Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ
ಈ ವೀಕೆಂಡ್‌ಗೆ ಸ್ಪೆಷಲ್ ಚಿಕನ್ ರೆಸಿಪಿ ಟ್ರೈ ಮಾಡಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ಇಲ್ಲಿ ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ ನೀಡಿದ್ದೇವೆ. ಈ ರೆಸಿಪಿ ಮಾಡುವುದು ಸುಲಭ ಹಾಗೂ ರುಚಿಯಲ್ಲಿ ಕೂಡ ಯಾವುದೇ ರೆಸ್ಟೋರೆಂಟ್ ಅಡುಗೆಗಿಂತ ಕಡಿಮೆಯಿಲ್ಲ.

ಟೊಮೆಟೊ ಚಿಕನ್ ಸೆಮಿ ಡ್ರೈ ಅನ್ನ, ನಾನ್, ಚಪಾತಿ, ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಸ್ಟಾಟರ್ಸ್ ರೀತಿ ಬಳಸಬೇಕೆಂದು ಬಯಸುವುದಾದರೆ ಇನ್ನು ಸ್ವಲ್ಪ ಡ್ರೈ ಮಾಡಿದರೆ ತುಂಬಾ ಡ್ರೈಯಾಗಿರುತ್ತದೆ. ಈ ರೆಸಿಪಿಗೆ ಟೊಮೆಟೊ ಸ್ವಲ್ಪ ಹೆಚ್ಚಾಗಿಯೇ ಬೇಕಾಗುತ್ತದೆ. ಅರ್ಧ ಕೆಜಿ ಚಿಕನ್‌ಗೆ 6-7 ಟೊಮೆಟೊ ಬೇಕಾಗುವುದು. ಟೊಮೆಟೊ ಹೆಚ್ಚು ಬಳಸಿರುವುದರಿಂದ ಚಿಕನ್ ಬೇಯುವಾಗ ಅದರ ಹುಳಿ ಹೀರಿಕೊಂಡು ರುಚಿ ಚೆನ್ನಾಗಿರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Meal
Serves: 4
-
ಬೇಕಾಗುವ ಸಾಮಗ್ರಿ
ಚಿಕನ್ ಅರ್ಧ ಕೆಜಿ
ಟೊಮೆಟೊ (6-7)
ಈರುಳ್ಳಿ 1
ಹಸಿ ಮೆಣಸು 2
ಅರಿಶಿಣ ಅರ್ಧ ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಕೊತ್ತಂಬರಿ ಪುಡಿ 2 ಚಮಚ
ಗರಂ ಮಸಾಲ 1/4 ಚಮಚ
ಸಾಸಿವೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ (1 ಚಮಚ)
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು
-
ಮಾಡುವುದು ಹೇಗೆ?
* ಈರುಳ್ಳಿ, ಹಸಿಮೆಣಸು ಕತ್ತರಿಸಿ.
* ಟೊಮೆಟೊ ಕತ್ತರಿಸಿ, ಅದರಲ್ಲಿ ಅರ್ಧ ಟೊಮೆಟೊ ತೆಗೆದು ಪೇಸ್ಟ್ ಮಾಡಿ ಇಡಿ.
* ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ ಹಾಕಿ.
* ಸಾಸಿವೆ ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ಈರುಳ್ಳಿ, ಹಸಿ ಮೆಣಸು ಹಾಕಿ.
* ಈಗ ಕತ್ತರಿಸಿಟ್ಟ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ ಹಾಕಿ.
* ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಕಿ ಮತ್ತೆ 2 ನಿಮಿಷ ಸೌಟ್‌ನಿಂದ ಆಡಿಸಿ.
* ಚಿಕನ್ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಾಗಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ಸೌಟ್‌ನಿಂದ ಆಡಿಸುತ್ತಾ ಇರಿ.
* ಚಿಕನ್ ಬೆಂದ ಮೇಲೆ ಮುಚ್ಚಳ ತೆಗೆದು ಸ್ವಲ್ಪ ಸೆಮಿ ಡ್ರೈಯಾಗುವವರೆಗೆ ಬೇಯಿಸಿ.
* ಈಗ ಕೊಒತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಚಿಕನ್ ಸೆಮಿ ಡ್ರೈ ರೆಡಿ.
- * ಇಲ್ಲಿ ಅಡುಗೆಯನ್ನು ನಾನ್‌ಸ್ಟಿಕ್ ಬಾಣಲಿ ಬದಲಿಗೆ ಕಬ್ಬಿಣದ ಬಾಣಲಿ ಬಳಸಿ ಮಾಡಲಾಗಿದೆ. ಕಬ್ಬಿಣದ ಬಾಣಲಿಯ ತಳ ದಪ್ಪವಿರುವುದರಿಂದ ಚಿಕನ್ ಬೇಗನೆ ತಳ ಹಿಡಿಯುವುದಿಲ್ಲ,, ರುಚಿಯೂ ಚೆನ್ನಾಗಿರುತ್ತದೆ.
- servingSize: - 4
- calories: - 220 cal
- fat : - 136.7g
- Protein: - 15.1g
- Carbs - 7.7g
ಮಾಡುವುದು ಹೇಗೆ
* ಈರುಳ್ಳಿ, ಹಸಿಮೆಣಸು ಕತ್ತರಿಸಿ.

* ಟೊಮೆಟೊ ಕತ್ತರಿಸಿ, ಅದರಲ್ಲಿ ಅರ್ಧ ಟೊಮೆಟೊ ತೆಗೆದು ಪೇಸ್ಟ್ ಮಾಡಿ ಇಡಿ.

* ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ.ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ
ಹಾಕಿ.

* ಸಾಸಿವೆ ಜೀರಿಗೆ ಚಟ್‌ಪಟ್ ಶಬ್ದ
ಮಾಡುವಾಗ ಕರಿಬೇವು ಹಾಕಿ, ಈರುಳ್ಳಿ, ಹಸಿ ಮೆಣಸು ಹಾಕಿ.

* ಈಗ ಕತ್ತರಿಸಿಟ್ಟ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಖಾರದ
ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ ಹಾಕಿ.ನಂತರ ಪೇಸ್ಟ್ ಮಾಡಿದ
ಟೊಮೆಟೊ ಹಾಕಿ ಮತ್ತೆ 2 ನಿಮಿಷ ಸೌಟ್‌ನಿಂದ ಆಡಿಸಿ.

* ಚಿಕನ್ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಾಗಿ ಬೇಯಿಸಿ. ಹೀಗೆರ ಬೇಯಿಸುವಾಗ ಆಗಾಗ ಸೌಟ್‌ನಿಮದ ಆಡಿಸುತ್ತಾ ಇರಿ.

* ಚಿಕನ್ ಬೆಂದ ಮೇಲೆ ಮುಚ್ಚಳ ತೆಗೆದು ಸ್ವಲ್ಪ ಸೆಮಿ ಡ್ರೈಯಾಗುವವರೆಗೆ
ಬೇಯಿಸಿ.

* ಈಗ ಕೊಒತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಚಿಕನ್ ಸೆಮಿ ಡ್ರೈ
ರೆಡಿ.




Click it and Unblock the Notifications
