Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಪ್ರೀತಿ ಸೋತಾಗ ಕೊರಗಬೇಡಿ, ಇವರತ್ತ ಕಣ್ಣಾಯಿಸಿ
ಪರಸ್ಪರ ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿರುತ್ತಾರೆ. ಯಾವುದೋ ಒಂದು ಕಾರಣಕ್ಕೆ ಇಬ್ಬರು ದೂರವಾಗಿ ಬಿಡುತ್ತಾರೆ. ಹೀಗೆ ದೂರವಾದ ಪ್ರೇಮಿಗಳಿಗೆ ದೂರವಾಗಲು ಯಾವುದೋ ಒಂದು ಕಾರಣವಿರುತ್ತದೆ, ಅವನ/ಅವಳ ಗುಣ ಇತ್ತೀಚಿಗೆ ಇಷ್ಟವಾಗುತ್ತಿಲ್ಲ, ಸಂಶಯ ಪಡುತ್ತಾಳೆ/ನೆ, ಮನೆಯವರಿಗೋಸ್ಕರ ದೂರವಾದೆವು, ಪ್ರೀತಿಯಲ್ಲಿ ಮೋಸ ಉಂಟಾಯಿತು ಹೀಗೆ ನೂರೆಂಟು ಕಾರಣಗಳಿರುತ್ತವೆ.
ದೂರವಾಗುವಾಗ ಈ ಸಂಬಂಧ ಬೇಡ ಎಂಬ ಮನಸ್ಥಿತಿ ಇರುತ್ತದೆ, ನಂತರ ಅದರ ಬಗ್ಗೆ ಯೋಚಿಸಿ ತುಂಬಾ ವೇದನೆ ಪಡುತ್ತಾರೆ. ಆ ಸಂದರ್ಭದಲ್ಲಿ ಜೀವನ ನರಕ ಅನಿಸಿಬಿಡುತ್ತದೆ. ಜನರನ್ನು ಫೇಸ್ ಮಾಡುವುದು ಕಷ್ಟವಾಗುತ್ತದೆ. ಯಾರಾದರೂ ಹಳೆಯ ಸಂಬಂಧದ ಬಗ್ಗೆ ಮಾತೆತ್ತಿದರೆ ತುಂಬಾ ನೋವಾಗುತ್ತದೆ. ಆ ಸಂದರ್ಭದಲ್ಲಿ ಮಾನಸಿಕ ಸಾಂತ್ವನ ಹೇಳಲು ಜನ ಬೇಕಾಗಿರುತ್ತದೆ.
ಪ್ರೀತಿಯಲ್ಲಿ ಸೋತು ಹೋದಾಗ ರೂಂನಲ್ಲಿ ಕುಳಿತು ಕೊರಗುವ ಬದಲು ಜನರ ಜೊತೆ ಬೆರೆಯಬೇಕು. ಅದರಲ್ಲೂ ಈ ಕೆಳಗಿನ ವ್ಯಕ್ತಿಗಳ ಜೊತೆ ಬೆರೆಯಿರಿ, ಮನಸ್ಸಿನ ನೋವು ಮರೆಯುವುದು, ನೆಮ್ಮದಿ ದೊರೆಯುವುದು.

ಸ್ನೇಹಿತರು:
ಈ ಸಂದರ್ಭದಲ್ಲಿ ಸ್ನೇಹಿತರ ಮಾರ್ಗದರ್ಶನ ಹಾಗೂ ಹಿತನುಡಿ ತುಂಬಾ ಬೇಕಾಗುತ್ತದೆ. ಸ್ನೇಹಿತರ ಜೊತೆ ಸಮಯ ಕಳೆದರೆ ಹಳೆಯ ಕಹಿ ನೆನಪುಗಳನ್ನು ಮರೆಯಲು ಸಾಧ್ಯವಾಗಿ, ಹೊಸ ಬದುಕಿನತ್ತು ಉತ್ಸಾಹದಿಂದ ಹೆಜ್ಜೆ ಹಾಕಬಹುದು.

ಅಪರಿಚಿತರು:
ಪ್ರೀತಿಸಿದ ವ್ಯಕ್ತಿಯಿಂದ ತುಂಬಾ ಬೇಜಾರಾದಾಗ ಅಪರಿಚಿತರ ಸ್ನೇಹ ತುಂಬಾ ಹಿತ ಅನಿಸುತ್ತದೆ. ಆದ್ದರಿಂದಲೇ ಕೆಲವರು ತಮ್ಮ ಬ್ರೇಕ್ ಅಪ್ ಸ್ಟೋರಿಗಳನ್ನು ರೇಡಿಯೋ ಜಾಕಿಗಳ ಜೊತೆ ಹೇಳಿಕೊಂಡು ಸಮಧಾನ ಪಟ್ಟುಕೊಳ್ಳುತ್ತಾರೆ.

ನಿಮ್ಮ ಮಾಜಿಯ ಶತ್ರು:
ಮಾಜಿ ಪ್ರೇಮಿಯನ್ನು ದ್ವೇಷಿಸುತ್ತಿರುವವರು ತುಂಬಾ ಆಪ್ತರಾಗಿ ಬಿಡುತ್ತಾರೆ. ಅವರು ನಿಮ್ಮ ಮಾಜಿಯನ್ನು ಬೈಯ್ಯುವಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತೆ ಭಾಸವಾಗುವುದು.

ಕುಟುಂಬ:
ತನ್ನ ಬಾಳಸಂಗಾತಿಯಿಂದ ಅಥವಾ ಪ್ರೇಮಿಯಿಂದ ದೂರವಾಗಿ ಮಾನಸಿಕ ನೋವು ಅನುಭವಿಸುತ್ತಿರುವಾಗ ಕುಟುಂಬದವರು ಅವರಿಗೆ ಸಾಂತ್ವನ ಹೇಳಿದರೆ ಮನಸ್ಸಿಗೆ ಸ್ವಲ್ಪ ಧೈರ್ಯ ಬರುತ್ತದೆ.

ಹೊಸ ಬದುಕು:
ನಂಬಿದ ವ್ಯಕ್ತಿಯಿಂದ ನೋವಾಗಿ ದೂರವಾದರೆ ಮನಸ್ಸು ಹೊಸ ಸಂಗಾತಿಯನ್ನು ಬಯಸುತ್ತದೆ, ಹಾಗೂ ಅದು ನಿಮ್ಮ ಮನಸ್ಸಿಗ್ಎ ನೆಮ್ಮದಿ ಸಿಗುವ ವ್ಯಕ್ತಿಯ ಹುಡುಕಾಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ಯಾರಾದರೂ ನಮ್ಮ ಬಗ್ಗೆ ಅಕ್ಕರೆ ತೋರಿಸಿದರೆ ನಮಗೆ ಅರಿವಿಲ್ಲದಂತೆಯೆ ಮನಸ್ಸು ಅವನನ್ನು/ ಅವಳನ್ನು ಪ್ರೀತಿಸಲಾರಂಭಿಸುತ್ತದೆ.



Click it and Unblock the Notifications
