Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಚಾಣಕ್ಯ ಹೇಳಿರುವ ಈ 5 ಸೂತ್ರ ಪಾಲಿಸಿದ್ದೇ ದಾಂಪತ್ಯದಲ್ಲಿ ವಿರಸ ಬರಲ್ಲ, ವಿಚ್ಛೇದನ ಆಗುವುದೇ ಇಲ್ಲ
ಈಗಂತೂ ಮದುವೆ ಅಂತ ಕೇಳುವಾಗ ಮದುವೆಯಾಗದಿರುವವರಿಗೆ ಭಯವಾಗುತ್ತಿ, ಏಕೆಂದರೆ ಸಂಸಾರದಲ್ಲಿ ಜಗಳ, ವಿಚ್ಛೇದ ಈ ಬಗೆಯ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಮೊದಲು ಇರಲಿಲ್ಲ ಅಂತಲ್ಲ, ಆದರೆ ಈಗಿನಂತೆ ಇರಲಿಲ್ಲ. ಅದರಲ್ಲಿಯೂ ಯುವ ಜನತೆ ಹೆಚ್ಚಾಗಿ ಗಮನಿಸುವುದು ಸೆಲೆಬ್ರಿಟಿಗಳನ್ನ, ಆ ಜೋಡಿಯನ್ನು ನೋಡಿ ಇಷ್ಟಪಟ್ಟಿರುತ್ತಾರೆ, ಆದರೆ ಅವರ ವಿಚ್ಛೇದನ ಇವರ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ.
ಫ್ಯಾಮಿಲಿ ಕೋರ್ಟ್‌ಗೆ ಹೋದರೆ ನೂರಾರು ಜೋಡಿಗಳು ವಿಚ್ಛೇದನಕ್ಕೆ ಅರ್ಜಿ ಹಾಕಿ ಕೋರ್ಟ್ ತೀರ್ಪಿಗೆ ಕಾಯುತ್ತಿರುತ್ತಾರೆ. ವಿಚ್ಛೇದನ ಸಂಖ್ಯೆ ಹೆಚ್ಚಾಗಲು ನೂರೆಂಟು ಕಾರಣಗಳಿರಬಹುದು, ಆದರೆ ಚಾಣಕ್ಯ ಹೇಳಿದ 5 ಸೂತ್ರ ಪಾಲಿಸಿದ ಜೋಡಿ ಮಾತ್ರ ವಿಚ್ಛೇದನ ಕೇಳಿ ಕೋರ್ಟ್ ಮೆಟ್ಟಲೇರಲ್ಲ ಎಂಬುವುದು ಕೂಡ ಅಷ್ಟೇ ಸತ್ಯ.

ಚಾಣಕ್ಯ ಮಹಾನ್ ಮೇಧಾವಿ, ಚಾಣಕ್ಯ ಹಣಕಾಸು ಬಗ್ಗೆ ಮಾತ್ರ ಹೇಳಿಲ್ಲ, ಕುಟುಂಬ ಜೀವನ, ಮದುವೆ, ಮಕ್ಕಳ ಪಾಲನೆ ಹೀಗೆ ಬದುಕಿನ ಪ್ರತಿಯೊಂದು ಸ್ತರಗಳ ಬಗ್ಗೆ ಹೇಳಿದ್ದಾರೆ, ಅಚ್ಚರಿಯೆಂದರೆ ಅವರು ಆ ಕಾಲದಲ್ಲಿ ಹೇಳಿದ್ದು ಈ ಕಾಲಕ್ಕೂ ಸೂಟ್ ಆಗುತ್ತೆ. ಚಾಣಕ್ಕೆ ಪ್ರಕಾರ ಎಂಥ ಜೋಡಿ ಆದರ್ಶ ದಾಂಪತ್ಯ ನಡೆಸುತ್ತಾರೆ ಎಂದರೆ...
ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳುವವರು:
ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾವುದಕ್ಕೂ ಪರಿಹಾರ ಆಗಲ್ಲ, ಇದರಿಂದ ಸಮಸ್ಯೆಗಳು ಹೆಚ್ಚಾಗುವುದೇ ಹೊರತು ಕಡಿಮೆಯಾಗಲ್ಲ. ಯಾವುದೇ ಸಮಸ್ಯೆಯಾಗಿರಲಿ ನಿರ್ಧಾರವನ್ನು ಬಹಳ ಆಲೋಚಿಸಿ ವಿವೇಕದಿಂದ ತೆಗೆದುಕೊಳ್ಳಬೇಕು.
ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯ ಭಾವನೆಗಳನ್ನು, ಅಭಿಪ್ರಾಯವನ್ನು ಪರಿಗಣಿಸಬೇಕು. ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು.
ನಿಯತ್ತಿನಿಂದ ಇರಬೇಕು:
ವೈವಾಹಿಕ ಜೀವನದಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ, ಆ ನಂಬಿಕೆ ಬರಲು ಸಂಗಾತಿ ಜೊತೆ ನಿಯತ್ತಿನಿಂದ ಬಾಳ್ವೆ ಮಾಡಬೇಕು. ಇತರ ಕಡೆ ಆಕರ್ಷಣೆ, ಸಂಬಂಧ ಅಂತ ಹೋಗಬಾರದು. ಸಂಗಾತಿಗೆ ಮೋಸ ಮಾಡಬಾರದು.
