಂತ ಜೀವನವನ್ನು ಇನ್ನೂ ಹೆಚ್ಚಿನ ಆನಂದದಿಂದ ಕಳೆಯುತ್ತಾರೆ. ಮದುವೆಯಾದ ಮಾತ್ರಕ್ಕೆ ತೆರಿಗೆ ವಿನಾಯಿತಿ, ತೆರಿಗೆ ಭಾರದ ಸಮಾನ ಹಂಚಿಕೆ, ಉತ್ತಮ ವಿಮೆ ಇವೆಲ್ಲ ಸೌಲಭ್ಯ ದೊರೆಯುತ್ತದೆ ಎಂಬ ಕಾರಣಗಳಿಗಿಂತಲೂ ಮದುವೆಯು ಜೀವನದ ಗುರಿಯನ್ನು ನಿರ್ಧರಿಸುತ್ತದೆ ಎಂಬುದು ತುಂಬಾ ಮುಖ್ಯವಾದ ಅಂಶವಾಗಿದೆ.

ಮದುವೆಯು ಸದೃಢ ಕುಟುಂಬಗಳನ್ನು ಸೃಷ್ಟಿಸುತ್ತದೆ:
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಮದುವೆಯನ್ನು ಕುಟುಂಬ ಜೀವನದಿಂದ ಹೊರಗಿಡಲು ನೋಡುತ್ತಾರೆ. ಸುಮ್ಮನೆ ಜೊತೆಯಾಗಿ ಬದುಕಲು ಮಾತ್ರ ಅಂದರೆ ಲಿವ್ ಇನ್ ರಿಲೇಷನ್‍ಷಿಪ್‍ನಂತಹ ಸಂಬಂಧಗಳಿಗೆ ಈಗ ಆಧ್ಯತೆ ನೀಡುವವರ ಸಂಖ್ಯೆ ಹೆಚ್ಚುತ್ತಲೆ ಹೋಗುತ್ತಿದೆ. ಆದರೆ ಈ ಕುರಿತು ಅಧ್ಯಯನಗಳು ಸಾಭೀತು ಮಾಡಿರುವ ಅಂಶ ಕುತೂಹಲಕಾರಿಯಾಗಿದೆ. ಕುಟುಂಬಗಳಲ್ಲಿ ಬೆಳೆದ ಮಕ್ಕಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉತ್ತಮ ಬೆಳವಣಿಗೆಯನ್ನು ತೋರುತ್ತಾರೆ ಎಂದು ಈ ಅಧ್ಯಯನಗಳು ತಿಳಿಸಿವೆ. ನಿಮ್ಮ ಮಕ್ಕಳಿಗೆ ನೀವು ಉತ್ತಮ ಭವಿಷ್ಯವನ್ನು ನೀಡಬೇಕೆಂಬ ಇಚ್ಛೆ ನಿಮಗಿದ್ದಲ್ಲಿ ಮದುವೆಯು ಅತ್ಯುತ್ತಮವಾದ ಆಯ್ಕೆಯಾಗಿರುತ್ತದೆ.

