ನಿಮ್ಮ ಬದುಕಿನಲ್ಲಿ ಮೂರನೇಯ ವ್ಯಕ್ತಿಯ ಹಸ್ತಕ್ಷೇಪ ತಡೆಯುವುದು ಹೇಗೆ?

ಎಷ್ಟೋ ಸಂಸಾರದಲ್ಲಿ ದೊಡ್ಡ ಸಮಸ್ಯೆಯಾಗುವುದೇ ಮೂರನೇಯವರು ಹಸ್ತಕ್ಷೇಪ ಮಾಡಿದಾಗ. ಈ ಮೂರನೆಯವರು ಯಾರು ಬೇಕಾದರೂ ಆಗಬಹುದು, ಮನೆಯವರು ಆಗಬಹುದು ಅಥವಾ ಹೊರಗಿನವರು ಆಗಿರಬಹುದು. ಗಂಡ-ಹೆಂಡತಿ ಮಧ್ಯ ಯಾರೇ ಬರಲಿ ಕುಟುಂಬದಲ್ಲಿ ಸಮಸ್ಯೆ ಉಂಟು ಮಾಡುವುದು ಗ್ಯಾರಂಟಿ.

relationship tips

ಕೆಲವೊಂದು ವ್ಯಕ್ತಿಯನ್ನು ನೀವು ಕಟ್ಟುನಿಟ್ಟಾಗಿ ಹೇಳುವ ಮೂಲಕ ದೂರವಿಡಬಹುದು. ಆದರೆ ಕೆಲವರು ಬಿಸಿ ತುಪ್ಪ ಇದ್ದ ಹಾಗೆ ನುಂಗಲು ಸಾಧ್ಯವಾಗಲ್ಲ, ಉಗುಳಲು ಸಾಧ್ಯವಾಗುತ್ತಿಲ್ಲ. ನಿಮ್ಮ ಬದುಕಿನಲ್ಲೂ ಇಂಥವರು ಇದ್ದಾರೆಯೇ?

ನಿಮ್ಮ ಬದುಕಿನಲ್ಲಿ ಮೂರನೇಯವರು ಹಸ್ತಕ್ಷೇಪ ಮಾಡಲು ಕಾರಣವೇನು, ಬಂದರೆ ಏನಾಗುತ್ತದೆ, ಅವರನ್ನು ದೂರವಿಡುವುದು ಹೇಗೆ ಎಂದು ನೋಡೋಣ:

ಮೂರನೇಯ ವ್ಯಕ್ತಿ ನಿಮ್ಮ ಬದುಕು ನಿರ್ಧರಿಸಿಲು ನೀವೇ ಕಾರಣ!
* ನಿಮ್ಮಿಬ್ಬರ ನಡುವೆ ಪರಸ್ಪರ ನಂಬಿಕೆ ಇಲ್ಲದಿದ್ದಾಗ
* ಒಬ್ಬರನ್ನೊಬ್ಬರು ಸದಾ ದ್ವೇಷಿಸುತ್ತಿದ್ದರೆ
* ಅನೈತಿಕ ಸಂಬಂಧವಿದ್ದು ಬೇರೆ ವ್ಯಕ್ತಿಗಳು ಬಂದು ನಿಮ್ಮ ಸಂಬಂಧ ಸರಿಪಡಿಸಬೇಕಾದಾಗ
ಈ ರೀತಿಯಲ್ಲಾ ನಿಮ್ಮ ಸಂಸಾರವಿದ್ದಾಗ ಎಲ್ಲರೂ ಸಲಹೆ ಕೊಡಲು ಬರುತ್ತಾರೆ.

ಮೂರನೇಯ ವ್ಯಕ್ತಿಗಳು ಸಹಾಯಕ್ಕೆ ಅಂತ ಬಂದಾಗ ಸಮಸ್ಯೆ ಹೆಚ್ಚುವುದು
ನಿಮ್ಮ ದಾಂಪತ್ಯದ ಸಮಸ್ಯೆಗಳನ್ನು ಬೇರೆಯವರು ಸರಿಪಡಿಸುತ್ತೇನೆ ಎಂದು ಬಂದಾಗ ಒಂದೋ ಗಂಡ ಕಡೆಯವರು ಆಗಿರುತ್ತಾರೆ ಇಲ್ಲಾ ಹೆಂಡತಿ ಕಡೆಯವರು ಆಗಿರುತ್ತಾರೆ. ಅವರು ಎಷ್ಟಾದರೂ ಏಕಪಕ್ಷ ತೀರ್ಮಾನವನ್ನೇ ನೀಡುವುದು. ಇದರಿಂದ ಸಮಸ್ಯೆ ಕಡಿಮೆಯಾಗುವ ಬದಲಿಗೆ ಮತ್ತಷ್ಟು ಹೆಚ್ಚಾಗುವುದು.

