Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಜೀವಕೊಟ್ಟು ಪ್ರೀತಿಸಿದವರೇ ಮೋಸ ಮಾಡಿದಾಗ ಮಾಡಬೇಕಾದ 5 ಕಾರ್ಯಗಳಿವು
ಪ್ರೇಮಿಗಳ ವಾರ, ಎಲ್ಲಾ ಪ್ರೇಮಿಗಳು ತಮ್ಮದೇ ಗುಂಗಿನಲ್ಲಿ ಕಳೆದು ಹೋಗುತ್ತಿದ್ದಾರೆ, ಅದರಲ್ಲೂ ಫೆಬ್ರವರಿ 14 ಪ್ರೇಮಿಗಳಿಗೆ ಸೆಲೆಬ್ರೇಷನ್. ಪ್ರೇಮಗಳು ಸಂಭ್ರಮಿಸುತ್ತಿದ್ದರೆ ಬ್ರೇಕಪ್ ಆದವರಿಗೆ ತೀರಾ ನೋವು....
ಈ ಸಮಯದಲ್ಲಿ ತಮ್ಮ ಪ್ರೇಮಿಯನ್ನು ನೆನಸಿಕೊಳ್ಳುತ್ತಾರೆ ಅಥವಾ ತಮ್ಮ ಬದುಕಿನಲ್ಲಾದ ಕಹಿ ಘಟನೆ ತುಂಬಾನೇ ಕಾಡುತ್ತದೆ, ಲವ್ ಬ್ರೇಕಪ್ ಆಗಿದ್ದರೆ ಅದರಿಂದ ಹೊರಬರುವುದು ಹೇಗೆ ಎಂದು ನೋಡೋಣ ಬನ್ನಿ:

ಆ ನೆನಪುಗಳನ್ನು ಸಂಪೂರ್ಣ ಮರೆಯಿರಿ
ಹೌದು ಅದು ಅಷ್ಟು ಸುಲಭದಲ್ಲಿ ಮರೆಯುವಂಥದ್ದಲ್ಲ, ಉಸಿರು ಇರುವವರೆಗೂ ನೆನಪಿನಲ್ಲಿ ಇರುತ್ತದೆ, ಆದರೆ ನಮ್ಮ ಬದುಕಿನಿಮದ ಹೊರ ನಡೆದವರನ್ನು ಯೋಚಿಸುತ್ತಾ ಕುಳಿತರೆ ನಮ್ಮ ಬದುಕಿನಲ್ಲಿ ಏನೂ ನಡೆಯಲ್ಲ, ಅವರು ನಮ್ಮನ್ನು ಬಿಟ್ಟು ಖುಷಿಯಾಗಿರುತ್ತಾರೆ, ನಾವು ಮಾತ್ರ ಅವರು ಬಿಟ್ಟು ಹೋದ ಕೊರಗಿನಲ್ಲಿ ಇರುತ್ತೇವೆ, ಆದ್ದರಿಂದ ಅದರಿಂದ ಹೊರಬರಲು ಪ್ರಯತ್ನಿಸಿ. ಅವರ ನೆನಪು ತುಂಬಾ ಕಾಡುತ್ತಿದ್ದರೆ ಆ ಸ್ಥಳ ಬದಲಾಯಿಸಿ, ಹೊಸ ಸ್ಥಳ ನಿಮಗೆ ಜೀವನದಲ್ಲಿ ಹೊಸ ಖುಷಿಯನ್ನು ತರುತ್ತದೆ.
ನಿಮ್ಮ ಕೆಲಸದ ಕಡೆ ಗಮನಹರಿಸಿ
ನಿಮಗೆ ನೋವು ಕೊಟ್ಟು ಹೋದವರು ಒಬ್ಬರು ಆದರೆ ನಿಮ್ಮ ಖುಷಿಯನ್ನು ಬಯಸುವವರು ಹಲವರು. ನಿಮ್ಮ ಮನೆಯವರು, ಸ್ನೇಹಿತರು ನೀವು ಖುಷಿಯಾಗಿರುವುದನ್ನು ಇಷ್ಟಪಡುತ್ತಾರೆ, ಅದೇ ಮೋಸ ಮಾಡಿ ಬಿಟ್ಟು ಹೋದವರಿಗೆ ಅಳುತ್ತಾ ಕೂತರೆ ನಿಮ್ಮ ಬದುಕು ನರಕವಾಗುವುದು, ನಿಮ್ಮ ಸುತ್ತ ಇದ್ದವರಿಗೂ ಬೇಸರವಾಗುವುದು. ಆದ್ದರಿಂದ ನಿಮ್ಮ ಕೆಲಸದ ಕಡೆಗೆ ತುಂಬಾ ಗಮನಹರಿಸಿ, ಅದು ನಿಮ್ಮ ನೋವು ಮರೆಸುವುದು ಮಾತ್ರವಲ್ಲ ಆರ್ಥಿಕವಾಗಿ ಬೆಳೆಯಲು ಸಹಾಯ ಮಾಡುತ್ತದೆ...
