Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೀವನದಲ್ಲಿ ಕಷ್ಟ, ಸಂಕಷ್ಟ ಎದುರಿಸಲು ಬುದ್ಧ ಹೇಳಿದ ಎರಡು ಬಾಣಗಳ ಸಿದ್ಧಾಂತ..!!
ಜೀವನದಲ್ಲಿ ಸವಾಲುಗಳು, ಕಷ್ಟಗಳು, ಸಂಬಂಧಗಳಲ್ಲಿ ನೋವು, ಸಂಕಷ್ಟ ಎದುರಾಗೋದು ಸಾಮಾನ್ಯ. ಆದರೆ ಈ ಸಮಸ್ಯೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ. ಹೇಗೆ ಅದನ್ನು ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಸಮಸ್ಯೆಯ ತೀವ್ರತೆ ನಿರ್ಧಾರವಾಗಿತ್ತದೆ.
ನಮಗೆ ಎದುರಾಗುವ ಸಂಬಂಧಗಳ ನಡುವಿನ ಸಮಸ್ಯೆಯನ್ನ, ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ನಾವು ಯಾವ ರೀತಿಯ ಸಿದ್ಧತೆ ಮಾಡಿರುತ್ತೇವೆ. ಯಾವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇಂತಹ ಸಮಸ್ಯೆಗಳು ಎದುರಾದಾಗ ಸಹಾನುಭೂತಿ, ತಾಳ್ಮೆ ಮುಖ್ಯವಂತೆ. ಹೀಗಾಗಿ ಜೀವನದಲ್ಲಿ ಸುಖ, ನೆಮ್ಮದಿ ಬಯಸುವವರು ಬುದ್ಧನ ಎರಡು ಬಾಣಗಳ ಸಿದ್ಧಾಂತ ಪಾಲಿಸಬೇಕಂತೆ.

ಬುದ್ಧ ತನ್ನ ಬೋಧನೆಗಳಲ್ಲಿ ಎರಡು ಬಾಣಗಳ ಸಿದ್ಧಾಂತವನ್ನ ತಿಳಿಸಿದ್ದಾನೆ. ಬುದ್ಧ ತನ್ನ ಜೀವನದ ಉದ್ದೇಶ, ಸಾರವನ್ನು ತನ್ನ ಜೀವನದ ಉದ್ದಕ್ಕೂ ಬೋಧನೆಗಳಲ್ಲಿ ತಿಳಿಸಿದ್ದಾನೆ. ಈ ಸಿದ್ಧಾಂತಗಳಲ್ಲಿ ಆತನ ಎರಡು ಬಾಣದ ಸಿದ್ದಾಂತ ಬಹಳ ಮುಖ್ಯ ಎನಿಸಿದೆ. ಹಾಗಾದ್ರೆ ಏನಿದು ಬುದ್ಧನ ಎರಡು ಬಾಣಗಳ ಸಿದ್ದಾಂತ. ಇದರಿಂದ ನಮ್ಮ ಜೀವನದಲ್ಲಿ ಬದಲಾವಣೆ, ಯಶಸ್ಸು ಹೇಗೆ ಸಾಧ್ಯ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬುದ್ಧನ ಎರಡು ಬಾಣ ಸಿದ್ಧಾಂತ ಏನು ಹೇಳುತ್ತೆ?
ಬುದ್ಧನ ಎರಡು ಬಾಣಗಳ ಸಿದ್ಧಾಂತವು ಬೌದ್ಧ ಬೋಧನೆಗಳಲ್ಲಿ ನಾವು ಹೇಗೆ ಅನುಭವಿಸುತ್ತೇವೆ ಮತ್ತು ದುಃಖಕ್ಕೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ವಿವರಿಸಲು ಬಳಸಲಾಗುವ ಒಂದು ರೂಪಕವಾಗಿದೆ. ಇದರಲ್ಲಿ ಕಷ್ಟಗಳ ಎದುರಿಸುವುದು ಹೇಗೆ? ನಮ್ಮ ಕಷ್ಟಕ್ಕೆ ನಾವೇ ಹೇಗೆ ಕಾರಣವಾಗುತ್ತೇವೆ ಎಂಬ ಕುರಿತ ಸರಳ ವಿವರಣೆ ನೀಡಲಾಗಿದೆ.
