Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಾಹಲ್-ಧನುಶ್ರೀಗೆ ಕೋರ್ಟ್‌ನಿಂದ ವಿಚ್ಚೇದನ: ಚಾಹಲ್ ನೀಡಿದ ಜೀವನಾಂಶ ಎಷ್ಟು ಗೊತ್ತಾ?
ಭಾರತ ಕ್ರಿಕೆಟ್ ತಂಡ ಸ್ಪಿನ್ನರ್ ಯಜುವೇಂದ್ರ ಚಾಹಲ್ ದಾಂಪತ್ಯ ಜೀವನದಲ್ಲಿ ಏರುಪೇರಾಗಿ ವಿಚ್ಛೇದನ ಅರ್ಜಿ ಸಲ್ಲಿಸಿರುವುದು ನಿಮಗೆಲ್ಲಾ ತಿಳಿದಿರಬಹುದು. ಪತ್ನಿ ಧನುಶ್ರೀ ಹಾಗೂ ಚಾಹಲ್ ಮುಂಬೈ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮುಂಬೈ ಕೋರ್ಟ್ ಇಬ್ಬರಿಗೂ ವಿಚ್ಛೇದನ ನೀಡಿ ತೀರ್ಪು ನೀಡಿದೆ. ಇಬ್ಬರು ಇನ್ನು ಮುಂದೆ ಪತಿ ಪತ್ನಿಯಲ್ಲ ಎಂದು ತಿಳಿಸಿದೆ.
ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಚಾಹಲ್ ಮತ್ತು ಧನುಶ್ರೀ ವರ್ಮಾ ಡಿಸೆಂಬರ್ 2020 ರಲ್ಲಿ ವಿವಾಹವಾಗಿದ್ದರು. ಅವರ ಅರ್ಜಿಯ ಪ್ರಕಾರ ಅವರು ಜೂನ್ 2022 ರಲ್ಲಿ ವಿಚ್ಛೇದನಕ್ಕೆ ಮುಂದಾದರು. ಪರಸ್ಪರ ಒಪ್ಪಿಗೆ ಮೇರೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಅಧಿಕೃತವಾಗಿ ಇಬ್ಬರು ವಿಚ್ಛೇದನ ಒಡೆದಿರುವುದನ್ನು ಮಾನ್ಯ ಮಾಡಿದೆ.

ಚಾಹಲ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗಿಯಾಗುತ್ತಿರುವುದರಿಂದ ಅವರನ್ನು ವಿಚಾರಣೆಗಾಗಲಿ ಅಥವಾ ಕೋರ್ಟ್ ಸಂಬಂಧಿ ಕೆಲಸಗಳಿಗೆ ಕರೆಸಲು ಆಗುವುದಿಲ್ಲ ಎಂಬ ವಿಚಾರವನ್ನು ಪರಿಗಣಿಸಿ ಬಾಂಬೆ ಹೈಕೋರ್ಟ್ ಇಂದು ತೀರ್ಪು ನೀಡುವಂತೆ ಮುಂಬೈ ಕೌಟುಂಬಿಕ ಕೋರ್ಟ್‌ಗೆ ತಿಳಿಸಿತ್ತು.
ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ ನಂತರ ಪ್ರತಿ ದಂಪತಿಗೆ ನಿಗದಿಪಡಿಸಿದ ಆರು ತಿಂಗಳ ಕೂಲಿಂಗ್ ಅವಧಿಯನ್ನು ಕೋರ್ಟ್ ಮನ್ನಾ ಮಾಡಿದೆ. ಇಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಅರ್ಜಿ ಸಲ್ಲಿಸಿರುವುದರಿಂದ ಈ ಪ್ರಕರಣದಲ್ಲಿ ಕೂಲಿಂಗ್ ಅವರಧಿಯನ್ನು ಮನ್ನಾ ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಚಾಹಲ್ ಪರ ವಕೀಲರಾಗಿದ್ದ ನಿತಿನ್ ಗುಪ್ತಾ ಈ ಕುರಿತು ಮನವಿ ಮಾಡಿದ್ದರು.
ಚಾಹಲ್ ಎಷ್ಟು ಕೋಟಿ ಜೀವನಾಂಶ ನೀಡಬೇಕು?
