Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ನಿಮ್ಮ ಸಂಬಂಧವು ಈ ಹಂತ ತಲುಪಿದ್ದರೆ ಬೇರೆಯಾಗುವುದೇ ಉತ್ತಮ
ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನ್ನೋದು ಬಹುದೊಡ್ಡ ಘಟ್ಟ, ಅದು ಕೊನೆಯವರೆಗೂ ಜೊತೆಯಾಗಿ ಸುಖ, ಸಂತೋಷದಿಂದ ಉಳಿಗಬೇಕು ಅನ್ನೋದು ಎಲ್ಲರ ಬಯಕೆಯಾಗಿರುತ್ತೆ. ಹೀಗಾಗಿ ಮದುವೆ ತಯಾರಿ, ಆಚರಣೆಯೂ ಹಾಗೆಯೇ ಇರುತ್ತೆ. ಆದ್ರೆ ಇತ್ತೀಚಿಗೆ ಮದುವೆ ಅನ್ನೋದು ಎಷ್ಟು ಬೇಗ ನಿಶ್ಚಯವಾಗುತ್ತೋ ಅಷ್ಟೇ ವೇಗವಾಗಿ ಕೊನೆಯಾಗುತ್ತಿವೆ.
ಆಧುನಿಕ ಜಗತ್ತಿನಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಪಾಶ್ಚಿಮಾತ್ಯ ಸಂಸ್ಕೃತಿ ಎನ್ನುತ್ತಿದ್ದ ಮಂದಿಗೆ ಈಗ ವಿಚ್ಛೇದನ ಎಂಬುದು ಕಾಮನ್ ಆಗಿಬಿಟ್ಟಿದೆ. ಆದ್ರೆ ಮದುವೆಗಿಂತಲೂ ವಿಚ್ಛೇದನ ಅನ್ನೋದು ಬಹುದೊಡ್ಡ ಹೆಜ್ಜೆಯಾಗಿದೆ. ವಿಚ್ಛೇದನದ ನಂತರ, ಪತಿ ಮತ್ತು ಹೆಂಡತಿ ಇಬ್ಬರ ಹಾದಿಯು ಸುಲಭವಲ್ಲ ಮತ್ತು ನೀವು ಮಗುವನ್ನು ಹೊಂದಿದ್ದರೆ ಅದು ಹೆಚ್ಚು ಸಮಸ್ಯೆಯಾಗುತ್ತದೆ. ಆದ್ದರಿಂದ, ಯಾವಾಗಲೂ ಈ ಎಲ್ಲಾ ವಿಷಯಗಳನ್ನು ಪರಿಗಣಿಸಿದ ನಂತರವೇ ಪ್ರತ್ಯೇಕತೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇನ್ನು ವಿಚ್ಛೇದನಕ್ಕೆ ಇದೇ ನಿರ್ಧಿಷ್ಟ ಕಾರಣ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಇದಕ್ಕೆ ಹತ್ತಾರು ಕಾರಣಗಳಿರುತ್ತವೆ. ಅಲ್ಲದೆ ಹತ್ತಾರು ವರ್ಷಗಳಿಂದಲೂ ಈ ಚರ್ಚೆ ನಡೆಯುತ್ತಿರಬಹುದು. ಆದ್ರೆ ತಮ್ಮ ಪತಿಯಿಂದಲೋ ಅಥವಾ ಪತ್ನಿಯಿಂದಲೋ ವಿಚ್ಛೇದನ ಪಡೆಯಬೇಕು ಎಂದುಕೊಂಡವರು ಒಂದೇ ದಿನದಲ್ಲಿ ಈ ನಿರ್ಧಾರ ಮಾಡಿರುವುದಿಲ್ಲ. ಅವರ ನೂರಾರು ಹಗಲು-ರಾತ್ರಿಯ ಆಲೋಚನೆಯು ಅಂತಿಮ ನಿರ್ಧಾರಕ್ಕೆ ತಂದು ನಿಲ್ಲಿಸಿರುತ್ತದೆ.
ಯಾರ ಸಂಬಂಧದಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಆ ಸಂಬಂಧದಲ್ಲಿ ಅನುಸರಿಸಿಕೊಂಡು ಹೋಗುವುದಕ್ಕಿಂತಲೂ ವಿಚ್ಛೇದನ ಪಡೆಯುವುದೇ ವಾಸಿಯಂತೆ. ಹಾಗಾದ್ರೆ ಯಾವ ರೀತಿಯ ಸಂಬಂಧದಲ್ಲಿನ ಸಮಸ್ಯೆ ವಿಚ್ಛೇದನದಲ್ಲಿ ಕೊನೆಗೊಂಡರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಗೌರವದ ಕೊರತೆ
ನಿಮ್ಮ ಸಂಗಾತಿಯು ನಿಮ್ಮನ್ನು ಗೌರವಿಸದಿದ್ದರೆ, ಪ್ರತಿ ಸಂಭಾಷಣೆಯಲ್ಲಿಯೂ ನಿಮ್ಮನ್ನು ಚಿಕ್ಕವರಂತೆ ಕಂಡರೆ, ಸಂಬಂಧಿಕರು ಮತ್ತು ನೆರೆಹೊರೆಯವರ ಮುಂದೆಯೂ ನಿಮ್ಮನ್ನು ಅವಮಾನಿಸುವುದು. ನಿಮ್ಮನ್ನು ಕೀಳಾಗಿ ನೋಡುವುದು. ಇಲ್ಲವೆ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿ ತುಚ್ಛವಾಗಿ ಕಾಣುವುದು ಮಾಡುತ್ತಿದ್ದರೆ ಸಹಿಸಿಕೊಳ್ಳುವುದಕ್ಕಿಂತಲೂ ಇಂತಹ ಸಂಬಂಧಗಳಿಂದ ಹೊರಬರುವುದೇ ಒಳತಂತೆ.
