Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಾಂಪತ್ಯದಲ್ಲಿ ಬಿರುಕು ಉಂಟಾದರೆ ಏನಾಗುತ್ತದೆ?

ಯಾವುದೇ ಕಾರಣಕ್ಕೆ ಒಬ್ಬರ ಮೇಲೆ ಬಬ್ಬರು ನಂಬಿಕೆಯನ್ನು ಕಳೆದುಕೊಂಡರೆ, ನಂಬಿದ್ರೋಹ ವೆಸಗಿದರೆ ಆ ಸಂಬಂಧದಲ್ಲಿ ಬಿರುಕು ಮೂಡುವುದು ಖಂಡಿತ. ಈ ನಂಬಿಕೆಯನ್ನು ಕಳೆದುಕೊಳ್ಳುವಂತಹ ವಿಷಯಗಳು ಹಲವಾರು. ಒಬ್ಬರಿಗೊಬ್ಬರು ಸುಳ್ಳು ಹೇಳುವುದು, ಮೋಸಮಾಡುವುದು ಹೀಗೆ. ಅದರಲ್ಲೂ ಎಲ್ಲದಕ್ಕಿಂತ ಮುಖ್ಯವಾಗಿ ಅನೈತಿಕ ಸಂಬಂಧವನ್ನು ಹೊಂದಿರುವುದು. ಚೆನ್ನಾಗಿರುವ ಸಂಸಾರ ಈ ಒಂದು ಕಾರಣಕ್ಕೆ ಒಡೆದು ಹೋಗಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಬೇರೆಯವರೊಂದಿಗೆ ತನ್ನ ಸಂಗಾತಿಗೆ ಗೊತ್ತಿಲ್ಲದಂತೆ ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವುದರಿಂದ ಕೇವಲ ಗಂಡ ಹೆಂಡತಿಗೆ ಮಾತ್ರವಲ್ಲದೇ ಅವರಿಗೆ ಸಂಬಂಧಪಟ್ಟ ಎಲ್ಲಾ ಜನರ ಮೇಲೂ ಅಪಾರವಾದ ಕೆಟ್ಟ ಪರಿಣಾಮ ಬೀರುತ್ತದೆ.
ಗಂಡ ಯಾ ಹೆಂಡತಿ ಯಾರೇ ಆಗಿರಲಿ ತಮ್ಮ ಸಂಗಾತಿಯ ಅರಿವಿಗೆ ಬಾರದಂತೆ ಅವರು ತಮ್ಮ ಮೇಲಿಟ್ಟ ನಂಬಿಕೆಯನ್ನು ಮುರಿದು ಬೇರೆಯವರೊಂದಿಗೆ ಕೆಟ್ಟ ಸಂಬಂಧವನ್ನು ಇಟ್ಟುಕೊಳ್ಳುವುದು ತರವಲ್ಲ. ಏಕೆಂದರೆ ಇದರಿಂದಾಗಿ ಅವನು/ ಅವಳ ತಂದೆ ತಾಯಿಯ ಮೇಲೆ ಪರಿಣಾಮ ಬೀರುತ್ತದೆ. ಮಗಳು ಅಥವಾ ಮಗನ ಮದುವೆ ಮಾಡಿದ ಮೇಲೆ ನಿಮ್ಮ ಮಕ್ಕಳು ಹೀಗೆ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಮಾತು ಅವರ ಕಿವಿಗೆ ಬಿದ್ದರೆ ಅವರು ಹೇಗೆ ತಾನೇ ಸಹಿಸಿಯಾರು ? ಅಷ್ಟು ವರ್ಷದಿಂದ ಉಳಿಸಿಕೊಂಡ ಬಂದ ಮನೆಯ ಘನತೆ ಗೌರವ ಕೇವಲ ಇದೊಂದು ಕಾರಣಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋದಂತಾಗುತ್ತದೆ.
ಇದುವರೆಗೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದ್ದ ತಂದೆ ತಾಯಿ ತನ್ನ ಮಕ್ಕಳ ಅನೈತಿಕ ಸಂಬಂಧದಿಂದಾಗಿ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಈ ಅಚಾತುರ್ಯಕ್ಕೆ ಎಡೆಮಾಡಿ ಕೊಡಬೇಕೆ ? ತಮ್ಮ ಅನೈತಿಕ ವರ್ತನೆಯಿಂದಾಗಿ ಹೆತ್ತು ಹೊತ್ತು ಸಾಕಿರುವ ಪಾಲಕರ ಮರ್ಯಾದೆಗೆ ಮಸಿ ಬಳಿಯುವುದು ಯಾವ ನ್ಯಾಯ ?