ಇಬ್ಬರ ದಾಂಪತ್ಯ ಜೀವನವು ಕೇವಲ 818 ದಿನ ಮಾತ್ರ ಉಳಿದಿತ್ತು. ಈ ನಡುವೆ ಚಾಹಲ್ ಧನುಶ್ರೀ ಅವರಿಗೆ ಜೀವನಾಂಶವಾಗಿ ಕೋಟಿ ಕೋಟಿ ರೂಪಾಯಿ ನೀಡಬೇಕಿದೆ. ವರದಿಯ ಪ್ರಕಾರ ಚಾಹಲ್ ಧನುಶ್ರೀ ಅವರಿಗೆ ಸುಮಾರು 4 ಕೋಟಿ 75 ಲಕ್ಷ ರೂಪಾಯಿ ಶಾಶ್ವಾತ ಜೀವನಾಂಶವಾಗಿ ನೀಡಬೇಕಿದೆಯಂತೆ. ಇದನ್ನು ಚಾಹಲ್ ಕೂಡ ಒಪ್ಪಿಕೊಂಡಿದ್ದಾರಂತೆ. ಈ ನಡುವೆ ಚಾಹಲ್ ಈವರಗೆ 2 ಕೋಟಿ 37 ಲಕ್ಷದ 55 ಸಾವಿರ ರೂಪಾಯಿ ನೀಡಿದ್ದಾರಂತೆ. ಈ ಮೊತ್ತವನ್ನು ದಿನದ ಲೆಕ್ಕದಲ್ಲಿ ನೋಡಿದರೆ 818 ದಿನದಲ್ಲಿ ದಿನವೊಂದಕ್ಕೆ ಚಾಹಲ್ 50 ಸಾವಿರ ರೂಪಾಯಿ ನೀಡದಂತಾಗುತ್ತದೆ.
ದಂಪತಿ ಈಗಾಗಲೇ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಬೇರೆ ಬೇರೆಯಾಗಿಯೇ ಉಳಿದಿದ್ದರು, ಹೀಗಾಗಿ ವಿಚ್ಛೇದನದ ಬಳಿಕ ನೀಡುವ ಕೂಲಿಂಗ್ ಅವಧಿಯನ್ನು ಮನ್ನಾ ಮಾಡಲಾಗಿದೆ ಎಂದು ವರದಿಯಾಗಿದೆ. ಹಾಗೆ ವಿಚ್ಛೇದನ ಸಂದರ್ಭದಲ್ಲಿ ಇಬ್ಬರಿಂದಲೂ ಯಾವುದೇ ತಕರಾರು ಇಲ್ಲದ ಕಾರಣ ಅಂತಿಮ ತೀರ್ಪು ನೀಡಲಾಗಿದೆ.
ಇನ್ನು ಜೀವನಾಂಶ ವಿಚಾರದಲ್ಲಿ ಈ ಮೊದಲು ಚಾಹಲ್ 60 ಕೋಟಿ ರೂಪಾಯಿ ಜೀವನಾಂಶ ನೀಡಬೇಕಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದ್ರೆ ಈಗ ಕೇವಲ 4 ಕೋಟಿ ಎಷ್ಟು ಜೀನವಾಂಶ ನೀಡುತ್ತಿರುವುದಾಗಿ ತಿಳಿದುಬಂದಿದೆ. ಸದ್ಯ ಚಾಹಲ್ ಈ ಬಾರಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಅವರು ಆಡುತ್ತಿದ್ದಾರೆ, ಹಾಗೆ ಅವರು ಕ್ರಿಕೆಟ್ ಮೈದಾನಕ್ಕಿಳಿಯದೆ ವರ್ಷಗಳು ಕಳೆದಿವೆ. ಇತ್ತೀಚಿಗೆ ನಡೆದಿದ್ದ ಚಾಂಪಿಯನ್ಸ್ ಟ್ರೋಪಿ ಪಂದ್ಯ ವೀಕ್ಷಣೆಗೆ ಬಂದಿದ್ದ ಅವರು, ಆರ್‌ಜೆ ಮಹ್ವಾಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅವರ ವಿಚ್ಚೇದನ ಸುದ್ದಿಯ ನಡುವೆ ಹೊಸ ಹುಡುಗಿ ಜೊತೆಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು.



Click it and Unblock the Notifications
