Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಸ್ಟೋರಿ ಓದಿದರೆ ಯಾವುದೇ ಕಾರಣಕ್ಕೂ ನಿಮ್ಮ ಪೋಷಕರನ್ನು ಬಿಟ್ಟುಕೊಡುವುದಿಲ್ಲ
ಈ ಲೇಖನ ಫೇಸ್ ಬುಕ್‌ನಲ್ಲಿ ಕಣ್ಣಿಗೆ ಬಿದ್ದಿದ್ದು, ಇದು ಪ್ರತಿಯೊಬ್ಬರಿಗೂ ಅನ್ವಯಿಸುವ, ಪ್ರತಿಯೊಬ್ಬರಿಗೆ ಪಾಠವನ್ನು ಹೇಳುವ ಬರಹವಾಗಿರುವುದರಿಂದ ಇದನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. ಇದರ ಮೂಲ ಬರಹಗಾರರಿಗೆ ಇಷ್ಟೊಂದು ಒಳ್ಳೆಯ ಕತೆ ನೀಡಿದ್ದಕ್ಕೆ ಧನ್ಯವಾದಗಳು.

ನಮ್ಮೆಲ್ಲರ ಮನೆಗಳಲ್ಲಿ ವಯಸ್ಸಾದವರು ಇರ್ತಾರೆ, ಆದರೆ ಆ ವಯಸ್ಸಾದವರನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಯೋಗ್ಯತೆಯನ್ನು ಅಳೆಯಲಾಗುವುದು. ಮಕ್ಕಳು ಹೇಗೇ ಇರಲಿ ಅಪ್ಪ-ಅಮ್ಮ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ಆದರೆ ಮಕ್ಕಳು ದೊಡ್ಡವರಾದ ಮೇಲೆ ಪೋಷಕರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದು ಬೆರಳಿಣಿಕೆಯಷ್ಟು ಮಕ್ಕಳು ಮಾತ್ರ.
ಎಲ್ಲಾ ಮಕ್ಕಳು ಹೆತ್ತ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವುದಾದರೆ ವೃದ್ಧಾಶ್ರಮವೇ ಇರ್ತಾ ಇರಲಿಲ್ಲ ಅಲ್ಲವೇ.... ಈ ಕತೆಯನ್ನು ಪ್ರತಿಯೊಬ್ಬ ಮಕ್ಕಳು ಓದಲೇಬೇಕು ನೋಡಿ...
ಒಬ್ಬ ಮಗ ತನ್ನ ವಯಸ್ಸಾದ ತಂದೆಯನ್ನು ರಾತ್ರಿ ಊಟಕ್ಕಾಗಿ ಉತ್ತಮ ರೆಸ್ಟೋರೆಂಟ್‌ಗೆ ಕರೆದೊಯ್ದ. ಅಪ್ಪ ನಡುಗುವ ಕೈಯಿಂದ ಊಟಮಾಡುವಾಗ ತನ್ನ ಬಟ್ಟೆಗಳ ಮೇಲೆ ಹಲವಾರು ಬಾರಿ ಆಹಾರವನ್ನು ಚೆಲ್ಲಿಕೊಂಡ. ಬಾಯಿ , ಗಲ್ಲ , ಕುತ್ತಿಗೆ ಮೇಲೆಲ್ಲಾ ಆಹಾರದ ತುಣುಕುಗಳು ಕಾಣುತ್ತಿದ್ದವು. ರೆಸ್ಟೋರೆಂಟ್‌ನಲ್ಲಿ ಊಟಮಾಡಲು ಕುಳಿತಿದ್ದ ಇತರ ಜನರು ಆ ವೃದ್ಧನನ್ನು ಅಸಹ್ಯದಿಂದ ನೋಡುತ್ತಿದ್ದರು. ಆದರೆ ಅವರ ಮಗನು ಶಾಂತವಾಗಿ ಕುಳಿತು ಅಪ್ಪನೊಡನೆ ಊಟಮಾಡುತ್ತಿದ್ದ.
ಊಟವಾದನಂತರ ಮಗ ಯಾವುದೇ ಮುಜಗರ, ನಾಚಿಕೆಯಿಲ್ಲದೆ ತನ್ನ ತಂದೆಯನ್ನು ವಾಶ್ ರೂಂಗೆ ಕರೆದೊಯ್ದ. ಅವರ ಬಾಯಿ ಮುಖ ಕುತ್ತಿಗೆಗಳಿಂದ ಆಹಾರದ ತುಣುಕುಗಳನ್ನು ಮೆಲ್ಲಗೆ ಒರಸಿ ತೆಗೆದು ಅವರ ಬಟ್ಟೆಗಳನ್ನು ತನ್ನ ಕರವಸ್ತ್ರಕ್ಕೆ ನೀರು ಹಾಕಿಕೊಂಡು ಚನ್ನಾಗಿ ಸ್ವಚ್ಛಗೊಳಿಸಿದ. ಅವರ ತಲೆಗೂದಲನ್ನು ಬಾಚಿ , ಕನ್ನಡಕದ ಗಾಜುಗಳನ್ನು ತೊಳೆದು ಬಟ್ಟೆಯಿಂದ ಒರಸಿ ಮತ್ತೆ ಹಾಕಿದನಂತರ ಅವರನ್ನು ಹೊರಗೆ ಕರೆತಂದ. ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಮೌನವಾಗಿ ಅವನತ್ತಲೇ ನೋಡುತ್ತಿದ್ದರು.
