Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಈ ರೀತಿ ಮಾಡಿದ್ರೆ ಬ್ರೇಕ್ ಆಗಿ ಬಿಟ್ಟು ಹೋದ ಗೆಳತಿ ವಾಪಾಸ್ಸ್ ಬರ್ತಾಳೆ!
ಕೆಲವೊಂದು ಸಾರಿ ನಾವು ಎಷ್ಟು ಬೇಗ ಪ್ರೀತಿಯಲ್ಲಿ ಬೀಳುತ್ತೆವೆಯೋ ಅಷ್ಟೇ ಬೇಗ ಬ್ರೇಕ್ ಅಪ್ ಆಗುತ್ತೆ. ಇಲ್ಲಿ ತಪ್ಪು-ಸರಿಗಳ ಲೆಕ್ಕಾಚಾರ ಹಾಕೋದಿಕ್ಕೆ ಆಗೋದಿಲ್ಲ. ನಾವು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದವರು ನಮ್ಮನ್ನು ಬಿಟ್ಟು ಹೋದಾಗ ಆಗೋ ನೋವನ್ನು ವಿವರಿಸೋದಕ್ಕೆ ಸಾಧ್ಯವಿಲ್ಲ.
ಕೆಲವೊಂದು ಸಲ ಬಿಟ್ಟು ಹೋದವರನ್ನು ಸುಲಭವಾಗಿ ಮರೆತು ಬಿಡುತ್ತೇವೆ. ಇನ್ನೂ ಕೆಲವು ಸಲ ಎಷ್ಟೇ ವರ್ಷಗಳಾದರೂ ಅವರನ್ನು ಮರೆಯೋದಕ್ಕೆ ಆಗೋದಿಲ್ಲ. ಅಷ್ಟಕ್ಕು ಪ್ರೀತಿಯೇ ಬೇಡ ಎಮದು ಬಿಟ್ಟು ಹೋದ ಗೆಳತಿಯನ್ನು ಮತ್ತೆ ಸೇರೋದು ಹೇಗೆ? ಇಲ್ಲಿದೆ ಟಿಪ್ಸ್

1. ನಾನು ಬದಲಾಗುತ್ತೇನೆ ಎಂದು ಹೇಳಿ
ನಿಮ್ಮ ಕೆಲವೊಂದು ಗುಣಗಳು ಇಷ್ಟ ಆಗದೇ ಇದ್ದಾಗ ನಿಮ್ಮ ಗೆಳತಿ ನಿಮ್ಮನ್ನು ಬಿಟ್ಟು ಹೋಗೋದು ಸಹಜ. ಮತ್ತೆ ನಿಮಗೆ ಅವರೇ ಬೇಕು ಅಂತ ಅನ್ನಿಸಿದರೆ ಖಂಡಿತ ಅವರಿಗಾಗಿ ನೀವು ಬದಲಾಗಲೇಬೇಕು. ಅವರಿಗೆ ಇಷ್ಟ ಆಗದೇ ಇರೋ ನಿಮ್ಮ ಗುಣ-ನಡತೆಗಳನ್ನು ಮೊದಲು ಬದಲಾಯಿಸಿಕೊಳ್ಳಿ. ಅವರಿಗಾಗಿ ಬದಲಾಗಿದ್ದೀರಿ ಎಂದು ಹೇಳಿ. ಖಂಡಿತ ಅವರು ನಿಮ್ಮ ಜೊತೆಗೆ ಮತ್ತೆ ಒಂದಾಗುತ್ತಾರೆ.
