Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಂಜಾನ್ ವಿಶೇಷ: ಸ್ವಾದಿಷ್ಟ ರುಚಿಯುಳ್ಳ ಸಿಹಿ ಸಮೋಸ
ಪವಿತ್ರ ರಂಜಾನ್ ತಿಂಗಳಲ್ಲಿ ದಿನದ ಸುಮಾರು ಹದಿನಾಲ್ಕುವರೆ ಗಂಟೆ ಉಪವಾಸವಿರುವ ಕಾರಣ ತೂಕ ಗಮನಾರ್ಹವಾಗಿ ಇಳಿಯುತ್ತದೆ ಎಂದೇ ನಾವೆಲ್ಲಾ ತಿಳಿದಿದ್ದೇವೆ. ಆದರೆ ವಾಸ್ತವದಲ್ಲಿ ತೂಕ ಗಮನಾರ್ಹವಾಗಿ ಏರುವುದೇ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇದಕ್ಕೆ ಹದಿನಾಲ್ಕುವರೆ ಗಂಟೆಯ ಉಪವಾಸ ಕಾರಣವಲ್ಲ, ಬಳಿಕ ಸೇವಿಸುವ ಆಹಾರದ ಆಯ್ಕೆಯಲ್ಲಿ ಮಾಡುವ ತಪ್ಪು.
ಈ ಹೊತ್ತಿನಲ್ಲಿ ಸಮತೋಲನ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಅತಿ ಹೆಚ್ಚು ಕ್ಯಾಲೋರಿಗಳನ್ನು ನೀಡುವ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಕಾರಣ ದಿನದಲ್ಲಿ ಖರ್ಚಾಗಿದ್ದ ಕೊಬ್ಬಿನ ಹತ್ತು ಪಟ್ಟು ಹೆಚ್ಚು ಪಟ್ಟು ಕೊಬ್ಬು ಮರುದಿನ ಸಂಗ್ರಹವಾಗಲು ಕಾರಣವಾಗುತ್ತದೆ. ಇದಕ್ಕಾಗಿ ಕಡಿಮೆ ಕ್ಯಾಲೋರಿಗಳ, ದೇಹದಲ್ಲಿ ನಿಧಾನವಾಗಿ ಕರಗುವ ಮತ್ತು ಸ್ವಾದಿಷ್ಟವಾದ ಆಹಾರ ಅಗತ್ಯವಾಗಿದೆ.
ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಸಿಹಿ ಸಮೋಸ ಇದಕ್ಕೊಂದು ಉತ್ತಮ ಆಯ್ಕೆಯಾಗಿದೆ. ಇದು ಸುಲಭವಾಗಿ ತಯಾರಿಸಬಹುದಾದ ಅಡುಗೆಯಾಗಿದ್ದು ಇಫ್ತಾರ್ ಸಮಯದಲ್ಲಿ ಆಗಮಿಸಿದ ಅತಿಥಿಗಳ ಮೆಚ್ಚುಗೆ ಪಡೆಯುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಪೋಷಕಾಂಶಗಳಿದ್ದು ಉಪವಾಸದ ಬಳಿಕ ಬಳಲಿದ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಬಳಸಿರುವ ಖೋವಾ ರುಚಿಯನ್ನು ಹೆಚ್ಚಿಸುತ್ತದೆ. ಈ ಸಮೋಸವನ್ನು ತಯಾರಿಸುವ ವಿಧಾನವನ್ನು ಈಗ ನೋಡೋಣ:
ತಯಾರಿಕಾ ಪ್ರಮಾಣ: ಐವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಪಟ್ಟಿಯನ್ನು ತಯಾರಿಸಲು (ಮಾರುಕಟ್ಟೆಯಲ್ಲಿ ದೊರಕುವ ಸಿದ್ಧ ಪಟ್ಟಿಗಳನ್ನೂ ಉಪಯೋಗಿಸಬಹುದು)
*ಮೈದಾ ಹಿಟ್ಟು: ಅರ್ಧ ಕೇಜಿ
*ಬೆಣ್ಣೆ : ಮೂರು ದೊಡ್ಡಚಮಚ
*ತುಪ್ಪ: ಮುನ್ನೂರು ಗ್ರಾಂ
ಒಳಗಣ ಹೂರಣಕ್ಕಾಗಿ:
*ಬಿಳಿ ಎಳ್ಳು: 1/3 ಚಿಕ್ಕ ಚಮಚ (ಕರಿ ಎಳ್ಳನ್ನೂ ಬಳಸಬಹುದು)
*ಖೋವಾ : ಕಾಲು ಕೇಜಿ (ಮಾವಾ ಎಂದೂ ಕರೆಯುತ್ತಾರೆ)
*ಒಣದ್ರಾಕ್ಷಿ: ಅರ್ಧ ಕಪ್
*ಸಕ್ಕರೆ: ಅರ್ಧ ಕಪ್
*ಕಾಯಿ ತುರಿ: ಒಂದು ಕಪ್
*ಗಸಗಸೆ: ಎರಡು ದೊಡ್ಡ ಚಮಚ
*ವನಿಲ್ಲಾ ಸುಗಂಧ: ½ ಚಿಕ್ಕ ಚಮಚ
*ಉಪ್ಪು ರುಚಿಗನುಸಾರ
ತಯಾರಿಸುವ ವಿಧಾನ:
*ಮೈದಾ, ಅರ್ಧದಷ್ಟು ಬೆಣ್ಣೆ ಮತ್ತು ಕೊಂಚ ಉಗುರುಬೆಚ್ಚನೆಯ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ ಕೊಂಚ ಹೊತ್ತು ಹಾಗೇ ಬಿಡಿ. ನಾದಿರುವ ಹಿಟ್ಟು ಮೃದುವಾದ ಬಳಿಕ ಲಟ್ಟಿಸಿ ಅಗಲವಾದ
*ರೊಟ್ಟಿಗಳನ್ನು ತಯಾರಿಸಿ. ಚಾಕುವಿನಿಂದ ನಿಮಗಿಷ್ಟವಾದ ಗಾತ್ರದ ಮತ್ತು ಆಕೃತಿಯಲ್ಲಿ ಪಟ್ಟಿಗಳನ್ನು ತಯಾರಿಸಿಟ್ಟುಕೊಳ್ಳಿ.
