Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಒಬ್ಬ ವ್ಯಕ್ತಿ ಬದುಕಿನಲ್ಲಿ ಈ ಮೂವರಿದ್ದರೆ ಅವರು ಅದೃಷ್ಟವಂತರು ಅಂತಾರೆ ಚಾಣಕ್ಯ
ಒಬ್ಬ ವ್ಯಕ್ತಿ ಯಶಸ್ಸು ಗಳಿಸುತ್ತಾನೋ ಅಥವಾ ಸೋತು ಸುಣ್ಣವಾಗುತ್ತಾನೋ ಎಂಬುವುದು ಅವನ ಬದುಕಿನಲ್ಲಿ ಬರುವ ಕೆಲ ವ್ಯಕ್ತಿಗಳನ್ನು ಅವಲಂಬಿಸಿರುತ್ತದೆ. ಎಷ್ಟೇ ಹಣ, ಆಸ್ತಿ ಎಲ್ಲಾ ಮಾಡಬಹುದು, ಆದರೆ ನಮ್ಮ ಬದುಕಿನಲ್ಲಿ ಬರುವ ಈ ವ್ಯಕ್ತಿಗಳು ನಮ್ಮ ಸಂತೋಷ ಹಾಗೂ ನೆಮ್ಮದಿ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ.

ಹಾಗಾಗಿ ಯಾರ ಜೀವನದಲ್ಲಿ ಈ ಮೂವರು ಸರಿಯಾಗಿ ಸಿಗುತ್ತಾರೋ ಅವರು ಬದುಕಿನಲ್ಲಿ ಯಶಸ್ಸು ಪಡೆಯುತ್ತಾರೆ, ಅವರೇ ನಿಜವಾದ ಸಂಪತ್ತಿನ ಒಡೆಯರು, ಇಲ್ಲದಿದ್ದರೆ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗುವುದು, ಹಾಗಾಗಿ ಚಾಣಕ್ಯ ಸಂಬಂಧದ ಬಗ್ಗೆ ತುಂಬಾನೇ ಅದ್ಭುತವಾಗು ಹೇಳಿದ್ದಾರೆ, ಯಾರ ಬದುಕಿನಲ್ಲಿ ಈ ಮೂಝವರು ಸಿಗುತ್ತಾರೋ ಅವನೇ ನಿಜವಾದ ಶ್ರೀಮಂತ, ಏಕೆಂದರೆ ಇವರು ಇರುವಾಗ ಅದೃಷ್ಟಕ್ಕೆ ಯಾವ ಕೊರತೆಯೂ ಇರಲ್ಲ ಎಂದು ಹೇಳಿದ್ದಾರೆ, ಆ ವ್ಯಕ್ತಿಗಳೆಂದರೆ...
ಸನ್ನಡತೆಯ ಸಂಗಾತಿ
ನಮ್ಮ ಬಾಳಿನಲ್ಲಿ ನಾವು ಬಹುಪಾಲು ಕಳೆಯುವುದು ನಮ್ಮ ಸಂಗಾತಿಯ ಜೊತೆಗೆ. ಒಳ್ಳೆಯ ಗುಣದ ವ್ಯಕ್ತಿ ಸಂಗಾತಿಯಾಗಿ ಸಿಕ್ಕರೆ ಆ ವ್ಯಕ್ತಿ ಬಾಳಲ್ಲಿ ಸಂತೋಷಕ್ಕೆ ಯಾವ ಕೊರತೆಯೂ ಇರಲ್ಲ. ಸಂಗಾತಿ ಕಷ್ಟದಲ್ಲಿ, ಸುಖದಲ್ಲಿ ನಿಮ್ಮ ಜೊತೆ ನಿಲ್ಲುವವರಾಗಿರಬೇಕು, ಬುದ್ಧಿವಂತರಾಗಿರಬೇಕು, ನಿಮ್ಮನ್ನು ಅತೀವ ಪ್ರೀತಿಸುವವರು ಆಗಿರಬೇಕು, ಇಂಥ ಸಂಗಾತಿ ನಿಮ್ಮ ಜೊತೆ ಯಾವುದೇ ಕಾರಣಕ್ಕೆ ಕೊರತೆ ಉಂಟಾಗುವುದಿಲ್ಲ.
ಸಂಗಾತಿ ಸರಿಯಿಲ್ಲದಿದ್ದರೆ ಆ ವ್ಯಕ್ತಿ ಬದುಕಿನಲ್ಲಿ ಏನೇ ಮಾಡಲಿ ಬದುಕಿನಲ್ಲಿ ನೆಮ್ಮದಿ ಎಂಬುವುದು ಇರುವುದಿಲ್ಲ. ಕೆಟ್ಟ ಹೆಸರು ಬರಬಹುದು, ಸಂತೋಷ ಎಂಬುವುದು ತುಂಬಾನೇ ದೂರ ಹೋಗಬಹುದು, ಹಾಗಾಗಿ ಒಳ್ಳೆಯ ಗುಣದ ಸಂಗಾತಿ ನಮ್ಮ ಬದುಕಿಗೆ ನಿಜವಾಗಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ.
