Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರವಿಯ ಆಗಮನಕ್ಕಾಗಿ ಕಾದಿಹ ನೀರಜೆ

ಆದರೆ ಈ ಪ್ರೀತಿಯ ಅಲೆಗೆ ನಾ ಸಿಲುಕುವೇ ಎಂಬ ಪರಿವೇ ಇರಲಿಲ್ಲ. ನನ್ನ ಗಮನಕ್ಕೆ ಬರದೇ ನಾ ಅವನ ಪ್ರೀತಿಯ ಬಲೆಗೆ ಸಿಕ್ಕಿ ಅವನ ಅತಿಥಿಯಾದೆ. ಅವನ ಸಿಹಿ-ಮಾತು, ನನಗೇ ತೋರಿಸುವ ಅಕ್ಕರೆ, ನನ್ನ ಕಣ್ಣುಗಳಲ್ಲಿ ನೀರು ಬಂದರೆ ಅವನ ಕಣ್ಣುಗಳಲ್ಲಿ ರಕ್ತ ಬರುವ ಹಾಗೇ ದುಃಖ ಪಡುವ ಅವನ ಪುಟ್ಟ ಹೃದಯ. ಮನಸ್ಸು ಶೂನ್ಯವಾಗಿದೆ, ರವಿಯ ಆಗಮನಕ್ಕಾಗಿ ಕಾದಿಹ ನೀರಜೆಯಂತೆ, ಮೃದುನುಡಿಗಳಿಂದ ಹೃದಯದ ತಾಳ ತಪ್ಪಿಸಿದ, ಕಣ್ಣೋಟದ ಹೊಬಾಣದಿಂದ ತನುಮನ ಅರಳಿಸಿದ. ನಿನ್ನ ಕಾಣಲು ನನ್ನ ನಯನಗಳು ಅರಳಿವೆ.
ಒಂದು ದಿನ ನಿನ್ನ ದರ್ಶನವಾಗದಿದ್ದಾರೆ ದೇವರಿಗೆ ನೂರಾರು ನಮನ. ಒಮ್ಮೆ ಬಾರೋ ನನ್ನ ಮುಂದೆ . ನಾ ಏಕೆ ನಿನ್ನ ಹುಚ್ಚಿಯಂತೆ ಪ್ರೀತಿಸಿದೆ? ನಾ ಏನು ಬರೆಯಲು ಹೋದರು ನನ್ನ ಕೈಗಳು ನನ್ನ ಗಮನಕ್ಕೆ ಬರದೇ ನಿನ್ನ ಹೆಸರನ್ನೇ ಬರೆಸುತ್ತಿತ್ತು. ನಿನ್ನ ಹೆಜ್ಜೆಯ ಮೇಲೆಯ ಮೇಲೆ ಹೆಜ್ಜೆ ಇಡುವಾಗ ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು. ಕನಸುಗಳು ನನಸಾದ ಕನಸು ಕಾಣುತ್ತಿದೆ, ಒಮ್ಮೊಮ್ಮೆ ಕೋಳಿ ಜಗಳಗಳು ನಡೆದರು ಅದರಲ್ಲಿ ಏನೋ ಒಂಥರಾ ಪ್ರೀತಿ. ಆದರೆ ನನ್ನ ಕೋಪ ನಿನಗೆ ನೋವಿಸದಿರಲಿ .
ಆದರೆ ಈಗ ನಗುವಿಲ್ಲ , ನಲಿವಿಲ್ಲ ಬರೀ ನೋವು, ಬರೀ ಸೋಲಿನ ಕಾವು. ಕಂಬನಿ ಧಾರೆಯ ಮುತ್ತು. ನಾ ಮಾಡಿದ ಯಾವ ತಪ್ಪಿಗಾಗಿ ಈ ಕಠಿಣ ಶಿಕ್ಷೆ ನಾ ಕಾಣೇ , ನನ್ನಿಂದ ಮೌನವಾಗಿ ದೂರವಾದೆ . ಆದರೆ ಈ ಹೃದಯ ನಿನಗಾಗಿ ಬಿಕ್ಕಿ-ಬಿಕ್ಕಿ ಆಳುವುದು ಕಾಣದೇ ಹೋಯಿತೇ? ನಿನ್ನ ಮನಸ್ಸು ಕಲ್ಲಾಗಿ ಹೋಯಿತೇ? ನಿನ್ನ ನೆನಪೇ ಕಾಡುತ್ತಿರುವುದು ನನಗೆ. ನೀ ಸುಮ್ಮನೆ ಕುಳಿತರೇ ನಾ ಅಳುವೆ ಇಲ್ಲಿ. ಜೀವದ ಆಸೆಯೇ ಇಲ್ಲ. ನಿನ್ನ ಹುಡುಕಿದೆ ಎಲ್ಲ ಕಡೇ . ನಿನ್ನ ಸುಳಿವೇ ಇಲ್ಲ.
ನೆನಪಿನಾಳದಲ್ಲಿ ಪ್ರೀತಿಯ ನೆಲೆ, ಹಾತೊರೆಯಿತು ಕನಸು , ನೆನೆದು ಬತ್ತಿ ಸೊರಗಿತು ಮನ. ಬೆಳಕು ಕೂಡ ಕತ್ತಲಾಯಿತೆಂದು ತಿಳಿದೇ . ನನ್ನ ಪ್ರೀತಿಯು ಈ ಬೆಳಕಿನ ಹಾಗೇ ಮಾಯವಾಯಿತೆಂದು ತಿಳಿದು . ಪ್ರೀತಿ ಇಲ್ಲದ ಮೇಲೆ ಬೇಡದ ಜೀವ...



Click it and Unblock the Notifications
