Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಹೌದು ನಾನು ಕೆಟ್ಟವನೇ ಏನೀಗ? ಈ ಸ್ವಭಾವ ನಮ್ಮಲ್ಲಿ ಬಂದಿದ್ದೇ ಆದರೆ ಕಷ್ಟ ತಪ್ಪಿದ್ದಲ್ಲ
ನಟ ದರ್ಶನ್ ನಿಜ ಜೀವನದಲ್ಲಿ ಕೊಲೆ ಆರೋಪ ಹೊತ್ತು ಜೈಲ್‌ನಲ್ಲಿ ತನಿಖೆಯನ್ನು ಎದುರಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ದರ್ಶನ್‌ರವರ ಹಳೆಯ ಇಂಟರ್‌ವ್ಯೂಗಳು ಮತ್ತೆ ವೈರಲ್ ಆಗುತ್ತಿದೆ ಒಂದು ಇಂಟರ್‌ವ್ಯೂ ನೋಡಿದೆ, ಅದರಲ್ಲಿ ಒಂದು ಇಂಟರ್‌ವ್ಯೂ ಗಮನ ಸೆಳೆದಿತ್ತು, ಅವರು ಅದರಲ್ಲಿ 'ಹೌದಮ್ಮಾ ನಾನು ಬ್ಯಾಡ್ ಬಾಯ್, ನಾನು ಇರುವುದೇ ಹೀಗೆ' ಎಂಬ ಮಾತು ಹೇಳುತ್ತಾರೆ.

ಮನುಷ್ಯರಲ್ಲಿ ಎಲ್ಲರೂ ಒಂದೇ ರೀತಿ ಇರಲ್ಲ ಕೆಲವರು ಒರಟು ಸ್ವಭಾವದವರು, ಕೆಲವರು ಮೃದು ಸ್ವಭಾವದವರು, ದರ್ಶನ್ ಅವರದ್ದು ಕೆಲವೊಮ್ಮೆ ಸ್ವಲ್ಪ ಒರಟು ಸ್ವಭಾವ ಹಾಗಾಗಿ ಅವರು ಆಗಾಗ ತಮ್ಮ ಒರಟು ಗುಣ, ಮಾತಿನ ಧಾಟಿಯಿಂದ ಗಮನ ಸೆಳೆಯುತ್ತಿದ್ದರು, ಇದನ್ನು ನೋಡಿದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಉದಾಹರಣೆಗೆ ಇವತ್ತು ಇವಳು, ನಾಳೆ ಅವಳು ಎಂಬಂಥ ಮಾತುಗಳು, ದೇವರು ಲಕ್ಷ್ಮಿ ಬಗ್ಗೆ ದರ್ಶನ್ ನುಡಿದ ಮಾತುಗಳು , ಪ್ರೊಡ್ಯೂಸರ್‌ಗೆ ಬಳಸಿದ ಪದ ಇವೆಲ್ಲಾ ತುಂಬಾನೇ ಚರ್ಚೆಗೆ ಕಾರಣವಾಗಿತ್ತು,
ಈ ರೀತಿಯಾದಾಗ ದರ್ಶನ್‌ಗೆ ಬ್ಯಾಡ್ ಬಾಯ್ ಇಮೇಜ್ ತಂದುಕೊಡ್ತು, ಆದರೆ ದರ್ಶನ್ ಅವರು ಅಂಥ ಇಮೇಜ್ ಅನ್ನು ಸ್ವೀಕರಿಸಿದರು, ಹೌದು ನಾನು ಇರುವುದೇ ಹೀಗೆ ನಿಮಗೇನು ಎಂಬ ವರ್ತನೆ ಅವರಲ್ಲಿ ಇತ್ತು, ಇಂಥ ಒಂದು ವರ್ತನೆಯೇ ಅವರನ್ನು ಇಂದು ಸಂಕಷ್ಟಕ್ಕೆ ತಂದು ನಿಲ್ಲಿಸಿದೆ.
ನಾನು ಇರುವುದೇ ಹೀಗೆ ಎಂಬ ವರ್ತನೆ ತಪ್ಪಲ್ಲ, ಆದರೆ ತಿದ್ದಿಕೊಳ್ಳುವ ವಿಷಯದಲ್ಲಿ ತಿದ್ದಿಕೊಳ್ಳಬೇಕಾಗುತ್ತೆ
ಹೌದು ನಮ್ಮ ಸ್ವಭಾವವನ್ನು ಬೇರೆಯವರಿಗಾಗಿ ಬದಲಾಯಿಸಬೇಕಾಗಿಲ್ಲ, ಆದರೆ ನಾವು ಬದುಕುತ್ತಿರುವುದು ಒಂದು ಕುಟುಂಬದಲ್ಲಿ, ಒಂದು ಸಮಾಜದಲ್ಲಿ. ಕುಟುಂಬದಲ್ಲಿ ನಾವು ಹೇಗೆ ವರ್ತಿಸಬೇಕು, ಈ ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬ ಕೆಲ ಅಲಿಖಿತ ನಿಯಮಗಳಿವೆ, ಅದನ್ನು ನಾವೇ ಅರ್ಥ ಮಾಡಿಕೊಂಡು ನಡೆಯಬೇಕು. ಇಲ್ಲಾ ನಾನು ಹೀಗೆಯೇ ಎಂದು ವರ್ತಿಸಿದರೆ ಅದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುವುದು, ಸಮಾಜ ನಮ್ಮನ್ನು ಒಪ್ಪಿಕೊಳ್ಳುವುದು ಕಷ್ಟವಾಗುವುದು. ಆದ್ದರಿಂದ ನಮ್ಮದು ಒರಟು ಸ್ವಭಾವವಾದರೆ ಇರಲಿ, ಆದರೆ ನಮ್ಮಲ್ಲಿನ ಕೆಲವು ಗುಣಗಳನ್ನು ನಾವು ಬದಲಾಯಿಸಿದರೆ ನಮಗೇ ಒಳಿತಾಗುವುದು.