ನಿಮ್ಮಿಬ್ಬರ ಜಗಳ ಕೆಲವರಿಗೆ ಲಾಭವಾಗಲೂಬಹುದು
ಕೆಲವೊಮ್ಮೆ ನಿಮ್ಮಿಬ್ಬರ ಜಗಳ ಬೇರೆ ವ್ಯಕ್ತಿಗಳಿಗೆ ಲಾಭವಾಗುತ್ತಿರಬಹುದು. ಆದ್ದರಿಂದ ಅವರು ನಿಮಗೇನೋ ಚಾಡಿ ಹೇಳುವುದು, ಇದರಿಂದ ನಿಮ್ಮ ಹಾಗೂ ಸಂಗಾತಿ ನಡುವೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು, ಆದ್ದರಿಂದ ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಲು ಪ್ರಯತ್ನಿಸಿ.

ನಮ್ಮ ಸಂಸಾರದಲ್ಲಿ ನಮಗೆ ಬೇಕಾದವರೇ ಹಸ್ತಕ್ಷೇಪ ಮಾಡಿದರೆ ಏನು ಮಾಡುವುದು?
ಕೆಲವೊಮ್ಮೆ ಗಂಡ ಹೆಂಡತಿ ನಡುವೆ ಅತ್ತೆ-ಮಾವ ನಮ್ಮ ಅಭಿಪ್ರಾಯ ಹೇಳುವ ಮೂಲಕ ಇಬ್ಬರ ನಡುವೆ ಅಂತರ ಹೆಚ್ಚಾಗಲು ಕಾರಣವಾಗುತ್ತಾರೆ. ಮಗನಿಗೆ ಸೊಸೆ ಬಗ್ಗೆ ತಪ್ಪಾಗಿ ಹೇಳುವುದು, ಅವಳು ನಮ್ಮನ್ನು ಆರೈಕೆ ಮಾಡುತ್ತಿಲ್ಲ ಅಥವಾ ನಿನಗೆ ತಕ್ಕವಳಲ್ಲ ಎಂದಲ್ಲ ಹೇಳುವುದು, ಹೆಂಡತಿ ಮನೆಯವರು ನಿನ್ನ ಗಂಡ ನಿನಗೆ ತಕ್ಕವನೇ ಅಲ್ಲ, ಅವನನ್ನು ಮದುವೆಯಾಗಿ ನಿನ್ನ ಬಾಳು ಹಾಳಾಯ್ತು ಎಂದೆಲ್ಲಾ ಹೇಳುತ್ತಿದ್ದರೆ ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

ಹಾಗಂತ ಇವರನ್ನು ನಮ್ಮ ಜೀವನದಿಂದ ದೂರವಿರಿ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವಿಬ್ಬರು ಸ್ವಲ್ಪ ಬಯದ್ಧಿವಂತಿಕೆಯಿಮದ ವರ್ತಿಸಬೇಕು.

ನಿಮ್ಮ ಸಮಸ್ಯೆಯನ್ನು ನೀವೇ ಬಗೆಹರಿಸಿ
ನಿಮ್ಮಿಬ್ಬರ ನಡುವೆ ಏನೇ ಸಮಸ್ಯೆ ಇರಲಿ ಮೊದಲು ನೀವಿಬ್ಬರು ಕೂತು ಬಗೆಹರಿಸಿ, ಅದನ್ನು ಮನೆಯವರವರೆಗೆ ತೆಗೆದುಕೊಂಡು ಹೋಗುವುದರಿಂದ ಸಮಸ್ಯೆ ಮತ್ತಷ್ಟು ದೊಡ್ಡದಾಗಬಹುದು, ಆದ್ದರಿಂದ ನಿಮ್ಮ ಬದುಕಿನಲ್ಲಿರುವ ಸಮಸ್ಯೆಗಳನ್ನು ನೀವೇ ಬಗೆಹರಿಸಿ, ನಿಮ್ಮ ಬದುಕಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಿ.

ಕೊನೆಯದಾಗಿ: ನೀವು ಅವಕಾಶ ಕೊಟ್ಟರೆ ಮಾತ್ರ ಬೇರೆಯವರು ನಿಮ್ಮಿಬ್ಬರ ಬದುಕಿನಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಅದಕ್ಕೆ ಅವಕಾಶ ಕೊಡದಿರಿ, ಹೌದು ತಾನೆ?

English summary

How To Deal With A Third Person Interfere In A Relationship in Kannada

How you can deal with third person interfere in your relationship read on....
Story first published: Thursday, March 23, 2023, 22:03 [IST]
X
Desktop Bottom Promotion