Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ 6 ರೀತಿಯ ಜನರಿಂದ ದೂರವಿರಿ..!!
ನಿಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಂದ್ರೆ ನೀವು ಒಂದಿಷ್ಟು ವಸ್ತುಗಳಿಂದ, ಒಂದಿಷ್ಟು ಆಹಾರಗಳಿಂದ ದೂರವಿರುವುದು. ಅಂದ್ರೆ ಕರಿದ ತಿಂಡಿ, ಎಣ್ಣೆಯುಕ್ತ ಆಹಾರ, ಸಿಹಿ ಹೀಗೆ ಕೆಲವೊಂದು ಆಹಾರಗಳಿಂದ ದೂರವಿದ್ಧರೆ ಆರೋಗ್ಯ ಚೆನ್ನಾಗಿರುತ್ತದೆ. ಹಾಗೆ ಮಾನಸಿಕ ಆರೋಗ್ಯಕ್ಕೂ ಕೆಲವೊಂದು ವಿಚಾರಗಳು ಬಹಳ ಮುಖ್ಯವಾಗುತ್ತದೆ.
ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಯೋಧ, ಧ್ಯಾನ, ವಿಶ್ರಾಂತಿ, ನಿದ್ರೆ ಹೀಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಇದರೊಂದಿಗೆ ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಕೆಲವು ಜನರಿಂದ ದೂರವಿರುವಂತೆಯೂ ಹೇಳಲಾಗುತ್ತೆ. ಅಲ್ಪರ ಸಂಗ ಅಭಿಮಾನ ಭಂಗ ಎಂಬ ನುಡಿಯಂತೆ ನೀವು ಯಾವ ರೀತಿಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಿಂದ ದೂರವಿದ್ದರೆ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.

ನಿಮ್ಮ ಮನಸ್ಥಿತಿ, ಚೈತನ್ಯ ಮತ್ತು ವ್ಯಕ್ತಿತ್ವವನ್ನು ಉತ್ತಮಗೊಳಿಸುವ ಜನರೊಂದಿಗೆ ನೀವು ಬೆರೆತರೆ ನಿಮ್ಮ ವ್ಯಕ್ತಿತ್ವ ಸಹ ಬೆಳಗುತ್ತದೆ. ಆದ್ರೆ ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಯಾರಿಂದ ದೂರವಿದ್ದರೆ ಒಳ್ಳೆಯದು.?
ಯಾವಾಗಲೂ ದೂರು ಹೇಳುವವರು
ನಿಮ್ಮ ಸುತ್ತಲಿನ ಮಂದಿ ಯಾವಾಗಲು ಯಾವುದಾದರು ವಿಚಾರವಾಗಿ ಕೇವಲ ದೂರುಗಳನ್ನೇ ಹೇಳುತ್ತಿದ್ದರೆ ಅಂತವರ ಸಂಘದಿಂದ ದೂರವಿರಬೇಕಂತೆ. ಉದಾಹರಣೆಗೆ ನೀವು ಹೋಗುತ್ತಿರುವ ಊರು, ಹವಾಮಾನ, ಹೋಟೆಲ್, ತಿಂಡಿ, ಊಟ ಹೀಗೆ ಪ್ರತಿಯೊಂದು ವಿಚಾರದಲ್ಲೂ ಅವರು ದೂರುಗಳನ್ನೇ ನೀಡುತ್ತಿದ್ದರೆ ಅವರ ಸಖ್ಯದಿಂದ ದೂರವಿರಬೇಕಂತೆ. ಹೀಗೆ ದೂರು ಹೇಳುವವರ ಸಂಘವು ನಕಾರಾತ್ಮಕತೆಯನ್ನು ಹರಡಲು ಕಾರಣವಾಗುತ್ತದೆ ಎನ್ನಲಾಗುತ್ತದೆ.
ತಮಾಷೆಯ ಹೆಸರಲ್ಲಿ ಅವಮಾನಿಸುವುದು
ನಿಮ್ಮ ಸುತ್ತ ಮುತ್ತಲಿನ ವ್ಯಕ್ತಿಗಳು ತಮಾಷೆಯ ಹೆಸರಿನಲ್ಲಿ ಅವಮಾನಿಸುತ್ತಿದ್ದರೆ ಈ ಜನರ ಸಂಘದಿಂದ ದೂರವಿರಬೇಕಂತೆ. ಏಕೆಂದರೆ ನಿಮ್ಮ ದುರ್ಬಲಗಳ ಸುತ್ತ ಅವರು ಬೇಲಿ ಮಾಡಲು ಮುಂದಾಗುತ್ತಾರೆ. ಇದರಿಂದ ನಿಮಗೆ ಅವಮಾನವಾಗುತ್ತಿರುತ್ತೆ. ಇದು ನಿಮ್ಮ ಮನಸಿಗೆ ನೆಮ್ಮದಿ ನೀಡದೆ ಇರಬಹುದು.