ಹೆಚ್ಚಿನ ಮತ್ತು ಉತ್ತಮ ಲೈಂಗಿಕತೆ:
ಮದುವೆಯಾದವರು ಹೆಚ್ಚಿನ ಮತ್ತು ಉತ್ತಮವಾದ ಲೈಂಗಿಕ ಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದು ಒಂಟಿಯಾಗಿರುವವರಿಗೆ ಹೋಲಿಸಿದರೆ ಹೆಚ್ಚು ಎಂಬುದು ಎಲ್ಲರಿಗು ತಿಳಿದ ವಿಚಾರವೇ. ಈ ಲೈಂಗಿಕ ಜೀವನವು ಅವರ ಜೀವನದಲ್ಲಿ ಸಂತೃಪ್ತಿಯನ್ನು ಒದಗಿಸಿ, ಅವರ ಜೀವನವನ್ನು ಮತ್ತಷ್ಟು ಸುಮಧುರಗೊಳಿಸುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಲೈಂಗಿಕ ಜೀವನವು ಪರಸ್ಪರರ ನಡುವೆ ಮತ್ತಷ್ಟು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಮೇಲಿನ ಭಾರವನ್ನು ಹೊರಲು ಮತ್ತೊಬ್ಬರು ದೊರೆಯುತ್ತಾರೆ:
ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಎಡರು ತೊಡರುಗಳನ್ನು ನೀವೊಬ್ಬರೆ ಎದುರಿಸಿ, ದಣಿಯಬೇಕಾಗಿಲ್ಲ. ನಿಮ್ಮ ಹೊರೆಯನ್ನು ಹೊರಲು ಮತ್ತೊಂದು ಭುಜ ನಿಮಗಾಗಿ ಮದುವೆಯಲ್ಲಿ ದೊರೆಯುತ್ತದೆ. ನಿಮ್ಮ ಕಷ್ಟಕಾಲದಲ್ಲಿ ನಿಮಗೆ ಮಾರ್ಗದರ್ಶನ ಮಾಡಲು ನಿಮ್ಮ ಸಂಗಾತಿಗಿಂತ ಒಳ್ಳೆಯ ಮಾರ್ಗದರ್ಶಿ ನಿಮಗೆ ಮತ್ತೊಬ್ಬರು ದೊರೆಯುವುದಿಲ್ಲ. ನಿಮ್ಮ ಎಲ್ಲಾ ದುಃಖ, ದುಮ್ಮಾನಗಳನ್ನು ಹಂಚಿಕೊಂಡು ನೀವು ಭರವಸೆ ಕಳೆದುಕೊಳ್ಳದಂತೆ ಕಾಪಾಡುವ ಹೊಣೆಯನ್ನು ಅವರು ನಿರಾಯಾಸವಾಗಿ ಮಾಡುತ್ತಾರೆ.

ಪುರುಷರ ಸ್ನೇಹ ಆತ್ಮೀಯತೆಗೆ ನಾಂದಿ ಹೇಗೆ?

ಮದುವೆಯು ಸಂತಸಕರವಾದ ಜೀವನವನ್ನು ನಡೆಸಲು ನೆರವಾಗುತ್ತದೆ:
ಮನಃಶಾಸ್ತ್ರಙ್ಞರು ನಡೆಸಿದ ಅಧ್ಯಯನಗಳ ಪ್ರಕಾರ ಮದುವೆಯಾದವರು ಒಂಟಿ ಜೀವನ ನಡೆಸುವವರಿಗಿಂತ ಉತ್ತಮ ಸಂತೋಷಕರವಾದ ಜೀವನವನ್ನು ನಡೆಸುತ್ತಾರೆ ಎಂದು ತಿಳಿದುಬಂದಿದೆ. ಇದು ಅಚ್ಚರಿ ಪಡಬೇಕಾದ ವಿಷಯವಲ್ಲ, ಸಂಗಾತಿಯನ್ನು ಹೊಂದಿದ್ದೀರಿ ಎಂದರೆ ಒಬ್ಬ ಒಳ್ಳೆಯ ಸ್ನೇಹಿತರನ್ನು ಪಡೆದಿದ್ದೀರಿ ಎಂದರ್ಥ.

ನೀವು ಪ್ರೀತಿಸುತ್ತಿದ್ದೀರಿ:
ಮದುವೆಯಾಗಲು ನಿಮಗೆ ಇರುವ ಅತ್ಯುತ್ತಮವಾದ ಕಾರಣ ನಿಜವಾದ ಪ್ರೀತಿಯನ್ನು ಪಡೆಯುವ ಸಲುವಾಗಿ. ಮದುವೆಯು ನಿಮ್ಮ ಮನಸ್ಸನ್ನು ಕದ್ದ ವ್ಯಕ್ತಿಗೆ ನೀವು ತೋರಿಸುವ ಪರಮೋಚ್ಛ ಬದ್ಧತೆಯನ್ನು ದೃಢಪಡಿಸುತ್ತದೆ. ನೀವು ನಿಮ್ಮ ಸಂಗಾತಿಯ ಕುರಿತಾಗಿ ತೋರುವ ಬದ್ಧತೆ ಮತ್ತು ಏಕತೆಯನ್ನು ಸಾಭೀತು ಮಾಡಲು ಮದುವೆ ಉತ್ತಮ ವೇದಿಕೆಯಾಗಿರುತ್ತದೆ. ಜೀವನ ಪರ್ಯಂತ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಯಾರಿಗೆ ತಾನೇ ಬೇಕಾಗಿಲ್ಲ? ಅದಕ್ಕಾಗಿ ಮದುವೆಯಾಗಿ.