ಮೊದಲ ಬಾಣ: ಅಂದರೆ ಇದು ಯಾರಿಂದಲೂ ತಪ್ಪಿಸಲಾಗದ ನೋವು, ಕಷ್ಟ, ಸಮಸ್ಯೆಯನ್ನು ಪ್ರತಿ ಬಿಂಬಿಸುತ್ತದೆ. ಇದು ಜೀವನದಲ್ಲಿ ನಮಗೆಬರುವ ಸಹಜ ನೋವು, ಕಷ್ಟವಂತೆ ಇದನ್ನು ಅನುಭವಿಸುವುದು ಬಿಟ್ಟು ಬೇರೆ ದಾರಿ ಇಲ್ಲವಂತೆ. ಈ ಬಾಣದಿಂದ ತಪ್ಪಿಸಿಕೊಳ್ಳಲು ಬೇರೆ ಮಾರ್ಗವಿಲ್ಲ. ಅಲ್ಲದೆ ಈ ಬಾಣವು ನಮ್ಮನ್ನು ಹುಡುಕದಿರಲು ಸಾಧ್ಯವಿಲ್ಲ ಎಂದು ಬುದ್ಧ ಹೇಳಿದ್ದಾನೆ.
ಎರಡನೇ ಬಾಣ: ಇದು ನಮಗೆ ಬಂದಿರು ಕಷ್ಟ, ನೋವಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದಾಗಿದೆ. ನಮ್ಮ ಕಷ್ಟ, ನೋವಿಗೆ ನಾವು ಹೇಗೆ ಪ್ರತಿಕ್ರಿಯಿಸಿ ಅದನ್ನು ದುಪ್ಪಟ್ಟಾಗಿಸುತ್ತೇವೆ ಎಂಬುದಾಗಿದೆ. ಅಂದರೆ ನಮ್ಮ ಕೋಪ, ಹತಾಶೆ, ಸಿಟ್ಟು, ತಾಳ್ಮೆ ಇಲ್ಲದಿರುವುದು ಇಂತಹ ಪ್ರತಿಕ್ರಿಯೆಯನ್ನು ತಿಳಿಸುತ್ತೆ. ಇದನ್ನು ನಾವು ತಪ್ಪಿಸಬಹುದು. ಈ ಬಾಣವನ್ನು ನಾವು ಶಮನ ಮಾಡಬಹುದು ಎಂಬುದು ಆತನ ವಾದವಾಗಿದೆ.
ನಾವು ಯಾವಾಗಲೂ ಮೊದಲ ಬಾಣವನ್ನು ತಪ್ಪಿಸಲು ಸಾಧ್ಯವಾಗದಿದ್ದರೂ, ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮಗೆ ನಿಯಂತ್ರಿಸಬಹುದು ಇದು ಎರಡನೇ ಬಾಣ ಎಂಬುದು ಆತನ ಸಿದ್ಧಾಂತದ ಸಾರವಾಗಿದೆ. ಎರಡನೇ ಬಾಣವು ನಮ್ಮನ್ನು ಹುಡುಕಿ ಬಂದಾಗ ಅದರಿಂದ ತಪ್ಪಿಸಿಕೊಳ್ಳಬೇಕು. ನಮ್ಮ ಕೋಪ, ಹತಾಶೆ, ಸ್ವಾರ್ಥವನ್ನ ಬಿಡಬೇಕು, ಹೀಗೆ ಮಾಡುವುದು ಮೊದಲ ಬಾಣ ಸೋಲಲು ಇರುವ ದಾರಿ ಎಂದಿದ್ದಾನೆ.
ಬುದ್ಧನ ಎರಡು ಬಾಣಗಳ ಸಿದ್ಧಾಂತವು ನಮಗೆ ಯಾವಾಗಲೂ ಆರಂಭಿಕ ನೋವು ಅಥವಾ ಜೀವನದಲ್ಲಿ ತೊಂದರೆಗಳನ್ನು ತಡೆಯಲು ಸಾಧ್ಯವಾಗದಿದ್ದರೂ, ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಆಯ್ಕೆ ಮಾಡುವ ಶಕ್ತಿಯನ್ನು ಹೊಂದಿದ್ದೇವೆ ಎಂದು ನಮಗೆ ಕಲಿಸುತ್ತದೆ. ಎರಡನೇ ಬಾಣದ ಬಗ್ಗೆ ಗಮನಹರಿಸುವ ಮೂಲಕ - ನಮಗೆ ನಾವು ತಂದುಕೊಳ್ಳುವ ನೋವು, ಸಂಕಟ, ಸಮಸ್ಯೆಗಳನ್ನು ದೂರ ಮಾಡಬಹುದು ಎಂಬುದನ್ನು ತಿಳಿಸುತ್ತದೆ.
ಈ ಸಿದ್ಧಾಂತವನ್ನು ಬುದ್ಧ ದಶಕಗಳ ಹಿಂದೆ ಹೇಳಿದ್ದರೂ ಇಂದಿಗೂ ಇವು ಪ್ರಸ್ತುತವಾಗಿವೆ. ಇದರಿಂದಲೇ ಜೀವನದ ಸಾರದಲ್ಲಿ ಬುದ್ಧನ ಸಿದ್ಧಾಂತಗಳು ನೆರವಾಗುತ್ತಲೇ ಇದೆ.



Click it and Unblock the Notifications