ಪವಿತ್ರಾ ಜಯರಾಂ ಉಸಿರು ನಿಂತಾಗ ಚಂದ್ರಕಾಂತ್‌ ದೇಹವೂ ಸ್ತಬ್ಧವಾಯ್ತು, ಇಷ್ಟು ಪ್ರೀತಿಸುವ ಜೀವಗಳ ಪಾಲಿಗೆ ವಿಧಿಯಾದ ತುಂಬಾ ಕ್ರೂರಿ

ಗುಡ್‌ ಮಾರ್ನಿಂಗ್ ನಾನಾ.... ಇದು ಜಿಮ್‌ನ ಸಮಯ, ನಮ್ಮ ಕೋಚ್‌ ಕರೆದಿದ್ದಾನೆ, ಲವ್‌ ಯೂ ಪಾಪ.. ಎಂದು ಚಂದ್ರಕಾಂತ್‌ ಬರೆದಿರುವ ಸಾಲುಗಳನ್ನು ಓದುವಾಗ ಮಸ್ಸು ಭಾರವಾಗುತ್ತದೆ, ಛೇ ಎಂಥ ಕೆಲಸ ಮಾಡಿಬಿಟ್ಟರು ಎಂದನಿಸುತ್ತೆ.

telugu actor Chanrakanth

'ಪವಿತ್ರ ಜಯರಾಮ್‌ ಸಾವಿನ ಸುದ್ದಿಯೇ ಚಿತ್ರರಂಗಕ್ಕೆ ಹಾಗೂ ಕಿರುತೆರೆ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು, ಆದರೆ ಚಂದ್ರಕಾಂತ್ ಕೂಡ ಇನ್ನಿಲ್ಲ ಎಂಬ ಸುದ್ದಿ ಎಲ್ಲರ ಮನಸ್ಸು ಭಾರವಾಗುತ್ತೆ, ಎಂಥ ಕೆಲಸ ಮಾಡಿ ಬಿಟ್ಟರು ಎಂದನಿಸಿದರೂ ಅವರಿಗೆ ಪವಿತ್ರ ಜಯರಾಂ ಉಸಿರೇ ಆಗಿತ್ತು, ಅವರು ಒಂದು ರೀಲ್ಸ್‌ನಲ್ಲಿ ಎರಡು ಜೀವ ಒಂದು ಉಸಿರು ಎಂದು ಹೇಳಿರುವುದು ಅಕ್ಷರಶಃ ನಿಜವಾಗಿದೆ.

ಅದೆಂಥ ಪ್ರೀತಿ ಅವರದ್ದು ಸಾವಿನಲ್ಲಿಯೂ ಒಂದಾದರು
ಪವಿತ್ರ ಜಯರಾಂ ಅಂತ್ಯಕ್ರಿಯೆಯಲ್ಲಿ ಈ ಚಂದ್ರಕಾಂತ್‌ ಅವರ ನೋವು ನೋಡಿದವರಿಗೆ ಅಷ್ಟೊಂದು ದುಃಖವಾಗಿತ್ತು, ಅವರ ದುಃಖವನ್ನು ನೋಡಿ ಅಭಿಮಾನಿಗಳು ಅಕ್ಕ. ಅಣ್ಣನ ನೋವು ನೋಡಲು ಆಗುತ್ತಿಲ್ಲ ಮರಳಿ ಬಂದು ಬಿಡು ಅಕ್ಕ... ಎಂದು ಕಮೆಂಟ್ ಮಾಡುತ್ತಿದ್ದಾರು. ಆದರೆ ಚಂದ್ರಕಾಂತ್‌ ತಮ್ಮ ಬದುಕನ್ನು ಹೀಗೆ ಮುಗಿಸುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಸಾಯುವ ಮುನ್ಸೂಚನೆ ನೀಡಿದ್ದರೂ ಅವರ ಆಪ್ತರು ಅವರನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಲಿಲ್ಲವೇ?
ನಾನು ಬದುಕಿರಲ್ಲ ಎಂಬ ಸೂಚನೆಯನ್ನು ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೂಚನೆ ನೀಡಿದ್ದರು. ಮೂರು ದಿನದ ದಿನ ಪವಿತ್ರ ಜಯರಾಂಗೆ ಶುಭಾಶಯ ಕೋರಿ ಅವರೊಂದಿಗಿನ ನೆನಪಿನ ಫೋಟೋಗಳನ್ನು ಶೇರ್‌ ಮಾಡಿ Naannnaa ......🥲🥲 pls hey wait for just 2days ra.. ಎಂಬ ಕ್ಯಾಪ್ಷನ್ ನೀಡಿದ್ದರು. ಆವಾಗ ಏಕೆ ಈ ರೀತಿ ಕ್ಯಾಪ್ಷನ್‌ನೀಡಿದ್ದೀರಾ, ನಿಮ್ಮ ಆಲೋಚನೆ ಸರಿಯಿಲ್ಲ, ನೀವು ಈ ರೀತಿ ಯೋಚಿಸುತ್ತಿದ್ದರೆ ನಾನು ನಿಮ್ಮಲ್ಲಿ ಆ ರೀತಿ ಮಾಡಲೇಬೇಡಿ ಎಂದು ಬೆಗ್‌ ಮಾಡುತ್ತೇನೆ, ಪ್ಲೀಸ್ ಬ್ರದರ್ ಎಂದು ಅವರ ಅಭಿಮಾನಿಗಳು ಕೇಳಿಕೊಂಡಿದ್ದರು.

