Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ರೀತಿಯ 4 ಹಣದ ಸಮಸ್ಯೆ ಇರುವ ಸಂಸಾರ ಮುರಿದು ಬೀಳುತ್ತೆ!
ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗಲು ಹಣದ ಸಮಸ್ಯೆ ಕಾರಣವಾಗುವುದೇ? ಎಂದು ಕೇಳುವುದಾದರೆ ನೂರಕ್ಕೆ ನೂರು ಇದು ಪ್ರಮುಖ ಕಾರಣವಾಗುತ್ತೆ ಎಂದು ಹೇಳಬಹುದು. ಹೌದು ಸಂಸಾರದಲ್ಲಿ ಪ್ರೀತಿಯೊಂದೇ ಸಾಲದು ಕುಟುಂಬ ಚೆನ್ನಾಗಿರಬೇಕೆಂದರೆ ಹಣ ನಿರ್ವಹಣೆಯ ಕಲೆ ಕೂಡ ಗೊತ್ತಿರಬೇಕು, ಇಲ್ಲದಿದ್ದರೆ ಗಂಡ ಹೆಂಡತಿಯಲ್ಲಿ ಬೆಂಕಿಯ ಕಿಡಿ ಚಿಕ್ಕದಾಗಿ ಹೊತ್ತಿಕೊಂಡು ದಿನದಿಂದ ದಿನಕ್ಕೆ ಇಬ್ಬರ ನಡುವೆ ಸಮಸ್ಯೆಗಳು ಹೆಚ್ಚಾಗುತ್ತಾ ಕೊನೆಗೆ ಬೆಂಕಿಯ ಕೆನ್ನಾಲೆಗೆ ದಾಂಪತ್ಯ ಜೀವನ ಸುಟ್ಟು ಹೋಗುವುದು. ಅದರಲ್ಲೂ ಸಂಸಾರವನ್ನು ಕೊಂದು ಹಾಕಲು ಈ 6 ಹಣದ ಸಮಸ್ಯೆಗಳೇ ಸಾಕು...

1. ಹಣ ಗಳಿಸಲು ಸಾಧ್ಯವಾಗದೇ ಇದ್ದಾಗ
ಸಂಸಾರ ನಿರ್ವಹಣೆಗೆ ಹಣ ತುಂಬಾನೇ ಮುಖ್ಯವಾಗುತ್ತದೆ. ಪ್ರತಿಯೊಂದು ಸಂಸಾರದಲ್ಲಿ ಕೆಲವೊಮ್ಮೆ ಹಣಕ್ಕೆ ತೊಂದರೆ ಉಂಟಾಗುವುದು. ಅದನ್ನು ಹೊಂದಿಸಲು ಕಷ್ಟವೂ ಆಗಬಹುದು, ಅಂಥ ಸಮಸ್ಯೆ ಸಂಸಾರದಲ್ಲಿ ತೊಂದರೆ ಉಂಟು ಮಾಡಲ್ಲ, ಆದರೆ ಚಿಕ್ಕ ಪುಟ್ಟ ವಿಷಯಕ್ಕೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಗಂಡ-ಹೆಂಡತಿ ನಡುವೆ ಅಸಮಧಾನ ಉಂಟಾಗುವುದು, ಇಬ್ಬರ ನಡುವೆ ಕಿತ್ತಾಟ ಶುರುವಾಗುವುದು. ಅದರಲ್ಲೂ ಬಹು ಮುಖ್ಯವಾಗಿ ಮನೆಯ ಗಂಡಸು ಹಣ ಗಳಿಸದೆ, ಕುಟುಂಬದ ನಿರ್ವಹಣೆ ಸರಿಯಾಗಿ ಮಾಡದೇ ಇದ್ದರೆ ಕುಟುಂಬದಲ್ಲಿ ದೊಡ್ಡ ಸಮಸ್ಯೆ ಉಂಟಾಗುವುದು.
