For Quick Alerts
ALLOW NOTIFICATIONS  
For Daily Alerts

ದಿವಿಹಲಸಿನ ಕಾಯಿ ಸಾಂಬಾರ್ ರೆಸಿಪಿ

Posted By:
|

ಕೆಲವರಿಗೆ ಸಾಂಬಾರ್ ಇದ್ದರೆ ಮಾತ್ರ ಊಟ ರುಚಿಸುತ್ತದೆ. ಅನ್ನದ ಜೊತೆ ಸಾಂಬಾರ್ ನಷ್ಟು ಬೆಸ್ಟ್ ಕಾಂಬಿನೇಷನ್ ಇನ್ನೊಂದಿಲ್ಲ. ಕೆಲವು ತರಕಾರಿಗಳು ವರ್ಷಪೂರ್ತಿ ಲಭ್ಯವಿರುತ್ತದೆ. ಆದರೆ ಇನ್ನು ಕೆಲವು ಸೀಸನಲ್ ತರಕಾರಿಗಳು. ಅಂತಹ ತರಕಾರಿಗಳಲ್ಲಿ ಒಂದು ದಿವಿಹಲಸು ಅಥವಾ ಜೀಗುಜ್ಜೆ.

Bread Fruit Sambar Recipe
ಇಂಗ್ಲೀಷಿನಲ್ಲಿ ಇದನ್ನು ಬ್ರೆಡ್ ಫ್ರೂಟ್ ಎಂದು ಕರೆಯಲಾಗುತ್ತದೆ. ಹಲಸಿನ ಜಾತಿಗೆ ಸೇರಿದ ಇದು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಬೆಂಗಳೂರಿನ ಮಂಗಳೂರು ಸ್ಟೋರ್ ಗಳಲ್ಲಿ ಆಗಾಗ ಮಾರಾಟ ಮಾಡುತ್ತಾರೆ.

ಈ ದಿವಿಹಲಸನ್ನು ಬಳಸಿ ಅನೇಕ ಅಡುಗೆಗಳನ್ನು ತಯಾರಿಸಬಹುದು. ನಾವಿಲ್ಲಿ ದಿವಿಹಲಸನ್ನು ಬಳಸಿ ಸಾಂಬಾರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

Bread Fruit Sambar Recipe/ ದಿವಿಹಲಸಿನ ಕಾಯಿ ಸಾಂಬಾರ್ ರೆಸಿಪಿ
Bread Fruit Sambar Recipe/ ದಿವಿಹಲಸಿನ ಕಾಯಿ ಸಾಂಬಾರ್ ರೆಸಿಪಿ
Prep Time
15 Mins
Cook Time
15M
Total Time
30 Mins

Recipe By: Sushma

Recipe Type: Veg

Serves: 5

Ingredients
  • ಬೇಕಾಗುವ ಸಾಮಗ್ರಿಗಳು

    ದಿವಿಹಲಸು - 1 ಕಾಯಿ

    ಮೆಂತ್ಯೆ- ಕಾಲು ಸ್ಪೂನ್

    ಜೀರಿಗೆ - ಅರ್ಧ ಸ್ಪೂನ್

    ಕೊತ್ತುಂಬರಿ ಬೀಜಗಳು - ಎರಡು ಸ್ಪೂನ್

    ಕೆಂಪು ಬ್ಯಾಡಗಿ ಮೆಣಸು - ಆರರಿಂದ ಏಳು

    ಕರಿಬೇವಿನ ಸೊಪ್ಪುಗಳು- 10 ರಿಂದ 12 ಎಲೆಗಳು

    ತೆಂಗಿನ ಕಾಯಿ - ಒಂದು ಕಾಯಿ

    ಅಡುಗೆ ಎಣ್ಣೆ - ಎರಡರಿಂದ ಮೂರು ಸ್ಪೂನ್

    ತೊಗರಿಬೇಳೆ - ಒಂದು ಕಪ್

    ಅರಿಶಿನ - ಚಿಟಿಕೆ

    ಉಪ್ಪು- ರುಚಿಗೆ ತಕ್ಕಷ್ಟು

    ಹುಣಸೆ ಹಣ್ಣು - ಒಂದು ಅಡುಕೆ ಗಾತ್ರ

    ಬೆಲ್ಲ - ಒಂದು ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ -

    . ದಿವಿಹಲಸು ಅಥವಾ ಜೀಗುಜ್ಜೆಯನ್ನು ತ್ರಿಕೋನಾಕೃತಿಯಲ್ಲಿ ಕತ್ತರಿಸಿಕೊಂಡು ನೀರಿಗೆ ಹಾಕಿ. ಕತ್ತರಿಸುವಾಗ ನೀರಿಗೆ ಹಾಕಿಕೊಳ್ಳದೇ ಇದ್ದರೆ ಹೋಳುಗಳು ಕಪ್ಪಗಾಗುವ ಸಾಧ್ಯತೆ ಇರುತ್ತದೆ.

    . ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.

    . ದಿವಿಹಲಸಿನ ಹೋಳುಗಳನ್ನು ಉಪ್ಪು, ಬೆಲ್ಲ, ಚಿಟಿಕೆ ಅರಿಶಿನ ಹಾಕಿ ಬೇಯಿಸಿಕೊಳ್ಳಿ( ಕುಕ್ಕರ್ ನಲ್ಲಿ ಬೇಯಿಸಿದರೆ ಕರಗಿಹೋಗುವ ಸಾಧ್ಯತೆ ಹೆಚ್ಚು. ಗಟ್ಟಿಯಾದ ಹೋಳುಗಳೇ ಆಗಿದ್ದರೂ ಇದು ಬಹಳ ಬೇಗನೆ ಬೇಯುತ್ತದೆ. ಹಾಗಾಗಿ ಕುಕ್ಕರ್ ನಲ್ಲಿ ಬೇಯಿಸದೇ ಇರುವುದೇ ಒಳಿತು.)

    . ತೊಗರಿ ಬೇಳೆಯೊಂದಿಗೆ ಬೇಯಿಸಿದ ಹೋಳುಗಳನ್ನು ಸೇರಿಸಿ.

    . ಎರಡು ಸ್ಪೂನ್ ಅಡುಗೆ ಎಣ್ಣೆಗೆ ಮೆಂತ್ಯೆ,ಜೀರಿಗೆ, ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿದುಕೊಳ್ಳಿ, ಕೆಂಬಣ್ಣಕ್ಕೆ ಬಂದಾಗ ಬ್ಯಾಡಗಿ ಮೆಣಸು ಸೇರಿಸಿ ಹುರಿಯಿರಿ.

    . ಹುರಿದ ಮಿಶ್ರಣಕ್ಕೆ ತೆಂಗಿನತುರಿ,ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.

    . ರುಬ್ಬಿದ ಮಿಶ್ರಣವನ್ನು ದಿವಿಹಲಸಿನ ಹೋಳುಗಳೊಂದಿಗೆ ಸೇರಿಸಿ ಐದು ನಿಮಿಷ ಹಸಿವಾಸನೆ ಹೋಗುವವರೆಗೆ ಕುದಿಸಿ.

    . ನಂತರ ಬೇವಿನಸೊಪ್ಪುಗಳನ್ನು ಹಾಕಿ ಒಗ್ಗರಣೆ ನೀಡಿ ಅಥವಾ ಹಾಗೆಯೇ ಕುದಿಯುವಾಗ ಹಾಕಿದರೂ ಕೂಡ ಪರವಾಗಿಲ್ಲ.

Instructions
  • ನಿಮ್ಮ ದಿನನಿತ್ಯದ ಅಗತ್ಯತೆಯ 23% ಪೊಟಾಷಿಯಂ ಇದರಿಂದ ಲಭ್ಯವಾಗುತ್ತದೆ .ಮೆಗ್ನೇಷಿಯಂ,ಮ್ಯಾಂಗನೀಸ್,ಕಾಪರ್, ಸತು,ಕಬ್ಬಿಣ,ಕ್ಯಾಲ್ಸಿಯಂ,ಪಾಸ್ಪರಸ್, ಸೆಲೇನಿಯಂ ಸೇರಿದಂತೆ ಹಲವು ಪೋಷಕಾಂಶಗಳು ಇದರಲ್ಲಿ ಲಭ್ಯವಿದೆ. .ಡಯಾಬಿಟೀಸ್ ಸಮಸ್ಯೆ ಇರುವವರು ಸೇವಿಸಬಹುದಾದ ಅತ್ಯುತ್ತಮ ಆಹಾರ. ಒಮೆಗಾ-3 ಫ್ಯಾಟಿ ಆಸಿಡ್ ಸೇರಿದಂತೆ ಫೈಬರ್ ಅಂಶಗಳು ಇದರಲ್ಲಿದೆ. .ವಿಟಮಿನ್ ಸಿ ಅಂಶಗ ಕೂಡ ಇದರಲ್ಲಿದ್ದು ಚರ್ಮಕ್ಕೆ ಆರೋಗ್ಯವನ್ನು ಒದಗಿಸುತ್ತದೆ. . ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುವ ಇದು ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸುತ್ತದೆ.
Nutritional Information
  • 100 Gram -
[ 4.5 of 5 - 81 Users]
X
Desktop Bottom Promotion