For Quick Alerts
ALLOW NOTIFICATIONS  
For Daily Alerts

ನವರಾತ್ರಿ ವಿಶೇಷ ಅಡುಗೆ: ಅರಿಶಿನದ ಎಲೆ ಕಾಯಿಕಡುಬು

Posted By:
|

ಗಣಪತಿ ಹಬ್ಬಕ್ಕೆ ಚಕ್ಕುಲಿ ಮಾಡ್ಬೇಕು, ಕೃಷ್ಣಾಷ್ಟಮಿಗೆ ಉಂಡೆ ಮಾಡ್ಬೇಕು,ಸಂಕ್ರಾತಿಗೆ ಎಳ್ಳು ಬೆಲ್ಲ ತಿನ್ನಬೇಕು,ಯುಗಾದಿಗೆ ಕಬ್ಬು ಬೇಕೇಬೇಕು, ಕ್ರಿಸ್ ಮಸ್ ಗೆ ಕೇಕ್ ಬೇಕು ಹಾಗಾದ್ರೆ ನವರಾತ್ರಿಗೆ ಏನು ಮಾಡ್ಬೇಕು? ನವರಾತ್ರಿಯಲ್ಲೂ ಕೂಡ ವಿಶೇಷ ಅಡುಗೆ ಮಾಡೋದಕ್ಕಿದೆ. ಆಯಾ ಕಾಲಕ್ಕೆ ಸಿಗುವ ಪದಾರ್ಥಗಳಿಂದ ತಯಾರಿಸುವ ಅಡುಗೆಗಳಲ್ಲಿ ಶಕ್ತಿ ಹೆಚ್ಚು, ರುಚಿಯೂ ಹೆಚ್ಚು.

ಮಳೆಗಾಲ ಮುಗಿಯುತ್ತಾ ಬಂದು ಇನ್ನೇನು ಚಳಿಗಾಲ ಪ್ರಾರಂಭವಾಗುವ ಸಮಯ ನವರಾತ್ರಿ ದಿನಗಳು. ಈ ಸಂದರ್ಬದಲ್ಲಿ ಅರಿಶಿನದ ಎಲೆಗಳ ಗಿಡಗಳು ಹಸುರಾಗಿ ಬಲಿಯಲು ಪ್ರಾರಂಭವಾಗಿರುತ್ತದೆ. ನವರಾತ್ರಿಯ ಸುದಿನಗಳಲ್ಲಿ ಅರಿಶಿನದ ಎಲೆಯಿಂದ ತಯಾರಿಸುವ ಖಾದ್ಯಗಳು ಸರ್ವಶ್ರೇಷ್ಟ.

ನಾವು ಪೇಟೆಯಲ್ಲಿರುವವರು ಅರಿಶಿನದ ಎಲೆ ಬಹಳ ದುಬಾರಿ ಎಂದೋ ಅಥವಾ ಅರಿಶಿನದ ಎಲೆಗಳ ಲಭ್ಯತೆ ಮಾರುಕಟ್ಟೆಯಲ್ಲಿ ಸರಿಯಾಗಿಲ್ಲವೆಂದೋ ಕಡೆಗಣಿಸಬೇಡಿ. ಒಂದು ಪಾಟ್ ನಲ್ಲಿಯೂ ಕೂಡ ಹುಲುಸಾಗಿ ಇದನ್ನು ಬೆಳೆಸಿಕೊಳ್ಳಬಹುದು. ಅರಿಶಿನದ ಎಲೆಯಿಂದ ಅನೇಕ ರೀತಿಯ ಖಾಧ್ಯಗಳನ್ನು ತಯಾರಿಸಬಹುದು. ಆದರೆ ನಾವಿಲ್ಲಿ ಫೇಮಸ್ ಕಾಯಿಕಡುಬು ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ.

