Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮದುವೆಗೂ ಮೊದಲು ಗಂಡು-ಹೆಣ್ಣು ಈ ವಿಚಾರದ ಬಗ್ಗೆ ಮಾತನಾಡದಿದ್ದರೆ ಆಪತ್ತು ತಪ್ಪಿದ್ದಲ್ಲ!
ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಎರಡನೇ ಅಧ್ಯಾಯ ಇದ್ದ ಹಾಗೆ. ಮದುವೆಗೂ ಮೊದಲು ಒಂದು ಅಧ್ಯಾಯ ಆದರೆ ಮದುವೆಯ ನಂತರ ಮತ್ತೊಂದು ಅಧ್ಯಾಯ. ಈ ಎರಡನೇ ಅಧ್ಯಾಯ ಸಾಯುವವರೆಗೂ ನಮ್ಮ ಜೊತೆಯಲ್ಲೇ ಇರುತ್ತದೆ. ಹೀಗಾಗಿ ನಾವು ನಮ್ಮ ಬಾಳ ಸಂಗಾತಿಯನ್ನು ಆಯ್ದುಕೊಳ್ಳುವಾಗ ತುಂಬಾನೇ ಹುಷಾರಾಗಿ ಇರಬೇಕು.
ನಮ್ಮ ಆಲೋಚನೆ, ನಮ್ಮ ಮನಸ್ಥಿತಿ ನಮ್ಮ ನಿರ್ಧಾರಗಳು, ಹಾಗೂ ನಮ್ಮನ್ನು ಅರ್ಥ ಮಾಡಿಕೊಳ್ಳುವವರನ್ನು ಮದುವೆಯಾದರೆ ಬದುಕು ತುಂಬಾನೇ ಚೆನ್ನಾಗಿರುತ್ತದೆ. ಅಷ್ಟಕ್ಕು ಮದುವೆಗೂ ಮೊದಲು ನಾವು ನಮ್ಮ ಬಾಳ ಸಂಗಾತಿಯಾಗುವವರ ಜೊತೆ ಯಾವ ವಿಚಾರಗಳ ಬಗ್ಗೆ ಚರ್ಚಿಸಬೇಕು ಅನ್ನೋದನ್ನು ತಿಳಿಯೋಣ.

1. ಹಣದ ಬಗ್ಗೆ ಚರ್ಚಿಸಿ
ಮದುವೆಗೂ ಮೊದಲು ನೀವು ನಿಮ್ಮ ಸಂಗಾತಿಯ ಜೊತೆಗೆ ಹಣದ ಬಗ್ಗೆ ಚರ್ಚೆ ಮಾಡಲೇಬೇಕು. ಅವರ ದುಡಿಮೆ ಹಾಗೂ ಉಳಿತಾಯದ ಬಗ್ಗೆ ಮಾತನಾಡಿ. ಒಂದು ವೇಳೆ ಇಬ್ಬರೂ ಕೆಲಸಕ್ಕೆ ಹೋಗುವವರಾದರೆ ಕುಟುಂಬವನ್ನು ನಿಭಾಯಿಸೋದು ಹೇಗೆ? ಖರ್ಚು-ವೆಚ್ಚಗಳು ಯಾವ ರೀತಿ ಹಂಚಿಕೆಯಾಗಬೇಕು? ಈ ಬಗ್ಗೆ ಅವರಿಗೆ ಒಪ್ಪಿಗೆ ಇದ್ಯಾ ಎಂದು ಕೇಳಿ ತಿಳಿದುಕೊಳ್ಳಿ. ಇಬ್ಬರಿಗೂ ಒಪ್ಪಿಗೆಯಾದರೆ ಪರವಾಗಿಲ್ಲ. ಒಂದು ವೇಳೆ ಇಬ್ಬರಲ್ಲಿ ಮನಸ್ಥಾಪ ಬಂದರೆ ಆ ಸಂಬಂಧವನ್ನು ಮುಂದುವರಿಸೋದು ಬೇಡ.
