Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ವಿಚ್ಛೇದನ ಸುದ್ದಿಗಳು ಹೆಚ್ಚಾಗಿ ಕೇಳಿ ಬರುವ ಈ ಕಾಲದಲ್ಲಿ ಇಂಥ ವೀಡಿಯೋಗಳು ಆಪ್ತವೆನಿಸುತ್ತೆ, ನಿಜವಾದ ಪ್ರೀತಿ ಹೀಗಿರುತ್ತೆ
ಎಷ್ಟೋ ಅವಾಹಿತ ಹೆಣ್ಮಕ್ಕಳು, ಗಂಡ್ಮಕ್ಕಳು ಅಯ್ಯೋ ಮದುವೆ ನಾನು ಆಗಲಪ್ಪಾ? ಮದುವೆಯಾದ ಮೇಲೆ ಕಷ್ಟಪಡುತ್ತಿರುವ, ವಿಚ್ಛೇದನ ಪಡೆದಿರುವ ಸಾಕಷ್ಟು ಜನರನ್ನು ನೋಡಿದ್ದೇನೆ, ಸುಮ್ಮನೆ ಈ ರಗಳೆಯೆಲ್ಲಾ ಏಕೆ, ಹೀಗೆ ಆರಾಮವಾಗಿ ಇದ್ದು ಬಿಡ್ತೀನಿ ಅಂತಾರೆ. ಆದರೆ ಹಿರಿಯರು ಮದುವೆಯಾಗು ಅಂತ ಸಲಹೆ ನೀಡುವಾಗ ಒಂದು ಮಾತು ಹೇಳುತ್ತಾರೆ, ಈಗ ನಿಮಗೆ ಗೊತ್ತಾಗಲ್ಲ, ನಿಮಗೆ ವಯಸ್ಸಾದಾಗ ಅಥವಾ ಆರೋಗ್ಯ ಸರಿಯಿಲ್ಲದಿದ್ದಾಗ ಯಾರು ನೋಡಿಕೊಳ್ಳುತ್ತಾರೆ ಅದೇ ನಿನಗೆ ಸಂಗಾತಿ ಅಂತ ಇದ್ದರೆ ಅವರು ನೋಡಿಕೊಳ್ಳುತ್ತಾರೆ ಅಂತ, ಈ ಮಾತು ಅಕ್ಷರಶಃ ನಿಜ.

ಮದುವೆಯ ನಂತರ ವಿಚ್ಛೇದನ ಅಂತ ಕೇವಲ ಸಾವಿರದಲ್ಲಿ 10-20 ಜೋಡಿ ಕೋರ್ಟ್ ಮೆಟ್ಟಿಲೇರುತ್ತಿದೆ, ಆದರೆ ಅದು ಸುದ್ದಿಯಾಗುತ್ತಿರುವುದರಿಂದ ಮದುವೆಯಾದ ಮೇಲೆ ಬದುಕು ಅಷ್ಟೊಂದು ಚೆನ್ನಾಗಿರಲ್ಲ, ಕಷ್ಟ, ನೋವು ಎಂಬೆಲ್ಲಾ ಊಹೆಗಳನ್ನು ಅವಾಹಿತರು ಮಾಡುತ್ತಿದ್ದಾರೆ, ಮದುವೆಯೆಂದರೆ ಅದೊಂದು ಸುಂದರ ಬಾಂಧವ್ಯ, ವೈವಾಹಿಕ ಬದುಕು ನಮ್ಮ ಬದುಕುನ್ನು ಮತ್ತಷ್ಟು ಸುಂದರವಾಗಿಸುತ್ತೆ ಎಂದರಿಯಲು ಇಂಥ ಕೆಲವೊಂದು ಸುದ್ದಿಗಳನ್ನು ಕೇಳಬೇಕು, ವೀಡಿಯೋಗಳನ್ನು ನೋಡಬೇಕು.
ಕುಂಭಮೇಳದಲ್ಲಿ ತಪ್ಪಿ ಹೋಗಬಾರದು ಎಂದು ಗಂಡನ ಸೊಂಟಕ್ಕೆ ಹಗ್ಗ ಕಟ್ಟಿದ ಹೆಂಡತಿ
ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಆಕೆಯ ತಲೆಯ ಮೇಲೆ ದೊಡ್ಡದಾದ ಬಟ್ಟೆಯ ಗಂಟಿದೆ, ಬಹುಶಃ ಬಟ್ಟೆಗಳಿರಬಹುದು, ಗಂಡನ ಕೈಯಲ್ಲಿ ಪುಟ್ಟದೊಂದು ಬ್ಯಾಗ್, ತಲೆಯಲ್ಲಿ ಒಂದು ಚಿಕ್ಕ ಬ್ಯಾಗ್, ಆತನ ಸೊಂಟಕ್ಕೆ ಹಗ್ಗ ಕಟ್ಟಿ ಅದನ್ನು ತನ್ನ ಕೈಯಲ್ಲಿ ಹಿಡಿದಿದ್ದಾಳೆ, ಆ ಜನ ಜಂಗುಳಿಯಲ್ಲಿ ತನ್ನ ಗಂಡ ಕಳೆದು ಹೋದೆ ಹುಡುಕುವುದು ಹೇಗೆ ಎಂಬ ಭಯದಲ್ಲಿ ಆಕೆ ಹಾಗೆ ಮಾಡಿದ್ದಾಳೆ, ಅದರಲ್ಲಿಯೇ ಅವಳು ಆಕೆಯ ಗಂಡನ ಮೇಲಿಟ್ಟ ಪ್ರೀತಿ, ಮರ್ಯಾದೆ ಕಾಣುತ್ತೆ.
