Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನೀನು ನಂಗಿಷ್ಟವಿಲ್ಲ ಹೇಳುವುದು ಹೇಗೆ?
ಒಬ್ಬ ಹುಡುಗ ಮತ್ತು ಹುಡುಗಿ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡುವುದು ಸಹಜ. ಇದು ವಿಶ್ವದಲ್ಲಿ ಎಲ್ಲೆಡೆ ಸಹಜವಾಗಿರುವ ನಿಸರ್ಗ ನಿಯಮ. ಒಬ್ಬರಿಂದ ಒಬ್ಬರು ಆಕರ್ಷಿತರಾಗುವುದು ಮತ್ತು ಆ ಆಕರ್ಷಣೆ ಪ್ರೀತಿಯಾಗಿ ಪರಿವರ್ತನೆಯಾಗುವುದು ಎಲ್ಲವೂ ಸಹಜ. ಕೆಲವೊಮ್ಮೆ ಇವು ಏಕ ಮುಖವಾಗಿರುತ್ತವೆ. ಒಂದು ಹುಡುಗ ಇಷ್ಟಪಡುತ್ತಾನೆ, ಇಲ್ಲ ಹುಡುಗಿ ಇಷ್ಟಪಟ್ಟಿರುತ್ತಾಳೆ ಅಷ್ಟೆ. ಇಬ್ಬರ ನಡುವೆಯು ಒಂದು ಅಪ್ಯಾಯಮಾನತೆ ಮತ್ತು ಅನುಬಂಧವು ಕೂಡಿ ಬಂದಿರುವುದಿಲ್ಲ. ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿರುವುದಿಲ್ಲ ಮತ್ತು ಆಕರ್ಷಿತರಾಗಿರುವುದಿಲ್ಲ.
ಅದರಲ್ಲೂ ಒಂದು ಹುಡುಗಿಗೆ ಯಾವುದೇ ವ್ಯಕ್ತಿಯು ತನ್ನ ಹಿಂದೆ ಬಿದ್ದಾಗ, ಆತ ತನಗೆ ಹಿಡಿಸಲಿಲ್ಲವೆಂದಾದಲ್ಲಿ, ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಆಗ ಪರಿಸ್ಥಿತಿ ಏನಾಗುತ್ತದೆ ಎಂಬುದು ಆ ಹುಡುಗನ ಸ್ವಭಾವಕ್ಕೆ ಅನುಗುಣವಾಗಿರುತ್ತದೆ. ಆಗ ಈ ಪರಿಸ್ಥಿತಿಯನ್ನು ತುಂಬಾ ಸೂಕ್ಷ್ಮತೆ ಮತ್ತು ಜಾಣತನದಿಂದನಿಭಾಯಿಸುವುದು ಹುಡುಗಿಗೆ ಒಳ್ಳೆಯದು.

ಈ ವಿಚಾರವನ್ನು ಹೇಳಲು ಹುಡುಗಿಗೆ ಜಾಣ್ಮೆ ಮತ್ತು ಸಮಯ ಪ್ರಙ್ಞೆ ಎರಡು ಅವಶ್ಯಕ. ಅದರ ಜೊತೆಗೆ ಕೆಲವು ಸಲಹೆಗಳನ್ನು ನಾವು ನಿಮಗಾಗಿ ನೀಡಿದ್ದೇವೆ, ಓದಿ ತಿಳಿದುಕೊಳ್ಳಿ. ಪರಿಸ್ಥಿತಿಯನ್ನು ಯಾವುದೇ ವಿಷಮ ಹಂತಕ್ಕೆ ಕೊಂಡೊಯ್ಯದೆ ನಿಭಾಯಿಸಿಕೊಳ್ಳಿ.
1. ನೇರವಂತಿಕೆ ಇರಲಿ - ಒಬ್ಬ ವ್ಯಕ್ತಿಯು ನಿಮಗೆ ಹಿಡಿಸದಿದ್ದರು, ತನ್ನ ಎಲ್ಲೆಯನ್ನು ಮೀರಿ ನಿಮ್ಮೊಂದಿಗೆ ಪ್ರವರ್ತಿಸುತ್ತಿದ್ದರೆ, ಆತನಿಗೆ ನೇರವಾಗಿ ನಿಮ್ಮ ಅಭಿಪ್ರಾಯ ತಿಳಿಸಿ. ಆತನು ನಿಮಗೆ ಹಿಡಿಸದಿರುವುದನ್ನು ಆತನಿಗೆ ತಿಳಿಸಿ ಹೇಳುವುದರಿಂದ, ಮುಂದೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ತಪ್ಪುತ್ತದೆ. ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುವುದರಿಂದ ಆತನಿಗೆ ನೋವಾಗಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲವೆ ಆಗುತ್ತದೆ.
2. ಸಭ್ಯತೆಯಿಂದಿರಿ - ಹುಡುಗರು 'ಅಹಂ'ನ ಮೂಟೆಯನ್ನೆ ಹೊತ್ತು ತಿರುಗುತ್ತಾರೆ. ಅವರ ಅಹಂಗೆ ಯಾವುದೇ ಧಕ್ಕೆಯಾಗದಂತೆ ಮತ್ತು ಯಾವುದೇ ನಕಾರಾತ್ಮಕ ಪರಿಣಾಮ ಬೀರದಂತೆ ಆತನಿಗೆ ತಿಳಿಸಿ. ನಿಮ್ಮ ಸಭ್ಯತೆಯಿಂದ ಆತನಿಗೆ ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ. ಹಾಗಾಗಿ ಸಮಾಜದಲ್ಲಿ ನಿಮ್ಮದೆ ಆದ ಒಂದು ಸಭ್ಯ ವ್ಯಕ್ತಿತ್ವವನ್ನು ಗಳಿಸಿಕೊಳ್ಳಿ. ಆಗ ಮುಂದೆ ಯಾವುದೇ ಭಿನ್ನಾಭಿಪ್ರಾಯಗಳು ನಿಮಗೆ ಕಾಡುವುದಿಲ್ಲ.