ಅರಿಶಿನದ ಎಲೆ ಕಾಯಿಕಡುಬು ತಿಂದವರಿಗೆ ಬಾಯಲ್ಲಿ ಈಗಲೇ ನೀರು ಬರುತ್ತಿರಬಹುದು. ರೆಸಿಪಿ ಗೊತ್ತಿಲ್ಲದೇ ಇರುವವರು ನಮ್ಮ ಈ ಲೇಖನ ಫಾಲೋ ಮಾಡಿ ನಿಮ್ಮ ಮನೆಯಲ್ಲೂ ರುಚಿರುಚಿಯಾಗಿ ಅಡುಗೆ ಮಾಡಿಕೊಳ್ಳಬಹುದು.

Turmeric Leaf Kai Kadabu Recipe , ಅರಿಶಿನದ ಎಲೆ ಕಾಯಿಕಡುಬು ರೆಸಿಪಿ I

Prep Time
15 Mins
Cook Time
20M
Total Time
35 Mins

Recipe By: Sushama Chatra

Recipe Type: Breakfast

Serves: 6

Ingredients
 • ಬೇಕಾಗುವ ಸಾಮಗ್ರಿಗಳು:

  ಅಕ್ಕಿ - 250 ಗ್ರಾಂ

  ಅರಿಶಿನದ ಎಲೆಗಳು - 10 ರಿಂದ 15

  ಬೆಲ್ಲ - ನಾಲ್ಕು ರಿಂದ ಐದು ಮುಷ್ಟಿ

  ತೆಂಗಿನ ಕಾಯಿ 1+1

  ಉಪ್ಪು - ರುಚಿಗೆ ತಕ್ಕಷ್ಟು

  ಅರಳಿನ ಪುಡಿ - 100 ಗ್ರಾಂ

  ಏಲಕ್ಕಿ - 10

  ಲವಂಗ- 4

Red Rice Kanda Poha
How to Prepare
 • ಮಾಡುವ ವಿಧಾನ -

  ಅಕ್ಕಿಯನ್ನು ಸುಮಾರು ನಾಲ್ಕರಿಂದ ಐದು ತಾಸು ನೀರಿನಲ್ಲಿ ನೆನೆಸಿಡಿ.

  ನಂತರ ಅಕ್ಕಿಗೆ ಒಂದು ತೆಂಗಿನಕಾಯಿಯನ್ನು ತುರಿದು ಸೇರಿಸಿ ಮತ್ತು ಅರಳಿನ ಹುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಉದ್ದಿನ ದೋಸೆ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಬೇಕಾಗುತ್ತದೆ. ಅರಳಿನ ಹುಡಿ ಸೇರಿಸುವುದರಿಂದ ಕಡುಬು ಬಹಳ ಮೃದುವಾಗಿ ಬರುತ್ತದೆ. ತೆಂಗಿನ ತುರಿಯೂ ಕೂಡ ಕಡುಬು ಮೆತ್ತಗೆ ರುಚಿಯಾಗುವಂತೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

  ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

  ಅರಿಶಿನದ ಎಲೆಗಳನ್ನು ಎರಡೂ ಕಡೆ ಚೆನ್ನಾಗಿ ನೋಡಿ, ತೊಳೆದು ಶುಚಿಗೊಳಿಸಿಕೊಳ್ಳಿ. ದೊಡ್ಡ ಎಲೆಗಳಾಗಿದ್ದರೆ ಅಟ್ಟದಲ್ಲಿ ಹಿಡಿಸುವುದಿಲ್ಲ ಎಂದೆನಿಸಿದರೆ ಎಲೆಗಳನ್ನು ಎರಡು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇಲ್ಲವೆ ತುದಿಯನ್ನು ಕತ್ತರಿಸಿ ಆಯತಾಕಾರಕ್ಕೆ ಕತ್ತರಿಸಿಕೊಂಡು ಸಿದ್ಧಗೊಳಿಸಿಕೊಳ್ಳಿ.