ಈ ಕ್ಯಾಪ್ಷನ್ ನೀಡಿದಾಗ ಮನೆಯವರು ಅಥವಾ ಸ್ನೇಹಿತರು ಗಮನಿಸಲಿಲ್ಲವೇ?
ಪವಿತ್ರಾ ಸಾವಿನ ಬಳಿಕ ತೆಲುಗು ಚಾನಲ್‌ನವರಿಗೆ ನೀಡಿದ ಸಂದರ್ಶನದಲ್ಲಿ ನನಗೆ ಅವಳು ಇರದೆ ಇರಲು ಆಗುತ್ತಿಲ್ಲ ಎಂದು ಹೇಳಿದ್ದರು, ಇನ್ನು ಈ ರೀತಿ ಕ್ಯಾಪ್ಷನ್ ನೀಡಿದಾಗ ಎಚ್ಚೆತ್ತುಕೊಂಡು ಯಾರಾದರೂ ಅವರ ಜೊತೆ ಇದ್ದಿದ್ದರೆ ಇಂಥ ಘಟನೆ ತಪ್ಪಿಸಬಹುದಿತ್ತು.

ಪವಿತ್ರಾಗೆ ಒಂದು ಚೂರು ಪೆಟ್ಟಾಗಿರಲ್ಲ, ಚಂದ್ರಕಾಂತ್‌ ಸ್ಥಿತಿ ನೋಡಿ ಪ್ರಾಣ ಬಿಟ್ಟರು
ಚಂದ್ರಕಾಂತ್ ಅವರು ಹೇಳಿರುವ ಹಾಗೆ ಅವರು ಚಲಾಯಿಸುತ್ತಿದ್ದ ಕಾರಿಗೆ ಅಪಘಾತವಾದಾಗ ಇವರಿಗೆ ಮಾತ್ರ ಸ್ವಲ್ಪ ಹೆಚ್ಚು ಪೆಟ್ಟಾಗಿತ್ತು, ಪವಿತ್ರಾ ಜಯರಾಂ ಇವರನ್ನು ನೋಡಿ ಚಂದ್ರಕಾಂತ್‌ಗೆ ಏನೋ ಆಗಿದೆ ಆಘಾತಕ್ಕೆ ಒಳಗಾಗಿ ಗಾಬರಿಯಿಂದ ಉಸಿರು ಎಳೆದವರು ಸಾವನ್ನಪ್ಪಿದ್ದಾರೆ, ಚಂದ್ರಕಾಂತ್‌ಗೆ ಪವಿತ್ರಾಗೆ ಹೀಗಾಯ್ತಲ್ಲ ಎಂಬ ನೋವಿನಿಂದ ಹೊರಬರಲು ಸಾಧ್ಯವಾಗದೆ ಸಾವಿನ ಕದ ತಟ್ಟಿದ್ದಾರೆ. ಇಬ್ಬರು ಅಮರ ಪ್ರೇಮಿಗಳಾದರು...

ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸದ ಪವಿತ್ರಾಗೆ ಪ್ರೀತಿಯ ಹೂಮಳೆ ಸುರಿಸಿದವರು ಚಂದ್ರಕಾಂತ್... ಇಬ್ಬರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುದ್ದರು ಎಂಬುವುದು ಅವರ ಪೋಸ್ಟ್‌ಗಳಲ್ಲಿ ನೋಡಬಹುದು, ಏನೇ ಆಗಲಿ ವಿಧಿ ಇವರ ಪಾಲಿಗೆ ತುಂಬಾ ಕ್ರೂರಿಯಾಗಿದ್ದ...

ಇವರಿಬ್ಬರು ಮದುವೆಯಾಗಿರಲಿಲ್ಲ, ಆದರೆ ಪ್ರೀತಿಸುತ್ತಿದ್ದರು, ಗಂಡ-ಹೆಂಡತಿಯ ಸಂಬಂಧವನ್ನು ಇಬ್ಬರು ಜೊತೆಯಾಗಿ ಘೋಷಿಸುವ ನಿರ್ಧಾರ ಮಾಡಿದ್ದರು ಅಷ್ಟರಲ್ಲಿ ಏನೇನೋ ಆಯ್ತು... ಇನ್ನು ಇಬ್ಬರು ನೆನಪು ಮಾತ್ರ...

ಆದರೆ ಈಗ ಚಂದ್ರಕಾಂತ್‌ ಪತ್ನಿ ಪವಿತ್ರಗಾಗಿ ನನ್ನ ಬಿಟ್ಟರು ಎಂದು ಹೇಳಿದ್ದಾರೆ....

English summary

Chanrakanth Unit Pavithra Jayram In Another World: These Jodi Makes Our Heart Heavy

Chanrakanth Unit Pavithra Jayram In Another World, Chanrakanth decision shocked world,
X
Desktop Bottom Promotion