ಮದುವೆ ಎಂದರೆ ಎಂದಿಗು ಕೊನೆಗೊಳ್ಳದ ಜಗಳ, ಕಿರಿಕಿರಿ ಎಂದು ಎಂದೆಂದಿಗು ಭಾವಿಸಬೇಡಿ. ಹಾಗೆ ಭಾವಿಸಿ ನೀವು ಯಾವುದೇ ಕಾರಣಕ್ಕು ಮೂರ್ಖರಾಗಬೇಡಿ. ಹೀಗೆ ನಿಮ್ಮ ಸಂಸ್ಕೃತಿಯ ಕುರಿತಾಗಿ ನೀವೇ ನಕಾರಾತ್ಮಕವಾದಿಗಳಾಗುವುದು ಒಳ್ಳೆಯದಲ್ಲ. ಒಂಟಿ ಜೀವನದಿಂದ ದಂಪತಿಗಳಾಗುವವರೆಗು ನೀವು ಬೆಳೆಯುವಲ್ಲಿಯೇ ಜೀವನದ ಸಾರ್ಥಕತೆ ಇರುವುದು. ಅದಕ್ಕಾಗಿಯೇ ವೇದಗಳು ಬ್ರಹ್ಮಚರ್ಯ, ಯೌವನ, ಗೃಹಸ್ಥಾಶ್ರಮ ಮತ್ತು ವಾನಪ್ರಸ್ಥ ಎಂಬ ನಾಲ್ಕು ಆಶ್ರಮಗಳನ್ನು ಅಂದರೆ ನಾಲ್ಕು ಹಂತಗಳನ್ನು ನಮಗೆ ಭೋದಿಸಿರುವುದು.

ಮದುವೆಯಾಗಿ ಸಂತಸವಾಗಿರುವ ಸಂಗಾತಿಗಳ 5 ರಹಸ್ಯಗಳು!

ಇದೆಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಸಂಬಂಧದಲ್ಲಿ ಏರು ಪೇರು ಇರುವುದು ಸಹಜ. ಇದೆಲ್ಲದರ ಜೊತೆಗೆ ಹೆಣಗಾಡಿದರೆ ತಾನೇ ಜೀವನ ಸಾರ್ಥಕ. ಪಲಾಯನವಾದ ಎಲ್ಲದಕ್ಕು ಒಂದೇ ಸೂತ್ರವಲ್ಲ. ಒಮ್ಮೆ ಗಮನಿಸಿ, 80 ವರ್ಷದ ದಂಪತಿಗಳು ಅಷ್ಟು ವರ್ಷದ ದಾಂಪತ್ಯದ ನಂತರವು ಪಾರ್ಕಿನಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ನಿಮಗೆ ಏನು ಅನಿಸುತ್ತದೆ? ಅವರಷ್ಟು ಜೀವನಾನುಭವ ನಮಗಿಲ್ಲದಿದ್ದರು, ನಮ್ಮ ಯೋಗ್ಯತೆಗೆ ತಕ್ಕಷ್ಟು ನಾವು ಬದುಕಬಹುದಲ್ಲವೇ? ಚಿಂತೆ ಬಿಡಿ, ಮದುವೆಗೆ ಸಿದ್ಧರಾಗಿ.

Story first published: Friday, May 23, 2014, 18:00 [IST]
X
Desktop Bottom Promotion