ಆ ವೀಡಿಯೋವನ್ನು ಗಮನಿಸಿದರೆ ಆಕೆ ಗಂಡನಿಗಿಂತ ಆರೋಗ್ಯವಂತಳಾಗಿ ಕಾಣಿಸುತ್ತಿದ್ದಾಳೆ, ಬಹುಶಃ ಆತನಿಗೆ ಆರೋಗ್ಯ ಸರಿಯಿಲ್ಲ ಕಾಣುತ್ತೆ, ದೇಹ ದೊರಗಿದೆ, ಕುಂಭ ಸ್ನಾನ ಮಾಡಿದರೆ ನಮಗೆ ಮೋಕ್ಷ ಸಿಗಲಿದೆ ಎಂಬ ಆಸೆಯಲ್ಲಿ ಆಕೆ ಗಂಡನ ಜೊತೆ ಕುಂಭಮೇಳಕ್ಕೆ ಬಂದಿದ್ದಾಳೆ, ಆತನಿಗೆ ಮರೆವಿನ ಕಾಯಿಲೆ ಇರಬಹುದೇನೋ? ಹಾಗಾಗಿ ಆತ ಎಲ್ಲಾದರು ಹೋದರೆ ಹುಡುಕುವುದು ಹೇಗೆ ಎಂಬ ಭಯದಲ್ಲಿ ಇಂಥ ಐಡಿಯಾ ಮಾಡಿದ್ದಾಳೆ, ಇದಕ್ಕೆ ಹೇಳುವುದು ಮದುವೆ ಅಂತ ಆದರೆ ನಮಗೆ ಹುಷಾರಿಲ್ಲದ ಸಮಯದಲ್ಲಿ ನಮ್ಮ ಸಂಗಾತಿ ನಮ್ಮನ್ನು ಆರೈಕೆ ಮಾಡ್ತಾರೆ ಅಂತ. ಹೆಂಡತಿಯನ್ನು ಗಂಡ ನೋಡಿಕೊಳ್ಳುವಂತೆ, ಗಂಡನನ್ನು ಹೆಂಡತಿ ನೋಡಿಕೊಳ್ಳುವಂತೆ ಯಾರೂ ನೋಡಿಕೊಳ್ಳುವುದಿಲ್ಲ, ಆದ್ದರಿಂದ ಮದುವೆಯೆಂಬುವುದು ಒಂದು ಸುಂದರವಾದ ಬಾಂಧವ್ಯ.
ಸರ್ಪ್ರೈಸ್ ಗಿಫ್ಟ್‌ಗಳಿಗಿಂತ ನಿಜವಾದ ಪ್ರೀತಿಯೆಂದರೆ ಹೀಗಿರುತ್ತೆ ಎಂಬುವುದನ್ನು ಅರಿಯಬೇಕಾಗಿದೆ ಈಗೀನ ಜನರೇಷನ್
ಈಗೀನ ಜನರೇಷನ್‌ಗೆ ಪ್ರೀತಿಯೆಂದರೆ ಟ್ರಿಪ್‌ಗಳಿಗೆ ಕರೆದುಕೊಂಡು ಹೋಗ್ತಾ ಇರಬೇಕು, ಸರ್ಪ್ರೈಸ್ ಗಿಫ್ಟ್ಸ್ ನೀಡಬೇಕು, ಸೋಷಿಯಲ್ ಮೀಡಿಯಾದಲ್ಲ ತಮ್ಮ ಪ್ರೀತಿಯನ್ನು ಮತ್ತಷ್ಟು ಫ್ಯಾಂಟಸಿ ಮಾಡಿ ಹಾಕಬೇಕು, ಹಾಗೇನೂ ಇಲ್ಲ ಎಂದರೆ ಅವನಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಇವಳು ದೂರಿದರೆ ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಇವಳು ದೂರಿ ಚಿಕ್ಕ ವಿಷಯ ದೊಡ್ಡದು ಮಾಡಿ ವಿಚ್ಛೇದನ ಕೇಳುತ್ತಿದ್ದಾರೆ.
ಕಷ್ಟವಿರಲಿ-ಸುಖವಿರಲಿ ಜೊತೆಯಾಗಿ ಹೆಜ್ಜೆ ಹಾಕುವವರೇ ಆದರ್ಶ ದಂಪತಿಗಳು, ಇಲ್ಲಿ ಆ ತಾಯಿ ತನ್ನ ಗಂಡನ ಚಿಕ್ಕ ಮಗುವಿನಂತೆ ಎಷ್ಟೊಂದು ಜೋಪನದಿಂದ ಕರೆದುಕೊಂಡು ಹೋಗುತ್ತಿದ್ದಾಳೆ, ಸೋಷಿಯಲ್ ಮೀಡಿಯಾದಲ್ಲಿ ಹಾಕುವ ರೊಮ್ಯಂಟಿಕ್ ಕಪಟ ರೀಲ್ಸ್‌ಗಿಂತ ನೈಜ ಜೀವನದ ಪ್ರೀತಿ ಸಾರುವ ಈ ರಿತಿಯ ರೀಲ್ ಸೂಪರ್ ಅಲ್ವಾ?



Click it and Unblock the Notifications