  ಇದೀಗ ಕಡುಬಿಗೆ ಸೇರಿಸುವುದಕ್ಕೆ ಕಾಯಿಬೆಲ್ಲ ಸಿದ್ಧಗೊಳಿಸಬೇಕು. ನಾವಿಲ್ಲಿ ಡಬ್ಬಿಬೆಲ್ಲ ಬಳಸಿದ್ದೇವೆ. ಹಾಗಾಗಿ ಇದನ್ನು ಕುದಿಸುವ ಅಗತ್ಯವಿಲ್ಲ. ತೆಂಗಿನ ಕಾಯಿಯ ಜೊತೆಗೆ ಕಲಸಿ, ಏಲಕ್ಕಿ ಲವಂಗದ ಪುಡಿಯನ್ನು ಮಿಶ್ರಣ ಮಾಡಿ ಕಲಸಿಕೊಂಡರೆ ಆಯಿತು. ಒಂದು ವೇಳೆ ನೀವು ಉಂಡೆಬೆಲ್ಲ ಬಳಸುವವರಾಗಿದ್ದರೆ ಒಮ್ಮೆ ಬೆಲ್ಲವನ್ನು ಬಿಸಿ ಮಾಡಿ ಅದರ ಕಸ ಮತ್ತು ಕಲ್ಲುಗಳನ್ನು ಸೋಸಿಕೊಂಡು ನಂತರ ಬೆಲ್ಲದ ಪಾಕ ತಯಾರಿಸಿ ಅದಕ್ಕೆ ತೆಂಗಿನಕಾಯಿ ಸೇರಿಸಿ ಬಳಸುವುದು ಸೂಕ್ತ. ಉಂಡೆಬೆಲ್ಲವನ್ನು ಗುದ್ದಿ ಪುಡಿ ಮಾಡಿಯೂ ಸೇರಿಸಬಹುದು.( ಆದಷ್ಟು ಶುದ್ಧ ಬೆಲ್ಲಕ್ಕೆ ಮಹತ್ವ ನೀಡುವುದು ಬಹಳ ಒಳ್ಳೆಯದು. ಕಲಬೆರಿಕೆ ಬೆಲ್ಲ ಆರೋಗ್ಯಕ್ಕೆ ಅಹಿತ ಎಂಬುದು ಮನಸ್ಸಿನಲ್ಲಿರಲಿ)

  ಕಡುಬಿನ ಅಟ್ಟಕ್ಕೆ ನೀರು ಹಾಕಿ ಬಿಸಿಗೆ ಇಡಿ. ಅದರ ಹಬೆ ಆರಂಭವಾಗುತ್ತಿದ್ದಂತೆ ಮುಂದಿನ ಹಂತ ಅನುಸರಿಸಿ.

  ನಂತರ ರುಬ್ಬಿದ ಮಿಶ್ರಣವು ಎಲೆಗಳಿಗೆ ಹಚ್ಚಿದಾಗ ಸೋರಿಹೋಗದ ರೀತಿಯಲ್ಲಿ ಇರಬೇಕಾಗುತ್ತದೆ. ಒಂದೊಂದು ಎಲೆಗೆ ಅದರ ಅಗತ್ಯಕ್ಕೆ ಅನುಸಾರ ನಾಲ್ಕೈದು ಸ್ಪೂನ್ ಹಿಟ್ಟು ಹಚ್ಚಿ. ನಂತರ ಅದರ ಮೇಲೆ ಕಾಯಿಬೆಲ್ಲ ಕಾಯಿ ಎಲೆಗಳನ್ನು ಮಡಚಿ ಅಟ್ಟದಲ್ಲಿ ಇಡುತ್ತಾ ಸಾಗಿ. ಒಂದು ಲೇಯರ್ ಮುಗಿದ ನಂತರ ನಾಲ್ಕೈದು ನಿಮಿಷ ಬಿಟ್ಟು ಅದರ ಮೇಲ್ಬಾಗದಲ್ಲಿ ಇನ್ನೊಂದು ಲೇಯರ್ ನ್ನು ವಿರುದ್ಧ ದಿಕ್ಕಿನಲ್ಲಿ ಇಡುತ್ತಾ ಸಾಗಿ.

