Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಚ್ಛೇದನ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಪವನ್ ಕಲ್ಯಾಣ್ ಪತ್ನಿ..! ಬೇರೆಯಾಗಲು ಇದೇ ಕಾರಣವಂತೆ!
ದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯ ಬಳಿಕ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಹೋರಾಡಿದ ರೀತಿ ಹಾಗೂ ಅವರ ಧೈರ್ಯ ಅಚಲವಾದ ನಂಬಿಕೆಗೆ ಜನರು ಫಿದಾ ಆಗಿದ್ದಾರೆ. ಅಂದುಕೊಂಡಿದ್ದನ್ನು ಹಠ ಹಿಡಿದು ಸಾಧಿಸಿ ಈಗ ಇಡೀ ದೇಶವೇ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ರಾಜಕೀಯ ಹಾಗೂ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಪವನ್ ಕಲ್ಯಾಣ್ ತಮ್ಮ ದಾಂಪತ್ಯ ಹಾಗೂ ಕುಟುಂಬದ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಾರೆ. ಅದರಲ್ಲೂ ದಾಂಪತ್ಯದ ವಿಚಾರದಲ್ಲಿ ಅವರ ವಿರುದ್ಧ ಹಲವು ರೀತಿಯ ಸಿದ್ಧಾಂತಗಳೇ ರೂಪುಗೊಳ್ಳುತ್ತವೆ.

ನಟ ಪವನ್ ಕಲ್ಯಾಣ್ ಮೂವರನ್ನು ಮದುವೆಯಾಗಿದ್ದಾರೆ ಎಂಬುದೇ ದೊಡ್ಡ ಚರ್ಚಾ ವಿಷಯ. ಅದರಲ್ಲೂ ಎರಡನೇ ಹೆಂಡತಿ ಆಗಾಗ ಪವನ್ ಕಲ್ಯಾಣ್ ಕುರಿತಂತೆ ಒಂದಲ್ಲಾ ಒಂದು ರೀತಿಯ ಹೇಳಿಕೆ ನೀಡುತ್ತಲೇ ಇರುತ್ತಾರೆ. ದಕ್ಷಿಣ ಭಾರತದ ನಟಿ, ರೇಣು ದೇಸಾಯಿ 2008 ರಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರನ್ನು ವಿವಾಹವಾದರು, ಆದರೆ ಅವರು 2012 ರಲ್ಲಿ ಬೇರೆಯಾದರು.
ಪವನ್ ಮತ್ತು ರೇಣು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಗಂಡು ಮಗ ಅಕಿರಾ ಹಾಗು ಹೆಣ್ಣು ಮಗು ಆಧ್ಯ. ಆದರೆ ಈ ಸಂಬಂಧ ಮುರಿಯಲು ಪತ್ನಿ ರೇಣು ಕಾರಣ ಎಂದು ಪವನ್ ಕುಮಾರ್ ಅಭಿಮಾನಿಗಳು ಯಾವಾಗಲು ರೇಣು ಅವರ ವಿರುದ್ಧ ಪೋಸ್ಟ್‌ಗಳ ಹಂಚಿಕೊಳ್ಳವುದನ್ನು ನಾವು ನೋಡಬಹುದು. ಆದರೆ ಇಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ರೇಣು ಅವರು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ತಮ್ಮ ವಿಚ್ಛೇದನದ ಬಗ್ಗೆ ತೆರೆದಿಟ್ಟರು. ನಟಿಯ ಇನ್‌ಸ್ಟಾಗ್ರಾಮ್ ಖಾತೆನಲ್ಲಿ ಈ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಪವನ್ ಕಲ್ಯಾಣ್ ಅವರ ಅಭಿಮಾನಿಯೊಬ್ಬರು ಅಸಹ್ಯವಾದ ಕಾಮೆಂಟ್ ಮಾಡಿದ್ದರು ಜೊತೆಗೆ ತಾಳ್ಮೆಯಿಲ್ಲದ ಮಹಿಳೆ ಮತ್ತು ನಟನಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಆರೋಪಿಸಿದರು.
"ನೀವು ಇನ್ನೂ ತಾಳ್ಮೆಯಿಂದ ಇರಬೇಕಿತ್ತು ಅತ್ತಿಗೆ. ನೀವು ಯಾರೋ ಒಬ್ಬ ದೇವರಂತೆ ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಬಹುಶಃ ಈಗ ನೀವು ಅವನ ಮೌಲ್ಯವನ್ನು ಅರಿತುಕೊಂಡಿದ್ದೀರಿ. ಆದರೆ ಮಕ್ಕಳು ಪವನ್ ಕಲ್ಯಾಣ್ ಜೊತೆಗಿರುವುದು ನನಗೆ ಖುಷಿ ತಂದಿದೆ'' ಎಂದು ಅಭಿಮಾನಿಯೊಬ್ಬ ಬರೆದುಕೊಂಡಿದ್ದ.