ಮಾತುಕತೆಯೇ ಇಲ್ಲದಿರುವುದು
ಸಂಗಾತಿ ಎಂದರೆ ಅವರು ಜೀವನದ ಕೊನೆಯವರೆಗೂ ಜೊತೆಯಲ್ಲಿರಬೇಕು, ಇಬ್ಬರ ನಡುವೆಯೂ ಮಾತುಕತೆ, ಪ್ರೀತಿ ಹಂಚಿಕೊಳ್ಳುವುದು ಹೀಗೆ ಎಲ್ಲಾವನ್ನೂ ಹಂಚಿಕೊಳ್ಳುವಂತೆ ಇರಬೇಕು. ಆದ್ರೆ ಯಾವ ಸಂಬಂಧವೂ ಮಾತುಕತೆಯಿಲ್ಲದೆಯೇ ನಡೆಯುತ್ತಿರುತ್ತೆವೆಯೋ ಅಂತಹ ಸಂಬಂಧ ಮುಂದುವರೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುದು ಇಲ್ಲಿನ ಅಭಿಪ್ರಾಯವಾಗಿದೆ.
ಕಿರುಕುಳ, ಗಾಲಾಟೆ
ಎಲ್ಲರ ಮನೆಯಲ್ಲೂ ಗಲಾಟೆ, ಮನಸ್ಥಾಪ ಕಾಮನ್ ಆದರೆ ಇದೇ ಗಲಾಟೆ, ಕಿರುಕುಳ ಮುಂದುವರೆದು ದೊಡ್ಡ ದೊಡ್ಡ ಕಂದಕವೇ ಸೃಷ್ಟಿಯಾದರೆ ಆ ಸಂಬಂಧ ಕೊನೆಯಾಗುವುದು ಒಳ್ಳೆಯದಂತೆ. ಏಕೆಂದರೆ ಪ್ರತಿಯೊಂದು ಸಂಬಂಧವೂ ಅದರದ್ದೆ ಗಡಿ ಹೊಂದಿರುತ್ತೆ. ಈ ಗಡಿ ದಾಟಿಯೂ ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ ಕಾಣಿಸಿಕೊಂಡರೆ ಆ ಸಂಬಂಧ ಅಂತ್ಯವಾಗುವುದು ಉತ್ತಮ.
ಜವಾಬ್ದಾರಿ ಮರೆತ ಸಂಬಂಧ
ಮದುವೆಯಾದ ಮೇಲೆ ಜವಾಬ್ದಾರಿಗಳು ಹೆಗಲ ಮೇಲೇರಿದಾಗ ಎಲ್ಲವೂ ತಲೆಕೆಳಗಾಗುತ್ತದೆ. ಮದುವೆ ಎನ್ನುವುದು ಹೊಸ ಜೀವನ ಅಲ್ಲಿ ಒಬ್ಬರಲ್ಲ ಇಬ್ಬರು ಪಯಣಿಗರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ತಮಗೆ ಮನಸ್ಸು ಬಂದ ರೀತಿಯಲ್ಲಿ ವರ್ತನೆಯನ್ನು ತೋರಿದರೆ ದಾಂಪತ್ಯದಲ್ಲಿನ ಸಮಸ್ಯೆಗಳನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮ ಖಾಸಾಗಿ ಜೀವನವೇ ಹೋಯ್ತು, ಪ್ರೈವೆಸೀನೆ ಇಲ್ಲ, ಉಸಿರುಕಟ್ಟಿದಂತಾಗುತ್ತದೆ. ಇಂತಹ ಸಂಬಂಧದಲ್ಲಿ ಮುಂದುವರೆಯುವುದು ಮತ್ತಷ್ಟು ಹಾನಿಗೆ ಕಾರಣವಾಗಬಹುದು.
ಸ್ವಾಭಿಮಾನ ಮತ್ತು ಸ್ವಾತಂತ್ರ್ಯ
ಮದುವೆಯಾದ ಮೇಲೆ ನನ್ನ ಸ್ವಾತಂತ್ರ್ಯವನ್ನು ಕಟ್ಟಿಹಾಕಿದಂತಾಗಿದೆ, ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಕಾಡಬಹುದು. ಈಗಿನ ಕಾಲದಲ್ಲಿ ಎಲ್ಲರೂ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಹಾಗಾಗಿ ಹೆಚ್ಚಿನ ಹೆಣ್ಣುಮಕ್ಕಳು ಉದ್ಯೋಗದಲ್ಲಿ ಇದ್ದೇ ಇರುತ್ತಾರೆ. ಮದುವೆಯಾದ ನಂತರ ವೃತ್ತಿ ಮುಂದುವರಿಸಲು ಸಾಧ್ಯವಾಗದೇ ಇದ್ದಾಗ ಪಂಜರದಲ್ಲಿದ್ದಂತಹ ಭಾವನೆಯನ್ನು ಅನುಭವಿಸಬಹುದು. ಇದರ ಜೊತೆಗೆ ಒಬ್ಬರ ಸ್ವಾಭಿಮಾನಕ್ಕೆ ಹಾನಿಯಾಗುತ್ತಿದ್ದರೆ ಆ ಸಂಬಂಧಗಳು ಮುಂದುವರೆದರೆ ಎಂದೆಂದಿಗೂ ಸಮಸ್ಯೆಯಾಗಿಯೇ ಕಾಡುತ್ತದೆ.



Click it and Unblock the Notifications