Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮತ್ತೊಮ್ಮೆ ಪ್ರೀತಿಯಲ್ಲಿ ಮೋಸ ಹೋಗದಿರಲು ಇಂಥರನ್ನೇ ನಿಮ್ಮ ಸಂಗಾತಿಯನ್ನಾಗಿಸಿ
ನಾವು ಆ ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿರುತ್ತೇವೆ ಎಂದರೆ ಆ ವ್ಯಕ್ತಿಯೇ ನನ್ನ ಬದುಕಿನ ಸರ್ವಸ್ವ ಎಂದು ಅಷ್ಟಾಗಿ ನಂಬಿರುತ್ತೇವೆ. ಅವರು ಮುಂದೊಂದು ದಿನ ನನ್ನ ಪ್ರೀತಿಗೆ ದ್ರೋಹ ಬಗೆಯುತ್ತಾನೆ/ಳೆ ಎಂಬ ಕಲ್ಪನೆಯೂ ನಮ್ಮಲ್ಲಿ ಇರಲ್ಲ. ಆದರೆ ಒಂದು ದಿನ ಆ ವ್ಯಕ್ತಿ ನಮ್ಮನ್ನು ಬಿಟ್ಟು ಹೋದಾಗ ಪ್ರೀತಿಯೆಂದರೆ ಅಸಹ್ಯ, ಜಿಗುಪ್ಸೆ ಎಲ್ಲಾ ಉಂಟಾಗುವುದು. ಅಲ್ಲಿಗೆ ಪ್ರೀತಿಯ ವಿಷಯದಲ್ಲಿ ಯಾರನ್ನೂ ನಂಬಲು ಮನಸ್ಸು ಸಿದ್ಧವಿರಲ್ಲ.

ಅದೇ ಕೆಲವರಿಗೆ ಒಂದು ಬಾರಿ ಮೋಸವಾದರೆ ಸರಿ ಆದರೆ ಆ ವ್ಯಕ್ತಿಯಂತೆ ಈ ವ್ಯಕ್ತಿ ಮೋಸ ಮಾಡಲ್ಲ ಎಂದು ಮತ್ತೆ ಪ್ರೀತಿಯಲ್ಲಿ ಬೀಳುತ್ತಾರೆ, ಮತ್ತೆ ಅವರನ್ನು ಕುರುಡಾಗಿ ನಂಬುತ್ತಾರೆ, ಆದರೆ ಮತ್ತೆ ಮೋಸ ಆಗ ಮಾತ್ರ ಮನಸ್ಸು ಛಿದ್ರವಾಗುತ್ತೆ, ಆ ಮನಸ್ಸು ಮತ್ತೆ ಯಾರನ್ನೂ ನಂಬಲು ಸಿದ್ಧವಾಗಲ್ಲ. ಅದಾದ ಮೇಲೆ ಯಾರನ್ನೂ ನೋಡಿದರೂ ಎಲ್ಲಿ ಮೋಸ ಮಾಡುತ್ತಾರೋ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಇದರಿಂದಾಗಿ ಪ್ರೀತಿಯಲ್ಲಿ ಮತ್ತೆ ಬೀಳಲು , ಆ ನೋವನ್ನು ಮತ್ತೆ ಅನುಭವಿಸಲು ಮನಸ್ಸು ಸಿದ್ಧವಾಗಲ್ಲ.
