Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದಾಂಪತ್ಯದಲ್ಲಿ ಒಂಟಿತನ ಹೆಚ್ಚಾಗಿ ಕಾಡ್ತಿದ್ಯಾ? ಅದಕ್ಕೆ ಪರಿಹಾರವೇನು?
ಒಂಟಿತನ ಹೆಚ್ಚಿನವರನ್ನು ಕಾಡುತ್ತದೆ. ಆದರೆ ಯಾವಾಗ ನಮ್ಮ ಆಪ್ತರು ನಮ್ಮ ಜೊತೆಯಲ್ಲಿ ಇರುತ್ತಾರೋ ಆಗ ನಮಗೆ ಒಂಟಿತನ ಕಾಡೋದಿಲ್ಲ. ಅದು ನಮ್ಮ ಸ್ನೇಹಿತರಿರಬಹುದು, ಸಂಗಾತಿಯಾಗಿರಬಹುದು ಅಥವಾ ಬೇರ್ಯಾರೇ ಇರಬಹುದು. ಕೆಲವೊಂದು ಸಲ ಮದುವೆಯಾದ ನಂತರವೂ ನಮಗೆ ಒಂಟಿತನ ಹೆಚ್ಚಾಗಿ ಕಾಡೋದಕ್ಕೆ ಶುರುವಾಗುತ್ತದೆ. ನಮ್ಮ ಹಾಗೂ ಸಂಗಾತಿಯ ಸಂಬಂಧ ಯಾವಾಗ ಚೆನ್ನಾಗಿರೋದಿಲ್ಲವೋ ಆಗ ನಮಗೆ ಒಂಟಿತನ ಕಾಡೋದಕ್ಕೆ ಶುರುವಾಗುತ್ತದೆ. ಅಷ್ಟಕ್ಕು ಸಂಬಂಧದಲ್ಲಿ ಒಂಟಿತನ ಕಾಡೋದಕ್ಕೆ ಕಾರಣಗಳು ಏನು ಅನ್ನೋದನ್ನು ತಿಳಿಯೋಣ.
1. ಸಂಗಾತಿಯನ್ನು ಹೆದರಿಸೋದು, ದಬ್ಬಾಳಿಕೆ ನಡೆಸೋದು
ಕೆಲವೊಂದು ದಾಂಪತ್ಯದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಯಾಕಂದ್ರೆ ಗಂಡ/ಹೆಂಡತಿ ಇಬ್ಬರಲ್ಲಿ ಒಬ್ಬರು ದಬ್ಬಾಳಿಕೆಯನ್ನು ಮಾಡುತ್ತಿರುತ್ತಾರೆ. ತಮ್ಮ ಸಂಗಾತಿಯನ್ನು ದಿನಾಲೂ ಬೈಯೋದು, ಹೊಡೆಯೋದು ಜೊತೆಗೆ ಅವರನ್ನು ಹೆದರಿಕೆಯಲ್ಲೇ ಬದುಕುವಂತೆ ಮಾಡಿರುತ್ತಾರೆ. ಇಂತಹ ಸಂಬಂಧದಲ್ಲಿ ಸಂವಹನ ಇರೋದಿಲ್ಲ. ಇಬ್ಬರಲ್ಲಿ ಒಬ್ಬರಿಗೆ ಒಂಟಿತನ ಕಾಡುತ್ತದೆ.

2. ಸಮಯ ಇಲ್ಲದಿರೋದು
ಇತ್ತೀಚಿನ ದಿನಗಳಲ್ಲಿ ಗಂಡ- ಹೆಂಡತಿ ದುಡಿಯೋದಕ್ಕೆ ಹೊರಗಡೆ ಹೋಗೋದ್ರಿಂದ ಇಬ್ಬರಿಗೂ ಒಟ್ಟಿಗೆ ಸಮಯ ಕಳೆಯೋದಕ್ಕೆ ಸರಿಯಾದ ಸಮಯ ಸಿಕ್ಕಿರೋದಿಲ್ಲ. ಪತಿ ಹಾಗೂ ಪತ್ನಿ ಇಬ್ಬರೂ ಬ್ಯುಸಿಯಾಗಿ ಇರೋದ್ರಿಂದ ಒಬ್ಬರ ಮುಖ ಇನ್ನೊಬ್ಬರು ನೋಡೋದೇ ಕಷ್ಟ ಎಂಬಂತಾಗಿರುತ್ತದೆ. ಇನ್ನೂ ದಾಂಪತ್ಯ ಸುಖ ಅನುಭವಿಸೋದು ಯಾವಾಗ? ಹೀಗಾಗಿ ಇತ್ತೀಚಿನ ಕಾಲದಲ್ಲಿ ಹೆಚ್ಚಿನ ವಿಚ್ಛೇಧನ ಪ್ರಕರಣ ದಾಖಲಾಗ್ತಿರೋದು.
3. ಭಾವನಾತ್ಮಕ ಬೆಂಬಲ ಇಲ್ಲದಿರೋದು
ಮನುಷ್ಯರು ಯಂತ್ರಗಳಂತಲ್ಲ. ಮನುಷ್ಯರಿಗೆ ಭಾವನಾತ್ಮಕ ಬೆಂಬಲ ಮುಖ್ಯವಾಗಿ ಬೇಕಾಗಿರುತ್ತದೆ. ಮದುವೆಯಾಗಿದ್ದಾಗ ಸಂಗಾತಿಯಿಂದ ಖಂಡಿತ ನಾವು ಅದನ್ನು ಬಯಸುತ್ತೇವೆ. ಆದರೆ ನಿಮ್ಮ ಸಂಗಾತಿಯು ಇದಕ್ಕೆಲ್ಲಾ ಬೆಲೆ ಕೊಡದಿದ್ದರೆ, ನಿಮಗೆ ಹುಷಾರಿಲ್ಲದಾಗ ನಿಮ್ಮ ಕಾಳಜಿ ಮಾಡದಿದ್ದರೆ, ನಿಮಗೆ ಭಾವನಾತ್ಮಕವಾಗಿ ಬೆಂಬಲ ನೀಡದಿದ್ದರೆ ಖಂಡಿತ ನಿಮಗೆ ಒಂಟಿತನ ಕಾಡದೇ ಇರೋದಿಲ್ಲ.
4. ದೈಹಿಕ ಸಂಪರ್ಕ ಉತ್ತಮವಾಗಿ ಇಲ್ಲದಿರುವಾಗ
ಗಂಡ- ಹೆಂಡತಿಯ ಮಧ್ಯೆ ಪ್ರೀತಿ ಎಷ್ಟು ಮುಖ್ಯವೋ, ದೈಹಿಕ ಸಂಪರ್ಕ ಕೂಡ ಅಷ್ಟೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಸಂಬಂಧಗಳು ಹೆಸರಿಗಷ್ಟೇ ಎಂಬಂತೆ ಇರುತ್ತದೆ. ದಂಪತಿಗಳಲ್ಲಿ ಒಬ್ಬರಲ್ಲಿ ಒಬ್ಬರಿಗೆ ಆಸಕ್ತಿ ಇಲ್ಲದಿದ್ದರೂ ಕೂಡ ದೈಹಿಕ ಸಂಬಂಧ ಉತ್ತಮವಾಗಿರೋದಕ್ಕೆ ಸಾಧ್ಯವೇ ಇಲ್ಲ. ಇದು ಕೂಡ ಒಂದು ರೀತಿಯ ಒಂಟಿತನ ಅಂದ್ರೆ ತಪ್ಪಾಗೋದಿಲ್ಲ.
5. ಒಟ್ಟಿಗೆ ಸಮಯ ಕಳೆಯೋದಕ್ಕೆ ಸಾಧ್ಯವಾಗದಿದ್ದಾಗ
ಗಂಡ- ಹೆಂಡತಿ, ಮಕ್ಕಳು ಮಾತ್ರ ಇದ್ದರೆ ದಂಪತಿಗಳಿಗೆ ತಮ್ಮ ವೈಯಕ್ತಿಕ ಸಮಯ ಕಳೆಯೋದಕ್ಕೆ ಅವಕಾಶ ಸಿಗುತ್ತದೆ. ಆದರೆ ತುಂಬು ಸಂಸಾರದಲ್ಲಿದ್ದರೆ ಗಂಡ- ಹೆಂಡತಿಗಾಗಿ ವೈಯಕ್ತಿಕ ಸಮಯ ಅನ್ನೋದು ಸಿಗೋದೇ ಇಲ್ಲ. ಗಂಡ ಆಫಿಸ್ ಗೆ ಹೋಗಿ ದುಡಿದು ತಂದು ಹಾಕುತ್ತಾನೆ. ಹೆಂಡತಿ ಮನೆ ಮಕ್ಕಳು ಅಂತಾ ಬ್ಯುಸಿಯಾಗಿರುತ್ತಾಳೆ. ಇಂತಹ ಸಂಬಂಧದಲ್ಲೂ ಒಂಟಿತನ ಕಾಡುತ್ತದೆ.
