Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅನೈತಿಕ ಸಂಬಂಧದಲ್ಲಿ ನಿಜವಾದ ಪ್ರೀತಿ, ನೆಮ್ಮದಿ ಸಿಗಲು ಸಾಧ್ಯನೇ ಇಲ್ಲ, ಏಕೆ?
ಒಂದು ಮುದ್ದಾದ ಸಂಸಾರವಿರುತ್ತದೆ, ಆದರೆ ಹೊರಗಡೆ ಅದೇನೋ ಸೆಳೆತ ಅಥವಾ ಮೋಡಿಗೆ ಒಳಗಾದಾಗ ಮನೆ, ಸಂಸಾರ ತುಂಬಾನೇ ಬೋರ್ ಅನಿಸಲಾರಂಭಿಸುವುದು, ಜೊತೆಗಿರುವ ಸಂಗಾತಿ ಬೇಡ ಅನಿಸುವುದು, ಈಗ ಪರಿಚಯವಾದ ವ್ಯಕ್ತಿ ತುಂಬಾನೇ ಇಷ್ಟವಾಗುವುದು, ಆ ವ್ಯಕ್ತಿ ಜೊತೆ ಸುತ್ತಾಡಬೇಕು, ಆ ವ್ಯಕ್ತಿ ಜೊತೆ ಇದ್ದರೆ ಮಾತ್ರ ನಾನು ಖುಷಿಯಾಗಿರಬಲ್ಲೇ ಎಂದಲ್ಲ ಅನಿಸಲಾರಂಭಿಸುವುದು. ಅನೈತಿಕ ಸಂಬಂಧ ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ ಈ ರೀತಿ ಅನಿಸಲಾರಂಭಿಸುವುದು.

ಆದರೆ ಅನೈತಿಕ ಸಂಬಂಧದಲ್ಲಿ ಖುಷಿಯಾಗಿರಬಹುದು ಎಂಬುವುದೇ ಒಂದು ದೊಡ್ಡ ಭ್ರಮೆ..... ಬೆಳಕಿನೆಡೆಗೆ ಹಾರಿಬಂದು ಪತಂಗ ಪ್ರಾಣ ಕಳೆಯುವಂತೆ ಅನೈತಿಕ ಸಂಬಂಧದಲ್ಲಿ ಬಿದ್ದು ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ ಎಂಬುವುದು ವಾಸ್ತವ. ಅನೈತಿಕ ಸಂಬಂಧದ ಬೆಳೆಸಿದ ವ್ಯಕ್ತಿ ಕೊನೆಯವರೆಗೆ ಆ ಸಂಬಂಧದಲ್ಲಿ ಖುಷಿಯಾಗಿರುವ ಉದಾಹರಣೆಗಳೇ ಇಲ್ಲ.
ಏಕೆ ಅನೈತಿಕ ಸಂಬಂಧ ಬೆಳೆಸಿದೆ ಎಂದು ಅನೈತಿಕ ಸಂಬಂಧದಲ್ಲಿರುವವರನ್ನು ಕೇಳಿದರೆ ಅವರಿಗೆ ಹೇಳಲು ನೂರೆಂಟು ನ್ಯಾಯಗಳಿರುತ್ತದೆ, ನನ್ನ ಸಂಗಾತಿಯಿಂದ ನನಗೆ ಖುಷಿ ಸಿಗುತ್ತಿಲ್ಲ, ವೈವಾಹಿಕ ಜೀವನದಲ್ಲಿ ನಾನು ಬಯಸಿದ ಪ್ರೀತಿ ಸಿಗುತ್ತಿಲ್ಲ ಹೀಗೆ ಕಾರಣಗಳನ್ನು ಕೊಡುತ್ತಾ ಇನ್ನೊಂದು ಸಂಬಂಧದ ಕಡೆಗೆ ಆಕರ್ಷಣೆ ಬೆಳೆಸಿಕೊಳ್ಳುತ್ತಾರೆ, ಆದರೆ ಅದರಿಮದ ಅವರಿಗೆ ನಿಜವಾದ ಪ್ರೀತಿ ಸಿಗುವುದೇ ಇಲ್ಲ ಏಕೆ ಗೊತ್ತೇ?
ಅನೈತಿಕ ಸಂಬಂಧ ಎಂಬುವುದು ಬರೀ ಆಕರ್ಷಣೆ
ಬರೀ ಆಕರ್ಷಣೆಯ ಕಾರಣದಿಂದಾಗಿ ಅನೈತಿಕ ಸಂಬಂಧ ಹುಟ್ಟಿಕೊಳ್ಳುತ್ತದೆ. ಒಬ್ಬರು ಮತ್ತೊಬ್ಬರ ಆಸ್ತಿ, ರೂಪ, ಪದವಿ ಮತ್ಯಾವುದೋ ಕಾರಣ ನೋಡಿ ಬೆಳೆದುಕೊಳ್ಳುವ ಸಂಬಂಧ ಅದಾಗಿರುತ್ತದೆ. ಇಬ್ಬರು ಸ್ವಲ್ಪ ಸಮಯದವರೆಗೆ ತುಂಬಾನೇ ಖುಷಿಯಾಗಿರುತ್ತಾರೆ, ವಾವ್ ನಮ್ಮ ಜೀವನದ ಸ್ವರ್ಗ ಎಂದೇ ಭಾವಿಸುತ್ತಾರೆ, ಆದರೆ ಕ್ರಮೇಣ ಆಕರ್ಷಣೆ ಕಡಿಮೆಯಾಗುವುದು. ಇಬ್ಬರಿಗೆ ಒಬ್ಬರಿಗೊಬ್ಬರು ಹೊಂದಿಕೊಳ್ಳುವುದು ತುಂಬಾನೇ ಕಷ್ಟವಾಗುವುದು.
