Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಡಿಗಡಿಗೆ ಉಪಯೋಗಕ್ಕೆ ಬರುವ ಸಲಹೆಗಳು

* ಮೆಣಸಿನಕಾಯಿ ಹೆಚ್ಚಿದ ಅಥವಾ ತುಂಡರಿಸಿದ ನಂತರ ಕೈಗೆ ಯಾವುದೇ ಎಣ್ಣೆ ಹಚ್ಚಿಕೊಂಡು ಪೇಪರ್‌ನಿಂದ ಒರೆಸಿ ಸಾಬೂನಿನಿಂದ ತೊಳೆದರೆ ಕೈಲಿ ಖಾರ ಉಳಿಯುವುದಿಲ್ಲ.
* ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಸುರಿಯುತ್ತದೆಯಲ್ಲವೇ?? ಕನ್ನಡಕ ಧರಿಸಿ ಹೆಚ್ಚಿ. ಕಣ್ಣಲ್ಲಿ ನೀರು ಬರುವುದಿಲ್ಲ.
* ಟೀ ಮಾಡುವಾಗ ಕಿತ್ತಳೆ ಸಿಪ್ಪೆ, ಹಸಿ ಶುಂಠಿ, ತುಳಸಿ, ಹೀಗೆ ಒಂದೊಂದುಸಲ ಒಂದೊಂದನ್ನು ಹಾಕಿ ಟೀ ಮಾಡಿದರೆ ಬಹಳ ರುಚಿ ಕೊಡುತ್ತೆ. ಆರೋಗ್ಯಕ್ಕೂ ಒಳ್ಳೆಯದು.
* ಅಡಿಗೆ ಮನೆಯ ಸಿಂಕ್ ಹತ್ತಿರ ಒಂದು ಹಳೆಯ ಟೂತ್ ಬ್ರಷ್ ಇಡಿ, ನಕಾಸೆ ಇರುವ ಪಾತ್ರೆ ತಿಕ್ಕಲು ಉಪಯೋಗವಾಗುತ್ತೆ.
* ಮನೆ ಗುಡಿಸುವ ಪೊರಕೆ, ಬಾತ್‌ರೂಂ ತೊಳೆಯುವ ಪೊರೆಕೆಗೆ ದಾರದ ಕುಣಿಕೆ ಹಾಕಿ ಬಾಗಿಲ ಹಿಂದೆ/ಮೂಲೆಯಲ್ಲಿ ನೇತುಹಾಕಿ, ಪೊರಕೆ ಕಡ್ಡಿ ಹಾಳಾಗುವುದಿಲ್ಲ.
* ಬಾಳೆ ಹಣ್ಣಿನ ರಸಾಯನ ಮಾಡುವಾಗ ಒಂದು ಅರ್ಧ ಚಮಚ ಒಳ್ಳೆ ತುಪ್ಪ ಹಾಕಿದರೆ ಬಾಳೆಹಣ್ಣು ಕಪ್ಪಾಗುವುದಿಲ್ಲ, ರುಚಿಯು ಹೆಚ್ಚುತ್ತದೆ.
* ಒಂದುಪಾವು ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಒಂದೆರಡು ಬ್ರೆಡ್ಡಿನ ಬಿಳಿಭಾಗದ ಪುಡಿ (ಮಿಕ್ಸಿಯಲ್ಲಿ ಮಾಡಿ) ಹಾಕಿ ಕಲೆಸಿದರೆ ಚಪಾತಿ ತುಂಬಾ ಮೃದುವಾಗಿ ಆಗುತ್ತದೆ.
* ನಿಮ್ಮ ಮನೆಯಲ್ಲಿ ಮೂರು ನಾಲ್ಕು ಬೇಡವಾದ ಗ್ಯಾಸ್ ಲೈಟರ್‌ಗಳಿದ್ದರೆ ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಾ ಉಪಯೋಗಿಸಿದರೆ, ಎಲ್ಲಾ ಲೈಟರ್‌ಗಳೂ ಚೆನ್ನಾಗಿ ಕೆಲಸ ಮಾಡುತ್ತವೆ.
* ಕಬ್ಬಿಣದ ಬಾಣಲೆ, ರೊಟ್ಟಿ ತವ ಉಪಯೋಗಿಸಿ ತೊಳೆದ ನಂತರ ಒರೆಸಿ ಸ್ವಲ್ಪ ಅಡಿಗೆ ಎಣ್ಣೆ ಹಚ್ಚಿಡಿ, ಮತ್ತೊಮ್ಮೆ ಉಪಯೋಗಿಸುವಾಗ ಮೇಲಿಂದ ತೊಳೆದು (ಉಜ್ಜದೆ) ಉಪಯೋಗಿಸಿ. ಚಿಟಿಕೆ ಉಪ್ಪು ಹಾಕಿ ತವ ಮೇಲೆ ಉಜ್ಜಿದರೆ ರೊಟ್ಟಿ ಅಥವಾ ದೋಸೆ ಸಲೀಸಾಗಿ ಎದ್ದು ಬರುತ್ತದೆ.



Click it and Unblock the Notifications