3. ಅಂತರವನ್ನು ಕಾಪಾಡಿಕೊಳ್ಳಿ - ನಿಮಗೆ ಹಿಡಿಸದ ವ್ಯಕ್ತಿಯಿಂದ ಒಂದು ಅಂತರವನ್ನು ಕಾಪಾಡಿಕೊಳ್ಳಿ. ನಿಮ್ಮ ನಡೆ- ನುಡಿಯಿಂದ ಆತನಿಗೆ ನೀನು ನನಗೆ ಹಿಡಿಸಲಿಲ್ಲ ಎಂದು ತಿಳಿಸಿ. ಆತ ನಿಮಗೆ ಹಿಡಿಸದಿದ್ದಾಗ ಆತನೊಂದಿಗೆ ಹೆಚ್ಚು ಸ್ನೇಹದಿಂದ ವರ್ತಿಸಲು ಹೋಗಬೇಡಿ. ಯಾವುದೇ ಸಂಬಂಧ ಆತನೊಂದಿಗೆ ಇಟ್ಟುಕೊಳ್ಳಬೇಡಿ. ಏಕೆಂದರೆ ಆತನೊಂದಿಗೆ ಸ್ನೇಹಯುತವಾಗಿ ವರ್ತಿಸಿದರೆ ಆತ ಗೊಂದಲಗೊಂಡು ನಿಮ್ಮ ಮೇಲಿನ ಆಕರ್ಷಣೆಯನ್ನು ಇನ್ನೊಂದು ರೀತಿ ಅರ್ಥೈಸಿಕೊಳ್ಳಬಹುದು. ಅದಕ್ಕಾಗಿ ಆತನಿಂದ ಒಂದು ಅಂತರ ಕಾಪಾಡಿಕೊಳ್ಳಿ.
4. ಗೊಂದಲವನ್ನು ಸೃಷ್ಟಿಸಬೇಡಿ - ಪ್ರತಿ ಗಂಡಸಿಗು ಕೆಲವೊಂದು ನಿರೀಕ್ಷೆಗಳು ಇರುತ್ತವೆ. ಅದರಲ್ಲೂ ಒಂದು ಹುಡುಗಿ ಆತನ ಸಾಮಿಪ್ಯಕ್ಕೆ ಬಂದರೆ ಇದು ಇನ್ನು ಹೆಚ್ಚಾಗುತ್ತದೆ. ಆಗ ಏನಾದರು ಸಂವಹನದ ಕೊರತೆ ಮತ್ತು ಗೊಂದಲವುಂಟಾದರೆ ಆತ ಹುಡುಗಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾನೆ. ಹಾಗಾಗಿ ಯಾವುದೇ ರೀತಿಯ ಗೊಂದಲವನ್ನು ನಿಮ್ಮಿಬ್ಬರ ಮಧ್ಯೆ ಸೃಷ್ಟಿಸಿಕೊಳ್ಳಬೇಡಿ.
5. ಆತನೆ ಮುಂದುವರಿಯಲು ಬಿಡಿ - ಯಾವಾಗಲು ಅಭಿಪ್ರಾಯಗಳನ್ನು ನೀವೇ ಹೇಳಲು ಹೋಗಬೇಡಿ. ಆಗ ನಿಮ್ಮ ಅಹಂ ಆತನನ್ನು ಅವಮಾನಪಡಿಸಬಹುದು. ಅದಕ್ಕಾಗಿ ನಿಮ್ಮ ನಡೆ ನುಡಿಗಳಲ್ಲಿ ನೇರವಂತಿಕೆ ಇಟ್ಟುಕೊಳ್ಳಿ. ಆತನ ಅಭಿಪ್ರಾಯವನ್ನು ಆತ ಮೊದಲು ತಿಳಿಸಲಿ. ಆದರೆ ಅಲ್ಲಿಯವರೆಗು ಸಂಬಂಧದಲ್ಲಿ ನಿಮಗೆ ಇರುವ ನಿರಾಸಕ್ತಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆತನಿಗೆ ತಿಳಿಸಿ.
ಈ ಐದು ಅಂಶಗಳು ನಿಮ್ಮನ್ನು ಮತ್ತು ನಿಮ್ಮ ವ್ಯಕ್ತಿತ್ವವನ್ನು, ಅದಕ್ಕಿಂತ ಹೆಚ್ಚಾಗಿ ನಿಮ್ಮ ಸ್ವತಂತ್ರ್ಯವನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ. ಕೊನೆಯದಾಗಿ ಹೇಳುವುದಿಷ್ಟೇ" ದುಷ್ಟರನ್ನು ಕಂಡರೆ ದೂರವಿರು" ಎಂಬ ಗಾದೆಯಂತೆ, ನಿಮಗೆ ಆಗದವರಿಂದ ದೂರವಿರಲು ಆರಂಭಿಸಿ, ಸಮಸ್ಯೆ ತನ್ನಷ್ಟಕ್ಕೆ ತಾನೇ ಬಗೆಹರಿಯುತ್ತದೆ.



Click it and Unblock the Notifications