ಕೆಲವರು ಪ್ರೀತಿಯಲ್ಲಿ ಮೋಸ ಹೋಗಿ ಪ್ರೀತಿಯಲ್ಲಿರುವ ನಂಬಿಕೆಯೇ ಕಳೆದುಕೊಂಡು ಒಂಟಿಯಾಗಿರಲು ತೀರ್ಮಾನಿಸುತ್ತಾರೆ. ಇನ್ನು ಕೆಲವರು ಮೊದಲಿನಂತೆ ಮನಸಾರೆ ಪ್ರೀತಿಸುವ ಸಾಹಸ ಮಾಡಲ್ಲ. ನೀವು ಪ್ರೀತಿ ಮಾಡಿದ್ದು ಸುಳ್ಳಲ್ಲ, ಆದರೆ ನೀವು ಸರಿಯಾದ ವ್ಯಕ್ತಿಯ ಆಯ್ಕೆಯಲ್ಲಿ ಎಡವಿರುತ್ತೀರಿ, ಈ ಕಾರಣಕ್ಕೆ ನಿಮಗೆ ಮೋಸವಾಗಿರುತ್ತದೆ. ಪ್ರೀತಿಯಲ್ಲಿ ಮೋಸ ಹೋದೆ ಎಂದು ಹೇಳುವವರು ಒಂದು ವಿಷಯ ನೆನಪಿಟ್ಟುಕೊಳ್ಳಿ, ನೀವು ಪ್ರೀತಿಯಲ್ಲಿ ಸೋಲಲಿಲ್ಲ, ಆದರೆ ನಿಮ್ಮ ಪ್ರೀತಿಗೆ ಅರ್ಹ ವ್ಯಕ್ತಿ ಅವರಲ್ಲಅಷ್ಟೇ.
ನಿಮ್ಮ ಪ್ರೀತಿಗೆ ಅರ್ಹವಾದ ವ್ಯಕ್ತಿ ಖಂಡಿತ ಸಿಕ್ಕೇ ಸಿಗುತ್ತಾರೆ. ನೀವು ನಿಮ್ಮ ಬಾಳ ಸಂಗಾತಿಯಾಗುವವರಲ್ಲಿ ಈ ಗುಣಗಳಿವೆಯೇ ಎಂದು ನೋಡಿ, ಇದ್ದರೆ ಖಂಡಿತ ಅಂಥ ವ್ಯಕ್ತಿ ನಿಮಗೆ ಮೋಸ ಮಾಡಲ್ಲ, ನಿಮ್ಮ ಬದುಕಿನಲ್ಲಿ ಹೊಸ ಅರ್ಥ ಸಿಗುವುದು. ನಿಮ್ಮನ್ನು ತುಂಬಾ ಪ್ರೀತಿಸುವ, ನಿಮ್ಮ ಏಳು-ಬೀಳುಗಳಲ್ಲಿ ಸದಾ ಜೊತೆಗಿರುತ್ತಾರೆ. ಆದ್ದರಿಂದ ಪ್ರೀತಿಯಲ್ಲಿ ಮೋಸ ಹೋಗದಿರಲು ನಮ್ಮ ಸಂಗಾತಿಯಲ್ಲಿ ಈ ಗುಣಗಳಿದ್ದರೆ ಸಾಕು....
ನೀವು ಹೇಗೆ ಇದ್ದೀರೋ ಹಾಗೆ ಸ್ವೀಕರಿಸುವ ವ್ಯಕ್ತಿಯಾಗಿರಬೇಕು: ನಿಮ್ಮ ಸಂಗಾತಿಯಾಗುವ ವ್ಯಕ್ತಿ ನಿಮ್ಮನ್ನು ನಿಮ್ಮಂತೆಯೇ ಸ್ವೀಕರಿಸುವ ಗುಣದವರಾಗಿದ್ದರೆ ಅವರು ಎಂದಿಗೂ ನಿಮ್ಮನ್ನು ಬಿಟ್ಟು ದೂರ ಹೋಗಲ್ಲ. ಅದೇ ನಿಮ್ಮ ಹಣ ನೋಡಿ ಅಥವಾ ಅಂತಸ್ತು ನೋಡಿ ಪ್ರೀತಿಸುತ್ತಿದ್ದಾನೆ/ಳೆ ಎಂದಾದರೆ ಅವರಿಂದ ದೂರವಿಡಿ. ಬದಲಾಗುತ್ತಾರೆ ಎಂಬ ಭ್ರಮೆಯಲ್ಲಿ ಪ್ರೀತಿಸಲು ಹೋಗಬೇಡಿ.