ನಾನು ಇರುವುದೇ ಹೀಗೆ ಎಂದು ನಮಗೆ ನಾವೇ ಬ್ರ್ಯಾಂಡ್ ಮಾಡಿದರೆ ಬೇರೆಯವರು ನಮ್ಮ ತಪ್ಪು ತಿದ್ದುವುದಕ್ಕೆ ಬರುವುದಿಲ್ಲ
ನಾನು ಇರುವುದೇ ಹೀಗೆ ನೀವೇನೂ ನನಗೆ ಹೇಳಬೇಕಾಗಿಲ್ಲ, ನಾನು ಏನು ಮಾಡಬೇಕೋ ಅದು ನನಗೆ ಗೊತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಬಂತೆಂದರೆ ಮತ್ಯಾರು ನಿಮಗೆ ಸರಿ ತಪ್ಪುಗಳ ಪಾಠ ಹೇಳಲ್ಲ, ಅಲ್ಲದೆ ನಮಗೆ ಸ್ವಲ್ಪ ಹಣ ಬಲ, ಹೆಸರು ಇದ್ದರೆ ನಮ್ಮ ಸುತ್ತ ನೀನೇ ಸರಿ ಎಂದು ಹುರಿದುಂಬಿಸಿ ನಮ್ಮನ್ನು ಬಾವಿಗೆ ದೂಡುವವರೇ ಸೇರಿಕೊಂಡಿರುತ್ತಾರೆ. ಆದ್ದರಿಂದ ನಾನು ಸರಿ ಎಂಬ ಆಲೋಚನೆ ಒಳ್ಳೆಯದು, ಆದರೆ ನಾನೇ ಸರಿ ಎಂಬ ಕಲ್ಪನೆ ಇದೆಯೆಲ್ಲಾ ಅದು ಖಂಡಿತ ತಪ್ಪು.
ಬರೀ ಹೊಗಳುವವರನ್ನು ಮಾತ್ರ ನಂಬಬಾರದು
ಹೌದು ನಮ್ಮ ಸುತ್ತ ಬರೀ ಹೊಗಳುವವರನ್ನು ಮಾತ್ರ ನಂಬಬಾರದು, ನಾವು ತಪ್ಪು ಮಾಡಿದಾಗ ನೀನು ತಪ್ಪು ದಾರಿಯಲ್ಲಿ ಹೋಗುತ್ತಿದ್ದೀಯಾ ಎಂದು ಹೇಳಿದಾಗ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಅವರು ನನ್ನ ಬಗ್ಗೆ ಬೊಟ್ಟು ತೋರಿಸುತ್ತಿದ್ದಾರೆ ಎಂದು ಅವರನ್ನು ದೂರುವ ಪ್ರಯತ್ನ ಮಾಡಬಾರದು. ಇತರರ ಮಾತನ್ನು ಕಿವಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಬೇಕು. ಒಬ್ಬರು ಹೇಳಿದರೆ ನಮ್ಮ ಬಗ್ಗೆ ಹೊಟ್ಟೆಕಿಚ್ಚು ಆದರೆ ನಮ್ಮ ಕುಟುಂಬದವರು ಹೇಳುವಾಗ ನನ್ನಿಂದ ಏನಾದರೂ ತಪ್ಪಾಗುತ್ತಿದೆ ಎಂದು ಅವಲೋಕಿಸಿದರೆ ಬದುಕು ತುಂಬಾ ಚೆನ್ನಾಗಿರುತ್ತದೆ.
ಇಲ್ಲಾ ನಾನು ಮಾಡಿದ್ದೇ ಸರಿ ಎನ್ನುವವರ ಬದುಕಿನಲ್ಲಿ ನೆಮ್ಮದಿ ಇರಲ್ಲ
ನೀವು ನಿಮ್ಮ ಸುತ್ತ ಮುತ್ತ ಯಾರನ್ನೂ ಬೇಕಾದರೂ ಉದಾಹರಣೆಯಾಗಿ ತೆಗೆದುಕೊಳ್ಳಿ ಅವರು ಯಾರ ಮಾತೂ ಕೇಳಲ್ಲ, ನಾನೇ ಸರಿ ಎಂಬ ಧೋರಣೆಯಲ್ಲಿದ್ದರೆ ಅವರು ಹಲವು ಸಮಸ್ಯೆಗಳ ನಡುವೆ ಬಾಳುತ್ತಿರುತ್ತಾರೆ.



Click it and Unblock the Notifications