Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನನ್ನ ಉಸಿರು ನಿಲ್ಲುವ ಮುನ್ನ ಬರುವೆಯಾ ಒಮ್ಮೆ?
ಓ ಮನವೇ- ಪ್ರೇಮದ ಅರಿವೇ ಇಲ್ಲದೇ ಅಲೆದಾಡುತ್ತಿದ್ದ ನನಗೆ "ಪ್ರೀತಿಸು ಬಾ" ಎಂದು ನನ್ನ ಬದುಕಿನ ಹಾದಿಯ ದಿಕ್ಕನೇ ಬದಲಾಯಿಸಿದೆ.ದಿನವಿಡೀ ನಿನ್ನ ಜ್ಞಾಪಕವೇ ನನ್ನ ಕಾಯಕವಾಯಿತು. ಎಲ್ಲಿ ನಾ ಹೋದರೂ ಅಲ್ಲಿ ನೀ ಕಾಣೆವೇ.ನಾ ನನ್ನ ಮರೆತಾಗಿದೆ. ಭೂಮಿ-ಆಕಾಶವೇ ಪ್ರೇಮದ ಸಂಕೇತವಾಗಿದೆ. ನನ್ನ ಕನಸು ನಿಜವಾದ ಹಾಗೇ ಕನಸಾಗಿದೆ.
ನಿನ್ನೊಂದಿಗೆ ಇಡುವ ಪ್ರತಿಯೊಂದು ಹೆಜ್ಜೆಯು ಬದುಕಿನ ಆಸೆಯನ್ನು ಹೆಚ್ಚಿಸುತ್ತಿತ್ತು.ಕಲ್ಲು-ಮುಳ್ಳಿನ ಹಾದಿಯು ಹೂವಿನ ಹಾಗೇ ಭಾಸವಾಗುತ್ತಿತ್ತು. ನನಗೆ ನೀನೇ ಎಲ್ಲವಾಗಿದೇ .ನಿನಗೂ ಕೂಡ ಹಾಗೇ ಅನಿಸಿರಬೇಕು ಎಂದು ನಾನು ತಿಳಿಯುವ ಮುನ್ನವೇ ಪ್ರೀತಿಯ ಸರಪಣಿ ಸವೆದದು ನನ್ನ ಗಮನಕ್ಕೆ ಬರದೇ ಹೋಯಿತು. ಓ ಹೃದಯ ಈ ನೋವಿಗೆ ನೀನೇ ನೆಮ್ಮದಿ ಹೇಳು. ನಾ ಹೇಳುವ ಮಾತು ನಿಜವಾದರು ಕೇಳುವವರು ಯಾರು ಇಲ್ಲ ,ನನ್ನ ಈ ನೋವು ತುಂಬಿದ ಮಾತನ್ನು.

ಪ್ರತಿಯೊಂದು ನಿಮಿಷ ಯುಗಯುಗವಾಗಿದೆ. ನನ್ನ ಬಿಟ್ಟು ಎಲ್ಲಿ ಹೋದೇ, ನೀ ಇಲ್ಲದ ನನಗೆ ಎಲ್ಲವೂ ಶೂನ್ಯ. ಯಾಕಾಗಿ ನನ್ನಿಂದ ಮೌನವಾಗಿ ದೂರವಾದೇ . ನಾ ನಿನಗೆ ಬೇಡವಾಡದವಳಾಗಿ ಹೋದೆನಾ? ಅಥವಾ ಈ ಪ್ರೀತಿ ನಿನಗೆ ಬೇಡವಾಯಿತೇ? ಎಂದು ತಿಳಿಯದಷ್ಟು ನತದೃಷ್ಟಳಾಗಿ ಹೋದೆ.
ಒಮ್ಮೆ ಬಾರೋ...ಎಲ್ಲಿದರೋ...ನೀ ನಿನ್ನ ಮರೆತು ಬಿಡು ಎಂದು ಹೇಳಿ ಹೊರಟು ಹೋದೆ. ಆದರೇ ಈ ಜೀವದ ಪ್ರತಿಯೊಂದು ಕಣ -ಕಣದಲ್ಲಿಯೂ ನಿನ್ನ ಹೆಸರೇ ಆಡಗಿದೇ. .ಈ ಹೃದಯ ನಿನ್ನ ಬರುವಿಕೆಗಾಗಿ ಹಾತೊರೆಯುತ್ತಿದೆ. ನೀ ಇಲ್ಲದ ನನ್ನ ಮುಂದಿನ ಬದುಕು ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗೇ. ನಿನ್ನ ಮಾತಿಲ್ಲದೇ, ನಿನ್ನ ನಗುವಿಲ್ಲದೇ ಶವದತ್ತಾಗಿದೇ ನನ್ನ ಬದುಕು . ನಾ ಕಟ್ಟಿದ ಕನಸುಗಳ ಗೋಪುರವನ್ನು ಚದುರಿ ಹೋಗಲು ಬಿಡಬೇಡ ಪ್ಲೀಸ್.. . ನನ್ನ ಉಸಿರು ನಿಂತು ಹೋಗುವ ಮುನ್ನ ಒಮ್ಮೆ ಬಾರೋ.



Click it and Unblock the Notifications