ಈ ಕಾಮೆಂಟ್ ರೇಣು ಅವರ ಗಮನ ಸೆಳೆದ ತಕ್ಷಣ, ಅವರು ಕೋಪಗೊಂಡಿದ್ದಾರೆ. ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನು ಈ ಮದುವೆಯನ್ನು ಮುರಿಯಲಿಲ್ಲ ಎಂದಿದ್ದಾರೆ. ಆದರೆ ತನ್ನ ಮಾಜಿ ಪತಿ ಪವನ್ ತನ್ನನ್ನು ತೊರೆದಿದ್ದೇನೆ ಎಂದು ನಟಿ ಆಘಾತಕಾರಿ ಬಹಿರಂಗಪಡಿಸಿದರು.
"ನಿಮ್ಮಲ್ಲಿ ಸ್ವಲ್ಪವಾದರೂ ಬುದ್ಧಿ ಇದ್ದಿದ್ದರೆ ಈ ರೀತಿಯ ಮೂರ್ಖತನದ ಕಮೆಂಟ್ ಮಾಡುತ್ತಿರಲಿಲ್ಲ. ಅವನು ನನ್ನನ್ನು ಬಿಟ್ಟು ಮರುಮದುವೆಯಾದವನು, ಬೇರೆ ದಾರಿಯಲ್ಲ. ದಯವಿಟ್ಟು ಅಂತಹ ಕಾಮೆಂಟ್‌ಗಳಿಂದ ದೂರವಿರಿ; ಅದು ನನ್ನನ್ನು ಮಾತ್ರ ಹಿಂಸಿಸುತ್ತೆ'' ಎಂದಿದ್ದರು.
ಜನಸೇನಾ ಪಕ್ಷದ ನಾಯಕ, ಪವನ್ ಕಲ್ಯಾಣ್ ರೇಣುವಿನಿಂದ ಬೇರ್ಪಟ್ಟ ನಂತರ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದಾಗ, ಅವರು ಮರುಮದುವೆಯಾಗದಿರಲು ನಿರ್ಧರಿಸಿದರು. ಆದರೆ, ರೇಣು ಕೆಲ ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಅವರು ಮದುವೆ ಮಾಡಿಕೊಳ್ಳದೆ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು.
ನಾನು ನಿಶ್ಚಿತಾರ್ಥ ಮಾಡಿಕೊಂಡಾಗ ನನ್ನ ಮಗಳು ಆಧ್ಯಳಿಗೆ ಆಗ 7 ವರ್ಷವಾಗಿತ್ತು, ಬಳಿಕ ನಾನು ಮರು ಮದುವೆಯಾಗುವ ನಿರ್ಧಾರವನ್ನು ಅಂದೇ ಕೈ ಬಿಟ್ಟಿದ್ದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು.
1997 ರಲ್ಲಿ ನಟ ಪವನ್ ಕಲ್ಯಾಣ್ ನಂದಿನಿ ಎಂಬ 19 ವರ್ಷದ ಹುಡುಗಿಯನ್ನು ಮದುವೆಯಾಗಿದ್ದರು. ಆಧರೆ ಕೆಲವು ವರ್ಷಗಳ ವೈವಾಹಿಕ ಜೀವನದ ಬಳಿಕ ಆಕೆಗೆ ವಿಚ್ಛೇದನ ನೀಡಿದ್ದರು. ಬಳಿಕ 2001 ರಲ್ಲಿ, ಪವನ್ ಅವರು ನಟಿ ರೇಣು ದೇಸಾಯಿ ಅವರೊಂದಿಗೆ ವಿವಾಹವಾದರು. ಮದುವೆಯಾದ ಮೂರು ವರ್ಷಗಳ ನಂತರ 2012 ರಲ್ಲಿ ಪವನ್ ಮತ್ತು ರೇಣು ವಿಚ್ಛೇದನ ಪಡೆದರು. ನಂತರ, ನಟ ಸೆಪ್ಟೆಂಬರ್ 30, 2013 ರಂದು ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರೊಂದಿಗೆ ಮರು ವಿವಾಹವಾದರು. 2017 ರಲ್ಲಿ, ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.



Click it and Unblock the Notifications