2. ಹಳೆಯ ಸಾಲ '
ಮದುವೆಯಾಗುವಾಗ ಕೆಲವರು ಸಾಲ ಮಾಡುತ್ತಾರೆ, ಆದರೆ ಅದರ ಜೊತೆ ಇನ್ನು ಹಲವು ಸಾಲಗಳಿದ್ದರೆ ಸಾಲದ ಹೊರೆ ತುಂಬಾನೇ ಅಧಿಕವಾಗುವುದು, ಮದುವೆಯಾದ ಈ ಸಾಲದ ಹೊರೆಯಿಂದಾಗಿ ಚಿಕ್ಕ ಪುಟ್ಟ ಆಸೆ ಪೂರೈಸಲು ಕಷ್ಟವಾಗುವುದು. ಉದಾಹರಣೆ ಚಿಕ್ಕದಾಗಿ ಒಂದು ಗಿಫ್ಟ್ ನೀಡಲು, ಇಬ್ಬರು ಸೇರಿ ಒಂದು ಟ್ರಿಪ್ ಹೋಗಲು ಎಲ್ಲದಕ್ಕೂ ಲೆಕ್ಕಚಾರ ಮಾಡುತ್ತಾ ಕೂರ ಬೇಕಾಗುವುದು, ಇದೇ ರೀತಿ ಜೀವನ ಮುಂದುವರೆದರೆ ಇದರಿಂದ ನಿಮ್ಮ ಸಂಗಾತಿಯ ಮನಸ್ಸಿಗೆ ತುಂಬಾನೇ ಬೇಸರವಾಗುತ್ತದೆ, ಸಂಗಾತಿಯ ಮೇಲೆ ಅಸಮಧಾನ ಉಂಟಾಗುವುದು, ಇವೆಲ್ಲಾ ಸಂಸಾರದ ಮೇಲೆ ಕೆಟ್ಟ ಪರಿಣಾಮ ಬೀರುವುದು.
3. ಇಬ್ಬರ ಜೀವನಶೈಲಿಯಲ್ಲಿ ತುಂಬಾನೇ ವ್ಯತ್ಯಾಸವಿದ್ದಾಗ
ಒಬ್ಬರು ಹೆಚ್ಚಾಗಿ ಖರ್ಚು ಮಾಡಲು ಇಷ್ಟಪಡುವುದಿಲ್ಲ, ಮತ್ತೊಬ್ಬರಿಗೆ ಲ್ಯಾವಿಶ್ ಬದುಕೆಂದರೆ ತುಂಬಾ ಇಷ್ಟ, ಖರ್ಚು ಮಾಡಲು ಹಿಂದೆ ಮುಂದೆ ನೋಡಲ್ಲ ಎಂದಾದಾಗ ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಲಾರಂಭಿಸುತ್ತದೆ, ಮುಂದೆ ಇದೇ ಕಾರಣದಿಂದ ಸಂಸಾರ ಮುರಿದು ಬೀಳಬಹುದು, ಆದ್ದರಿಂದ ಮದುವೆಗೆ ಮೊದಲೇ ತಮ್ಮ ಗುಣ ಹೀಗೆ ಎಂದು ಹೇಳಿಕೊಳ್ಳುವುದು ಒಳ್ಳೆಯದು.
4. ಕುಟುಂಬದ ನಿರ್ವಹಣೆಗೆ ಪತಿ ಹಣ ನೀಡದೇ ಇದ್ದಾಗ
ಸಾಮಾನ್ಯವಾಗಿ ನಮ್ಮ ಭಾರತೀಯ ಸಮಾಜದಲ್ಲಿ ಪುರುಷ ದುಡಿದು ಕುಟುಂಬ ನಿರ್ವಹಣೆ ಮಾಡಬೇಕು ಎಂದು ಹೇಳಲಾಗುವುದು. ಆದರೆ ಪುರುಷ ತಾನು ಕುಟುಂಬದ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ಉಂಡಾಡಿ ಗುಂಡನ ರೀತಿ ಇದ್ದರೆ ಕುಟುಂಬದಲ್ಲಿ ತುಂಬಾನೇ ಸಮಸ್ಯೆ ಉಂಟಾಗುವುದರಲ್ಲಿ ನೋ ಡೌಟ್.



Click it and Unblock the Notifications