Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಾತ್ರೆಯಲ್ಲಿ ತನ್ನಿಷ್ಟದ ವರನ ಆರಿಸಿಕೊಳ್ಳುವ ಹುಡುಗಿ: ಈ ಬುಡಕಟ್ಟು ಆಚರಣೆಯೇ ವಿಚಿತ್ರ
ಆದಿವಾಸಿ ಸಮುದಾಯಗಳು ಹಾಗೂ ಅವರ ಆಚರಣೆಗಳು ಸ್ವಲ್ಪ ಭಿನ್ನವಾಗಿರುತ್ತವೆ. ಈ ನೆಲೆದ ಮೂಲ ಆಚರಣೆಗಳು ಉಳಿದಿರುವುದು ಅಂತಹ ಸಮುದಾಯದಲ್ಲಿಯೇ. ಇನ್ನು ಭಾರತದಲ್ಲಿ ಇಂತಹ ನೂರಾರು ಸಮುದಾಯ ಇಂದಿಗೂ ಆಧುನಿಕ ಜಗತ್ತಿನ ನಂಟಿನಿಂದ ದೂರವೇ ಉಳಿದು ಬದುಕುತ್ತಿವೆ. ಅದರಲ್ಲಿ ಕೆಲವು ಇಂದಿಗೂ ನಾಗರೀಕತೆಯಿಂದ ಹೊರಗುಳಿದರೆ ಮತ್ತೆ ಕೆಲ ಸಮುದಾಯ ಈಗತಾನೆ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿವೆ.
ಇಂತಹ ವಿಭಿನ್ನ ಸಮುದಾಯಗಳಲ್ಲಿ ವಿಚಿತ್ರ ಆಚರಣೆಗಳು ಜಾರಿಯಲ್ಲಿರುತ್ತವೆ. ಅದರಲ್ಲೂ ಮದುವೆಯ ವಿಚಾರದಲ್ಲಿ ಬಹುತೇಕ ಆದಿವಾಸಿ ಬುಡಕಟ್ಟು ಜನಾಂಗ ವಿಚಿತ್ರ ಆಚರಣೆಗಳು, ಸಂಪ್ರದಾಯಗಳ ಪಾಲಿಸುತ್ತವೆ. ಇಲ್ಲಿಯೂ ಸಹ ಅಂತಹದ್ದೆ ಸಮುದಾಯವೊಂದು ವಿಚಿತ್ರ ಸಂಪ್ರದಾಯ ಹೊಂದಿದೆ.

ರಾಜಸ್ಥಾನದ ಮೌಂಟ್ ಅಬು ಪರ್ವತ ಶ್ರೇಣಿಗಳ ಕುರಿತು ನೀವು ಕೇಳಿರಬಹುದು. ಈ ಸಾಲಿನಲ್ಲಿ ಜೀವಿಸುವ ಆದಿವಾಸಿ ಸಮುದಾಯದ ಮದುವೆಯ ಆಚರಣೆ ನಿಮ್ಮಲ್ಲಿ ಅಚ್ಚರಿ ಮೂಡಿಸಬಹುದು. ಹೌದು ಈ ಸಮುದಾಯದ ಯುವತಿಯರು ತಮ್ಮ ಪತಿಯನ್ನು ಆಯ್ಕೆ ಮಾಡಿಕೊಳ್ಳು ಸ್ವತಂತ್ರ ಹೊಂದಿರುತ್ತಾರೆ. ಆದರೆ ಈ ಆಚರಣೆಯಲ್ಲಿ ಒಂದು ಟ್ವಿಸ್ಟ್ ಇದೆ.
ಯುವತಿಯರು ಜಾತ್ರೆಯಲ್ಲಿ ವರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೌದು ತಮ್ಮ ಇಷ್ಟದ ಯುವಕನನ್ನು ಅವರು ಜಾತ್ರೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾತ್ರೆಯಲ್ಲಿ ತನ್ನಿಷ್ಟದ ಹುಡುಗನ ನೋಡಿದ ಯುವತಿಯರು ಅವರ ಜೊತೆ ಓಡಿ ಹೋಗುತ್ತಾರೆ. ಹುಡುಗಿ ಓಡಿ ಹೋದ ಸುದ್ದಿಯನ್ನು ಅಲ್ಲಿದ್ದ ಪರಿಚಯಸ್ಥರು ಆಕೆಯ ಕುಟುಂಬಸ್ಥರಿಗೆ ಮುಟ್ಟಿಸುತ್ತಾರೆ. ಬಳಿಕ ಇಬ್ಬರೂ ಮನೆಯವರು ಮಾತನಾಡಿ ಮದುವೆ ಕಾರ್ಯ ಮಾಡಿಸಲು ಮುಂದಾಗುತ್ತಾರೆ.
