Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದಾಂಪತ್ಯದಲ್ಲಿ ಇರಲೇ ಬೇಕಾದ ಅಂಶಗಳಿವು

ಹೀಗೆ ಡಿವೋರ್ಸ್ ಆಗುತ್ತಿರುವರಲ್ಲಿ ಶ್ರೀಮಂತ ವರ್ಗ, ಮತ್ತು ಮೇಲ್ಮಧ್ಯಮ ವರ್ಗದವರೆ ಹೆಚ್ಚು. ಬಾಹ್ಯವಾಗಿ ನೋಡಲು ಯಾವುದೇ ತೊಂದರೆ ಕಾಣುವುದಿಲ್ಲ. ಆದರೆ ಅವರಿಬ್ಬರಲ್ಲಿ ಪ್ರೀತಿಯ ಸೆಳೆತದ ಬದಲು ತಮ್ಮ ಅಹಂ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ನಡುವಿನ ಸಂಬಂಧ ನೆಲೆಗೊಳ್ಳುವುದು ಇತರರ ಉಪದೇಶಗಳಿಂದಲ್ಲ, ಪರಸ್ಪರ ಅರ್ಥೈಹಿಸಿ ಕೊಳ್ಳುವುದರಿಂದ.
ಸಂಬಂಧದಲ್ಲಿ ಉತ್ತಮ ಭಾಂದವ್ಯ ಬೆಳೆಸಿಕೊಳ್ಳುವುದು ಅದೇ ಸಂಬಂಧ ಅರ್ಧದಲ್ಲಿ ಮುರಿದು ಬೀಳುವುದು ಎಲ್ಲಾ ಅವರವರ ಕೈಯಲ್ಲಿದೆ. ಉತ್ತಮ ಗಂಡ-ಹೆಂಡತಿ ಸಬಂಧಕ್ಕೆ ಬೇಕಾಗಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಹಿಸಿಕೊಳ್ಳುವುದು ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೆ-
1. ಉತ್ತಮ ಸ್ನೇಹಿತರಾಗಿರುವುದು: ಗಂಡ ಮೊದಲು ಉತ್ತಮ ಸ್ನೇಹಿತನಾಗಿದ್ದರೆ ಮಾತ್ರ ಒಳ್ಳೆಯ ಗಂಡನಾಗಿರಲು ಸಾಧ್ಯ. ಸ್ನೇಹಿತರಾದರೆ ತಪ್ಪುಗಳು ಅಷ್ಟು ದೊಡ್ಡದಾಗಿ ಕಾಣುವುದಿಲ್ಲ. ಸಂಬಂಧವನ್ನೆ ಹಾಳು ಮಾಡುವ ಸಂಶಯ ರೋಗ ಬರುವುದಿಲ್ಲ. ಪರಸ್ಪರ ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು.
2. ಸ್ಪರ್ಶ: ಪ್ರೀತಿಯ ಒಂದು ಸ್ಪರ್ಶ ಸಾಕು ಉತ್ತಮ ಸಂಬಂಧಕ್ಕೆ. ನೋವು ಇರಲಿ, ನಲಿವು ಇರಲಿ ಒಬ್ಬರಿಗೊಬ್ಬರು ಆಲಂಗಿಸಿಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕೋಪ ಬಂದಾಗ ಪರಸ್ಪರ ಕಿತ್ತಾಡುವುದಕ್ಕಿಂತ ತಪ್ಪನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು.
3. ಪ್ರೀತಿ: ಮದುವೆಯಾಗುವುದಕ್ಕಿಂತ ಮೊದಲು ದಿನಕ್ಕೆ ನೂರು ಬಾರಿ ಐ ಲವ್ ಯೂ ಅಂದವರು ಮದುವೆ ನಂತರ ಆ ಪದ ಮರೆಯುವುದರಿಂದಲೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ನಿಷ್ಕಲ್ಮಶ ನಗುವಿನ ಜೊತೆ ನಿಮ್ಮ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಸಂಶಯ ತೊಡೆದು ಹಾಕಬೇಕು: ಒಂದು ಸಂಸಾರ ಒಡೆದು ಹಾಕಲು ಸಂಶಯವೆಂಬ ಭೂತ ಸಾಕು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬಂದ ಮೇಲೆ ಅಂದರೆ ಅದನ್ನು ಮೊಳಕೆಯಲ್ಲಿ ತೊಡೆದು ಹಾಕಬೇಕು.
5. ಅಭಿಪ್ರಾಯ: ಪ್ರತಿ ದಿನಾ ಏನೆಲ್ಲಾ ನಡೆಯುವುದು ಅನ್ನುವ ವರದಿ ಒಪ್ಪಿಸಿ ಅಂತ ಹೇಳುತ್ತಿಲ್ಲ. ಆದರೆ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುವುದರಿಂದ ಪರಸ್ಪರ ಸ್ನೇಹ ಮತ್ತಷ್ಟು ಹೆಚ್ಚಾಗುವುದು.
6. ಕ್ಷಮೆ ಕೇಳಲು ಹಿಂದೇಟು ಹಾಕಬಾರದು: ತಪ್ಪು ನಿಮ್ಮದಾಗಿದ್ದರೆ ಯಾವುದೇ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಇದರಿಂದ ಸಂಬಂಧ ಮತ್ತಷ್ಟು ಸುಂದರವಾಗುವುದು.
ಈ ಮೇಲಿನ ಅಂಶಗಳು ಉಪದೇಶವಲ್ಲ, ಸುಂದರ ಬದುಕಿನ ಮಾರ್ಗದರ್ಶಿಗಳಷ್ಟೆ.



Click it and Unblock the Notifications