  ನೆನಪಿರಲಿ ಅಟ್ಟದಲ್ಲಿ ಹಬೆ ಪ್ರಾರಂಭವಾದ ನಂತರವೇ ಅರಿಶಿನದ ಎಲೆಗಳನ್ನು ಇಡುವುದಕ್ಕೆ ಪ್ರಾರಂಭಿಸುವುದು ಸೂಕ್ತ. ಇಲ್ಲದೇ ಇದ್ದರೆ ಎಲೆಗಳಲ್ಲಿನ ಹಿಟ್ಟು ನೀರು ಬಿಸಿಯಾಗುವ ಸಮಯಕ್ಕೆ ಚೆಲ್ಲಿ ಹೋಗಬಹುದು. ಹಬೆ ಪ್ರಾರಂಭವಾಗಿದ್ದರೆ ಕೂಡಲೇ ಬೇಯಲು ಪ್ರಾರಂಭವಾಗಿ ಸೋರಿ ಹೋಗುವುದು ತಪ್ಪುತ್ತದೆ.

  ಇನ್ನು ಯಾರ ಮನೆಯಲ್ಲಿ ಕಡುಬಿನ ಅಟ್ಟವಿಲ್ಲವೂ ಅವರು ಕುಕ್ಕರ್ ಬಳಸಿಯೂ ಪ್ರಯತ್ನಿಸಬಹುದು. ಆದರೆ ವಿಷಲ್ ಹಾಕದೇ ಬೇಯಿಸುವುದು ಸೂಕ್ತ.

  ಅಟ್ಟದಲ್ಲಿ ಸುಮಾರು 30 ನಿಮಿಷ ಬೇಯಿಸಬೇಕಾಗುತ್ತದೆ. ನಂತರ ಅರಿಶಿನದ ಎಲೆ ಕಾಯಿಕಡುಬು ಸಿದ್ಧವಾಗಿರುತ್ತದೆ. ಬಿಸಿಬಿಸಿ ಕಡುಬಿಗೆ ಮೇಲ್ಗಡೆ ತುಪ್ಪ ಹಾಕಿ ಸವಿದರೆ ಎಷ್ಟು ತಿಂದೆವು ಎಂಬ ಲೆಕ್ಕ ಸಿಕ್ಕುವುದೇ ಕಷ್ಟ!

Instructions
 • ಅರಿಶಿಣ ಎಲೆ ಸಿಗದಿದ್ದರೆ ಬಾಳೆ ಎಲೆಯಲ್ಲೂ ಮಾಡಬಹುದು, ಅರಿಶಿಣ ಎಲೆಯಾದರೆ ಅದರ ಸ್ವಾದವೂ ಸೇರಿಕೊಂಡು ಕಡಬು ಘಮ್ಮೆನ್ನುತ್ತಿರುತ್ತದೆ.
Nutritional Information
 • ಸರ್ವ್ - 1 ಸಿಹಿ ಕಡಬು
 • ಕ್ಯಾಲೋರಿಗಳು - 29 ಕ್ಯಾಲೋರಿಗಳು

ಮಾಡುವ ವಿಧಾನ -

ಅಕ್ಕಿಯನ್ನು ಸುಮಾರು ನಾಲ್ಕರಿಂದ ಐದು ತಾಸು ನೀರಿನಲ್ಲಿ ನೆನೆಸಿಡಿ.