2. ತಪ್ಪಾಯ್ತು ಎಂದು ಹೇಳಿ
ಈ ಜಗತ್ತಿನಲ್ಲಿ ಪರಿಪೂರ್ಣರು ಎಂದು ಯಾರೂ ಇಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ತಪ್ಪು ಮಾಡಿರುತ್ತಾರೆ. ಹಾಗೆಯೇ ನಿಮ್ಮಿಂದಲೂ ತಪ್ಪಾಗಿದೆ. ಆದರೆ ಆ ಸಮಯದಲ್ಲಿ ನಿಮ್ಮ ಅಹಂ ಅನ್ನು ನೀವು ಬಿಟ್ಟು ಕೊಡದೇ ಇದ್ದಿದ್ರಿಂದ ನಿಮ್ಮ ಗೆಳತಿ ನಿಮ್ಮನ್ನು ಬಿಟ್ಟು ಹೋಗಿರಬಹುದು. ಈಗಲಾದರೂ ನಿಮ್ಮ ಅಹಂ ಅನ್ನು ತೊರೆದು ಗೆಳತಿಯ ಬಳಿ ತಪ್ಪಾಯ್ತು ಎಂದು ಕ್ಷಮೆ ಕೇಳಿ ಮತ್ತೆ ಅವರ ಜೊತೆಗೆ ಒಂದಾಗಿ.
3. ನಿನ್ನ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಹೇಳಿ
ಪ್ರೀತಿಸಿದ ಮೇಲೆ ಇಬ್ಬರೂ ಕೂಡ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸಬೇಕು. ನಿಮ್ಮಿಂದ ನಿಮ್ಮ ಗೆಳತಿಗೆ ನೋವಾಗಿ ಇರಬಹುದು. ನೀವು ಬೇರೆ ಹುಡುಗಿಯರ ಜೊತೆಗೆ ಹೆಚ್ಚು ಹೊತ್ತು ಕಾಲ ಕಳೆಯೋದು ಅವರಿಗೆ ಇಷ್ಟ ಆಗದೇ ಇರಬಹುದು. ಅವರೇ ನಿಮ್ಮ ಮೊದಲ ಪ್ರಾಮುಖ್ಯತೆ ಆಗಿರಬೇಕು ಅಂತ ಅವರು ಬಯಸಿರುತ್ತಾರೆ. ಅವರ ಇಷ್ಟ-ಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಅವರನ್ನು ಗೌರವಿಸುತ್ತೇನೆ ಎಂದು ಹೇಳಿ.
4. ಸ್ವತಂತ್ರ ಕೊಡೋದಾಗಿ ಹೇಳಿ
ಗೆಳತಿಯನ್ನು ನೀವು ಪ್ರತಿಯೊಂದು ವಿಚಾರಕ್ಕೆ ಕಟ್ಟಿ ಹಾಕಬಾರದು. ಅವರ ಆಯ್ಕೆಗಳಿಗೂ ಅವಕಾಶ ಕೊಡಬೇಕು. ಕೆಲವೊಂದು ವಿಚಾರದಲ್ಲಿ ಅವರಿಗೆ ಸ್ವತಂತ್ರ ಕೊಡಬೇಕು. ಎಲ್ಲದಕ್ಕೂ ನಿರ್ಬಂಧ ವಿಧಿಸೋದು ಸರಿಯಲ್ಲ. ಇದೇ ಕಾರಣಕ್ಕೆ ನಿಮ್ಮ ಗೆಳತಿ ನಿಮ್ಮನ್ನು ಬಿಟ್ಟು ಹೋಗಿರುತ್ತಾರೆ. ಅವರ ಬಳಿ ಮಾತನಾಡಿ ನಿನ್ನ ಸ್ವತಂತ್ರಕ್ಕೆ ಅಡ್ಡಿ ಬರೋದಿಲ್ಲ ಎಂದು ಹೇಳಿ. ಆಕೆಗೆ ಇಷ್ಟ ಬಂದದ್ದನ್ನು ಮಾಡಲು ಅವಕಾಶ ನೀಡೋದಾಗಿ ಹೇಳಿ. ಖಂಡಿತ ಆಕೆ ನಿಮ್ಮೊಂದಿಗೆ ಮತ್ತೆ ಒಂದಾಗುತ್ತಾಳೆ.