ಅನಂತರ ಅವನು ಬಿಲ್ ಪಾವತಿಸಿ ಅಪ್ಪನೊಂದಿಗೆ ಹೊರಗೆ ಹೊರಟನು. ಅಲ್ಲಿ ಊಟ ಮಾಡುತ್ತಿದ್ದ ಮತ್ತೊಬ್ಬ ವೃದ್ಧರು ಅವನನ್ನು ಕರೆದು ಕೇಳಿದರು - ನೀನು ಇಲ್ಲಿ ಏನನ್ನಾದರೂ ಬಿಟ್ಟು ಹೋಗುತ್ತಿದ್ದೀಯೆಂದು ನಿನಗೆ ಅನ್ನಿಸುತ್ತಿಲ್ಲವೇ? ಎಂದು ಕೇಳಿದರು
ಅದಕ್ಕೆ ಅವನು ಉತ್ತರಿಸಿದ - ಇಲ್ಲ ಸರ್, ನಾನು ಏನನ್ನೂ ಬಿಟ್ಟಿಲ್ಲ ಎಲ್ಲವನ್ನೂ ತೆಗೆದುಕೊಂಡಿದ್ದೇನೆ ಎಂದನು.
ವೃದ್ಧರು ಹೇಳಿದರು - ಮಗೂ , ನೀನು ಇಲ್ಲಿ ಪ್ರತಿಯೊಬ್ಬ ಮಗನಿಗೂ ಒಂದು ಶಿಕ್ಷಣವನ್ನು ಪಾಠವನ್ನು ಮತ್ತು ಪ್ರತಿಯೊಬ್ಬ ತಂದೆಗೂ ಒಂದು ಭರವಸೆಯನ್ನು ಬಿಟ್ಟುಹೋಗುತ್ತಿರುವೆ ಎಂದರು.
ಸಾಮಾನ್ಯವಾಗಿ ನಮ್ಮಂತಹಾ ವಯಸ್ಸಾದ ಹೆತ್ತವರನ್ನು ತಮ್ಮೊಂದಿಗೆ ಹೊರಗೆ ಕರೆದೊಯ್ಯಲು ಮಕ್ಕಳು ಇಷ್ಟಪಡುವುದಿಲ್ಲ , ಮತ್ತು ಅವರು ಹೇಳುತ್ತಾರೆ - ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ? ನಿಮಗೆ ಅಷ್ಟು ದೂರ ಬರಲು ಶಕ್ತಿಯಿಲ್ಲ, ಬಂದರೂ ಸರಿಯಾಗಿ ತಿನ್ನುವುದಿಲ್ಲ. ನೀವು ಮನೆಯಲ್ಲೇ ಇರಿ, ಅದು ನಿಮಗೇ ಒಳ್ಳೆಯದು , ಎನ್ನುತ್ತಾರೆ.
-
ಆದರೆ ನೀವು ಚಿಕ್ಕವರಿದ್ದಾಗ ನಿಮ್ಮ ಅಪ್ಪ ನಿಮ್ಮನ್ನು ತಮ್ಮ ಹೆಗಲುಮೇಲೆ ಹೊತ್ತು , ತೋಳುಗಳಲ್ಲಿ ಅವಚಿಕೊಂಡು ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಮರೆತುಬಿಡುತ್ತಾರೆ. ಮಗುವಾಗಿದ್ದಾಗ ನಿಮಗೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದಾಗ, ತಂದೆತಾಯಿ ತಮ್ಮ ಕೈಯಿಂದ ನಿಮಗೆ ಆಹಾರವನ್ನು ತಿನ್ನಿಸುತ್ತಿದ್ದರು ಮತ್ತು ನಿಮ್ಮ ಬಾಯಿಂದ ಆಹಾರವು ಶರೀರ, ಬಟ್ಟೆಗಳ ಮೇಲೆ ಬಿದ್ದಾಗ, ಅವರು ನಿಮ್ಮನ್ನು ಬೈಯದೆ ಪ್ರೀತಿಯಿಂದ ಸ್ವಚ್ಛ ಗೊಳಿಸುತ್ತಿದ್ದರು.
ಹಾಗಾದರೆ ಅದೇ ಹೆತ್ತವರು ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗಿರುವುದು ಏಕೆ? ಪೋಷಕರು ದೇವರ ರೂಪ. ಅವರಿಗೆ ಸೇವೆ ಮಾಡಿ, ಮತ್ತು ಪ್ರೀತಿಯನ್ನು ನೀಡಿ ನೆನಪಿಡಿ , ನಿಮಗೂ ವಯಸ್ಸಾಗುತ್ತದೆ. ನೀವೂ ವೃದ್ಧರಾಗುತ್ತೀರಿ.



Click it and Unblock the Notifications
