Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಅಡುಗೆಯಲ್ಲಿ ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ

ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ:
ಅಡುಗೆ ಮಾಡುವಾಗ ಸ್ವಲ್ಪ ಉಪ್ಪನ್ನು ಬಳಸಿ, ಉಪ್ಪು ಸಾಲಲಿಲ್ಲ ಅಂದರೆ ಮತ್ತೆ ಸೇರಿಸಬಹುದು. ಈ ರೀತಿ ಮಾಡಿದರೆ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿ ಹಾಳಾಗುವುದನ್ನು ತಡೆಯಬಹುದು. ಕೆಲವೊಮ್ಮೆ ಅಳತೆ ಮೀರಿ ಉಪ್ಪು ಜಾಸ್ತಿಯಾದರೆ ಹೀಗೆ ಮಾಡಿ.
1.ಒಂದು ವೇಳೆ ಸಾರಿನಲ್ಲಿ ಉಪ್ಪು ಸ್ವಲ್ಪ ಹೆಚ್ಚಾದರೆ ಸ್ವಲ್ಪ ನೀರು ಸೇರಿಸಿ ಕುದಿಸಬೇಕು.
2. ಪಲ್ಯದಂತಹ ಅಡುಗೆಗೆ ಸ್ವಲ್ಪ ಆಲೂಗೆಡ್ಡೆ ಕತ್ತರಿಸಿ ಹಾಕಿ 5 ನಿಮಿಷ ಬೇಯಿಸಿ ನಂತರ ಆಲೂಗೆಡ್ಡೆ ತೆಗೆಯಬೇಕು.
3. ಗೋಧಿ ಹಿಟ್ಟನ್ನು ಕಲೆಸಿ ಉಂಡೆ ರೀತಿ ಮಾಡಿ ಉಪ್ಪು ಹೆಚ್ಚಾಗಿರುವ ಖಾದ್ಯಕ್ಕೆ ಸೇರಿಸಿದರೆ ಗೋಧಿ ಹಿಟ್ಟು ಅಧಿಕವಾಗಿರುವ ಉಪ್ಪಿನಂಶವನ್ನು ಹೀರಿಕೊಳ್ಳುತ್ತದೆ.
4. ಗ್ರೇವಿಯಲ್ಲಿ ಉಪ್ಪು ಜಾಸ್ತಿಯಾದರೆ 1 ಚಮಚ ಅಕ್ಕಿ ಹಿಟ್ಟನ್ನು ಸೇರಿಸಿ 5-6 ನಿಮಿಷ ಕುದಿಸಬೇಕು. ಆಗ ಹಿಟ್ಟು ಅಧಿಕ ಉಪ್ಪನ್ನು ಹೀರಿಕೊಂಡು ಗ್ರೇವಿಯ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ನಂತರ ಚಮಚದಿಂದ ಆ ಹಿಟ್ಟನ್ನು ತೆಗೆಯಬೇಕು.
5. ಗ್ರೇವಿಯಲ್ಲಿ ಆಲೂಗೆಡ್ಡೆಯನ್ನು ಕತ್ತರಿಸಿ ಹಾಕಿ 6-7 ನಿಮಿಷ ಬೇಯಿಸಿದರೆ ಅಧಿಕ ಉಪ್ಪನ್ನು ಆಲೂಗೆಡ್ಡೆ ಹೀರಿಕೊಳ್ಳುತ್ತದೆ. ನಂತರ ಆ ಆಲೂಗೆಡ್ಡೆ ತುಂಡುಗಳನ್ನು ಗ್ರೇವಿಯಿಂದ ತೆಗೆಯಬೇಕು.
6. ಸಾರಿನಲ್ಲಿ ಸ್ವಲ್ಪ ಉಪ್ಪು ಜಾಸ್ತಿಯಾದರೆ ಸ್ವಲ್ಪ ಹುಣಸೆ ಹಣ್ಣಿನ ರಸ ಅಥವಾ ವಿನಿಗರ್ ಸೇರಿಸಿದರೆ ಸಾಕು.



Click it and Unblock the Notifications