ನಂತರ ಅಕ್ಕಿಗೆ ಒಂದು ತೆಂಗಿನಕಾಯಿಯನ್ನು ತುರಿದು ಸೇರಿಸಿ ಮತ್ತು ಅರಳಿನ ಹುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಉದ್ದಿನ ದೋಸೆ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ಗಟ್ಟಿಯಾದ ಮಿಶ್ರಣ ತಯಾರಿಸಿಕೊಳ್ಳಬೇಕಾಗುತ್ತದೆ. ಅರಳಿನ ಹುಡಿ ಸೇರಿಸುವುದರಿಂದ ಕಡುಬು ಬಹಳ ಮೃದುವಾಗಿ ಬರುತ್ತದೆ. ತೆಂಗಿನ ತುರಿಯೂ ಕೂಡ ಕಡುಬು ಮೆತ್ತಗೆ ರುಚಿಯಾಗುವಂತೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ರುಬ್ಬಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಅರಿಶಿನದ ಎಲೆಗಳನ್ನು ಎರಡೂ ಕಡೆ ಚೆನ್ನಾಗಿ ನೋಡಿ, ತೊಳೆದು ಶುಚಿಗೊಳಿಸಿಕೊಳ್ಳಿ. ದೊಡ್ಡ ಎಲೆಗಳಾಗಿದ್ದರೆ ಅಟ್ಟದಲ್ಲಿ ಹಿಡಿಸುವುದಿಲ್ಲ ಎಂದೆನಿಸಿದರೆ ಎಲೆಗಳನ್ನು ಎರಡು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇಲ್ಲವೆ ತುದಿಯನ್ನು ಕತ್ತರಿಸಿ ಆಯತಾಕಾರಕ್ಕೆ ಕತ್ತರಿಸಿಕೊಂಡು ಸಿದ್ಧಗೊಳಿಸಿಕೊಳ್ಳಿ.

ಇದೀಗ ಕಡುಬಿಗೆ ಸೇರಿಸುವುದಕ್ಕೆ ಕಾಯಿಬೆಲ್ಲ ಸಿದ್ಧಗೊಳಿಸಬೇಕು. ನಾವಿಲ್ಲಿ ಡಬ್ಬಿಬೆಲ್ಲ ಬಳಸಿದ್ದೇವೆ. ಹಾಗಾಗಿ ಇದನ್ನು ಕುದಿಸುವ ಅಗತ್ಯವಿಲ್ಲ. ತೆಂಗಿನ ಕಾಯಿಯ ಜೊತೆಗೆ ಕಲಸಿ, ಏಲಕ್ಕಿ ಲವಂಗದ ಪುಡಿಯನ್ನು ಮಿಶ್ರಣ ಮಾಡಿ ಕಲಸಿಕೊಂಡರೆ ಆಯಿತು. ಒಂದು ವೇಳೆ ನೀವು ಉಂಡೆಬೆಲ್ಲ ಬಳಸುವವರಾಗಿದ್ದರೆ ಒಮ್ಮೆ ಬೆಲ್ಲವನ್ನು ಬಿಸಿ ಮಾಡಿ ಅದರ ಕಸ ಮತ್ತು ಕಲ್ಲುಗಳನ್ನು ಸೋಸಿಕೊಂಡು ನಂತರ ಬೆಲ್ಲದ ಪಾಕ ತಯಾರಿಸಿ ಅದಕ್ಕೆ ತೆಂಗಿನಕಾಯಿ ಸೇರಿಸಿ ಬಳಸುವುದು ಸೂಕ್ತ. ಉಂಡೆಬೆಲ್ಲವನ್ನು ಗುದ್ದಿ ಪುಡಿ ಮಾಡಿಯೂ ಸೇರಿಸಬಹುದು.( ಆದಷ್ಟು ಶುದ್ಧ ಬೆಲ್ಲಕ್ಕೆ ಮಹತ್ವ ನೀಡುವುದು ಬಹಳ ಒಳ್ಳೆಯದು. ಕಲಬೆರಿಕೆ ಬೆಲ್ಲ ಆರೋಗ್ಯಕ್ಕೆ ಅಹಿತ ಎಂಬುದು ಮನಸ್ಸಿನಲ್ಲಿರಲಿ)

ಕಡುಬಿನ ಅಟ್ಟಕ್ಕೆ ನೀರು ಹಾಕಿ ಬಿಸಿಗೆ ಇಡಿ. ಅದರ ಹಬೆ ಆರಂಭವಾಗುತ್ತಿದ್ದಂತೆ ಮುಂದಿನ ಹಂತ ಅನುಸರಿಸಿ.