ಸನ್ನಡತೆಯ ಮಕ್ಕಳು
ಮಕ್ಕಳ ಸ್ವಭಾವ ಚೆನ್ನಾಗಿರಬೇಕು, ಮಕ್ಕಳು ನಮಗೆ ಕೀರ್ತಿಯನ್ನು ತರಬೇಕು, ನಮ್ಮ ಹೆಸರಿಗೆ, ನಂಬಿಕೆಗೆ ದ್ರೋಹ ಮಾಡಬಾರದು, ಸದಾ ಪೋಷಕರನ್ನು ನೋಡಿಕೊಳ್ಳಬೇಕು, ಅವರನ್ನು ಗೌರವಿಸಬೇಕು, ದೊಡ್ಡದಾದ ಮೇಲೆ ತಂದೆ-ತಾಯಿ ಜವಾನ್ದಾರಿ ನಮ್ಮದೆಂದು ತೆಗೆದುಕೊಳ್ಳುವ ಮಕ್ಕಳಿದ್ದರೆ ಪೋಷಕರಿಗೆ ಇನ್ನೇನು ಬೇಕು, ಅವರ ಸದಾ ಖುಷಿಯಾಗಿರುತ್ತಾರೆ.
ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗಿ ಬಹು ಎತ್ತರಕ್ಕೆ ಬೆಳೆಯಬೇಕೆಂದು ಪ್ರತಿಯೊಂದು ಪೋಷಕರೂ ಬಯಸುತ್ತಾರೆ, ಅದೇ ತಮ್ಮ ಮಗ ಅಥವಾ ಮಳ ಕೆಟ್ಟ ಹಾದಿಯನ್ನು ಹಿಡಿದಿದ್ದಾರೆ ಎಂದು ಗೊತ್ತಾದರೆ ನೆಮ್ಮದಿ ದೂರಾಗುವುದು, ಆ ಪೋಷಕರು ಕಣ್ಣೀರಿನಲ್ಲಿ, ಅವಮಾನ ಎದುರಿಸಿ ಬದುಕಬೇಕಾಗುತ್ತದೆ.
ಒಳ್ಳೆಯ ಸಂಗ
ಇನ್ನು ನಮ್ಮ ಬದುಕಿನಲ್ಲಿ ಹೆಚ್ಚು ಪ್ರಭಾವ ಬೀರುವವರೆಂದರೆ ಸ್ನೇಹಿತರು.ಒಳ್ಳೆಯ ಸ್ನೇಹಿತರಿದ್ದರೆ ನಾವು ಬೆಳೆಯುತ್ತೇವೆ, ಅದೇ ಕೆಟ್ಟ ಸ್ನೇಹಿತರಿದ್ದರೆ ಅವರು ನಮ್ಮನ್ನು ಕೂಡ ತಪ್ಪು ದಾರಿಗೆ ಪ್ರೇರೇಪಿಸುತ್ತಾರೆ. ಕೆಟ್ಟ ಸ್ನೇಹಿತರಿಂದ ಕೆಟ್ಟದು ಉಂಟಾಗುವುದು, ಅದೇ ಒಳ್ಳೆಯ ಸ್ನೇಹಿತರಿದ್ದರೆ ನಿಮಗೆ ಒಳಿತಾಗುವುದು, ಹಾಗಾಗಿ ಯಾರು ನಮ್ಮ ಸ್ನೇಹಿತರು ಎಂಬುವುದು ಕೂಡ ಮುಖ್ಯವಾಗುತ್ತದೆ, ಕೆಲವೊಂದು ಸ್ನೇಹಿತರು ಬದುಕಿನಲ್ಲಿ ಬಂದರೆ ಅವರು ನಮ್ಮ ಬದುಕಿನಲ್ಲಿ ಬಹುದೊಡ್ಡ ಬದಲಾವಣೆ ತರುತ್ತಾರೆ, ನಮ್ಮಲ್ಲಿ ಸಾಧ್ಯವಿಲ್ಲ ಎಂದು ಭಾವಿಸಿದ್ದನ್ನು ಇಲ್ಲಿ ನಿನ್ನಿಂದ ಸಾಧ್ಯ ಎಂಬುವುದಾಗಿ ಹ ಹುರಿದುಂಬುತ್ತಾರೆ, ವ್ಯಕ್ತಿಯ ವ್ಯಕ್ತಿತ್ವ ಅಳೆಯಬೇಕೆಂದರೆ ಅವರ ಸ್ನೇಹಿತರನ್ನು ಗಮನಿಸಿದರೆ ಸಾಕು ತಿಳಿಯುತ್ತದೆ.



Click it and Unblock the Notifications
