Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಖರ್ಜೂರ ಹಲ್ವಾ: ಹಬ್ಬದ ಸ್ಪೆಷಲ್
ಎಲ್ಲೆಲ್ಲಿಯೂ ಹಬ್ಬಗಳ ಸಡಗರ, ಮುಸ್ಲಿಂರಿಗೆ ನಾಳೆ ಪವಿತ್ರ ರಂಜಾನ್ ಹಬ್ಬದ ಸಡಗರ, ಹಿಂದೂಗಳಿಗೆ ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ಸಾಮಾನ್ಯವಾಗಿ ಹಬ್ಬಗಳಲ್ಲಿ ಸಾಂಪ್ರದಾಯಕವಾದ ಕೆಲವೊಂದು ಸಿಹಿ ತಿಂಡಿಗಳನ್ನು ತಪ್ಪದೇ ಮಾಡುತ್ತೇವೆ.
ಅದರ ಜೊತೆಗೆ ಹಬ್ಬದ ದಿನದಂದು ಮಾಡಲು ಸುಲಭವಾದ, ಆದರೆ ಅತ್ಯಂತ ರುಚಿಕರವಾದ ಸಿಹಿ ತಿಂಡಿಯ ರೆಸಿಪಿಯನ್ನು ಹುಡುಕಾಟದಲ್ಲಿ ಇದ್ದರೆ ಇದೋ ಇಲ್ಲಿದೆ ರೆಸಿಪಿ:

ಬೇಕಾಗುವ ಸಾಮಾಗ್ರಿಗಳು
ಖರ್ಜೂರ 2 ಕಪ್ ಬಿಸಿ ಹಾಲು 2 ಕಪ್
ಸಕ್ಕರೆ ಒಂದು ಕಪ್ (ಸಿಹಿಗೆ ತಕ್ಕಷ್ಟು)
ತುಪ್ಪ ಅರ್ಧ ಕಪ್
ಏಲಕ್ಕಿ ಪುಡಿ 1 ಚಮಚ
ಬಾದಾಮಿ 5-6
ತಯಾರಿಸುವ ವಿಧಾನ:
* ಬಿಸಿ ಹಾಲಿನಲ್ಲಿ ಖರ್ಜೂರವನ್ನು ಕಮ್ಮಿಯೆಂದರೂ 3 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ.
* ನಂತರ ತಟ್ಟೆಗೆ 1 ಚಮಚ ತುಪ್ಪ ಸವರಿ ಬದಿಯಲ್ಲಿ ಇಡಿ.
* ಈಗ ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಖರ್ಜೂರ ಪೇಸ್ಟ್, ಸಕ್ಕರೆ ಹಾಕಿ ಸಾಧಾರಣ ಉರಿಯಲ್ಲಿ ಸಕ್ಕರೆ ಸಂಪೂರ್ಣ ಕರಗುವವರೆಗೆ ಸೌಟ್ ನಿಂದ ಆಡಿಸಿ.
* ಬೇಕಿದ್ದರೆ ಸ್ವಲ್ಪ ಹಾಲು ಸೇರಿಸಬಹುದು, ಇದನ್ನು ಸಾಧರಣ ಉರಿಯಲ್ಲಿ 20 ನಿಮಿಷ ಬೇಯಿಸಿ, ಆಗಾಗ ಸೌಟ್ ನಿಂದ ಚೆನ್ನಾಗಿ ತಿರುಗಿಸಿ, ನಂತರ ಏಲಕ್ಕಿ ಹಾಕಿ ತಿರುಗಿಸಿ, ಈ ಮಿಶ್ರಣವನ್ನು ತಟ್ಟೆಗೆ ಸುರಿಯಿರಿ, ಅದರ ಮೇಲೆ ಬಾದಾಮಿಯ ಪೀಸ್ ಗಳನ್ನು ಉದುರಿಸಿ, ತಣ್ಣಗಾಗಲು ಬಿಡಿ.
* ಮಿಶ್ರಣ ತಣ್ಣಗಾಗಿ ಗಟ್ಟಿಯಾಗುವಾಗ ಬೇಕಾದ ಆಕಾರದಲ್ಲಿ ಕತ್ತರಿಸಿದ ಖರ್ಜೂರದ ಹಲ್ವಾ ರೆಡಿ.



Click it and Unblock the Notifications