2. ಐದು ವರ್ಷದ ಯೋಜನೆ ಬಗ್ಗೆ ಮಾತನಾಡಿ
ಮದುವೆ ಅಂದರೆ ಸಾಮಾನ್ಯವಾಗಿ ಖರ್ಚು ಇದ್ದೇ ಇರುತ್ತದೆ. ಗಂಡು ಹಾಗೂ ಹೆಣ್ಣು ಇಬ್ಬರಿಗೂ ಕೆಲವೊಂದು ಸಾಲಗಳು ಆಗುತ್ತದೆ. ಈ ಸಾಲಗಳನ್ನು ತೀರಿಸದ ಹೊರತಾಗಿ ಬೇರೆ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳಬೇಡಿ. ಇನ್ನೂ ಮದುವೆಯಾದ ಐದು ವರ್ಷದವರೆಗೂ ಒಂದು ಬಜೆಟ್ ಪ್ಲಾನ್ ಮಾಡ್ಕೊಳ್ಳಿ. ಅದ್ರಲ್ಲಿ ಮನೆ ಖರೀದಿ, ವಾಹನ ಖರೀದಿ, ಅಥವಾ ಯಾವುದಾದರೂ ಜಾಗ ಖರೀದಿ ಮಾಡಲು ಹಣ ಹೂಡಿಕೆ ಮಾಡಿ.
3. ಹಳೆಯ ಸಂಬಂಧದ ಬಗ್ಗೆ ಮಾತನಾಡಿ
ಪ್ರತಿಯೊಬ್ಬರೂ ಪ್ರೀತಿ ಮಾಡಿರುತ್ತಾರೆ. ಯಾವುದಾದರೂ ಕಾರಣಕ್ಕೆ ಹಳೆಯ ಪ್ರೀತಿಯನ್ನು ಮುರಿದುಕೊಂಡಿರಬಹುದು. ನೀವು ಮದುವೆಯಾಗೋದಕ್ಕೆ ನಿರ್ಧರಿಸಿರುವ ಹುಡುಗ/ಹುಡುಗಿಯ ಬಳಿ ಈ ವಿಚಾರದ ಬಗ್ಗೆ ಮಾತನಾಡಿ. ಯಾವ ಕಾರಣಕ್ಕೆ ಬ್ರೇಕ್ ಅಪ್ ಆಯ್ತು ಅನ್ನೋದನ್ನು ಅವರಿಗೆ ತಿಳಿಸಿ. ಒಂದು ವೇಳೆ ಹಳೆಯ ಪ್ರೀತಿಯ ವಿಚಾರವನ್ನು ಅವರಿಂದ ಮುಚ್ಚಿಟ್ಟರೆ ಮುಂದೆ ಅದರಿಂದ ನಿಮಗೆ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ.
4. ಮನೆ ಕೆಲಸದ ಬಗ್ಗೆ ಮಾತನಾಡಿ
ಹಿಂದೆಲ್ಲಾ ಮನೆ ಕೆಲಸವನ್ನು ಹೆಂಗಸರೇ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹೆಂಗಸರು ದುಡಿಯೋದಕ್ಕೆ ಹೋಗುತ್ತಿರೋದ್ರಿಂದ ಮನೆ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನೀವು ಅವರ ಮೇಲೆ ಹೊರಿಸೋದಕ್ಕೆ ಆಗೋದಿಲ್ಲ. ಹೀಗಾಗಿ ಮದುವೆಯಾದ ಮೇಲೆ ಯಾವ ಕೆಲಸವನ್ನು ಯಾರು ಮಾಡಬೇಕು ಎಂದು ಚರ್ಚಿಸಿ ಒಂದು ನಿರ್ಧಾರಕ್ಕೆ ಬನ್ನಿ.
5. ಸಂಗಾತಿಯ ಕುಟುಂಬಸ್ಥರನ್ನು ಭೇಟಿಯಾಗಿ
ನೀವು ನಿಮ್ಮ ಮದುವೆಯಾಗೋ ಭಾವಿ ಸಂಗಾತಿಯನ್ನು ತಿಳಿದುಕೊಳ್ಳೋದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ನೀವು ಅವರ ಕುಟುಂಬಸ್ಥರನ್ನು ತಿಳಿದುಕೊಂಡಿರಬೇಕು. ಹೀಗಾಗಿ ಸಮಯ ಸಿಕ್ಕಾಗ ಸಂಗಾತಿಯ ಕುಟುಂಬಸ್ಥರನ್ನು ಭೇಟಿಯಾಗಿ ಅವರ ಜೊತೆಗೆ ಮಾತನಾಡಿ. ಆಗ ಅವರ ಆಲೋಚನೆ, ನಿರ್ಧಾರಗಳ ಬಗ್ಗೆ ನಿಮಗೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ.