ಬಿಟ್ಟು ಹೋದವರು ಪಶ್ಚಾತಾಪ ಪಡುವಂತೆ ಬಾಳಿ
ನಮಗೆ ಮೋಸ ಮಾಡಿ ಹೋದವರು ಅವರು, ನಾವು ಅವರಿಗೆ ಮೋಸ ಮಾಡಿಲ್ಲ ಮತ್ಯಾಕೆ ನಾನು ಅಳಬೇಕು? ಎಂದು ಯೋಚಿಸಿ, ನಂತರ ನಿಮ್ಮನ್ನು ಬಿಟ್ಟು ಹೋದವರು ಅರೇ.. ಎಂಥ ವ್ಯಕ್ತಿಯನ್ನು ಬಿಟ್ಟು ತಪ್ಪು ಮಾಡಿ ಬಿಟ್ಟೆ ಎಂದು ಪಶ್ಚಾತಾಪ ಪಡುವಂತೆ ನೀವು ಬಾಳಬೇಕು, ಕೆಲವರು ಪ್ರೀತಿಯಲ್ಲಿ ಸೋತಾಗ ಸಾಯಬೇಕೆಂದು ಯೋಚಿಸುತ್ತಾರೆ, ಆದರೆ ನೀವು ಬದುಕನ್ನು ಬಹು ಎತ್ತರಕ್ಕೆ ಕೊಂಡೊಯ್ಯುವತ್ತ ಗಮನಹರಿಸಬೇಕು.
ಸ್ನೇಹಿತರ ಜೊತೆ ಬೆರೆಯಿರಿ
ಪ್ರೀತಿಯಲ್ಲಿ ಇದ್ದಾಗ ಸ್ನೇಹಿತರಿಗೆ ಸಮಯ ಕೊಡಲು ಸಾಧ್ಯವಾಗಿರಲ್ಲ, ಈಗ ಸ್ನೇಹಿತರ ಜೊತೆ ಕಳೆಯಿರಿ, ಖುಷಿಯಿಂದ ಟ್ರಿಪ್ ಹೋಗಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನಿಮಗೆ ಇಷ್ಟವಾದದ್ದನ್ನು ಮಾಡಿ, ನಿಮ್ಮ ಗುರಿಯನ್ನು ಚೇಸ್ ಮಾಡಿ, ಈ ರೀತಿ ಮಾಡುವುದರಿಂದ ನೀವೂ ಖುಷಿಯಾಗಿರುತ್ತೀರಿ, ಬೇಡದ ವ್ಯ್ಕತಿಯ ನೆನಪೂ ನಿಮ್ಮ ಹತ್ರ ಸುಳಿಯಲ್ಲ.
ಮತ್ತೊಂದು ಪ್ರೀತಿಯಲ್ಲಿ ಬೇಗನೆ ಬೀಳಬೇಡಿ
ಒಂದು ಪ್ರೀತಿಯಲ್ಲಿ ಹೊಡೆತ ಬಿದ್ದಾಗ ಕೆಲವರು ಮತ್ತೊಂದು ಪ್ರೀತಿಯಲ್ಲಿ ಬೀಳುವ ಪ್ರಯತ್ನ ಮಾಡುತ್ತಾರೆ, ಆದರೆ ಆ ತಪ್ಪು ಮಾಡಬೇಡಿ, ಸ್ವಲ್ಪ ಸಮಯ ಕಾಯಿರಿ, ಆ ವ್ಯಕ್ತಿಯನ್ನು ಅರಿಯಿರಿ, ನಂತರ ಪ್ರೀತಿಯಲ್ಲಿ ಬೀಳಿ. ಇದರಿಂದ ಜೀವನದಲ್ಲಿ ಮತ್ತೊಮ್ಮೆ ಎಡವುದನ್ನು ತಪ್ಪಿಸಬಹುದು... ಲವ್ ಬ್ರೇಕಪ್ ಅಂತ ಬೇಸರ ಏಕೆ, ಎಲ್ಲ ಮರೆತು ಮುನ್ನೆಡೆಯಿರಿ.



Click it and Unblock the Notifications