ಒಬ್ಬರನ್ನೊಬ್ಬರು ಗೌರವಿಸುವಂತಿರಬೇಕು: ನಿಜವಾದ ಪ್ರೀತಿಯೆಂದರೆ ಒಬ್ಬರನ್ನೊಬ್ಬರು ಗೌರವಿಸಬೇಕು. ಎಲ್ಲಿ ಗೌರವಿರುತ್ತದೋ ಅಲ್ಲಿ ಹೊಂದಾಣಿಕೆ ಕೂಡ ಇರುತ್ತದೆ. ನಮ್ಮನ್ನು ಗೌರವಿಸುವ ವ್ಯಕ್ತಿ ಖಂಡಿತ ನಮಗೆ ನೋವುಂಟು ಮಾಡುವುದಿಲ್ಲ, ನಮಗೆ ಮೋಸ ಮಾಡುವುದಿಲ್ಲ. ಅದು ಅವರ ನಡವಳಿಕೆಯಲ್ಲಿ , ಮಾತುಗಳಲ್ಲಿ ಕಂಡು ಬರುತ್ತದೆ, ಇಂಥ ವ್ಯಕ್ತಿಗಳನ್ನು ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿ ಖಂಡಿತ ಮತ್ತೆ ಪ್ರೀತಿಯಲ್ಲಿ ನೋವುಂಟಾಗಲ್ಲ. ನಿಮ್ಮಿಬ್ಬರ ಅಂತಸ್ತು, ಜಾತಿ ಯಾವುದರಲ್ಲೂ ವ್ಯತ್ಯಾಸವಿದ್ದರೂ ಸರಿ ಆದರೆ ಪರಸ್ಪರ ಗೌರವದಿಂದ ನೋಡುವುದರಲ್ಲಿ ವ್ಯತ್ಯಾಸವಿರಬಹುದು.
ಅವರ ಜೊತೆ ಇದ್ದಾಗ ಅಭದ್ರತೆ ಕಾಡಬಾರದು: ಆ ವ್ಯಕ್ತಿ ಜೊತೆ ಇದ್ದಾಗ ಖುಷಿಯಾಗಿದ್ದೇನೆ ಎಂದು ಅನಿಸಬೇಕು. ಒಂದಿಷ್ಟೂ ಅಭದ್ರತೆ ಕಾಡಬಾರದು ಅಂದರೆ ಎಲ್ಲಿ ಆ ವ್ಯಕ್ತಿಯಿಂದ ಮೋಸ ಆಗುತ್ತದೋ ಅಥವಾ ನನ್ನ ಬಿಟ್ಟು ಹೋಗಬಹುದಾ ಈ ರೀತಿಯ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆ ಎಂದರೆ ನಿಮ್ಮಿಬ್ಬರ ಬಂಧ ಗಟ್ಟಿಯಾಗಿಲ್ಲ ಎಂದರ್ಥ. ನಮಗೆ ಅವರ ಜೊತೆಗೆ ಇದ್ದಾಗ ಯಾವ ಕಾರಣಕ್ಕೂ ಈ ವ್ಯಕ್ತಿಯಿಂದ ಮೋಸ ಆಗಲ್ಲ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡಬೇಕು. ಆಗ ಮಾತ್ರ ಆ ಬಂಧ ಗಟ್ಟಿಯಾಗಿರುತ್ತದೆ.
ಒಬ್ಬ ವ್ಯಕ್ತಿಯನ್ನು ಬೇಟಿ ಮಾಡಿದಾಗ ಅವರು ನಿಮಗೆ ಇಷ್ಟವಾದಾಗ ಈ ಮೇಲಿನ ಎಲ್ಲಾ ಅಂಶಗಳು ನಿಮ್ಮಿಬ್ಬರ ಸಂಬಂಧದಲ್ಲಿ ಇದೆ ಎಂದಾದರೆ ಅಂಥ ಸಂಬಂಧದಲ್ಲಿ ಮುಂದುವರೆಯಿರಿ, ಖಂಡಿತ ಈ ಬಾರಿ ಮೋಸ ಹೋಗಲ್ಲ...



Click it and Unblock the Notifications