6. ಹಳೆಯ ಸಂಬಂಧವನ್ನು ಮರೆಯದಿದ್ದಾಗ
ಹೆಚ್ಚಿನ ಮನೆಯಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ಇರೋದಿಲ್ಲ. ಇಂತಹ ಸಂದರ್ಭದಲ್ಲಿ ಒತ್ತಾಯ ಪೂರ್ವಕವಾಗಿ ಬೇರೆ ಯಾರದ್ದೋ ಜೊತೆಯಲ್ಲಿ ಮದುವೆ ಮಾಡಿಸಿ ಬಿಡುತ್ತಾರೆ. ಆಗ ಇತ್ತ ಮದುವೆಯಾದವನ ಜೊತೆಗೆ ಬದುಕೋದಕ್ಕೆ ಇಷ್ಟವಿಲ್ಲದೇ ಅತ್ತ ಹಳೆಯ ಪ್ರೀತಿಯನ್ನು ಮರೆಯೋದಕ್ಕಾಗದೇ ಒದ್ದಾಡುತ್ತಿರುತ್ತಾರೆ. ಆಗ ಇಬ್ಬರ ಜೀವನ ಕೂಡ ಹಾಳಾಗುತ್ತದೆ. ಇಬ್ಬರು ಸುಖವಾಗಿ ಇರೋದಕ್ಕೆ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮದುವೆಯಾದ ಮೇಲೆ ಒಂಟಿತನ ಕಾಡುತ್ತದೆ.
ಒಂಟಿತನಕ್ಕೆ ಪರಿಹಾರವೇನು?
* ನೀವು ಒಂದು ವೇಳೆ ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಿದ್ರೆ ನಿಧಾನವಾಗಿ ಅವರ ಜೊತೆಗೆ ನಿಮ್ಮ ಸಂವಹನ ಹೆಚ್ಚಿಸಿ. ಅವರ ಇಷ್ಟ-ಕಷ್ಟ ಆಸಕ್ತಿ ಬಗ್ಗೆ ಅರಿತುಕೊಳ್ಳಿ
* ನಿಮ್ಮ ಮದುವೆಯ ಫೋಟೋ , ವಿಡಿಯೋಗಳನ್ನು ನೋಡುತ್ತಾ ಮದುವೆಯ ಸುಂದರ ನೆನಪನ್ನು ಮೆಲುಕು ಹಾಕಿ
* ನಿಮ್ಮ ಸಂಗಾತಿಗೆ ನಿಮ್ಮ ಸಹಾಯ ಬೇಕಿದ್ದರೆ ಅವರು ಸಹಾಯ ಕೇಳುವ ಮೊದಲೇ ಅವರಿಗೆ ಸಹಾಯ ಮಾಡಿ
* ನಿಮ್ಮ ಸಂಗಾತಿಯನ್ನು ಯಾವಾಗಲಾದರೂ ಒಮ್ಮೆ ಸಪ್ರೈಸ್ ಕೊಟ್ಟು ಡಿನ್ನರ್ ಡೇಟ್ ಗೆ ಕರೆದುಕೊಂಡು ಹೋಗಿ
* ಪ್ರತಿ ಸಾರಿ ನಿಮ್ಮದೇ ಸರಿ ಎಂದು ಅವರ ಜೊತೆಗೆ ವಾದಿಸೋದಕ್ಕೆ ಹೋಗಬೇಡಿ ಅವರ ಜಾಗದಲ್ಲಿ ನಿಂತು ಆಲೋಚಿಸಿ. ಹಾಗೂ ಅವರ ಮಾತುಗಳಿಗೂ ಬೆಲೆ ನೀಡಿ
ಒಂಟಿತನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ್ಯಾವುದು?
* ಖಿನ್ನತೆ
* ಆತ್ಮಹತ್ಯೆ
* ಆತಂಕ
* ಆತ್ಮ ಗೌರವದ ಕೊರತೆ
* ಮದ್ಯಪಾನ, ಧೂಮಪಾನ, ಡ್ರಗ್ಸ್ ವ್ಯಸನಿಯಾಗುವುದು
ಸಂಬಂಧದಲ್ಲಿ ಒಂಟಿತನದ ಸಮಸ್ಯೆ ಕಾಡುವುದು ಖಂಡಿತ ಒಳ್ಳೆಯದಲ್ಲ. ಈ ಸಮಸ್ಯೆಗಳು ನಿಮ್ಮಲ್ಲೂ ಇದ್ದರೆ ಆದಷ್ಟು ಬೇಗ ಇದಕ್ಕೊಂದು ಪರಿಹಾರ ಕಂಡುಕೊಂಡರೆ ಉತ್ತಮ. ಇಲ್ಲದಿದ್ದರೆ ಮುಂದೆ ಬಹುದೊಡ್ಡ ಸಮಸ್ಯೆಯಾಗಬಹುದು.



Click it and Unblock the Notifications