ಕೆಲವು ಸಂದರ್ಭಗಳಲ್ಲಿ ಹುಡುಗ ಹಾಗೂ ಹುಡುಗಿ ಮನೆಯವರಿಗೆ ಪರಸ್ಪರ ಒಪ್ಪಿಗೆ ಇಲ್ಲದಿದ್ದಾಗ, ಹುಡುಗ ಹುಡುಗಿ ಅನಧಿಕೃತ ಮದುವೆಯಾಗುತ್ತಾರಂತೆ, ಬಳಿಕ ಇಬ್ಬರಿಗೂ ಮಕ್ಕಳಾದಾಗ ಅವರ ಸಮ್ಮುಖದಲ್ಲಿ ಮತ್ತೆ ಮದುವೆಯಾಗಬೇಕಂತೆ. ಈ ಮದುವೆಯಲ್ಲಿ ಅವರ ಮಕ್ಕಳು ಡ್ರಮ್ ಬಾರಿಸಬೇಕಂತೆ. ಅಲ್ಲದೆ ಈ ಜಗಳವನ್ನು ಹಿರಿಯರು ಮತ್ತು ಊರಿನ ಪಟೇಲರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರಂತೆ. ಆದರೆ ಜಾತ್ರೆಯಲ್ಲಿ ಹುಡುಗಿ ನೀಡಿದ ಹುಡುಗನನ್ನೇ ಮನೆಯವರು ಒಪ್ಪಬೇಕಂತೆ. ಬಹುಪಾಲು ಒಪ್ಪಿಕೊಳ್ಳುತ್ತಾರಂತೆ. ಇಲ್ಲವೆ ಹುಡುಗನ ಮನೆಯವರು ಒಪ್ಪಿಸುವ ಜವಾಬ್ದಾರಿ ಪಡೆಯಬೇಕಂತೆ. ಇನ್ನು ಈ ಮದುವೆ ಸಮಾರಂಭದಲ್ಲಿ ಯಾವುದೇ ವರ ದಕ್ಷಿಣೆ, ವಧು ದಕ್ಷಿಣೆಯ ಪ್ರಸಂಗವೇ ಬರುವುದಿಲ್ಲವಂತೆ.
ಈ ಮದುವೆ ಸಂಪ್ರದಾಯ ತುಂಬಾ ವಿಚಿತ್ರ ಎನಿಸಬಹುದು. ಆದರೆ ಅಂದಿನಿಂದ ಇಂದಿನ ವರೆಗೂ ಇದೇ ರೀತಿಯ ಸಂಪ್ರದಾಯ ನಡೆದುಕೊಂಡು ಬಂದಿದೆಯಂತೆ. ಆದರೆ ಇದೇ ಬುಡಕಟ್ಟು ಜನಾಂಗದ ಮತ್ತೊಂದು ಸಂಪ್ರದಾಯ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ.
ಬುಡಕಟ್ಟು ಜನಾಂಗದ ಕುಟುಂಬದಲ್ಲಿ ತಂದೆ ತೀರಿ ಕೊಂಡರೆ ಆ ದುಖಃ ಕಳೆಯಲು ಅವರು ನೃತ್ಯ ಮಾಡುತ್ತಾರೆ. ಹೌದು ಅವರ ಚಿತಾಭಸ್ಮವನ್ನು ಧಾರ್ಮಿಕ ಆಚರಣೆಗಳಂತೆ ನದಿಯಲ್ಲಿ ಬಿಟ್ಟು ಬಳಿಕ ಮನೆಗೆ ಬಂದು ನೃತ್ಯ ಮಾಡುತ್ತಾರೆ.
ರಾಜಸ್ಥಾನವಲ್ಲದೆ, ಇತರ ಸ್ಥಳಗಳಿಂದ ಆದಿವಾಸಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪಿತೃ ತರ್ಪಣದ ನಂತರ ಯುವಕ-ಯುವತಿಯರು ತಮ್ಮ ಮನೆಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಶೋಕವನ್ನು ಕೊನೆಗೊಳಿಸುತ್ತಾರೆ. ಈ ಕ್ಷಣದಲ್ಲಿ, ಪುರುಷರು ಮತ್ತು ಮಹಿಳೆಯರ ನಡುವಿನ ವೈವಾಹಿಕ ಮೈತ್ರಿಗಳನ್ನು ಸಹ ಅಂತಿಮಗೊಳಿಸಲಾಗುತ್ತದೆ.
ಇದರ ಜೊತೆಗೆ ಈ ಸಮುದಾಯದಲ್ಲಿ ಸಾವಿಗೂ ಸಂಭ್ರಮ ಪಡುವ ಸಂಪ್ರದಾಯವಿದೆ. ಪಿತೃ ತರ್ಪಣದ ಬಳಿಕ ಈ ಸಮುದಾಯದ ಮಂದಿ ಹಾಡು, ನೃತ್ಯದಲ್ಲಿ ಭಾಗಿಯಾಗುತ್ತಾರೆ. ಹಾಗೂ ಅದು ಆ ಕುಟುಂಬದ ಒಳ್ಳೆಯ ದಿನ ಎಂದು ಪರಿಗಣಿಸುತ್ತಾರೆ.



Click it and Unblock the Notifications