6. ಮಕ್ಕಳ ವಿಚಾರವಾಗಿ ಮಾತನಾಡಿ
ಮಕ್ಕಳ ಹೊರತಾಗಿ ಒಂದು ಸುಂದರ ಸಂಸಾರ ಸಂಪೂರ್ಣವಾಗೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಮದುವೆಗೂ ಮೊದಲು ಸಂಪತಿಗಳು ಮಕ್ಕಳ ವಿಚಾರವಾಗಿ ಮಾತನಾಡಬೇಕು. ಇಬ್ಬರಲ್ಲಿ ಒಬ್ಬರಿಗೆ ಮದುವೆಯಾದ ತಕ್ಷಣ ಮಕ್ಕಳು ಬೇಕು ಅನ್ನಿಸಬಹುದು. ಆದ್ರೆ ಇನ್ನೊಬ್ಬರು ಕೆಲವು ವರ್ಷಗಳ ಕಾಲ ಮಕ್ಕಳು ಬೇಡ ಎಂದು ನಿರ್ಧರಿಸಿ ತಮ್ಮ ವೃತ್ತಿ ಜೀವನದ ಬಗ್ಗೆ ಫೋಕಸ್ ಮಾಡುತ್ತಿರಬಹುದು.
ಹೀಗಾಗಿ ಮದುವೆಯ ನಂತರ ಈ ವಿಚಾರದಲ್ಲಿ ಮನಸ್ಥಾಪ ಉಂಟಾಗಲೂ ಅವಕಾಶ ನೀಡಬಾರದು. ಮೊದಲೇ ಈ ಬಗ್ಗೆ ಚರ್ಚಿಸಿ. ಇನ್ನೂ ಇಬ್ಬರ ವಯಸ್ಸು ಹಾಗೂ ಆರೋಗ್ಯದ ಸ್ಥಿತಿಯನ್ನು ನೋಡಿಕೊಂಡು ಕೂಡ ಮಕ್ಕಳು ಮಾಡೋ ಯೋಚನೆ ಬಗ್ಗೆ ನಿರ್ಧರಿಸೋದು ಉತ್ತಮ.
7. ಮನೆಯ ಆಚಾರ-ವಿಚಾರಗಳ ಬಗ್ಗೆ ಮಾತನಾಡಿ
ಸಾಮಾನ್ಯವಾಗಿ ಒಂದೇ ಜಾತಿಯಲ್ಲಿ ವಿವಾಹವಾಗಿದ್ದರೆ ಆಚಾರ-ವಿಚಾರ ಹಾಗೂ ಕಟ್ಟು ಪಾಡುಗಳು ಎರಡು ಮನೆಯಲ್ಲಿ ಒಂದೇ ರೀತಿ ಇರುತ್ತದೆ. ಬೇರೆ ಜಾತಿ ಅಥವಾ ಬೇರೆ ಧರ್ಮದಲ್ಲಿ ಮದುವೆಯಾದರೆ ಮನೆಯ ವಾತಾವರಣವೇ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಮನೆಗೆ ಬಂದ ಹೆಣ್ಣು ಗಳಿಗೆ ಮೊದಲಿಗೆ ಇದಕ್ಕೆಲ್ಲಾ ಹೊಂದಿಕೊಂಡು ಹೋಗೋದು ಕಷ್ಟ ಆಗಬಹುದು. ಹೀಗಾಗಿ ಈ ಬಗ್ಗೆ ಅವರಲ್ಲಿ ಮಾತನಾಡಿ.
ಈ ಎಲ್ಲಾ ವಿಚಾರದ ಬಗ್ಗೆ ಗಂಡು-ಹೆಣ್ಣು ಮದುವೆಗೂ ಮೊದಲೇ ಮಾತನಾಡಿದರೆ ತುಂಬಾನೇ ಒಳ್ಳೆಯದು. ಯಾಕಂದ್ರೆ ಮದುವೆಯಾದ ನಂತರ ಯಾವುದೇ ವಿಚಾರದಲ್ಲಿ ಮನಸ್ಥಾಪ ಉಂಟಾಗಲು ಅವಕಾಶ ನೀಡಬಾರದು.



Click it and Unblock the Notifications

