Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಸಂಗಾತಿ ಜೊತೆ ಜಗಳವಾಡಿದರೆ ಹೀಗೆ ಮಾಡಬಹುದೇ?
ಜಗಳ ಮಾಡದೆ ಬಾಳ್ವೆ ಮಾಡುತ್ತಿರುವ ಗಂಡ-ಹೆಂಡತಿ ಈ ಪ್ರಪಂಚದಲ್ಲಿ ಯಾರೂ ಇರಲ್ಲ, ಸಣ್ಣ-ಪುಟ್ಟ ಕಾರಣಕ್ಕೆ ಜಗಳ ಬಂದೇ ಬರುತ್ತದೆ. ಆದರೆ ಆ ಜಗಳ, ಆ ಮನಸ್ತಾಪವನ್ನು ಬೆಳೆಯಲು ಬಿಡದಂತೆ ಗಂಡ-ಹೆಂಡತಿ ಇಬ್ಬರೂ ಪ್ರಯತ್ನಿಸಿದರೆ ಮಾತ್ರ ಸುಂದರವಾದ ಸಂಸಾರ ಜೀವನ ನಡೆಸಲು ಸಾಧ್ಯ. ಆದರೆ ಈ ರೀತಿ ಮಾಡುವಲ್ಲಿ ಸಾಕಷ್ಟು ದಂಪತಿಗಳು ಎಡವುತ್ತಿದ್ದಾರೆ ...ಅದಕ್ಕೆ ಕಾರಣ ಏನೆಂದು ಗೊತ್ತೇ? ಒಣ ಪ್ರತಿಷ್ಠೆ ಮತ್ತು ಹಠ.
ದಂಪತಿಗಳಲ್ಲಿ ಬಿಟ್ಟುಕೊಡುವ ಗುಣ ಇರಬೇಕು ಗಂಡ ನಾನು ಹೇಳಿದ್ದೇ ಸರಿ ಎಂದು ವಾದಿಸಿದಾಗ ಹೆಂಡತಿ ನಾನು ಹೇಳಿದ್ದೇ ಸರಿ ಎಂದು ಪ್ರತಿವಾದಕ್ಕೆ ನಿಂತರೆ ಮನಸ್ಸಿನ ನೆಮ್ಮದಿ ಚಿಂದಿ ಚಿತ್ರಾನ್ನವಾಗುವುದು. ಹಾಗಂತ ಎಲ್ಲಾ ಸಮಯದಲ್ಲೂ ಅವನ/ಅವಳ ವಾದವನ್ನು ಒಪ್ಪಿಕೊಳ್ಳಬೇಕಾಗಿಲ್ಲ, ಆದರೆ ಜಗಳ ಮುಂದುವರೆಯದಂತೆ ಜಾಗ್ರತೆವಹಿಸಬೇಕಷ್ಟೇ.

ಇವೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ನಿಮ್ಮ ನಡುವೆ ನಡೆದಂತಹ ಸಣ್ಣ ಪುಟ್ಟ ಜಗಳವನ್ನು ನಿಮ್ಮ ಮನೆಯವರಿಗೆ ಅಥವಾ ಸ್ನೇಹಿತರಿಗೆ ಹೇಳದಿದ್ದರೆ ಒಳ್ಳೆಯದು.ನಿಮ್ಮ ಸಂಗಾತಿಯ ಜೊತೆ ಜಗಳವಾಡಿದಾಗ ನಿಮ್ಮ ಫ್ರೆಂಡ್ಸ್ ಅಥವಾ ಮನೆಯವರ ಜೊತೆ ಹೇಳಿದ್ದೀರಿ ಅಂದರೆ ಹೇಗಾದರೂ ಆ ಸುದ್ಧಿ ಅವರ ಕಿವಿ ಮುಟ್ಟುತ್ತದೆ, ಇದರಿಂದ ನಿಮ್ಮ ಮೇಲೆ ಇರುವ ಕೋಪ ಅಧಿಕವಾಗಿ ಸಂಬಂಧ ಮತ್ತಷ್ಟು ಕೆಟ್ಟದಾಗುತ್ತದೆ.