ಅಲ್ಲದೆ ಸಂಗಾತಿ ಬಳಿಯಿಂದ ಯಾವುದೇ ವಿಷಯವನ್ನು ಮರೆಮಾಚಬಾರದು. ನಮ್ಮ ಬಗ್ಗೆ ಎಲ್ಲಾ ಸಂಗಾತಿಗೆ ತಿಳಿದಿರಬೇಕು. ಹೀಗಿದ್ದರೆ ಸಂಸಾರದಲ್ಲಿ ಅಪನಂಬಿಕೆ ಎಂಬುವುದು ಬರಲ್ಲ, ಇಬ್ಬರ ಮೇಲೆ ನಂಬಿಕೆ ಬಲವಾಗುವುದು, ಇಬ್ಬರು ತುಂಬಾ ಚೆನ್ನಾಗಿ ಬಾಳ್ವೆ ಮಾಡುತ್ತಾರೆ.
ಬಂಗಾಳಿ ಶೈಲಿಯ ಟೊಮೆಟೊ ಗೊಜ್ಜು ತುಂಬಾನೇ ರುಚಿಯಾಗಿರುತ್ತೆ
ಗೌರವ ತುಂಬಾ ಮುಖ್ಯ:
ಗಂಡನಿಗೆ ಹೆಂಡತಿ ಮೇಲೆ ಗೌರವ ಇರಬೇಕು, ಹೆಂಡತಿಗೆ ಗಂಡನ ಮೇಲೆ ಗೌರವ ಇರಬೇಕು, ನಾನು ಎಂಬ ಅಹಂ ಇರಲೇಬಾರದು, ಪರಸ್ಪರ ಗೌರವದಿಂದ ಕಾಣುತ್ತಿರುವುದರಿಂದ ಅವರ ಸಂಬಂಧ ಮತ್ತಷ್ಟು ಬಲವಾಗುವುದು. ಅಲ್ಲದೆ ಯಾರು ಸಂಗಾತಿಯನ್ನು ಗೌರವಿಸುತ್ತಾರೋ ಅವರ ಬಳಿ ಸಂಗಾತಿಯ ಬಗ್ಗೆ ಬಂದಿ ಚಾಡಿ ಮಾತುಗಳನ್ನು ಹೇಳಲು ಮೂರನೇಯ ವ್ಯಕ್ತಿಗಳು ಭಯ ಪಡುತ್ತಾರೆ. ನಮ್ಮ ಪಿತೂರಿ ಅವರ ಸಂಸಾರ ಏನೂ ಮಾಡುವುದಿಲ್ಲ ಎಂದು ಗೊತ್ತಿರುತ್ತದೆ. ಅದೇ ನಮಗೇ ನಮ್ಮ ಸಂಗಾತಿ ಮೇಲೆ ಅಪನಂಬಿಕೆಯಿದ್ದರೆ ಸಂಗಾತಿಯನ್ನು ದೂರುವವರು ಅಧಿಕವಿರುತ್ತಾರೆ.
ಸಂಗಾತಿ ಭೂತಕಾಲ ಗೊತ್ತಿದ್ದರೆ ಒಳ್ಳೆಯದು:
ಮದುವೆಯಾಗುವ ಮೊದಲೇ ಮದುವೆಯಾಗಲಿರುವ ವ್ಯಕ್ತಿ ಕುರಿತು ಚೆನ್ನಾಗಿ ವಿಚಾರ ಮಾಡಬೇಕು. ಅವರು ನಿಮಗೆ ಹೊಂದಿಕೊಳ್ಳುತ್ತಾರಾ? ಬೇರೆ ಪ್ರೀತಿ-ಪ್ರೇಮ ಎಂದಲ್ಲಾ ಇತ್ತೇ? ಈ ವಿಚಾರ ತಿಳಿದುಕೊಳ್ಳಬೇಕು, ಒಂದು ವೇಳೆ ಆ ರೀತಿಯಿದ್ದರೆ ನಿಮ್ಮ ನಿರ್ಧಾರ ಚೆನ್ನಾಗಿ ಆಲೋಚಿಸಿಕೊಳ್ಳಬೇಕು. ಅವರ ಭೂತಕಾಲ ನಿಮ್ಮ ಭವಿಷ್ಯವನ್ನು ಹಾಳು ಮಾಡಬಾರದು, ಹಾಗಾಗಿ ಚೆನ್ನಾಗಿ ವಿಚಾರಿಸಿ ಮದುವೆ ಮಾಡಿಕೊಳ್ಳಬೇಕು.
ಧಾರ್ಮಿಕ ವ್ಯಕ್ತಿಯಾಗಿರಬೇಕು:
ಆಕೆ/ ಆತ ಧರ್ಮವನ್ನು ಪಾಲಿಸುವವರು ಆಗಿರಬೇಕು, ಒಂದು ಒಳ್ಳೆಯ ಸಂಸ್ಕಾರ ಕಾಣಬೇಕೆಂದರೆ ಅವರು ಧರ್ಮವನ್ನು ಪಾಲಿಸುವವರು ಆಗಿರಬೇಕು. ಇಂಥವರಿಗೆ ಒಳಿತು-ಕೆಡಕುಗಳ ಬಗ್ಗೆ ಅರಿವು ಇರುತ್ತದೆ.



Click it and Unblock the Notifications