Latest Updates
-
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ
ಇಡೀ ಕ್ಲಾಸೇ ಒಂದು ಫ್ರೆಂಡ್ಸ್ ಗ್ರೂಪ್ ಆಗಿತ್ತು!

ಹೈಸ್ಕೂಲ್ ಮತ್ತು ಪಿಯುಸಿನಲ್ಲಿ ಒಳ್ಳೆಯ ಸ್ನೇಹಿತರಿದ್ದರೂ ಫ್ರೆಂಡ್ಸ್ ಅಂತ ತುಂಬಾ ಹಚ್ಚಿಕೊಂಡಿದ್ದು ಡಿಗ್ರಿಯಲ್ಲಿರುವಾಗ. ಡಿಗ್ರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಕಾಲೇಜಿಗೆ ಸೇರಿದೆ. ಮೊದಲ ದಿನ ಕಾಲೇಜಿಗೆ ಬಂದಾಗ ಒಬ್ಬರಿಗೊಬ್ಬರು ಪರಿಚಯವಿರಲಿಲ್ಲ ಒಂದು ವಾರದವರೆಗೆ ಬರೀ ಹಾಯ್ ಅಷ್ಟೇ. ಡಿಗ್ರಿಯಲ್ಲಿ ಇಂಗ್ಲೀಷ್ ಅನ್ನು ಐಚ್ಛಿಕವಾಗಿ ತೆಗೆದುಕೊಳ್ಳುವವರು ತುಂಬಾ ಕಡಿಮೆಯಾಗಿದ್ದರಿಂದ ನಮ್ಮ ಕ್ಲಾಸಿನಲ್ಲಿ ಕೇವಲ 16 ಮಂದಿ ಮಾತ್ರ ಇದ್ದೆವು.
ಆದರೆ ಇದೇ 16 ಮಂದಿ ಗುಂಪು 3 ವರ್ಷ ಕಳೆಯುವಷ್ಟರಲ್ಲಿ ಇಡೀ ಕಾಲೇಜು ಗುರುತಿಸುವಂತಹ ಗುಂಪು ನಮ್ಮದಾಯಿತು ನನಗೆ ಈಗಲೂ ನೆನಪಿದೆ, ಪಿಯುಸಿನಲ್ಲಿರುವಾಗ ಹುಡುಗರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ, ಕೇವಲ ಹಾಯ್, ಬಾಯ್ ಅಷ್ಟೆ. ಆದರೆ ನಮ್ಮ ಈ ಗ್ರೂಪ್ ನಲ್ಲಿ ಇವನು ಹುಡುಗ ,ಅವಳು ಹುಡುಗಿ ಎಂಬ ಭಾವನೆ ಯಾರಲ್ಲೂ ಇರಲಿಲ್ಲ, ನಾವೆಲ್ಲರೂ ಬರೀ ಫ್ರೆಂಡ್ಸ್ ಎಂಬ ಭಾವನೆಯಷ್ಟೆ ನಮ್ಮಲ್ಲಿತ್ತು.
ಡಿಗ್ರಿಗೆ ಸೇರಿದಾಗ ಮೊದಲು 20 ವಿದ್ಯಾರ್ಥಿಗಳಿದ್ದರೂ , ಇಂಗ್ಲೀಷ್ ಅನ್ನು ಐಚ್ಛಿಕವಾಗಿ ಕಲಿಯುವುದು ಕಷ್ಟ ಎಂದು ಕೆಲವರು ಬಿಟ್ಟು ಹೋದರು ಕೊನೆಗೆ ಉಳಿದದ್ದು ನಾವು 16 ಜನ. ನಾವು ಒಂದು ರೀತಿಯ ಅಲೆಮಾರಿಗಳಂತೆ ಇದ್ದೆವು, ನಮಗಾಗಿ ಒಂದು ಪ್ರತ್ಯೇಕ ಕೊಠಡಿ ಇರಲಿಲ್ಲ! ಅಷ್ಟು ದೊಡ್ಡ ಕಾಲೇಜಿನಲ್ಲಿ ನಮಗಾಗಿ ಒಂದು ಪ್ರತ್ಯೇಕ ಕೊಠಡಿಯಿರಲಿಲ್ಲವೇ ಅಂತ ಕೇಳಬೇಡಿ. ಕೊಠಡಿ ಇತ್ತು ಆದರೆ ನಾವು ತೆಗೆದುಕೊಂಡದ್ದು English Major ಆಗಿದ್ದರಿಂದ ಇಂಗ್ಲೀಷ್ ಕ್ಲಾಸ್ ಬಿಟ್ಟು ಉಳಿದ ರಾಜ್ಯ ಶಾಸ್ತ್ರ ಮತ್ತು ಸಮಾಜಸಾಸ್ತ್ರ ಪಾಠ ಕೇಳಲು HEP ಮತ್ತು HES ಕ್ಲಾಸ್ ಗೆ ಹೋಗಬೇಕಾಗಿತ್ತು. ಇದೇ ಕಾರಣದಿಂದ ಒಂದು ರೂಮಿನಿಂದ ಮತ್ತೊಂದು ರೂಮಿಗೆ ಅಲೆಯುತ್ತಿದ್ದವು. ಒಂದು ಕಾರಿಡಾರ್ ನಿಂದ ಮತ್ತೊಂದು ಕಾರಿಡಾರ್ ಗೆ ತಿರುಗಾಡುತ್ತಿರುವುದನ್ನು ನೋಡಿ ಸೈನ್ಸ್, ಬಿ,ಕಾಂ ಬಿಬಿಎಂನಲ್ಲಿರುವವರು ಇವರಿಗೆ ಕ್ಲಾಸೇ ಇರಲ್ಲ ಸುಮ್ಮನೆ ಸುತ್ತಾಡುತ್ತಿರುತ್ತಾರೆ ಅನ್ನುತ್ತಿದ್ದರು. (ವಾಸ್ತವ ಅಂದರೆ ಎಕ್ಸಾಂಗೆ ಕೂರಲು 75% ಹಾಜರಾತಿ ಕಡ್ಡಾಯವಾಗಿತ್ತು, ಅಲ್ಲದೆ ನಾವು ಕ್ಲಾಸ್ ತಪ್ಪಿಸಿ ಕೊಳ್ಳುತ್ತಿರಲಿಲ್ಲ, ಉಪನ್ಯಾಸಕರಿಗೆ ಉಳಿದ ಕ್ಲಾಸ್ ಗಿಂತ ನಮ್ಮ ಕ್ಲಾಸ್ ಅಚ್ಚುಮೆಚ್ಚಿನ ಕ್ಲಾಸ್ ಆಗಿತ್ತು)
ಕ್ಲಾಸ್ ಮುಗಿದ ನಂತರ ಬಿಡುವಿನ ವೇಳೆಯಲ್ಲಿ ಕಾಲೇಜಿನ ಗ್ರೌಂಡ್ ನಲ್ಲಿ ಒಂದು ದೊಡ್ಡ ಮರವಿತ್ತು ಅದರ ಕೆಳಗಡೆ ಕೂತು ಹರಟೆ ಹೊಡೆಯುತ್ತಿದ್ದವು. ನಮ್ಮ ಪ್ರತಿಯೊಂದು ನಿರ್ಧಾರಗಳು ಆ ಮರದ ಕೆಳಗೆ ನಿರ್ಧಾರವಾಗುತ್ತಿತ್ತು. ಮಧ್ಯಾಹ್ನ ಊಟ ಮಾಡುವುದು, ಚಿಪ್ಸ್ ತಂದು ತಿನ್ನುವುದು ಅಸೈನ್ ಮೆಂಟ್ ಬರೆಯುವುದು, ಎಕ್ಸಾಂಗೆ ಓದುವುದು ಇವೆಲ್ಲವನ್ನು ಆ ಮರದ ಕೆಳಗೆ ಕುಳಿತು ಮಾಡುತ್ತಿದ್ದವು. ಮನೆಯಲ್ಲಿ ಊಟಕ್ಕಾಗಿ ಪ್ರತ್ಯೇಕ ತಟ್ಟೆ ಇಟ್ಟು, ಅದನ್ನು ಬೇರೆ ಯಾರು ಮುಟ್ಟಬಾರದು ಅನ್ನುತ್ತಿದ್ದ ನಾನು ಗೆಳೆಯರು ಕೈ ಹಾಕಿದ ಊಟದ ಡಬ್ಬಿಯನ್ನು ತಿನ್ನುವಷ್ಟು ಬದಲಾದೆ.



Click it and Unblock the Notifications