ಅನೈತಿಕ ಸಂಬಂಧದಲ್ಲಿ ನೆಮ್ಮದಿ ಎಂಬುವುದೇ ದೂರಾಗುವುದು
ಅನೈತಿಕ ಸಂಬಂಧದಲ್ಲಿ ಇರುವವರಿಗೆ ಎಲ್ಲಿ ನಮ್ಮಿಬ್ಬರ ಸಂಬಂಧ ನಮ್ಮ ಕುಟುಂಬದಲ್ಲಿ ತಿಳಿಯುತ್ತದೋ ಎಂಬ ಆತಂಕವಿದ್ದೇ ಇರುತ್ತದೆ ಆ ಭಯದಿಂದಾಗಿ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ, ಅಲ್ಲದೆ ಇಂಥ ಸಂಬಂಧದಲ್ಲಿ ಅಭದ್ರತೆ ಎಂಬುವುದು ತುಂಬಾನೇ ಕಾಡುವುದು. ನಾನು ಇಷ್ಟಪಡುತ್ತಿರುವ ವ್ಯಕ್ತಿ ನನಗೆ ಸಿಗುತ್ತಾರೆಯೇ? ನನ್ನ ಮನೆಯಲ್ಲಿ ಗೊತ್ತಾದರೆ ಏನು ಗತಿ? ಹೀಗೆ ನೂರೆಂಟು ಆತಂಕಗಳಿರುತ್ತದೆ, ಆದರೂ ಅದೇನೋ ಕೆಟ್ಟ ಸೆಳೆತದಿಂದ ಅನೈತಿಕ ಸಂಬಂಧ ಮುಂದುವರೆಸುತ್ತಾರೆ, ಆದರೆ ಅವರನ್ನು ಪ್ರತಿ ಹೆಜ್ಜೆಗೆ ಕಾಡುವ ಅಭದ್ರತೆ ಅವರ ನೆಮ್ಮದಿಯನ್ನು ನಿಧಾನಕ್ಕೆ ಕಿತ್ತುಕೊಳ್ಳಲಾರಂಭಿಸುವುದು.
ಸಮಾಜದ ದೃಷ್ಟಿಯಿಂದ ಕೆಟ್ಟವರು
ವೈವಾಹಿಕ ಜೀವನ ನಡೆಸುವವರಿಗೆ ಸಿಗುವ ಬೆಲೆ ಅನೈತಿಕ ಸಂಬಂಧದಲ್ಲಿರುವವರಿಗೆ ಸಿಗುವುದಿಲ್ಲ. ಕೆಲವರು ಅವರ ಎದುರಿಗೆ ಏನೇ ಹೇಳದೇ ಇದ್ದರೂ ಜನರ ಕಣ್ಣಿನಲ್ಲಿ ನಡತೆ ಕೆಟ್ಟವರಾಗಿರುತ್ತಾರೆ. ಅನೈತಿಕ ಸಂಬಂಧಕ್ಕೆ ಈ ಸಮಾಜದಲ್ಲಿ ಬೆಲೆ ಸಿಗುವುದಿಲ್ಲ, ಈ ಕಾರಣಕ್ಕೆ ಸಾಕಷ್ಟು ಬಾರಿ ಅವಮಾನ ಎದುರಿಸಬೇಕಾಗುವುದು. ಕೇವಲ ಕ್ಷಣಿಕ ಆಸೆಗಾಗಿ ತಮ್ಮ ಗೌರವ, ಮಾನ ಕಳೆದುಕೊಂಡು ಬದುಕಬೇಕಾದ ಪರಿಸ್ಥಿತಿ ಉಂಟಾಗುವುದು.
ಕೇವಲ ಕ್ಷಣಿಕ ಸುಖಕ್ಕೆ ಆಸೆಪಟ್ಟು ಇರುವ ನೆಮ್ಮದಿ ಕಳೆದುಕೊಂಡು ಬದುಕಬೇಕಾಗುವುದು, ನಮ್ಮವರು ಎನ್ನುವವರು ಈ ಕಾರಣಕ್ಕೆ ನಮ್ಮಿಂದ ದೂರಾಗುತ್ತಾರೆ, ಯಾರ ಜೊತೆ ಅನೈತಿಕ ಸಂಬಂಧ ಬೆಳೆದಿರುತ್ತದೋ ಆ ವ್ಯಕ್ತಿಯ ಕೊನೆಯವರೆಗೆ ಮೊದಲಿನಂತೆ ಇರುವುದೂ ಇಲ್ಲ.. ಕೊನೆಗೆ ಎಲ್ಲವನ್ನು ಕಳೆದುಕೊಂಡು ಪಶ್ಚಾತಾಪದ ಬಾಳು ಬಾಳಬೇಕಾಗುವುದು. ಈ ಕಾರಣಕ್ಕೆ ಬೇರೆ ಕಡೆ ಆಕರ್ಷಣೆಯಾದರೆ ನಿಮ್ಮ ಮನಸ್ಸಿಗೆ ಕಡಿವಾಣ ಹಾಕಿ ನಿಮ್ಮ ಸಂಸಾರದಲ್ಲಿಯೇ ಸಂತೋಷವನ್ನು ಕಾಣಲು ಪ್ರಯತ್ನಿಸಿ.



Click it and Unblock the Notifications