*ಖೋವಾ, ಸಕ್ಕರೆ, ಎಳ್ಳು, ಕಾಯಿತುರಿ, ಗಸಗಸೆ ಮತ್ತು ವನಿಲ್ಲಾ ಸುಗಂಧಗಳನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲಸಿ. ಕತ್ತರಿಸಿಟ್ಟಿರುವ ಪಟ್ಟಿಗಳನ್ನು ನಿಮಗಿಷ್ಟವಾದ ಆಕೃತಿಯಲ್ಲಿ ಮಡಚಿ ಪೊಟ್ಟಣದಂತೆ ಮಾಡಿಕೊಳ್ಳಿ (ಜನಪ್ರಿಯವಾದ ಆಕೃತಿ ಎಂದರೆ ತ್ರಿಕೋಣ). ಈ ಪೊಟ್ಟಣದಲ್ಲಿ ಹೂರಣವನ್ನು ತುಂಬಿಸಿ ತೆರೆದಿರುವ ಅಂಚುಗಳನ್ನು ಕೊಂಚ ನೀರು ಸವರಿ ಒತ್ತಿ ಮುಚ್ಚಿಬಿಡಿ. (ಎಲ್ಲೂ ತೆರೆದಿರದಂತೆ ನೋಡಿಕೊಳ್ಳಿ, ಕೊಂಚ ತೆರೆದಿದ್ದರೂ ಎಣ್ಣೆ ಒಳಹೋಗಿ ಸಮೋಸವನ್ನು ಕೆಡಿಸುತ್ತದೆ).
*ಹೊರಭಾಗಕ್ಕೆ ಉಳಿದ ಬೆಣ್ಣೆಯನ್ನು ಸವರಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕರಿಯಿರಿ. ನಡುನಡುವೆ ತಿರುವುತ್ತಾ ಕಂದು ಬಣ್ಣ ಬಂದ ಬಳಿಕ ಹೊರತೆಗೆದು ಟಿಶ್ಯೂ ಕಾಗದದ ಮೇಲೆ ಹರಡಿ. ತಣಿದ ಬಳಿಕ ತಿನ್ನಲು ನೀಡಿ. (ತಕ್ಷಣ ತಿನ್ನಲು ಹೋಗಬೇಡಿ, ಏಕೆಂದರೆ ಹೊರಗಿನ ಕವಚ ತಣ್ಣಗಾಗಿದ್ದರೂ ಹೂರಣ ಬಹಳ ಬಿಸಿಯಾಗಿದ್ದು ನಾಲಿಗೆ, ಗಂಟಲು ಸುಡುವ ಅಪಾಯವಿರುತ್ತದೆ)
ಸೂಚನೆ:
1) ಈ ಸಮೋಸಾದಲ್ಲಿ ಖೋವಾ ಬಳಸಿರುವುದರಿಂದ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿದ್ದು ತೂಕ ಇಳಿಸಿಕೊಳ್ಳುವವರಿಗೆ ಸಲ್ಲದು
2) ಒಲೆಯ ಉರಿ ಚಿಕ್ಕದಿದ್ದಷ್ಟೂ ಉತ್ತಮ. ಆದರೆ ಕಂದು ಬಣ್ಣ ಬರಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಇಫ್ತಾರ್‌ಗೂ ಒಂದು ಘಂಟೆ ಮುಂಚೆಯೇ ತಯಾರಾಗುವಂತೆ ಪ್ರಾರಂಭಿಸಿ.



Click it and Unblock the Notifications