ಇನ್ನು ಇಂತಹ ತಪ್ಪನ್ನು ಮಾಡುವ ಗಂಡ / ಹೆಂಡತಿಯ ಮಕ್ಕಳ ಬಗ್ಗೆ ಒಮ್ಮೆ ಯೋಚಿಸಿ. ತನ್ನ ತಂದೆ ಅಥವಾ ತಾಯಿ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ವಿಷಯ ಅವರ ಗಮನಕ್ಕೆ ಬಂದರೆ ಅವರ ಬಗ್ಗೆ ಸಹಪಾಠಿಗಳಲ್ಲಿ, ಗುರುಗಳಲ್ಲಿ ಒಳ್ಳೆಯ ಭಾವನೆ ಮೂಡಲು ಸಾಧ್ಯವೇ ? ಸಮಾಜ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸುತ್ತದೆ. ಇದರಿಂದ ಅವರ ಮನಸ್ಸಿನ ಮೇಲೆ ಆಫಾತಕಾರಿ ಪರಿಣಾಮ ಬೀರುತ್ತದೆ. ಅವರ ಓದಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತಂದೆ ತಾಯಿಯನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಗೌರವಿಸುವ ಮಗು ಇವೆಲ್ಲವನ್ನೂ ಕಳೆದುಕೊಂಡು ಮಾತನಾಡುವುದನ್ನೇ ನಿಲ್ಲಿಸಬಹುದು. ಅದಕ್ಕಿಂತ ಹೆಚ್ಚಾಗಿ ಆ ಮಗುವಿಗೆ ಸೂಕ್ತ ತಂದೆ ಯಾ ತಾಯಿ ಎನಿಸಿಕೊಳ್ಳುವ ಅರ್ಹತೆಯನ್ನೇ ಕಳೆದುಕೊಳ್ಳಬೇಕಾಗಬಹುದು !
ಈ ಎಲ್ಲಾ ಪರಿಣಾಮಗಳನ್ನು ಹೊರತು ಪಡಿಸಿ ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ವ್ಯಕ್ತಿ ತನ್ನೆಲ್ಲ ಗೌರವಗಳನ್ನೂ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ತನ್ನ ಸಂಗಾತಿಯ ದೃಷ್ಟಿಯಲ್ಲಿ ಅತ್ಯಂತ ಚಿಕ್ಕವರಾಗಬೇಕಾಗುತ್ತದೆ. ಅವರ ಪ್ರೀತಿ ವಿಶ್ವಾಸದಿಂದ ವಂಚಿತರಾಗಬೇಕಾಗುತ್ತದೆ. ಅಲ್ಲದೇ ನಾಲ್ಕು ಜನರ ಎದುರಿಗೆ ಬಂದು ಮಾತನಾಡುವ ಅವರನ್ನು ಎದುರಿಸುವ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಉತ್ತಮ ದಾಂಪತ್ಯ ಜೀವನವೂ ಅವರ ಪಾಲಿಗೆ ಕಹಿ ಸತ್ಯವಾಗುವುದರಲ್ಲಿ ಎರಡು ಮಾತಿಲ್ಲ !
ದಂಪತಿಗಳಲ್ಲಿ ಯಾರೇ ಆಗಿರಲಿ, ತನ್ನ ಸಂಬಂಧವನ್ನು ಜೀವನದೂದ್ದಕ್ಕೂ ಯಾವುದೇ ಕಳಂಕಗಳಿಲ್ಲದೇ, ದೋಷಗಳಿಲ್ಲಲ್ಲದಂತೆ ನೋಡಿಕೊಂಡರೆ ಮಾತ್ರ ದಾಂಪತ್ಯ ಜೀವನವೂ ಅತ್ಯಂತ ವರ್ಣಮಯವಾಗಿರುತ್ತದೆ. ಇಲ್ಲವಾದಲ್ಲಿ ಕೇವಲ ಅನೈತಿಕ ಸಂಬಂಧಗಳನ್ನು ನೆಚ್ಚಿಕೊಂಡಿರಬೇಕೆ ಹೊರತು ಬೇರೆ ಯಾವುದೇ ಗೌರವ ಪ್ರೀತಿಯೂ ಅವರಿಗೆ ದೊರೆಯುವುದಿಲ್ಲ. ಆದ್ದರಿಂದ ಯಾವುದೇ ಬೇರೆ ಸಂಬಂಧಗಳಲ್ಲಿ ಆಸಕ್ತಿ ತೋರಿಸದೆ ತನ್ನ ಸಂಗಾತಿಗಳೊಂದಿಗೆ ಸರಿಯಾದ ದಾಂಪತ್ಯವನ್ನು ಮಾಡುವುದೇ ಶ್ರೇಷ್ಠ !



Click it and Unblock the Notifications