ಸದಾ ಅಸಮಾಧಾನ ಇರುವವರು
ಒಂದು ಸಣ್ಣ ಜಗಳ, ಒಂದು ಸಣ್ಣ ವಾದ ಮತ್ತು ಅವರು ತಮ್ಮ ಬಗ್ಗೆ ವಾದ ಮಾಡುತ್ತಾರೆ. ಅಂದರೆ ನಿಮ್ಮ ಕುರಿತು ಯಾವಾಗಲು ಅಸಮಾಧಾನ ಹೊಂದಿರುವವರು. ಅವರಿಗೆ ನೀವು ಮಾಡುವ ಯಾವ ಕೆಲಸಕ್ಕೂ ಸಮ್ಮತಿ ಸೂಚಿಸದೆ ಇರುವ ವ್ಯಕ್ತಿಯಾಗಿರುತ್ತಾರೆ, ಇದರಿಂದ ನಿಮ್ಮ ಬಳಿ ಯಾವಾಗಲು ನಕಾರಾತ್ಮಕ ವಿಚಾರಗಳು ಸುಳಿಯುವ ಸಾಧ್ಯತೆ ಇರುತ್ತದೆ.
ಸುಳ್ಳು ಹೇಳುವವರು
ನಿಮ್ಮ ಗೆಳೆಯರ ಗುಂಪಿನಲ್ಲಿ ಸುಳ್ಳು ಹೇಳುವವರು ಇದ್ದೇ ಇರುತ್ತಾರೆ. ಆದ್ರೆ ನಿಮ್ಮ ಎದುರಿನಲ್ಲಿಯೇ ಬೇರೆಯವರಿಗೆ ಸುಳ್ಳು ಹೇಳುವವರು ಕಂಡರೆ ಅವರಿಂದ ದೂರವೇ ಇರಬೇಕಂತೆ, ಇದರು ನಿಮ್ಮ ವ್ಯಕ್ತಿತ್ವದಲ್ಲೂ ಬದಲಾವಣೆಗೆ ಕಾರಣವಾಗಬಹುದು. ಹೀಗಾಗಿ ಇಂತವರ ಸಂಘದಿಂದ ದೂರವಿರುವುದು ಉತ್ತಮ.
ಹಣ ಖರ್ಚು ಮಾಡಲು ಹಿಂದೇಟು ಹಾಕುವವರು
ನಿಮ್ಮ ಜೊತೆಗಿರುವ ಮಂದಿಯಲ್ಲಿ ಕೆಲವರು ಹಣ ಖರ್ಚು ಮಾಡುವಾಗ ಜುಗ್ಗುತನ ಮಾಡುವವರು ಇರುತ್ತಾರೆ. ಆದ್ರೆ ಎಲ್ಲಾ ಸಮಯದಲ್ಲೂ ಇದು ಕೆಟ್ಟದು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಕಡೆಗಳಲ್ಲಿ ಅವರು ಹಣ ಖರ್ಚು ಮಾಡಲು ಹಿಂದೇಟು ಹಾಕುತ್ತಾರೆ. ಅದು ದೇವಾಲಯ, ಸ್ನೇಹಿತರ ಮದುವೆ ಸಮಾರಂಭ, ನಿರ್ಗತಿಕರಿಗೆ ನೀಡುವಾಗ, ಇಂತಹ ಸಮಯದಲ್ಲಿ ಅವರು ಹಣ ನೀಡಲು ಹಿಂದೇಟು ಹಾಕಿದರೆ ಇದು ಉತ್ತಮ ವ್ಯಕ್ತಿತ್ವವಲ್ಲ.
ಸೋಮಾರಿಗಳ ಸಂಘ
ನಿಮ್ಮ ಸ್ನೇಹಿತರ ಗುಂಪಿನಲ್ಲಿ ಯಾರಾದರು ಸೋಮಾರಿಗಳಿದ್ದರೆ ಅಂತವರ ಸಂಘದಿಂದ ದೂರವಿರಬೇಕಂಎ. ಇದು ನಿಮ್ಮ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರಲಿದೆ. ಅವರು ಎಲ್ಲರ ಮೇಲೂ ತಮ್ಮ ಯೋಚನೆಗಳ ಮೂಲಕ ಪ್ರಭಾವ ಬೀರಬಹುದು ಎನ್ನಲಾಗುತ್ತದೆ.



Click it and Unblock the Notifications