ನಂತರ ರುಬ್ಬಿದ ಮಿಶ್ರಣವು ಎಲೆಗಳಿಗೆ ಹಚ್ಚಿದಾಗ ಸೋರಿಹೋಗದ ರೀತಿಯಲ್ಲಿ ಇರಬೇಕಾಗುತ್ತದೆ. ಒಂದೊಂದು ಎಲೆಗೆ ಅದರ ಅಗತ್ಯಕ್ಕೆ ಅನುಸಾರ ನಾಲ್ಕೈದು ಸ್ಪೂನ್ ಹಿಟ್ಟು ಹಚ್ಚಿ. ನಂತರ ಅದರ ಮೇಲೆ ಕಾಯಿಬೆಲ್ಲ ಕಾಯಿ ಎಲೆಗಳನ್ನು ಮಡಚಿ ಅಟ್ಟದಲ್ಲಿ ಇಡುತ್ತಾ ಸಾಗಿ. ಒಂದು ಲೇಯರ್ ಮುಗಿದ ನಂತರ ನಾಲ್ಕೈದು ನಿಮಿಷ ಬಿಟ್ಟು ಅದರ ಮೇಲ್ಬಾಗದಲ್ಲಿ ಇನ್ನೊಂದು ಲೇಯರ್ ನ್ನು ವಿರುದ್ಧ ದಿಕ್ಕಿನಲ್ಲಿ ಇಡುತ್ತಾ ಸಾಗಿ.

ನೆನಪಿರಲಿ ಅಟ್ಟದಲ್ಲಿ ಹಬೆ ಪ್ರಾರಂಭವಾದ ನಂತರವೇ ಅರಿಶಿನದ ಎಲೆಗಳನ್ನು ಇಡುವುದಕ್ಕೆ ಪ್ರಾರಂಭಿಸುವುದು ಸೂಕ್ತ. ಇಲ್ಲದೇ ಇದ್ದರೆ ಎಲೆಗಳಲ್ಲಿನ ಹಿಟ್ಟು ನೀರು ಬಿಸಿಯಾಗುವ ಸಮಯಕ್ಕೆ ಚೆಲ್ಲಿ ಹೋಗಬಹುದು. ಹಬೆ ಪ್ರಾರಂಭವಾಗಿದ್ದರೆ ಕೂಡಲೇ ಬೇಯಲು ಪ್ರಾರಂಭವಾಗಿ ಸೋರಿ ಹೋಗುವುದು ತಪ್ಪುತ್ತದೆ.

ಇನ್ನು ಯಾರ ಮನೆಯಲ್ಲಿ ಕಡುಬಿನ ಅಟ್ಟವಿಲ್ಲವೂ ಅವರು ಕುಕ್ಕರ್ ಬಳಸಿಯೂ ಪ್ರಯತ್ನಿಸಬಹುದು. ಆದರೆ ವಿಷಲ್ ಹಾಕದೇ ಬೇಯಿಸುವುದು ಸೂಕ್ತ.

ಅಟ್ಟದಲ್ಲಿ ಸುಮಾರು 30 ನಿಮಿಷ ಬೇಯಿಸಬೇಕಾಗುತ್ತದೆ. ನಂತರ ಅರಿಶಿನದ ಎಲೆ ಕಾಯಿಕಡುಬು ಸಿದ್ಧವಾಗಿರುತ್ತದೆ. ಬಿಸಿಬಿಸಿ ಕಡುಬಿಗೆ ಮೇಲ್ಗಡೆ ತುಪ್ಪ ಹಾಕಿ ಸವಿದರೆ ಎಷ್ಟು ತಿಂದೆವು ಎಂಬ ಲೆಕ್ಕ ಸಿಕ್ಕುವುದೇ ಕಷ್ಟ!

[ 4 of 5 - 82 Users]
Read more about: sweet recipe durga durga puja
X