5. ನಿನ್ನನ್ನು ಬಿಟ್ಟಿರೋದಕ್ಕೆ ಆಗೋದಿಲ್ಲ ಎಂದು ಹೇಳಿ
ನಮ್ಮ ಪ್ರೀತಿ ನಿಜವೇ ಆಗಿದ್ದರೆ ಪ್ರೀತಿಸಿದವರು ನಮ್ಮನ್ನು ಬಿಟ್ಟು ಹೋದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ನಮಗೆ ಇರೋದಿಲ್ಲ. ಪ್ರತಿ ದಿನ, ಪ್ರತಿ ಕ್ಷಣ ಅವರ ನೆನಪಿನಲ್ಲೇ ಕಳೆಯುತ್ತೇವೆ. ಮತ್ತೆ ಅವರು ಬೇಕು ಅಂತ ಅನ್ನಿಸುತ್ತದೆ. ಹೀಗಿದ್ದಾಗ ಮತ್ತೆ ನಿಮ್ಮ ಗೆಳತಿಯ ಬಳಿ ಹೋಗಿ ನಿಮ್ಮ ಪ್ರೀತಿ ಎಷ್ಟು ಆಳವಾಗಿದೆ ಅನ್ನೋದನ್ನು ಆಕೆಗೆ ಮನವರಿಕೆ ಮಾಡಿಸಿ. ನಿನ್ನನ್ನು ಬಿಟ್ಟಿರೋದಕ್ಕೆ ಆಗೋದಿಲ್ಲ ಎಂದು ಹೇಳಿ. ಆಕೆಯ ಪ್ರೀತಿ ನಿಜವಾಗಿದ್ದರೆ ಖಂಡಿತ ವಾಪಾಸ್ಸ್ ಬರುತ್ತಾಳೆ.
6. ಸುಂದರ ನೆನಪುಗಳನ್ನು ಮತ್ತೆ ನೆನಪಿಸಿ
ಪ್ರೀತಿಸುತ್ತಿದ್ದಾಗ ನೀವಿಬ್ಬರೂ ಒಟ್ಟಿಗೆ ಕಳೆದ ಅದೆಷ್ಟೋ ಸುಂದರ ನೆನಪುಗಳು ಇರಬಹುದು. ನಿಮ್ಮ ಹುಡುಗಿ ನಿಮ್ಮನ್ನು ಬಿಟ್ಟು ಹೋದ ನಂತರ ಆ ನೆನಪುಗಳೆಲ್ಲಾ ನಿಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿರುತ್ತದೆ. ಪ್ರೀತಿಸಿದ ಹುಡುಗಿಯನ್ನು ಮತ್ತೆ ಪಡೆಯಬೇಕು ಅಂತ ಅನ್ನಿಸುತ್ತೆ. ಅವರ ಬಳಿ ಹೋಗಿ ಈ ಸುಂದರ ನೆನಪುಗಳನ್ನು ಮತ್ತೆ ಅವರ ಮುಂದೆ ಬಿಚ್ಚಿಡಿ. ಅವರು ಈಗಲೂ ನಿಮ್ಮನ್ನು ಪ್ರೀತಿಸುತ್ತಿದ್ದರೆ ಮತ್ತೆ ಒಂದಾಗಲು ಮನಸ್ಸು ಮಾಡುತ್ತಾರೆ.
ಪ್ರೀತಿ ಅಂದ್ರೇನೇ ಹಾಗೆ ಅಷ್ಟು ಸುಲಭವಾಗಿ ಅದು ಸತ್ತು ಹೋಗೋದಿಲ್ಲ. ನಿಮ್ಮ ಪ್ರೀತಿ ನಿಜವೇ ಆಗಿದ್ರೆ ಖಂಡಿತ ನೀವು ಒಂದಲ್ಲ ಒಂದು ದಿನ ಮತ್ತೆ ಆ ಪ್ರೀತಿಯನ್ನು ಸೇರುತ್ತೀರಿ.



Click it and Unblock the Notifications