ಆದರೆ ನಿಮ್ಮ ಸಂಗಾತಿ ನಿಮ್ಮ ಜೊತೆ ತುಂಬಾ ಕೆಟ್ಟದಾಗಿ ವರ್ತಿಸುತ್ತಿದ್ದರೆ ಮಾತ್ರ ಸಹಿಸಿಕೊಂಡು ಸುಮ್ಮನೆ ಇರಬಾರದು, ಸಾಕಷ್ಟು ಹೆಣ್ಣು ಮಕ್ಕಳು ಗಂಡನ ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುತ್ತೇವೆ. ಗಂಡ ಹಿಂಸೆ ಕೊಡುತ್ತಿದ್ದರೆ ಮಾತ್ರ ಮನೆಯವರ ಜೊತೆ ಹೇಳಿಕೊಳ್ಳಬೇಕು, ಭಯದಿಂದ ಅವನು ಹಿಂಸೆ ಕಮ್ಮಿ ಮಾಡುತ್ತಾನೆ, ಇಲ್ಲದಿದ್ದರೆ ಮತ್ತಷ್ಟು ಹಿಂಸೆ ನೀಡಲಾರಂಭಿಸುತ್ತಾನೆ.
ಹಿಂಸೆ ನೀಡುವುದರಲ್ಲಿ ಕೆಲ ಹೆಂಡತಿಯರೇನು ಕಮ್ಮಿ ಇರುವುದಿಲ್ಲ, ಸಾಕಷ್ಟು ಗಂಡಂದಿರು ತಮ್ಮ ಹೆಂಡತಿ ಕೊಡುತ್ತಿರುವ ಮಾನಸಿಕ ಹಿಂಸೆ ತಾಳಲಾರದೆ ತುಂಬಾ ನೋವು ಅನುಭವಿಸುತ್ತಿರುತ್ತಾರೆ. ಹೊರಗೆ ಹೇಳಿಕೊಳ್ಳುವಂತೆಯೂ ಇಲ್ಲ, ಅನುಭವಿಸಲು ಸಾಧ್ಯವಿಲ್ಲ, ವರದಕ್ಷಿಣೆ ಕಾಯ್ದೆ ಹೆಣ್ಣಿನ ರಕ್ಷಣೆಗಾಗಿ ಬಂದದ್ದು, ಆದರೆ ಕೆಲ ಹೆಣ್ಣು ಮಕ್ಕಳು ಇದನ್ನು ತಪ್ಪಾಗಿ ಬಳಸುತ್ತಿದ್ದಾರೆ. ಇದುವರೆಗೆ ಇದಕ್ಕೆ ಸೂಕ್ತ ಪರಿಹಾರವನ್ನೂ ಕಂಡು ಹಿಡಿದಿಲ್ಲ ಅನ್ನುವುದು ವಿಷಾದವೇ ಸರಿ.
ನಿಮ್ಮ ನಡುವೆ ಚಿಕ್ಕ ಪುಟ್ಟ ವಿಷಯಕ್ಕೆ ಮನಸ್ತಾಪ ಬಂದರೆ ಅದನ್ನು ಆಗಲೇ ಮರೆತು ಬಿಡಿ, ಸಂಗಾತಿಯಲ್ಲಿ ಸೈಕೋ ಗುಣವಿದ್ದರೆ ಮಾತ್ರ ಸಹಿಸಲು ಹೋಗಬೇಡಿ, ಹೊಂದಾಣಿಕೆ ಮಾಡುತ್ತೇನೆಂದು ನೀವು ಪ್ರಯತ್ನಿಸಿದಷ್ಟು ಅಪಾಯವೇ ಹೆಚ್ಚು.



Click it and Unblock the Notifications